ಕಾರು ಅಪಘಾತ: ಮೂವರು ಸಾವು, ಐವರಿಗೆ ಗಾಯ
ಮಂಡ್ಯ

ಕಾರು ಅಪಘಾತ: ಮೂವರು ಸಾವು, ಐವರಿಗೆ ಗಾಯ

August 23, 2018

ಮಂಡ್ಯ: ಕಾರು ಅಪಘಾತದಿಂದ ಇಬ್ಬರು ಸಾವನ್ನಪ್ಪಿ 5ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಬುಧವಾರ ಸಂಜೆ ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಕುದೂರು ಪೊಲೀಸ್ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ನಡೆದಿದೆ. ಬೆಂಗಳೂರಿನ ದರ್ಶನ್, ಉಜ್ವಲ್, ಹರೀಶ್ ಸಾವಿ ಗೀಡಾದವರಾಗಿದ್ದು 5 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

ಘಟನೆ ಹಿನ್ನೆಲೆ: ಬೆಂಗಳೂರಿನ ದರ್ಶನ್ ಮತ್ತು ಉಜ್ವಲ್ ಸೇರಿದಂತೆ ಏಳೆಂಟು ಮಂದಿ ಬುಧವಾರ ಮಧ್ಯಾಹ್ನ ಬೆಂಗ ಳೂರು ಕಡೆಯಿಂದ ಹಾಸನಕ್ಕೆ ಸ್ಕಾರ್ಪಿಯೋ ಕಾರ್‍ನಲ್ಲಿ ಹೊರಟಿ ದ್ದರು. ಮಾರ್ಗ ಮಧ್ಯೆ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ದೂರು ಬಳಿ ಕಾರು ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ. ಪರಿಣಾಮವಾಗಿ ಬೆಂಗಳೂರಿನ ದರ್ಶನ್ ಮತ್ತು ಉಜ್ವಲ್ ಸ್ಥಳದಲ್ಲೇ ಸಾವಿಗೀಡಾದರೆ. 5ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಕುದೂರು ಠಾಣೆ ಪೊಲೀಸರು ಸ್ಥಳೀಯರ ನೆರವಿನೊಂದಿಗೆ ಗಾಯಾಳುಗಳನ್ನು ನಾಗಮಂಗಲ ತಾಲೂಕಿನ ಬೆಳ್ಳ್ಳೂರು ಸಮೀಪದ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಈ ಸಂಬಂಧ ಕುದೂರು ಪೊಲೀ ಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ

Translate »