ನಾಗಮಂಗಲದಲ್ಲಿ ಜೆಡಿಎಸ್ ಸಮಾವೇಶದ ಪೂರ್ವಭಾವಿ ಸಭೆ: ಸುರೇಶ್‍ಗೌಡ-ಶಿವರಾಮೇಗೌಡ ಬೆಂಬಲಿಗರ ನಡುವೆ ಕಚ್ಚಾಟ
ಮಂಡ್ಯ

ನಾಗಮಂಗಲದಲ್ಲಿ ಜೆಡಿಎಸ್ ಸಮಾವೇಶದ ಪೂರ್ವಭಾವಿ ಸಭೆ: ಸುರೇಶ್‍ಗೌಡ-ಶಿವರಾಮೇಗೌಡ ಬೆಂಬಲಿಗರ ನಡುವೆ ಕಚ್ಚಾಟ

October 22, 2018

ಮಂಡ್ಯ:  ಲೋಕಸಭಾ ಉಪ ಚುನಾವಣೆ ಹಿನ್ನೆಲೆಯಲ್ಲಿ ಅ. 22ರಂದು ನಾಗಮಂಗಲದಲ್ಲಿ ಹಮ್ಮಿಕೊಂಡಿರುವ ಜೆಡಿಎಸ್ ಸಮಾವೇಶದ ಅಂಗವಾಗಿ ಪಟ್ಟಣ ದಲ್ಲಿ ಶನಿವಾರ ನಡೆದ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಶಾಸಕ ಕೆ.ಸುರೇಶ್‍ಗೌಡ ಹಾಗೂ ಅಭ್ಯರ್ಥಿ ಎಲ್.ಆರ್.ಶಿವರಾಮೇಗೌಡ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದು ಅಸಮಾಧಾನ ಸ್ಫೋಟಗೊಂಡಿದೆ.

ಸಮಾವೇಶದ ಕುರಿತು ಶಿವರಾಮೇ ಗೌಡರ ಬೆಂಬಲಿಗ ಹಾಗೂ ಜಿಲ್ಲಾ ಪಂಚಾ ಯಿತಿ ಮಾಜಿ ಸದಸ್ಯ ಡಿ.ಟಿ.ಶ್ರೀನಿವಾಸ್ ಮಾತನಾಡಿ, ಪ್ರತಿ ಜಿಪಂ ಕ್ಷೇತ್ರದಿಂದಲೂ ಜನರು ಹಾಗೂ ಕಾರ್ಯಕರ್ತರನ್ನು ಸಮಾವೇಶಕ್ಕೆ ಕರೆತರಲು ಯಾವ ರೀತಿ ಪೂರ್ವ ತಯಾರಿ ಮಾಡಬೇಕು ಎಂದು ಪ್ರಸ್ತಾಪ ಮಾಡಿದರು.

ಇದಕ್ಕೆ ಶಾಸಕ ಸುರೇಶ್ ಗೌಡ ಬೆಂಬ ಲಿಗ ಹಾಗೂ ಪುರಸಭೆ ಸದಸ್ಯ ವಿಜಯ ಕುಮಾರ್, ಮುಖಂಡ ಯೋಗೆಶ್ ಮಾತ ನಾಡಿ, ಎಲ್ಲಾ ತಿರ್ಮಾನ ನೀವೇ ಮಾಡುವು ದದಾರೆ ನಮ್ಮನ್ನು ಯಾಕೆ ಕೇಳ್ತಿರಾ? ಪಕ್ಷದ ಮುಖಂಡರಿಗೆ ತಿಳಿಯದಂತೆ ನಮ್ಮ ವಿರುದ್ಧ ಮಾತನಾಡುತ್ತಿರುವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಮಾತ್ರ ಶಿವರಾಮೇ ಗೌಡರ ಮನೆಯಲ್ಲೇ ಇರುತ್ತಾರೆ. ನಮಗೆ ಚುನಾವಣೆ ಸಂಬಂಧಪಟ್ಟ ವಿಚಾರಗಳು ತಿಳಿಯುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ನಾವೇನು ಶಿವರಾಮೇಗೌಡರಿಗೆ ಮತ ಹಾಕುವುದಿಲ್ಲ ಎಂದು ಹೇಳಿಲ್ಲ? ಎಂದು ಪ್ರಶ್ನಿಸಿದರು. ಈ ವೇಳೆ ಶಿವರಾಮೇಗೌಡ ಅವರ ಬೆಂಬಲಿಗ ಲಾಲಿಪಾಳ್ಯ ರಘು ಮತ್ತು ಸುರೇಶಗೌಡ ಬೆಂಬಲಿಗರ ನಡುವೆ ವಾಗ್ವಾದ ನಡೆಯಿತು. ಈ ವೇಳೆ ಮಧ್ಯ ಪ್ರವೇಶಿದ ಶಾಸಕ ಕೆ.ಸುರೇಶ್‍ಗೌಡ ಎಲ್ಲರನ್ನು ಸಮಾಧಾನಪಡಿಸಿದರು.ಈ ಘಟನೆಯಿಂದ ನಾಗಮಂಗಲ ಜೆಡಿಎಸ್‍ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಬಹಿರಂಗವಾಗಿದೆ.

Translate »