Tag: Mandya

ಗಗನಚುಕ್ಕಿ ಜಲಪಾತದ ಮೂಲ ಸೌಕರ್ಯ ಅಭಿವೃದ್ಧಿ
ಮಂಡ್ಯ

ಗಗನಚುಕ್ಕಿ ಜಲಪಾತದ ಮೂಲ ಸೌಕರ್ಯ ಅಭಿವೃದ್ಧಿ

August 2, 2018

ಮಂಡ್ಯ: ಗಗನಚುಕ್ಕಿ ಜಲಪಾತ ಧುಮ್ಮಿಕ್ಕಿ ಭೋರ್ಗರೆಯುತ್ತಾ ರಾಜ್ಯದ ಹಾಗೂ ದೇಶದ ವಿವಿಧ ಮೂಲೆಗಳಿಂದ ಲಕ್ಷಾಂತರ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದ್ದು, ಪ್ರವಾಸಿಗರ ಅನುಕೂಲಕ್ಕಾಗಿ ಅತ್ಯಾವಶ್ಯಕ ಮೂಲ ಸೌಲಭ್ಯಗಳನ್ನು ಗಗನಚುಕ್ಕಿ ಜಲಪಾತ ಪ್ರವಾಸಿ ತಾಣದಲ್ಲಿ ಆದ್ಯತೆ ಮೇಲೆ ಅಭಿವೃದ್ಧಿ ಪಡಿಸಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಹರೀಶ್ ತಿಳಿಸಿದ್ದಾರೆ. ಪ್ರವಾಸಿಗರ ಅನುಕೂಲಕ್ಕಾಗಿ ಸ್ಥಳೀಯ ಗ್ರಾಪಂ ಮೂಲಕ ಉಚಿತ ಕುಡಿಯುವ ನೀರಿನ ವ್ಯವಸ್ಥೆ, ಪ್ರವಾಸೋದ್ಯಮ ಇಲಾಖೆ ಅನುದಾನದಲ್ಲಿ ಮಹಿಳೆಯರ ಮತ್ತು ಪುರುಷರ ಪ್ರತ್ಯೇಕ ಶೌಚಾಲಯಗಳ ನ್ನೊಳಗೊಂಡ ಶೌಚಾಲಯ ಬ್ಲಾಕ್‍ಗಳ ನಿರ್ಮಾಣ,…

ಮಂಡ್ಯ ಜಿಲ್ಲೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ವಾರ್ಡ್ ಮೀಸಲಾತಿ ವಿವರ
ಮಂಡ್ಯ

ಮಂಡ್ಯ ಜಿಲ್ಲೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ವಾರ್ಡ್ ಮೀಸಲಾತಿ ವಿವರ

August 2, 2018

ಬೆಂಗಳೂರು: ಮಂಡ್ಯ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವಾರ್ಡ್ ಮೀಸಲಾತಿ ಯನ್ನು ರಾಜ್ಯ ಸರ್ಕಾರ ಇಂದು ಪ್ರಕಟಿಸಿದ್ದು, ಮಂಡ್ಯ ನಗರಸಭೆಯ 35 ಸ್ಥಾನ, ಮಳವಳ್ಳಿ, ಕೆ.ಆರ್.ಪೇಟೆ, ಶ್ರೀರಂಗಪಟ್ಟಣ, ಪಾಂಡವಪುರ, ಮದ್ದೂರು ಮತ್ತು ನಾಗಮಂಗಲ ಪುರಸಭೆಗಳ ತಲಾ 23 ಮತ್ತು ಬೆಳ್ಳೂರು ಪಟ್ಟಣ ಪಂಚಾಯ್ತಿಯ 13 ವಾರ್ಡ್‍ಗಳಿಗೆ ಮೀಸಲಾತಿ ನಿಗದಿಪಡಿಸಿ ಸರ್ಕಾರ ಆದೇಶ ಹೊರಡಿಸಿದ್ದು, ವಿವರ ಕೆಳಕಂಡಂತಿದೆ. ಮಂಡ್ಯ ನಗರಸಭೆ: 1ನೇ ವಾರ್ಡ್-ಸಾಮಾನ್ಯ, 2-ಹಿಂದುಳಿದ ವರ್ಗ ‘ಎ’ ಮಹಿಳೆ, 3-ಸಾಮಾನ್ಯ, 4-ಸಾಮಾನ್ಯ ಮಹಿಳೆ, 5-ಹಿಂದುಳಿದ ವರ್ಗ ‘ಎ’, 6-ಸಾಮಾನ್ಯ, 7-ಪರಿಶಿಷ್ಟ…

ಕಾನಿನಿ ಎದುರು ಟಾಸ್ಕ್ ವರ್ಕ್ ನೌಕರರ ಧರಣಿ
ಮಂಡ್ಯ

ಕಾನಿನಿ ಎದುರು ಟಾಸ್ಕ್ ವರ್ಕ್ ನೌಕರರ ಧರಣಿ

July 31, 2018

ಮಂಡ್ಯ: ಕಾವೇರಿ ನೀರಾವರಿ ನಿಗಮದಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ನೀರು ಗಂಟಿಗಳು, ಕಂಪ್ಯೂಟರ್ ಆಪರೇಟರ್‍ಗಳ ವೇತನ ಬಿಡುಗಡೆ, ಸೇವೆ ಖಾಯಂಮ್ಮಾತಿ, ಸಮಾನ ಕೆಲಸಕ್ಕೆ ಸಮಾನ ವೇತನ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಟಾಸ್ಕ್ ವರ್ಕ್ ನೌಕರರು ನಗರದಲ್ಲಿಂದು ಪ್ರತಿಭಟನೆ ನಡೆಸಿದರು. ಸೋಮವಾರ ಬೆಳಿಗ್ಗೆ ನಗರದ ಕಾವೇರಿ ನೀರಾವರಿ ನಿಗ ಮದ ಕಚೇರಿಎದುರು ಸಮಾವೇಶಗೊಂಡ ಪ್ರತಿಭಟನಾ ಕಾರರು, ಕಾವೇರಿ ನೀರಾವರಿ ಇಲಾಖಾಧಿಕಾರಿಗಳು ಮತ್ತು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ…

ನಗರಸಭೆ: ಸದ್ದು ಮಾಡಿದ ಬೀದಿ ನಾಯಿ ಹಾವಳಿ
ಮಂಡ್ಯ

ನಗರಸಭೆ: ಸದ್ದು ಮಾಡಿದ ಬೀದಿ ನಾಯಿ ಹಾವಳಿ

July 27, 2018

ಸಮರ್ಪಕ ಕಸ ವಿಲೇವಾರಿಗೆ ಆಗ್ರಹ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸದಸ್ಯರು ಮಂಡ್ಯ : ಬೀದಿ ನಾಯಿಯ ಹಾವಳಿ ಅಧಿಕವಾಗಿ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗಿದೆ. ಸಮರ್ಪಕವಾಗಿ ಕಸವಿಲೇವಾರಿಯಾಗದೆ ವಾರ್ಡ್‍ಗಳು ಗಬ್ಬು ನಾರುತ್ತಿದ್ದು, ಸಾಂಕ್ರಾ ಮಿಕ ಕಾಯಿಲೆಗಳ ಭೀತಿ ಎದುರಾಗಿದೆ ಸೇರಿದಂತೆ ನಗರದ ವಾರ್ಡ್‍ಗಳಲ್ಲಿ ಪ್ರಮುಖ ಮೂಲ ಸೌಲಭ್ಯದ ಕೊರತೆ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಪ್ರತಿಧ್ವನಿಸಿತು. ನಗರಸಭಾಧ್ಯಕ್ಷೆ ಷಹಜಹಾನ್ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಗರಸಭೆಯ ಧರಣಪ್ಪ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಬಹುತೇಕ ನಗರಸಭಾ ಸದಸ್ಯರು ತಮ್ಮ ವಾರ್ಡ್‍ಗಳಲ್ಲಿನ ಕಸದ…

ಆದಿಚುಂಚನಗಿರಿಯಲ್ಲಿ ರಾಜ್ಯಮಟ್ಟದ 22ನೇ ಚುಂಚಾದ್ರಿ ಕಲೋತ್ಸವ: ವಿಜ್ಞಾನಿಗಳ ಸಾಧನೆ ವಿಶ್ವಕ್ಕೇ ಮಾದರಿ
ಮಂಡ್ಯ

ಆದಿಚುಂಚನಗಿರಿಯಲ್ಲಿ ರಾಜ್ಯಮಟ್ಟದ 22ನೇ ಚುಂಚಾದ್ರಿ ಕಲೋತ್ಸವ: ವಿಜ್ಞಾನಿಗಳ ಸಾಧನೆ ವಿಶ್ವಕ್ಕೇ ಮಾದರಿ

July 26, 2018

ಮಂಡ್ಯ: ‘ದೇಶದ ವಿಜ್ಞಾನಿ ಗಳ ಸಾಧನೆ, ಇಡೀ ಪ್ರಪಂಚಕ್ಕೇ ಮಾದರಿಯಾಗಿದೆ. ಒಂದೇ ಬಾರಿಗೆ 105 ಸ್ಯಾಟ್‍ಲೆಟ್‍ಗಳನ್ನು ಉಡಾ ವಣೆ ಮಾಡುವ ಮೂಲಕ ಇತರೆ ದೇಶಗಳು ಮಾಡಲಾಗದ ಸಾಧನೆಯನ್ನು ನಮ್ಮ ವಿಜ್ಞಾನಿ ಗಳು ಮಾಡಿದ್ದಾರೆ’ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದರು. ಶ್ರೀಕ್ಷೇತ್ರ ಆದಿಚುಂಚನಗಿರಿಯಲ್ಲಿ ಬುಧವಾರ ಆಯೋಜಿಸಲಾಗಿದ್ದ ಶ್ರೀಗುರುಪೂರ್ಣಿಮ ಮಹೋತ್ಸವ, ಪ್ರತಿಭಾ ಪುರಸ್ಕಾರ ಹಾಗೂ ರಾಜ್ಯ ಮಟ್ಟದ 22ನೇ ಚುಂಚಾದ್ರಿ ಕಲೋತ್ಸವ ಕಾರ್ಯ ಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ದೇಶಕ್ಕೆ ಸ್ವಾತಂತ್ರ್ಯ ಬಂದು 71 ವರ್ಷದಲ್ಲಿ 200 ವರ್ಷಗಳ…

ಮೈಷುಗರ್ ಕಾರ್ಖಾನೆ ಆ.15 ರಿಂದ ಕಾರ್ಯಾರಂಭ
ಮಂಡ್ಯ

ಮೈಷುಗರ್ ಕಾರ್ಖಾನೆ ಆ.15 ರಿಂದ ಕಾರ್ಯಾರಂಭ

July 25, 2018

ಬರುವ 15 ರೊಳಗೆ ರೈತರು, ಕಾರ್ಮಿಕರ ಎಲ್ಲಾ ಬಾಕಿ ಪಾವತಿ ಡಿಸ್ಟಿಲರಿ ಘಟಕ ಖಾಸಗಿಗೆ ವಹಿಸಲು ಸರ್ಕಾರ ನಿರ್ಧಾರ ಎಫ್‍ಆರ್‍ಪಿ ದರ ನಿಗದಿ ನಿಯಮ ತಕ್ಷಣದಿಂದಲೇ ಜಾರಿಗೆ ರೈತರ ಆಗ್ರಹ ಮಂಡ್ಯ: ಜಿಲ್ಲೆಯ ರೈತರ ಜೀವನಾಡಿ ಮೈಷುಗರ್ ಕಾರ್ಖಾನೆಯನ್ನು ಆಗಸ್ಟ್ 15 ರಿಂದ ಆರಂಭಿಸಲಾಗುವುದು ಎಂದು ಸಕ್ಕರೆ ಹಾಗೂ ಭಾರೀ ಕೈಗಾರಿಕಾ ಸಚಿವ ಕೆ.ಜೆ. ಜಾರ್ಜ್ ತಿಳಿಸಿದರು. ಮಂಗಳವಾರ ಮೈಷುಗರ್ ಕಾರ್ಖಾನೆಗೆ ದಿಢೀರ್ ಭೇಟಿ ನೀಡಿದ ಅವರು, ಕಾರ್ಖಾನೆಯ ಸ್ಥಿತಿಗತಿ ಬಗ್ಗೆ ಪರಿಶೀಲಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ…

ದುದ್ದ ಹೋಬಳಿ ಕೆರೆಗಳಿಗೆ ನೀರು ತುಂಬಿಸಲು 110 ಕೋಟಿ ಮೀಸಲು ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು
ಮಂಡ್ಯ

ದುದ್ದ ಹೋಬಳಿ ಕೆರೆಗಳಿಗೆ ನೀರು ತುಂಬಿಸಲು 110 ಕೋಟಿ ಮೀಸಲು ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು

July 24, 2018

ಮಂಡ್ಯ: ಮೇಲುಕೋಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ದುದ್ದ ಹೋಬಳಿ ಕೆರೆಗಳಿಗೆ ನೀರು ತುಂಬಿಸಲು ರಾಜ್ಯ ಸರ್ಕಾರ ಬಜೆಟ್‍ನಲ್ಲಿ 110 ಕೋಟಿ ಅನುದಾನ ಮೀಸಲಿರಿಸಿದ್ದು, ಸಣ್ಣ ನೀರಾ ವರಿ ಇಲಾಖೆ ವತಿಯಿಂದ ಈ ಅಭಿವೃದ್ಧಿ ಕಾರ್ಯ ಅನುಷ್ಠಾನಗೊಳಿಸಲಾಗುವುದು ಎಂದು ಸಣ್ಣ ನೀರಾವರಿ ಸಚಿವ ಸಿ.ಎಸ್. ಪುಟ್ಟರಾಜು ತಿಳಿಸಿದರು. ಸೋಮವಾರ ದುದ್ದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಆಯೋ ಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಮಾತ ನಾಡಿದ ಅವರು, ರಾಜ್ಯ ಸರ್ಕಾರ ರೈತರ ಸರ್ವತೋಮುಖ ಅಭಿವೃದ್ಧಿಗೆ ಪೂರಕ ವಾದ ಕಾರ್ಯಕ್ರಮಗಳನ್ನು…

ಅನಾಥ ಶವಗಳಿಗೆ ಮುಕ್ತಿ ಕೊಡೋ ಪೊಲೀಸ್ ಪೇದೆ
ಮಂಡ್ಯ

ಅನಾಥ ಶವಗಳಿಗೆ ಮುಕ್ತಿ ಕೊಡೋ ಪೊಲೀಸ್ ಪೇದೆ

July 24, 2018

ಮಂಡ್ಯ: ಆಧುನಿಕತೆಯ ಬೆನ್ನೇರಿ ಎಲ್ಲವೂ ವ್ಯಾಪಾರೀಕರಣವಾಗಿ ರುವ ಈ ಸಂದರ್ಭದಲ್ಲಿ ಮಾನವೀಯತೆ ಅನ್ನೋದು ಮರೆಯಾಗಿ ಬಿಟ್ಟಿದೆ. ಅವರವರಿಗೆ ವಹಿಸಿದ ಕೆಲಸ ಮಾಡು ವುದೇ ದುಸ್ತರ ಅನ್ನುವಂತಹ ಸ್ಥಿತಿ ಇರುವ ಇಂದಿನ ದಿನಗಳಲ್ಲಿ, ಇಲ್ಲೊಬ್ಬ ಪೊಲೀಸ್ ಪೇದೆ ತನಗೆ ವಹಿಸಿರುವ ಸರ್ಕಾರಿ ಕೆಲಸದ ಜೊತೆಗೆ ಇನ್ನೊಂದು ಕೆಲಸವನ್ನು ಅಚ್ಚು ಕಟ್ಟಾಗಿ ಮಾಡುತ್ತಾ ಬರುತ್ತಿದ್ದಾರೆ. ಕಳೆದ 6 ವರ್ಷಗಳಿಂದೀಚೆಗೆ ಬರೋಬರಿ 150ಕ್ಕೂ ಹೆಚ್ಚು ಅನಾಥ ಶವಗಳ ಅಂತ್ಯ ಕ್ರಿಯೆ ನಡೆಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಶ್ರೀರಂಗಪಟ್ಟಣ ಪೊಲೀಸ್ ಠಾಣೆಯ ಪೇದೆ…

ಶ್ರೀ ನಂಜಮ್ಮ ಮೋಟೆಗೌಡ ಸ್ಮರಣಾರ್ಥ ಪರಿಸರ ಚಿತ್ರಕಲಾ ಸ್ಪರ್ಧೆ: ಪ್ಲಾಸ್ಟಿಕ್ ಮುಕ್ತ ಭಾರತವನ್ನಾಗಿಸಲು ಮುಂದಾಗೋಣ
ಮಂಡ್ಯ

ಶ್ರೀ ನಂಜಮ್ಮ ಮೋಟೆಗೌಡ ಸ್ಮರಣಾರ್ಥ ಪರಿಸರ ಚಿತ್ರಕಲಾ ಸ್ಪರ್ಧೆ: ಪ್ಲಾಸ್ಟಿಕ್ ಮುಕ್ತ ಭಾರತವನ್ನಾಗಿಸಲು ಮುಂದಾಗೋಣ

July 23, 2018

ಮಂಡ್ಯ:  ಪ್ರಸ್ತುತ ದಿನಗಳಲ್ಲಿ ದೇಶವನ್ನು ಪ್ಲಾಸ್ಟಿಕ್ ಮುಕ್ತ ಭಾರತವನ್ನಾಗಿಸಲು ಎಲ್ಲರೂ ಶ್ರಮಿಸಬೇಕಿದೆ ಎಂದು ಕಲಾತಪಸ್ವಿ ಟ್ರಸ್ಟ್‍ನ ಪ್ರಧಾನ ಪೋಷಕ ಕೆ.ಟಿ.ಹನುಮಂತು ಅಭಿಪ್ರಾಯಪಟ್ಟರು. ನಗರದ ಗಾಂಧಿ ಭವನದಲ್ಲಿ ಕಲಾತಪಸ್ವಿ ಟ್ರಸ್ಟ್, ಅಮ್ಮ ಕಿಡ್ಸ್, ಕರ್ನಾಟಕ ಚಿತ್ರಕಲಾ ಆಕಾಡೆಮಿ ಮೈಸೂರು ಆಯೋಜಿಸಿದ್ದ ಶ್ರೀ ನಂಜಮ್ಮ ಮೋಟೆಗೌಡ ಸ್ಮರಣಾರ್ಥ “ಪರಿಸರ” ಕುರಿತ 3ನೇ ವರ್ಷದ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅತಿಯಾದ ಪ್ಲಾಸ್ಟಿಕ್ ಬಳಿಕೆಯಿಂದ ಪರಿಸರ ಮಾಲಿನ್ಯ ಗೊಳ್ಳುತ್ತಿರುವುದು ದೊಡ್ಡ ದುರಂತಕ್ಕೆ ಕಾರಣವಾಗಿದೆ. ತಾಪಮಾನ ಹೆಚ್ಚಳಗೊಳ್ಳಲು ಇದು ಪ್ರಮುಖ…

ರೈತರು, ಕಾಂಗ್ರೆಸ್ ಕಾರ್ಯಕರ್ತರು, ವಿದ್ಯಾರ್ಥಿಗಳಿಂದ ಪ್ರತ್ಯೇಕ ಪ್ರತಿಭಟನೆ
ಮಂಡ್ಯ

ರೈತರು, ಕಾಂಗ್ರೆಸ್ ಕಾರ್ಯಕರ್ತರು, ವಿದ್ಯಾರ್ಥಿಗಳಿಂದ ಪ್ರತ್ಯೇಕ ಪ್ರತಿಭಟನೆ

July 22, 2018

 ಸಂಪೂರ್ಣ ಸಾಲಮನ್ನಾಕ್ಕೆ ಆಗ್ರಹಿಸಿ ರೈತರ ಧರಣಿ ಬಿಜೆಪಿ ಭ್ರಷ್ಟ ಆಡಳಿತದ ವಿರುದ್ಧ ಯುವ ಕಾಂಗ್ರೆಸ್ ಪ್ರತಿಭಟನೆ ಉಚಿತ ಬಸ್‍ಪಾಸ್‍ಗೆ ವಿದ್ಯಾರ್ಥಿಗಳ ಆಗ್ರಹ ಮಂಡ್ಯ:  ವಿವಿಧ ಬೇಡಿಕೆ ಈಡೇರಿ ಕೆಗೆ ಆಗ್ರಹಿಸಿ ರೈತಸಂಘ, ಕಸ್ತೂರಿ ಕರ್ನಾ ಟಕ ಜನಪರ ವೇದಿಕೆ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ಪ್ರತ್ಯೇಕವಾಗಿ ನಗರದಲ್ಲಿ ಪ್ರತಿಭಟನೆ ನಡೆಸಿದರು. 39ನೇ ರೈತ ಹುತಾತ್ಮರ ದಿನಾಚರಣೆ ಅಂಗವಾಗಿ ರೇಷ್ಮೆ ಗೂಡು ಹಾಗೂ ಕಬ್ಬಿಗೆ ಬೆಂಬಲ ಬೆಲೆ ಘೋಷಣೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗಾಗಿ ರೈತಸಂಘ(ಮೂಲ…

1 39 40 41 42 43 56
Translate »