ಚಾಮರಾಜನಗರದಲ್ಲಿ ಡಾ.ಅಂಬೇಡ್ಕರ್ 127ನೇ ಜನ್ಮದಿನಾಚರಣೆ
ಚಾಮರಾಜನಗರ

ಚಾಮರಾಜನಗರದಲ್ಲಿ ಡಾ.ಅಂಬೇಡ್ಕರ್ 127ನೇ ಜನ್ಮದಿನಾಚರಣೆ

October 22, 2018

ಚಾಮರಾಜನಗರ:  ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ಜನರಲ್ಲಿರುವ ದೃಷ್ಠಿಕೋನ ಬದಲಾಯಿಸಿದಾಗ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಮಾಜಿ ಸಚಿವ ಹಾಗೂ ಕೊಳ್ಳೇಗಾಲ ಕ್ಷೇತ್ರದ ಶಾಸಕ ಎನ್.ಮಹೇಶ್ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ, ಜಿಪಂ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ನಗರದ ಪೇಟೆ ಪ್ರೈಮರಿ ಶಾಲಾ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ 127ನೇ ಜನ್ಮ ದಿನಾಚರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗಾಂಧೀಜಿ ಅವರನ್ನು ರಾಷ್ಟ್ರಪಿತ ಎಂದು ಕರೆಯುತ್ತೇವೆ. ಅವರನ್ನು (ಗಾಂಧೀಜಿ) ಯಾವ ಜಾತಿ ಎಂದು ತಿಳಿದುಕೊಂಡಿಲ್ಲ. ಗಾಂಧೀಜಿ ವಿಷಯದಲ್ಲಿ ಜಾತಿ ಬಂದಿಲ್ಲ. ಇದು ದೊಡ್ಡತನ. ಅಂಬೇಡ್ಕರ್ ಅವರು ಸ್ವಾತಂತ್ರ್ಯ ಭಾರತದಲ್ಲಿ ಹೇಗೆ ಆಳ್ವಿಕೆ ನಡೆಸಬೇಕು ಎಂಬುದನ್ನು ಸಂವಿಧಾನದ ಮೂಲಕ ಹೇಳಿದ್ದಾರೆ. ಅಂತಹವರನ್ನು ಸಂವಿಧಾನ ಶಿಲ್ಪಿ, ದಲಿತರ ಸೂರ್ಯ, ದಲಿತರ ನಾಯಕ, ದಲಿತ ಮುಖಂಡ ಎಂದು ಕರೆಯಲಾಗುತ್ತದೆ. ಜನರಲ್ಲಿ ಇರುವ ಈ ಗ್ರಹಿಕೆಯನ್ನು ನಾವು ಮೊದಲು ಬದಲಾಯಿಸಬೇಕು. ಇದನ್ನು ಮಾಡದೇ ಇದ್ದರೆ ಅಂಬೇಡ್ಕರ್ ಅವರು ಒಂದು ಜನಾಂಗಕ್ಕೆ ಸೀಮಿತವಾದ ವ್ಯಕ್ತಿಯಾಗಿ ಉಳಿ ಯುತ್ತಾರೆ. ಇದು ಆಗಬಾರದು. ಅಂಬೇಡ್ಕರ್ ಅವರನ್ನು ಒಂದು ಜಾತಿಗೆ ಸೀಮಿತಗೊಳಿಸಿ ದರೆ. ಅದು ರಾಷ್ಟ್ರಕ್ಕೆ, ರಾಷ್ಟ್ರದ ಇತಿಹಾಸಕ್ಕೆ, ಘನತೆಗೆ ಮಾಡಿದ ಮೋಸ ಎಂದರು.

ಸೀಮಿತ ದೃಷ್ಟಿಕೋನ ದೇಶದ ಐಕ್ಯತೆಗೆ ಅಪಾಯಕಾರಿ. ಇಂದು ದೇಶ ಬಹಳ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ನಮ್ಮ ಮನಸ್ಥಿತಿಗಳೂ ಸಹ ಬದಲಾಗಬೇಕು ಎಂದು ಎನ್.ಮಹೇಶ್ ಆಶಯ ವ್ಯಕ್ತಪಡಿಸಿದರು.

ಕೊಡುಗೆ ಅಪಾರ: ಸಂಸದ ಆರ್.ಧ್ರುವನಾರಾಯಣ್ ಮಾತನಾಡಿ, ದೇಶಕ್ಕೆ ಅಂಬೇ ಡ್ಕರ್‍ರವರ ಕೊಡುಗೆ ಅಪಾರ. ದೇಶ ಈ ಮಟ್ಟಕ್ಕೆ ಬೆಳವಣಿಗೆ ಆಗಲು, ಈಗ ಬೆಳ ವಣಿಗೆ ಆಗುತ್ತಿರಲು ಅಂಬೇಡ್ಕರ್ ಅವರ ಸಂವಿಧಾನ ಕಾರಣ ಎನ್ನುವುದನ್ನು ಯಾರೊ ಬ್ಬರು ಮರೆಯಬಾರದು ಎಂದರು.

ನಮ್ಮಲ್ಲಿ 6500 ಜಾರಿಗಳಿವೆ. ಹಲವು ಧರ್ಮ, ಭಾಷೆಗಳಿವೆ. ಈ ಎಲ್ಲವೂ ಒಟ್ಟಿಗೆ ಹೋಗುತ್ತಿರುವುದಕ್ಕೆ ಅಂಬೇಡ್ಕರ್ ಅವರ ಸಂವಿಧಾನ ಕಾರಣ. ಶಿಕ್ಷಣ ಮತ್ತು ಹೋರಾ ಟದಲ್ಲಿ ಬದಲಾವಣೆಗಳು ಆಗಬೇಕು. ಅಂಬೇ ಡ್ಕರ್ ಅವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಡೆದರೆ ಎಲ್ಲರ ಏಳಿಗೆ ಸಾಧ್ಯವಾಗುತ್ತದೆ. ಯಡಬೆಟ್ಟದ ತಪ್ಪಲಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ನಳಂದ ಬೌದ್ಧ ವಿಹಾ ರಕ್ಕೆ ಶೀಘ್ರದಲ್ಲಿಯೇ ಗುದ್ದಲಿ ಪೂಜೆ ನೆರ ವೇರಿಸಲಾಗುವುದು ಎಂದರು.

ಕಣ್ಣೆತ್ತಿ ನೋಡುವ ಸಂವಿಧಾನ: ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಮಾತ ನಾಡಿ, ಅಂಬೇಡ್ಕರ್ ಅವರು ಜಗತ್ತೇ ಕಣ್ಣೆತ್ತಿ ನೋಡುವ ಸಂವಿಧಾನವನ್ನು ರಚಿಸಿ ದ್ದಾರೆ. ಅವರು ಸಂವಿಧಾನದಲ್ಲಿ ಮೀಸ ಲಾತಿ ಸೇರಿಸದಿದ್ದರೆ, ಅಸ್ಪೃಶ್ಯತೆ ನಿವಾರಣೆ ಸಾಧ್ಯವಾಗುತ್ತಿರಲಿಲ್ಲ ಎಂದರು.

ಒಗ್ಗೂಡಿಸಿದವರು ಅಂಬೇಡ್ಕರ್: ಮೈಸೂ ರಿನ ಶ್ರೀ ಉರಿಲಿಂಗ ಪೆದ್ದೀಶ್ವರ ಸಂಸ್ಥಾನ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಮಾತ ನಾಡಿ, ಶಾಸ್ತ್ರಗಳು, ಅಗಮಗಳು, ಗುದಿ ಗೋಪು ರಗಳು, ಚರ್ಚ್, ಮಸೀದಿಗಳು ಭಾರತವನ್ನು ತುಂಡು ತುಂಡಾಗಿಸಿವೆ. ಆದರೆ ಭಾರತವನ್ನು ಒಗ್ಗೂಡಿಸಿದವರು ಅಂಬೇಡ್ಕರ್ ಎಂದರು.

ಅಂಬೇಡ್ಕರ್ ಅವರ ಅಂಧ ಅಭಿ ಮಾನಿಗಳೇ ಅಂಬೇಡ್ಕರ್ ಅವರ ಸಿದ್ಧಾಂತ ಗಳನ್ನು ನಾಶ ಮಾಡುತ್ತಿದ್ದಾರೆ. ಪ್ರಜಾ ಪ್ರಭುತ್ವ ಇಂದು ಕೆಲವರಿಂದ, ಕೆಲವರಿ ಗೋಸ್ಕರ, ಕೆಲವರಿಗಾಗಿ ಎನ್ನುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬೌದ್ಧ ಬಿಕ್ಕುಗಳಾದ ಭೋದಿದತ್ತ ಬಂತೇಜಿ, ಜಿಪಂ ಅಧ್ಯಕ್ಷೆ ಶಿವಮ್ಮ, ಉಪಾಧ್ಯಕ್ಷ ಜೆ. ಯೋಗೇಶ್, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಎನ್.ಉಮಾವತಿ, ಸದಸ್ಯ ಕೆ.ಪಿ.ಸದಾಶಿವಮೂರ್ತಿ, ತಾಪಂ ಅಧ್ಯಕ್ಷೆ ದೊಡ್ಡಮ್ಮ, ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ, ಜಿಪಂ ಸಿಇಓ ಡಾ.ಕೆ.ಹರೀಶ್‍ಕುಮಾರ್, ಜಿಲ್ಲಾ ಎಸ್ಪಿ ಧರ್ಮೇಂದರ್ ಕುಮಾರ್ ಮೀನಾ, ಸಮಾಜ ಕಲ್ಯಾಣ ಇಲಾಖೆಯ ಪ್ರಭಾರ ಉಪನಿರ್ದೇಶಕ ಎಂ.ತಿರುಮಲೇಶ್ ಇತ ರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Translate »