ರಸ್ತೆ ಅಪಘಾತ: ತಾಯಿ ಮಗ ಸಾವು, ಮೂವರಿಗೆ ಗಾಯ
ಹಾಸನ

ರಸ್ತೆ ಅಪಘಾತ: ತಾಯಿ ಮಗ ಸಾವು, ಮೂವರಿಗೆ ಗಾಯ

August 23, 2018

ಬೇಲೂರು:  ಕೋಲಾರ ಸಮೀಪ ಸಂಭವಿಸಿದ ರಸ್ತೆ ಅಪಘಾತದಲ್ಲಿ ನೀರಾವರಿ ಇಲಾಖೆ ಇಂಜಿನಿಯರ್ ಸೇರಿ ಇಬ್ಬರು ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ.

ಇಲ್ಲಿನ ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ಹಾಗೂ ಹಾಸನ ಜಿಲ್ಲಾ ಬೌದ್ಧ ಮಹಾಸಭಾ ಜಿಲ್ಲಾಧ್ಯಕ್ಷ ಶ್ರೀನಿವಾಸ್ (53), ಅವರ ತಾಯಿ ವೆಂಕಟಮ್ಮ (85) ಸಾವನ್ನಪ್ಪಿದ್ದು, ಪತ್ನಿ, ಪುತ್ರ ಹಾಗೂ ಸಂಬಂಧಿಯೊಬ್ಬರು ಗಾಯಗೊಂಡಿದ್ದಾರೆ.
ಶ್ರೀನಿವಾಸ್ ತಮ್ಮ ಕುಟುಂಬದೊಂದಿಗೆ ಕೋಲಾರದಲ್ಲಿ ಏರ್ಪಡಿಸಿದ್ದ ತಮ್ಮ ಅಕ್ಕನ ಮಗಳ ಮದುವೆ ಮುಗಿಸಿಕೊಂಡು ವಾಪಸ್ಸಾ ಗುತ್ತಿದ್ದಾಗ ಅವರ ಕಾರಿಗೆ ಕೋಲಾರದ ಹೈವೇಯಲ್ಲಿ ಹಿಂದಿನಿಂದ ಬಂದ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿದೆ. ಪರಿ ಣಾಮ ಕಾರು ಚಲಾಯಿಸುತ್ತಿದ್ದ ಇಂಜಿ ನಿಯರ್ ಶ್ರೀನಿವಾಸ್ ಹಾಗೂ ಕಾರಿನ ಹಿಂಬದಿ ಕುಳಿತಿದ್ದ ಅವರ ತಾಯಿ ಸ್ಥಳದಲ್ಲೇ ಅಸು ನೀಗಿದರು. ಕಾರಿನಲ್ಲಿದ್ದ ಶ್ರೀನಿವಾಸ್ ಪತ್ನಿ, ಪುತ್ರ ಹಾಗೂ ಸಂಬಂಧಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮರಣೋತ್ತರ ಪರೀಕ್ಷೆ ನಂತರ ಮೃತದೇಹವನ್ನು ಹಾಸನಕ್ಕೆ ತಂದು ಗುರುವಾರ ಬೆಳಿಗ್ಗೆ 11 ಗಂಟೆವರೆಗೆ ಅವರ ನಿವಾಸದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗುವುದು. ನಂತರ ಮೃತರ ಸ್ವಗ್ರಾಮ ಕೋಲಾರ ಜಿಲ್ಲೆ ಬನಹಳ್ಳಿ ಗ್ರಾಮಕ್ಕೆ ಕೊಂಡೊಯ್ದು ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

Translate »