Tag: Mandya

ಜಿಲ್ಲಾಸ್ಪತ್ರೆ ಅವ್ಯವಸ್ಥೆಗೆ ಸಚಿವರ ತರಾಟೆ
ಮಂಡ್ಯ

ಜಿಲ್ಲಾಸ್ಪತ್ರೆ ಅವ್ಯವಸ್ಥೆಗೆ ಸಚಿವರ ತರಾಟೆ

August 13, 2018

ಮಂಡ್ಯ: ಮಿಮ್ಸ್ ಆಸ್ಪತ್ರೆ ಅವ್ಯವಸ್ಥೆ ಕಂಡು ಆಕ್ರೋಶಗೊಂಡ ಮಂಡ್ಯ ಜಿಲ್ಲಾ ಉಸ್ತುವಾರಿ, ಸಣ್ಣ ನೀರಾವರಿ ಸಚಿವ ಸಿ.ಎಸ್ ಪುಟ್ಟರಾಜು ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಘಟನೆ ಜಿಲ್ಲಾಸ್ಪತ್ರೆ ಆವರಣದಲ್ಲಿಂದು ನಡೆಯಿತು. ಇಂದು ಬೆಳಗ್ಗೆ ವಿ.ಸಿ.ಫಾರಂ ಗೇಟ್ ಬಳಿ ಅಪಘಾತದಲ್ಲಿ ಮೃತಪಟ್ಟವರನ್ನು ನೋಡಲು ಮಿಮ್ಸ್‍ನ ಶವಾಗಾರಕ್ಕೆ ಆಗಮಿಸಿದ್ದ ವೇಳೆ ಈ ಘಟನೆ ನಡೆಯಿತು. ಏನಿದು ಘಟನೆ: ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಾಜು ಅವರು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ್ದ ವೇಳೆ ಹೆರಿಗೆ ವಾರ್ಡ್ ಬಳಿ ಬಾಣಂತಿಯರ ಸಂಬಂಧಿಕರಿಗೆ…

ಸೀತಾಪುರ ಗದ್ದೆಯಲ್ಲಿ ನಾಟಿ ಮಾಡಿದ ಸಿಎಂ ಕುಮಾರಸ್ವಾಮಿ ನಾಡಿನ ದೊರೆ ಸಂದೇಶ: ಅನ್ನದಾತರೇ ಧೈರ್ಯಗೆಡದಿರಿ… ನಿಮ್ಮೊಂದಿಗೆ ನಾವಿದ್ದೇವೆ
ಮಂಡ್ಯ

ಸೀತಾಪುರ ಗದ್ದೆಯಲ್ಲಿ ನಾಟಿ ಮಾಡಿದ ಸಿಎಂ ಕುಮಾರಸ್ವಾಮಿ ನಾಡಿನ ದೊರೆ ಸಂದೇಶ: ಅನ್ನದಾತರೇ ಧೈರ್ಯಗೆಡದಿರಿ… ನಿಮ್ಮೊಂದಿಗೆ ನಾವಿದ್ದೇವೆ

August 12, 2018

ಮೈಸೂರು: ರೈತರಿಗೆ ಆತ್ಮಸ್ಥೈರ್ಯ ತುಂಬಲು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಇಂದು ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕು ಸೀತಾಪುರ ಗ್ರಾಮದ ಕೆಸರು ಗದ್ದೆಯಲ್ಲಿ ರೈತ ಮಹಿಳೆ ಯರೊಂದಿಗೆ ಭತ್ತದ ನಾಟಿ ಮಾಡಿದರು. ಸಾಲ ಭೀತಿಯಿಂದ ಹತಾಶರಾಗಿ ಆತ್ಮಹತ್ಯೆ ಹಾದಿ ಹಿಡಿದಿರುವ ಮಣ್ಣಿನ ಮಕ್ಕಳಿಗೆ ಸರ್ಕಾರ ನಿಮ್ಮೊಂದಿಗಿದೆ ಎಂಬ ಸಂದೇಶ ದೊಂದಿಗೆ ಸೀತಾಪುರದ ಕುಳ್ಳಮ್ಮ ಮತ್ತು ಕೆಂಚೇಗೌಡ ಕುಟುಂಬಕ್ಕೆ ಸೇರಿದ 5 ಎಕರೆ ಜಮೀನಿನಲ್ಲಿ ಮುಖ್ಯಮಂತ್ರಿಗಳು ಹೊಸ ಕಾರ್ಯಕ್ರಮಕ್ಕೆ ನಾಂದಿ ಹಾಡಿದ್ದಾರೆ. ಸಚಿವರಾದ ಸಿ.ಎಸ್. ಪುಟ್ಟರಾಜು, ಸಾ.ರಾ. ಮಹೇಶ್, ಶಾಸಕರಾದ…

ಗೌರಿ-ಗಣೇಶ ಹಬ್ಬದೊಳಗೆ ರಾಜ್ಯದ ಜನತೆಗೆ ಬಂಪರ್ ಗಿಫ್ಟ್
ಮಂಡ್ಯ

ಗೌರಿ-ಗಣೇಶ ಹಬ್ಬದೊಳಗೆ ರಾಜ್ಯದ ಜನತೆಗೆ ಬಂಪರ್ ಗಿಫ್ಟ್

August 12, 2018

ಮೈಸೂರು: ಹತಾಶರಾಗಿ ರೈತ ತಂದೆ-ತಾಯಂದಿರು ಆತ್ಮಹತ್ಯೆಗೆ ಶರಣಾಗಬೇಡಿ. ಗೌರಿ-ಗಣೇಶ ಹಬ್ಬದೊಳಗಾಗಿ ರಾಜ್ಯದ ಜನತೆಗೆ ಬಂಪರ್ ಗಿಫ್ಟ್ ನೀಡುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ. ಮಂಡ್ಯ ಜಿಲ್ಲೆ, ಪಾಂಡವಪುರ ತಾಲೂಕು ಸೀತಾಪುರ ಗ್ರಾಮದ ಗದ್ದೆಯಲ್ಲಿ ಭತ್ತದ ನಾಟಿ ಮಾಡಿದ ನಂತರ ರೈತರನ್ನುದ್ದೇಶಿಸಿ ಮಾತನಾಡಿದ ಅವರು, ರೈತರು ಮಾಡಿರುವ ರಾಷ್ಟ್ರೀಕೃತ ಬ್ಯಾಂಕ್ ಸಾಲವನ್ನೂ ಮನ್ನಾ ಮಾಡಲು ಚಿಂತನೆ ನಡೆಸಿದ್ದೇನೆ. ಕ್ಯಾಬಿನೆಟ್‍ನಲ್ಲಿ ನಿರ್ಧಾರ ಕೈಗೊಂಡ ನಂತರ ನಿಲುವು ಪ್ರಕಟಿಸುತ್ತೇನೆ. ಕೇವಲ ರೈತರ ಸಾಲ ಮನ್ನಾ ಮಾತ್ರವಲ್ಲದೆ, ಹೊಸ ಕೃಷಿ ನೀತಿ ಮಾಡಲು…

ನಿಯಮ ಬಾಹಿರ ಇ-ಸ್ವತ್ತು ಮಾಡಿರುವ ಆರೋಪ:  ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿರುದ್ಧ ಎಸಿಬಿಗೆ ದೂರು
ಮಂಡ್ಯ

ನಿಯಮ ಬಾಹಿರ ಇ-ಸ್ವತ್ತು ಮಾಡಿರುವ ಆರೋಪ: ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿರುದ್ಧ ಎಸಿಬಿಗೆ ದೂರು

August 9, 2018

ಮಂಡ್ಯ:  ‘ಕಳೆದ ಜು. 18 ರಂದು ತಾಲೂಕಿನ ಬೂದನೂರು ಗ್ರಾಮ ಪಂಚಾ ಯಿತಿಯ ಅಧ್ಯಕ್ಷೆ ಶೋಭಾ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಅಭಿವೃದ್ಧಿ ಅಧಿಕಾರಿ ಎ.ಹೆಚ್.ಕಲಾ ಅವರು ನಿಯಮ ಬಾಹಿರವಾಗಿ ಇ-ಸ್ವತ್ತು ಮಾಡಿ ಅಕ್ರಮ ಎಸಗಿದ್ದಾರೆ’ ಎಂದು ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ಗೆ ಗ್ರಾಪಂ ಸದಸ್ಯ ಬಿ.ಕೆ.ಸತೀಶ ದೂರು ನೀಡಿದ್ದಾರೆ. ಗ್ರಾಮದ ಇಬ್ಬರು ವ್ಯಕ್ತಿಗಳು ಜಿಲ್ಲಾಧಿಕಾರಿ ಗಳಿಂದ ಅನ್ಯಕ್ರಾಂತ ಮಂಜೂರು ಮಾಡಿಸಿ ಕೊಂಡು ಗ್ರಾಪಂನಲ್ಲಿ ಖಾತೆ ನಮೂದು ಹಾಗೂ ಇ-ಸ್ವತ್ತು ಮಾಡಿಕೊಡಲು ಮನವಿ ಸಲ್ಲಿಸಿದ್ದರು. ಕಳೆದ…

ಆ.11, ಮಣ್ಣಿನ ಮಗನಿಂದ ನಾಟಿ : ಸೀತಾಪುರ ಗ್ರಾಮದ ಗದ್ದೆಯಲ್ಲಿ ನಾಟಿ ಮಾಡಲಿದ್ದಾರೆ ಮುಖ್ಯಮಂತ್ರಿ ಎಚ್ಡಿಕೆ!
ಮಂಡ್ಯ

ಆ.11, ಮಣ್ಣಿನ ಮಗನಿಂದ ನಾಟಿ : ಸೀತಾಪುರ ಗ್ರಾಮದ ಗದ್ದೆಯಲ್ಲಿ ನಾಟಿ ಮಾಡಲಿದ್ದಾರೆ ಮುಖ್ಯಮಂತ್ರಿ ಎಚ್ಡಿಕೆ!

August 8, 2018

ಮಂಡ್ಯ: ಗ್ರಾಮವಾಸ್ತವ್ಯ ಮಾಡಿ ಜನಮೆಚ್ಚುಗೆಗೆ ಪಾತ್ರರಾಗಿದ್ದ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇದೀಗ ಗದ್ದೆಯಲ್ಲಿ ನಾಟಿ ಕೆಲಸ ಮಾಡುವ ಮೂಲಕ ಮತ್ತೊಂದು ಹೊಸ ಹೆಜ್ಜೆಯನ್ನಿಡುವುದ ರೊಂದಿಗೆ ಮಣ್ಣಿನ ಮಗನೆಂದು ಸಾಬೀತು ಮಾಡಲು ಹೊರಟಿದ್ದಾರೆ. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಆ.11 ರಂದು ಪಾಂಡವಪುರ ತಾಲೂಕಿನ, ಅರಳಕುಪ್ಪೆ ಗ್ರಾಪಂ ವ್ಯಾಪ್ತಿಯ ಸೀತಾಪುರ ಗ್ರಾಮದ ಗದ್ದೆಯೊಂದರಲ್ಲಿ ನಾಟಿ ಕೆಲಸ ಮಾಡುವ ಮೂಲಕ ಮಣ್ಣಿನ ಮಗನಾಗಲಿದ್ದಾರೆ. ಅಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 2 ಗಂಟೆವರೆಗೆ ಕುಮಾರಣ್ಣ ಗದ್ದೆಗಿಳಿದು ರೈತರ ಜೊತೆ ನಾಟಿ ಮಾಡಲಿದ್ದಾರೆ…

ಎಚ್‍ಡಿಕೆ ಮುಖ್ಯಮಂತ್ರಿ  151 ನಾಟಿಕೋಳಿ ಹರಕೆ ತೀರಿಸಿದ ಅಭಿಮಾನಿ
ಮಂಡ್ಯ

ಎಚ್‍ಡಿಕೆ ಮುಖ್ಯಮಂತ್ರಿ  151 ನಾಟಿಕೋಳಿ ಹರಕೆ ತೀರಿಸಿದ ಅಭಿಮಾನಿ

August 8, 2018

ಮಂಡ್ಯ: ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲೆಂದು ಹರಕೆ ಹೊತ್ತಿದ್ದ ಅಭಿಮಾನಿಯೋರ್ವ ಮಂಗಳ ವಾರ 151 ನಾಟಿಕೋಳಿಗಳನ್ನು ದೇವಿಗೆ ಅರ್ಪಿಸಿ ಹರಕೆ ತೀರಿಸಿದ ಘಟನೆ ಕೆ.ಆರ್. ಪೇಟೆ ತಾಲೂಕಿನ ಮುರುಕನಹಳ್ಳಿ ಗ್ರಾಮದ ಹೊರವಲಯದಲ್ಲಿರುವ ತೊರೆಯಮ್ಮ ದೇವಾಲಯದಲ್ಲಿ ನಡೆದಿದೆ. ಕೆ.ಆರ್.ಪೇಟೆ ತಾಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಹುಲ್ಲೇಗೌಡರು, ಕೆ.ಆರ್.ಪೇಟೆ ಕ್ಷೇತ್ರದ ಶಾಸಕರಾಗಿ ನಾರಾಯಣಗೌಡ ಆಯ್ಕೆಯಾಗಬೇಕು, ಕುಮಾರಸ್ವಾಮಿ ಮುಖ್ಯಮಂತ್ರಿಯಾಗ ಬೇಕು, ಪುಟ್ಟರಾಜು ಸಚಿವರಾಗಬೇಕು ಎಂದು ದೇವರಿಗೆ ಹರಕೆ ಕಟ್ಟಿಕೊಂಡಿದ್ದರು. ಇದೀಗ ಅವರ ಆಶಯ ಈಡೇರಿದ್ದರಿಂದ 151 ನಾಟಿಕೋಳಿಗಳನ್ನು ದೇವರಿಗೆ ಬಲಿ ನೀಡಿ ತಮ್ಮ…

ಅಖಂಡ ಕರ್ನಾಟಕ ಇಬ್ಭಾಗದ ಕೂಗು ತರವಲ್ಲ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ
ಮಂಡ್ಯ

ಅಖಂಡ ಕರ್ನಾಟಕ ಇಬ್ಭಾಗದ ಕೂಗು ತರವಲ್ಲ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ

August 8, 2018

ಮಂಡ್ಯ: ಅಖಂಡ ಕರ್ನಾಟಕವನ್ನು ಇಬ್ಬಾಗ ಮಾಡುವ ಕೂಗೆದ್ದಿರುವುದು ಸರಿಯಲ್ಲ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ತಿಳಿಸಿದರು. ನಗರದ ಗಾಂಧಿ ಭವನದಲ್ಲಿಂದು ರಾಜ್ಯ ಕನ್ನಡ ಸೇನೆ ವತಿಯಿಂದ ನಡೆದ ಅಖಂಡ ಕರ್ನಾಟಕ ಕುರಿತ ಸಂವಾದ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು. ಅಖಂಡ ಕರ್ನಾಟಕ ನಿರ್ಮಾಣದ ಹಿಂದೆ ಹತ್ತಾರು ಗಣ್ಯರ ಹೋರಾಟದ ಶ್ರಮವಿದೆ. ಉತ್ತರ ಕರ್ನಾಟಕಕ್ಕೆ ಅನುದಾನ ನೀಡು ವಲ್ಲಿ ತಾರತಮ್ಯ ಆಗಿದೆ ಎಂದು ಚಿಕ್ಕ ನೆಪವೊಡ್ಡಿ ಪ್ರತ್ಯೇಕ ರಾಜ್ಯ ಕೊಡಿ ಎಂದು ಕೇಳುವುದು ತಪ್ಪು. ಆ ಭಾಗದ…

ಮಾಲಿನ್ಯ ತಡೆಯಿಂದ ಮಾತ್ರ ಮನುಕುಲಕ್ಕೆ ಉಳಿಗಾಲ
ಮಂಡ್ಯ

ಮಾಲಿನ್ಯ ತಡೆಯಿಂದ ಮಾತ್ರ ಮನುಕುಲಕ್ಕೆ ಉಳಿಗಾಲ

August 8, 2018

ಭಾರತೀನಗರ: ಜಲಮಾಲಿನ್ಯ, ವಾಯುಮಾಲಿನ್ಯ, ಶಬ್ದಮಾಲಿನ್ಯ ತಡೆಗಟ್ಟಿ ದರೆ ಮಾತ್ರ ಮನುಕುಲಕ್ಕೆ ಉಳಿಗಾಲ ಎಂದು ಕೃಷಿಕ್ ಲಯನ್ಸ್ ಸಂಸ್ಥೆ ಅಧ್ಯಕ್ಷ ಹಾಗೂ ಪರಿಸರ ಪ್ರೇಮಿ ಕೆ.ಟಿ.ಹನುಮಂತು ತಿಳಿಸಿದರು. ಇಲ್ಲಿನ ಪ್ರಶಾಂತ್ ಸ್ಕೂಲ್ ಆಫ್ ಬ್ರಿಲಿಯನ್ಸ್ ಶಾಲೆ ಆವರಣದಲ್ಲಿ ಮಂಗಳ ವಾರ ಪರಿಸರ ಜಾಗೃತಿ ವೇದಿಕೆಯಿಂದ ನಡೆದ ಪರಿಸರ ಜಾಗೃತಿ ಕಾರ್ಯಕ್ರಮವನ್ನು ಶಾಲೆಗೆ ಗಿಡ ಕೊಡುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಪರಿಸರ ದಿನಾ ಚರಣೆಯನ್ನು ಜೂ.5 ರಂದು ಮಾತ್ರ ಆಚರಿಸದೆ ಪ್ರತಿ ದಿನವೂ ಪರಿಸರ ದಿನ ಆಚರಿಸಬೇಕೆಂದು ಮನವಿ…

ಕ್ಷುಲ್ಲಕ ಕಾರಣಕ್ಕೆ ಬಾರಿನಲ್ಲಿ ಆರಂಭವಾದ ಗಲಾಟೆ: ಯುವಕನೊಬ್ಬನ ಆತ್ಮಹತ್ಯೆಯಲ್ಲಿ ಅಂತ್ಯ!
ಮಂಡ್ಯ

ಕ್ಷುಲ್ಲಕ ಕಾರಣಕ್ಕೆ ಬಾರಿನಲ್ಲಿ ಆರಂಭವಾದ ಗಲಾಟೆ: ಯುವಕನೊಬ್ಬನ ಆತ್ಮಹತ್ಯೆಯಲ್ಲಿ ಅಂತ್ಯ!

August 7, 2018

ಮಂಡ್ಯ:  ಕ್ಷುಲ್ಲಕ ಕಾರಣಕ್ಕೆ ಬಾರ್‍ವೊಂದರಲ್ಲಿ ನಡೆದ ಗಲಾಟೆಯಿಂದ ಮಾನಸಿಕವಾಗಿ ನೊಂದ ಯುವಕನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶ್ರೀರಂಗ ಪಟ್ಟಣ ತಾಲೂಕಿನ ಗೊಬ್ಬರಗಾಲ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಾಗೇಂದ್ರ(28) ಆತ್ಮಹತ್ಯೆಗೆ ಶರಣಾದ ಯುವಕ. ಪ್ರಕರಣ ಸಂಬಂಧ ದಿಲೀಪ, ರವಿ, ಮಧು, ಶ್ರೀಧರ್ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಮೃತ ನಾಗೇಂದ್ರ ಮಾಜಿ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡರ ಬೆಂಬಲಿಗನಾ ದರೆ, ಬಂಧಿತರಾದ ದಿಲೀಪ, ರವಿ, ಮಧು, ಶ್ರೀಧರ್ ಅವರೆಲ್ಲಾಹಾಲಿ ಶಾಸಕ ರವೀಂದ್ರ ಶ್ರೀಕಂಠಯ್ಯ ಬೆಂಬಲಿಗರೆಂದು ತಿಳಿದು ಬಂದಿದೆ. ಘಟನೆ ಹಿನ್ನೆಲೆ:…

ಸಾರ್ವಜನಿಕರ ಸಮಸ್ಯೆ ಶೀಘ್ರ ಪರಿಹರಿಸಲು ಸೂಚನೆ
ಮಂಡ್ಯ

ಸಾರ್ವಜನಿಕರ ಸಮಸ್ಯೆ ಶೀಘ್ರ ಪರಿಹರಿಸಲು ಸೂಚನೆ

August 2, 2018

ರೈತರಿಗೆ ತೊಂದರೆ ನೀಡಿದರೆ ಶಿಸ್ತು ಕ್ರಮ: ಸಚಿವ ಡಿ.ಸಿ.ತಮ್ಮಣ್ಣ ಎಚ್ಚರಿಕೆ ಮದ್ದೂರು: ‘ಸಾರ್ವಜನಿಕರ ಸರಳ ಕೆಲಸಗಳಿಗೆ ತೊಡಕು ಆಗದಂತೆ ಕೆಲಸನಿರ್ವಹಿಸಿ, ಅವರ ಸಮಸ್ಯೆಗಳಿಗೆ ಸ್ಪಂದಿಸಿ ತ್ವರಿತವಾಗಿ ಬಗೆಹರಿಸಲು ಅಧಿಕಾರಿಗಳು ಮುಂದಾಗಬೇಕು’ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಸೂಚಿಸಿದರು.ತಾಲೂಕು ಕ್ರೀಡಾಂಗಣದಲ್ಲಿ ಬುಧವಾರ ನಡೆದ ಜನಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತಾಲೂಕಿನಲ್ಲಿ ಸಾರ್ವಜನಿಕರಿಂದ ಹಾಗೂ ರೈತರಿಂದ ಹೆಚ್ಚು ದೂರು ಬಂದ ಹಿನ್ನೆಲೆಯಲ್ಲಿ ಸಚಿವರಾಗಿ ಅಧಿಕಾರ ವಹಿಸಿಕೊಂಡ ಎರಡು ತಿಂಗಳಲ್ಲಿ ತಾಲೂಕು ಮಟ್ಟದ ಜನ ಸಂಪರ್ಕ ಸಭೆಯನ್ನು ಏರ್ಪಡಿಸಲಾಗಿದ್ದು…

1 38 39 40 41 42 56
Translate »