ಉನ್ನತ ಹುದ್ದೆ ಅಲಂಕರಿಸುವ ಕನಸು ಹೊಂದಿ: ಪಿಇಟಿ ನಿರ್ದೇಶಕ ಡಾ.ರಾಮಲಿಂಗಯ್ಯ ಸಲಹೆ
ಮಂಡ್ಯ

ಉನ್ನತ ಹುದ್ದೆ ಅಲಂಕರಿಸುವ ಕನಸು ಹೊಂದಿ: ಪಿಇಟಿ ನಿರ್ದೇಶಕ ಡಾ.ರಾಮಲಿಂಗಯ್ಯ ಸಲಹೆ

October 22, 2018

ಮಂಡ್ಯ:  ‘ಪ್ರತಿಯೊಬ್ಬ ವಿದ್ಯಾರ್ಥಿಯು ತಮ್ಮ ಕನಸು ಉನ್ನತ ಹುದ್ದೆ ಅಲಂಕರಿಸುವುದು ಆಗಬೇಕು. ಇದಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸುವ ಛಲ ಮೈಗೂಡಿಸಿ ಕೊಳ್ಳಬೇಕು. ಈ ನಿಟ್ಟಿನಲ್ಲಿ ಕೃಷಿಕ್ ಸರ್ವೋದಯ ಟ್ರಸ್ಟ್ ಸೂಕ್ತ ತರಬೇತಿಯನ್ನು ನೀಡುತ್ತಿದ್ದು, ಉದ್ಯೋಗ ಆಕಾಂಕ್ಷಿಗಳು ಇದರ ಸದುಪ ಯೋಗ ಪಡೆದುಕೊಳ್ಳಬೇಕು ಎಂದು ಪಿಇಟಿ ನಿರ್ದೇಶಕ ಡಾ.ರಾಮಲಿಂಗಯ್ಯ ಸಲಹೆ ನೀಡಿದರು.

ನಗರದ ಕೃಷಿಕ್ ಸರ್ವೋದಯ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ಬುನಾದಿ ತರಬೇತಿ ಸಮಾ ರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಐಎಎಸ್, ಐಎಫ್‍ಎಸ್ ಅಧಿಕಾರಿಗಳನ್ನು ನೋಡಿದಾಗ ನಮ್ಮ ಮನಸ್ಸಿನಲ್ಲೂ ಅದೇ ರೀತಿ ಆಗಬೇ ಕೆಂಬ ಹಂಬಲ ಮೂಡುತ್ತದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲೂ ಇವರಂತೆ ಏಕೆ ಆಗಬಾರದು? ಎಂಬ ಪ್ರಶ್ನೆ ಕಾಡು ತ್ತದೆ. ಇವರಂತೆ ಆಗಲು ಏನು ಮಾಡ ಬೇಕು? ಉನ್ನತ ಹುದ್ದೆ ಪಡೆದವರೆಲ್ಲಾ ಬಹಳಷ್ಟು ಶ್ರಮ ಪಟ್ಟು ವಿದ್ಯಾಭ್ಯಾಸ ಮಾಡಿ, ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ, ಮೇಲ್ಮಟ್ಟಕ್ಕೆ ತಲುಪಿದ್ದಾರೆ. ಇವರಿಗೆ ರಾಜಕೀಯ ಹಿನ್ನೆಲೆ ಯಾಗಲೀ, ರಾಜಕೀಯ ಶಕ್ತಿ ಯಾಗಲೀ ಇಲ್ಲದೇ ಪರಿಶ್ರಮದಿಂದ ಉನ್ನತ ಹುದ್ದೆ ತಲುಪಿದ್ದಾರೆ. ಅವರಂತೆ ನೀವೂ ಆಗಬೇಕಾ ದರೆ ಕಠಿಣ ಪರಿಶ್ರಮ ಅಗತ್ಯ ಎಂದರು.

ಉದ್ಯೋಗಾಕಾಂಕ್ಷಿಗಳಲ್ಲಿ ಮೊದಲು ಸಮಯ ಪ್ರಜ್ಞೆ ಇರಬೇಕು. ಗುರಿ ತಲು ಪಲು ಸತತ ಪರಿಶ್ರಮ ಪಡಬೇಕು. ಕೃಷಿಕ್ ಸರ್ವೋದಯ ಟ್ರಸ್ಟ್ ಧ್ಯೇಯ ಹಳ್ಳಿಗೊಬ್ಬ ಐಎಎಸ್, ಹಳ್ಳಿಗೊಬ್ಬ ಕೆಎಎಸ್ ಕನಸನ್ನು ನನಸು ಮಾಡಲು ಬೇಕಾದ ಸಕಲ ಸೌಕರ್ಯಗಳನ್ನು ಕಲ್ಪಿಸಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

ಬೆಂಗಳೂರಿನ ನಿವೃತ್ತ ಎಡಿಜಿಪಿ ಕೆ.ವಿ.ಆರ್. ಠ್ಯಾಗೂರ್ ಮಾತನಾಡಿ, ತಾಲೂಕು, ಜಿಲ್ಲೆ, ರಾಜ್ಯ ಮಟ್ಟದಲ್ಲಿ ಆಯ್ಕೆಯಾದ ಕ್ರೀಡಾಪಟು ಅಂತಿಮವಾಗಿ ರಾಷ್ಟ್ರ ಮತ್ತು ಅಂತಾರಾಷ್ಟ್ರ ಮಟ್ಟದಲ್ಲಿ ಪಾಲ್ಗೊಳ್ಳಲು ಸಾಧ್ಯ. ಇದಕ್ಕಾಗಿ ಆತ ಸತತ ಪರಿಶ್ರಮ ಪಡು ವಂತೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಕಠಿಣ ಅಭ್ಯಾಸ ಮುಖ್ಯ ಎಂದು ಹೇಳಿದರು.
ಪಿಇಟಿ ಅಧ್ಯಕ್ಷ ಡಾ.ಹೆಚ್.ಡಿ.ಚೌಡಯ್ಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ಕೃಷಿ ವಿವಿ ಕುಲಪತಿ ಡಾ.ಎಸ್.ರಾಜೇಂದ್ರಪ್ರಸಾದ್, ನಿವೃತ್ತ ಐಎಎಸ್ ಅಧಿಕಾರಿ ಟಿ.ತಿಮ್ಮೇಗೌಡ, ಶಿರಸಿ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಡಾ.ಜಿ.ಆರ್.ಅಜ್ಜಯ್ಯ, ಕೃಷಿಕ್ ಸರ್ವೋದಯ ಟ್ರಸ್ಟ್‍ನ ವ್ಯವ ಸ್ಥಾಪಕ ಲಕ್ಷ್ಮಣ ಇತರರು ಇದ್ದರು.

Translate »