Tag: Mandya

ರಣರಂಗದಲ್ಲಿ ಹಾಲಿ, ಮಾಜಿ ಸದಸ್ಯರ ಜಿದ್ದಾಜಿದ್ದಿ
ಮಂಡ್ಯ

ರಣರಂಗದಲ್ಲಿ ಹಾಲಿ, ಮಾಜಿ ಸದಸ್ಯರ ಜಿದ್ದಾಜಿದ್ದಿ

August 27, 2018

ಮಂಡ್ಯ:  ಈ ಹಿಂದಿಗಿಂತಲೂ ಈ ಬಾರಿಯ ಲೋಕಲ್ ಎಲೆಕ್ಷನ್ ಫೈಟ್ ಜೋರಾಗಿಯೇ ಇದೆ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ, ಜೆಡಿಎಸ್, ಬಿಎಸ್‍ಪಿ ಸೇರಿದಂತೆ ಇತರೆ ಪ್ರಾದೇಶಿಕ ಪಕ್ಷ ಗಳಿಗೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಹೇಳಿ ಕೇಳಿ ಕಾಂಗ್ರೆಸ್ ಮತ್ತು ಜೆಡಿಎಸ್ ಭದ್ರಕೋಟೆಯಾಗಿ ರುವ ಮಂಡ್ಯ ನಗರಸಭೆಯಲ್ಲಿ ಈ ಬಾರಿ ಬಿಜೆಪಿಯೂ ಸಹ ಪ್ರಬಲ ಪೈಪೋಟಿ ನೀಡುವ ಮುನ್ಸೂಚನೆ ನೀಡಿದೆ. ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಎಲ್ಲ ಪಕ್ಷಗಳ ಅಭ್ಯರ್ಥಿಗಳು ಮತ್ತು ಪಕ್ಷೇತರರೂ ಮತದಾರರನ್ನು ಸೆಳೆಯಲು ಇನ್ನಿಲ್ಲದ ಕಸರತ್ತು…

ಸ್ಥಳೀಯ ಸಂಸ್ಥೆ ಚುನಾವಣೆ  ಕಾಂಗ್ರೆಸ್ ಪಾಲಿಗೆ ಮಹತ್ವದ್ದು
ಮಂಡ್ಯ

ಸ್ಥಳೀಯ ಸಂಸ್ಥೆ ಚುನಾವಣೆ  ಕಾಂಗ್ರೆಸ್ ಪಾಲಿಗೆ ಮಹತ್ವದ್ದು

August 25, 2018

ಮಂಡ್ಯ:  ಈ ಬಾರಿಯ ಸ್ಥಳೀಯ ಸಂಸ್ಥೆ ಚುನಾವಣೆ ಕಾಂಗ್ರೆಸ್ ಪಾಲಿಗೆ ಮಹತ್ವದ್ದಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದರು. ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ನಗರದ ಎ.ಸಿ. ಮಾದೇಗೌಡ ಕಲ್ಯಾಣ ಮಂಟಪದಲ್ಲಿಂದು ಕಾಂಗ್ರೆಸ್ ಅಭ್ಯರ್ಥಿಗಳ ಪರ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಎಲ್ಲ ವರ್ಗದವರಿಗೂ ನ್ಯಾಯ ನೀಡುವ ಮೂಲಕ ಗಮನ ಸೆಳೆದಿತ್ತು. ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡಿತ್ತು. ಆದರೂ ಸಹ ಚುನಾವಣೆಯಲ್ಲಿ ಸೋಲು ಅನುಭವಿಸ…

ಮಂಡ್ಯ ನಗರಸಭೆ ಚುನಾವಣೆ: 147 ಅಭ್ಯರ್ಥಿಗಳು ಕಣದಲ್ಲಿ
ಮಂಡ್ಯ

ಮಂಡ್ಯ ನಗರಸಭೆ ಚುನಾವಣೆ: 147 ಅಭ್ಯರ್ಥಿಗಳು ಕಣದಲ್ಲಿ

August 25, 2018

ಮಂಡ್ಯ:  ಮಂಡ್ಯ ನಗರಸಭೆಯ 35 ವಾರ್ಡ್‍ಗಳ ಚುನಾವಣೆಗಾಗಿ ಸ್ವೀಕೃತವಾಗಿದ್ದ ಒಟ್ಟು 173 ಕ್ರಮಬದ್ಧ ನಾಮಪತ್ರಗಳ ಪೈಕಿ, 26 ಮಂದಿ ನಾಮಪತ್ರ ವಾಪಸ್ ಪಡೆದಿದ್ದು, ಅಂತಿಮವಾಗಿ 147 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. 1ನೇ ವಾರ್ಡ್- ಎಂ.ಎಂ.ಆದರ್ಶಗೌಡ (ಕಾಂ), ಕೃಷ್ಣ (ಬಿಜೆಪಿ), ಎಂ.ವಿ.ಪ್ರಕಾಶ್ (ಜಾ.ದಳ), 2ನೇ ವಾರ್ಡ್- ಆರ್.ಪಲ್ಲವಿ(ಕಾಂ), ಜೈಮ್ಮಾ (ಬಿಜೆಪಿ), ಕೆ.ಜಿ.ಬಿಂದು (ಜಾ.ದಳ), ಮಂಜುಳ (ಪಕ್ಷೇತರರು), 3ನೇ ವಾರ್ಡ್- ಅಯೂಬ್ (ಬಿಜೆಪಿ), ತೌಸಿಪ್ ಅಹಮದ್ (ಜಾ.ದಳ), ಮಹಮದ್ ಅಪೆÇ್ರೀಜ್, ಜಾಕೀರ್ ಪಾಷಾ, ಶಲ್ಮಾ ಬಾನು, ಸಯ್ಯದ್ ಫೈಗರ್(ಪಕ್ಷೇತರ), 4ನೇ…

ಕೌಟುಂಬಿಕ ಕಲಹ: ತಂದೆಯಿಂದಲೇ ಮಗನ ಹತ್ಯೆ
ಮಂಡ್ಯ

ಕೌಟುಂಬಿಕ ಕಲಹ: ತಂದೆಯಿಂದಲೇ ಮಗನ ಹತ್ಯೆ

August 23, 2018

ಮಂಡ್ಯ:  ಕೌಟುಂಬಿಕ ಕಲಹದಿಂದ ತಂದೆಯೇ ಮಗನನ್ನು ಹತ್ಯೆ ಮಾಡಿ ಮನೆ ಮುಂದೆ ಬಿಸಾಡಿದ ಘಟನೆ ತಾಲೂಕಿನ ಕೋಣನಹಳ್ಳಿ ತಿಟ್ಟು ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಗ್ರಾಮದ ನಿವಾಸಿ ವಾಸು(26), ತನ್ನ ತಂದೆ ಕೃಷ್ಣಪ್ಪ (56) ಅವರಿಂದ ಹತ್ಯೆಯಾದವನು. ಘಟನೆ ಹಿನ್ನೆಲೆ: ಗ್ರಾಮದಲ್ಲಿ ಕೂಲಿ ಮಾಡಿ ಕೊಂಡು ಜೀವನ ನಿರ್ವಹಿಸುತ್ತಿದ್ದ ಕೃಷ್ಣಪ್ಪನಿಗೆ ಮಗ ವಾಸು ನಿತ್ಯವೂ ಮದ್ಯ ಸೇವನೆ ಮಾಡಿ ಬಂದು ಕಿರುಕುಳ ನೀಡುತ್ತಿದ್ದನಂತೆ. ಎಂದಿನಂತೆಯೇ ಮಂಗಳವಾರ ರಾತ್ರಿಯೂ ವಾಸು ಕುಡಿದು ಬಂದು ತಂದೆಯೊಂದಿಗೆ ಗಲಾಟೆ ಮಾಡಿದ್ದಾನೆ. ಇಬ್ಬರ…

ಕಾರು ಅಪಘಾತ: ಮೂವರು ಸಾವು, ಐವರಿಗೆ ಗಾಯ
ಮಂಡ್ಯ

ಕಾರು ಅಪಘಾತ: ಮೂವರು ಸಾವು, ಐವರಿಗೆ ಗಾಯ

August 23, 2018

ಮಂಡ್ಯ: ಕಾರು ಅಪಘಾತದಿಂದ ಇಬ್ಬರು ಸಾವನ್ನಪ್ಪಿ 5ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಬುಧವಾರ ಸಂಜೆ ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಕುದೂರು ಪೊಲೀಸ್ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ನಡೆದಿದೆ. ಬೆಂಗಳೂರಿನ ದರ್ಶನ್, ಉಜ್ವಲ್, ಹರೀಶ್ ಸಾವಿ ಗೀಡಾದವರಾಗಿದ್ದು 5 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಘಟನೆ ಹಿನ್ನೆಲೆ: ಬೆಂಗಳೂರಿನ ದರ್ಶನ್ ಮತ್ತು ಉಜ್ವಲ್ ಸೇರಿದಂತೆ ಏಳೆಂಟು ಮಂದಿ ಬುಧವಾರ ಮಧ್ಯಾಹ್ನ ಬೆಂಗ ಳೂರು ಕಡೆಯಿಂದ ಹಾಸನಕ್ಕೆ ಸ್ಕಾರ್ಪಿಯೋ ಕಾರ್‍ನಲ್ಲಿ ಹೊರಟಿ ದ್ದರು….

ಪ್ರವಾಹ ಪೀಡಿತ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಭೇಟಿ
ಮಂಡ್ಯ

ಪ್ರವಾಹ ಪೀಡಿತ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಭೇಟಿ

August 17, 2018

ಮಂಡ್ಯ: ಕಾವೇರಿ ನದಿ ಪ್ರವಾಹ ದಿಂದ ಸಂಕಷ್ಟಕ್ಕೆ ಸಿಲುಕಿರುವ ಶ್ರೀರಂಗಪಟ್ಟಣ, ಪಾಂಡವಪುರ ತಾಲೂಕಿನ ವಿವಿಧ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಗುರುವಾರ ಭೇಟಿ ನೀಡಿ ಪರಿಶೀಲಿಸಿದರು. ಕೃಷ್ಣರಾಜಸಾಗರ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ ಹೆಚ್ಚಾಗಿರುವ ಕಾರಣ, ಜಲಾಶಯದಿಂದ 1.25 ಲಕ್ಷ ಕ್ಯೂಸೆಕ್ಸ್ ನೀರನ್ನು ಕಾವೇರಿ ನದಿಗೆ ಬಿಡುಗಡೆ ಮಾಡಿ ರುವ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣ ಹಾಗೂ ಪಾಂಡವಪುರ ತಾಲೂಕಿನ ಪ್ರವಾಹ ಭೀತಿ ಎದುರಿಸುತ್ತಿರುವ ಗ್ರಾಮಗಳಲ್ಲಿ ಒಂದಾದ ಎಣ್ಣೆಹೊಳೆಕೊಪ್ಪಲಿಗೆ ಭೇಟಿ ನೀಡಿ ಗ್ರಾಮಸ್ಥರಿಗೆ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ…

ಬೆಂಗಳೂರು ರೌಡಿಶೀಟರ್ ಅರಸಯ್ಯ ಕೊಲೆ ಪ್ರಕರಣ 9 ಮಂದಿ ಆರೋಪಿಗಳ ಬಂಧನ
ಮಂಡ್ಯ

ಬೆಂಗಳೂರು ರೌಡಿಶೀಟರ್ ಅರಸಯ್ಯ ಕೊಲೆ ಪ್ರಕರಣ 9 ಮಂದಿ ಆರೋಪಿಗಳ ಬಂಧನ

August 17, 2018

ಮಂಡ್ಯ: ಬೆಂಗಳೂರಿನ ರೌಡಿಶೀಟರ್ ಅರಸಯ್ಯನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಮಂದಿ ಆರೋಪಿಗಳನ್ನು ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿ ದ್ದಾರೆ. ಪಳನಿ, ಮಹೇಂದ್ರ, ಮುನಿರಾಜ, ಬಾಬು, ಪೆರುಮಾಳ್, ಮಹೇಶ್, ಮಂಜುನಾಥ್, ಅರುಣ, ರಾಮದಾಸ ಬಂಧಿತರು. ಪ್ರಕರಣ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜ್, ಎಎಸ್ಪಿ ಲಾವಣ್ಯ, ಶ್ರೀರಂಗ ಪಟ್ಟಣ ಡಿವೈಎಸ್ಪಿ ವಿಶ್ವನಾಥ್ ಮಾರ್ಗದರ್ಶನದಲ್ಲಿ ಸಿಪಿಐ ರವೀಂದ್ರ ಹಾಗೂ ಎಸ್‍ಐ ಪುನೀತ್ ನೇತೃತ್ವದಲ್ಲಿ ತನಿಖೆ ಕೈಗೊಂಡಿದ್ದ ಪೊಲೀಸರು ಆ.15ರಂದು ರಾತ್ರಿ ಟಿ.ನರಸೀ ಪುರ ತಾಲೂಕಿನ ಗರ್ಗೇಶ್ವರಿ…

ನದಿಪಾತ್ರದ ಗ್ರಾಮಗಳ ಜನರ ಸುರಕ್ಷತೆಗೆ ಕ್ರಮ ವಹಿಸಿ: ಡಿಸಿ
ಮಂಡ್ಯ

ನದಿಪಾತ್ರದ ಗ್ರಾಮಗಳ ಜನರ ಸುರಕ್ಷತೆಗೆ ಕ್ರಮ ವಹಿಸಿ: ಡಿಸಿ

August 15, 2018

ಮಂಡ್ಯ:  ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಕೃಷ್ಣ ರಾಜಸಾಗರ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ ಹೆಚ್ಚಾಗಿರುವುದರಿಂದ, ಜಲಾಶಯದಿಂದ 1,50, 000 ಲಕ್ಷ ಕ್ಯೂಸೆಕ್ ನೀರನ್ನು ಬಿಟ್ಟಿರುವುದರಿಂದ ನದಿ ಪಾತ್ರದ ಗ್ರಾಮಗಳ ಜನರ ಸುರಕ್ಷತೆಗೆ ಮುಂಜಾಗ್ರತಾ ಕ್ರಮವಾಗಿ ಅಧಿಕಾರಿಗಳು ಕ್ರಮ ವಹಿಸಲು ಮುಂದಾಗಬೇಕು ಎಂದು ಜಿಲ್ಲಾ ಧಿಕಾರಿ ಎನ್.ಮಂಜುಶ್ರೀ ತಿಳಿಸಿದರು. ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂ ಗಣದಲ್ಲಿ ನದಿ ಪಾತ್ರದ ಗ್ರಾಮಗಳ ಜನರ ಸುರ ಕ್ಷತೆಗೆ ಮುಂಜಾಗ್ರತೆಯಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ…

ವೇತನಕ್ಕೆ ಆಗ್ರಹಿಸಿ ಗ್ರಾಪಂ ನೌಕರರ ಪ್ರತಿಭಟನೆ
ಮಂಡ್ಯ

ವೇತನಕ್ಕೆ ಆಗ್ರಹಿಸಿ ಗ್ರಾಪಂ ನೌಕರರ ಪ್ರತಿಭಟನೆ

August 15, 2018

ಕೆ.ಆರ್.ಪೇಟೆ: ತಾಲೂಕಿನ ಗ್ರಾಪಂ ನೌಕರರಿಗೆ ನೀಡಬೇಕಿರುವ ವೇತನ ಬಿಡುಗಡೆ ಗೊಳಿಸುವಂತೆ ಆಗ್ರಹಿಸಿ ತಾಲೂಕಿನ ಗ್ರಾಮ ಪಂಚಾ ಯಿತಿ ನೌಕರರ ಸಂಘದ ಸದಸ್ಯರು ಪಟ್ಟಣ ದಲ್ಲಿಂದು ಪ್ರತಿಭಟನೆ ನಡೆಸಿದರು. ಪಟ್ಟಣದ ತಾಲೂಕು ಪಂಚಾಯಿತಿಗೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು, ಕೂಡಲೇ ಕಳೆದ 15ತಿಂಗಳಿಂದ ವೇತನ ನೀಡದ ತಾಲೂಕಿನ 34 ಗ್ರಾಪಂ ನೌಕರರಿಗೆ ವೇತನ ನೀಡುವಂತೆ ಆಗ್ರಹಿಸಿದರು. ಗ್ರಾಪಂ ನೌಕರರ ಖಾತೆಗೆ ನೇರವಾಗಿ ವೇತನ ವನ್ನು ಜಮಾ ಮಾಡುವುದಾಗಿ ಸರ್ಕಾರ ಭರವಸೆ ನೀಡಿತ್ತು. ಆದರೆ ಈವರೆವಿಗೂ ಅದು ಜಾರಿಯಾ ಗಿಲ್ಲ. ಇದರಿಂದಾಗಿ…

ರಾಜ್ಯಮಟ್ಟದಲ್ಲಿ ದೋಸ್ತಿ, ಜಿಲ್ಲೆಯಲ್ಲಿ ಜಂಗೀ ಕುಸ್ತಿ…!
ಮಂಡ್ಯ

ರಾಜ್ಯಮಟ್ಟದಲ್ಲಿ ದೋಸ್ತಿ, ಜಿಲ್ಲೆಯಲ್ಲಿ ಜಂಗೀ ಕುಸ್ತಿ…!

August 13, 2018

ಮಂಡ್ಯ: ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಆಯೋಗವು ಆ.29ರಂದು ಮುಹೂರ್ತ ಫಿಕ್ಸ್ ಮಾಡಿ ಅಧಿಸೂಚನೆ ಹೊರಡಿ ಸಿದೆ. ಇದರ ಬೆನ್ನಲ್ಲೇ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಟಿಕೆಟ್ ಆಕಾಂಕ್ಷಿಗಳು ಭರ್ಜರಿ ಸಿದ್ಧತೆ ನಡೆಸುತ್ತಿದ್ದು, ಜಿಲ್ಲಾ ಸ್ಥಳೀಯ ಸಂಸ್ಥೆಗಳ ಒಡೆಯರು ಯಾರಾಗುತ್ತಾರೆ ಎಂಬೆಲ್ಲಾ ಲೆಕ್ಕಾಚಾರಗಳು ಶುರುವಾಗಿದೆ. ಮಂಡ್ಯ ಜಿಲ್ಲೆ ಹೇಳಿ ಕೇಳಿ ಜೆಡಿಎಸ್ ಮತ್ತು ಕಾಂಗ್ರೆಸ್‍ನ ಭದ್ರಕೋಟೆಯಾಗಿದೆ. ಸಹಜ ವಾಗಿಯೇ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆಯೇ ಹೆಚ್ಚಿನ ಪೈಪೋಟಿ ಏರ್ಪಟ್ಟಿದ್ದು, ಜಿಲ್ಲೆಯ ರಾಜಕೀಯ ತೀವ್ರ ಕುತೂಹಲ ಮೂಡಿಸಿದೆ. ರಾಜ್ಯದಲ್ಲಿ ಜೆಡಿಎಸ್,…

1 37 38 39 40 41 56
Translate »