ಎಚ್1ಎನ್1 ಜ್ವರಕ್ಕೆ ಗೃಹಿಣಿ ಬಲಿ
ಮಂಡ್ಯ

ಎಚ್1ಎನ್1 ಜ್ವರಕ್ಕೆ ಗೃಹಿಣಿ ಬಲಿ

October 20, 2018

ಮಂಡ್ಯ: ಎಚ್1ಎನ್1 ಜ್ವರಕ್ಕೆ ಜಿಲ್ಲೆಯ ಗೃಹಿಣಿ ಯೊಬ್ಬರು ಬಲಿಯಾಗಿ ರುವ ಘಟನೆ ಮದ್ದೂರು ತಾಲೂಕಿನ ವಳಗೆರೆ ಹಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

ಗ್ರಾಮದ ವೆಂಕಟೇಶ್ ಎಂಬುವವರ ಪತ್ನಿ ಬಿ.ಎಸ್.ಜ್ಯೋತಿ(39) ಬೆಂಗಳೂರಿನ ರಾಜರಾಜೇಶ್ವರಿ ನಗರದ ಎಸ್‍ಎಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.ಮೂಲತಃ ಮದ್ದೂರು ತಾಲೂಕಿನ ವಳಗೆರೆಹಳ್ಳಿ ಗ್ರಾಮದ ವೆಂಕಟೇಶ್ ಬೆಂಗ ಳೂರಿನಲ್ಲಿ ಗೂಡ್ಸ್ ವಾಹನ ಚಾಲಕರಾಗಿದ್ದು ಕೊಂಡು ಜೀವನ ನಿರ್ವಹಿಸುತ್ತಿದ್ದರು. ಪತಿ ಜೊತೆ ವಾಸವಿದ್ದ ಬಿ.ಎಸ್. ಜ್ಯೋತಿ ಅವರಿಗೆ ಕಳೆದ 23 ದಿನಗಳ ಹಿಂದೆ ತೀವ್ರ ಜ್ವರ, ಉಸಿರಾಟದ ತೊಂದರೆ ಕಾಣಿಸಿ ಕೊಂಡಿತ್ತು. ಈ ಹಿನ್ನಲೆಯಲ್ಲಿ ಕೆಂಗೇರಿಯ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

13 ದಿನಗಳ ಕಾಲ ಚಿಕಿತ್ಸೆ ನಡೆಸಿದರೂ ರೋಗ ಪತ್ತೆಯಾಗದ ಕಾರಣ, 10 ದಿನಗಳ ಹಿಂದೆ ಎಸ್‍ಎಸ್ ಆಸ್ಪತ್ರೆಗೆ ವರ್ಗಾಯಿಸಲಾ ಗಿತ್ತು. ಕಡೆ ಘಳಿಗೆಯ ಎಚ್1ಎನ್1 ದೃಢಪಟ್ಟು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿ ರೆಳೆದಿದ್ದಾರೆ ಎನ್ನಲಾಗಿದೆ. ಗ್ರಾಮಸ್ಥರು ಕೂಡ ಎಚ್1ಎನ್1ಗೆ ಆತಂಕಗೊಂಡಿದ್ದಾರೆ ಜ್ಯೋತಿ ಅವರ ತವರೂರು ಮಂಡ್ಯ ತಾಲೂಕಿನ ಹಳೇ ಬೂದನೂರು ಗ್ರಾಮ ದಲ್ಲಿ ಶುಕ್ರವಾರ ಅಂತ್ಯ ಸಂಸ್ಕಾರ ನೆರ ವೇರಿಸಲಾಯಿತು. ಮೃತರಿಗೆ ಪುತ್ರಿ ಹಾಗೂ ಪುತ್ರ ಇದ್ದಾರೆ.

Translate »