ಎಚ್‍ಡಿಕೆ ಮುಖ್ಯಮಂತ್ರಿ  151 ನಾಟಿಕೋಳಿ ಹರಕೆ ತೀರಿಸಿದ ಅಭಿಮಾನಿ
ಮಂಡ್ಯ

ಎಚ್‍ಡಿಕೆ ಮುಖ್ಯಮಂತ್ರಿ  151 ನಾಟಿಕೋಳಿ ಹರಕೆ ತೀರಿಸಿದ ಅಭಿಮಾನಿ

August 8, 2018

ಮಂಡ್ಯ: ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲೆಂದು ಹರಕೆ ಹೊತ್ತಿದ್ದ ಅಭಿಮಾನಿಯೋರ್ವ ಮಂಗಳ ವಾರ 151 ನಾಟಿಕೋಳಿಗಳನ್ನು ದೇವಿಗೆ ಅರ್ಪಿಸಿ ಹರಕೆ ತೀರಿಸಿದ ಘಟನೆ ಕೆ.ಆರ್. ಪೇಟೆ ತಾಲೂಕಿನ ಮುರುಕನಹಳ್ಳಿ ಗ್ರಾಮದ ಹೊರವಲಯದಲ್ಲಿರುವ ತೊರೆಯಮ್ಮ ದೇವಾಲಯದಲ್ಲಿ ನಡೆದಿದೆ.

ಕೆ.ಆರ್.ಪೇಟೆ ತಾಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಹುಲ್ಲೇಗೌಡರು, ಕೆ.ಆರ್.ಪೇಟೆ ಕ್ಷೇತ್ರದ ಶಾಸಕರಾಗಿ ನಾರಾಯಣಗೌಡ ಆಯ್ಕೆಯಾಗಬೇಕು, ಕುಮಾರಸ್ವಾಮಿ ಮುಖ್ಯಮಂತ್ರಿಯಾಗ ಬೇಕು, ಪುಟ್ಟರಾಜು ಸಚಿವರಾಗಬೇಕು ಎಂದು ದೇವರಿಗೆ ಹರಕೆ ಕಟ್ಟಿಕೊಂಡಿದ್ದರು. ಇದೀಗ ಅವರ ಆಶಯ ಈಡೇರಿದ್ದರಿಂದ 151 ನಾಟಿಕೋಳಿಗಳನ್ನು ದೇವರಿಗೆ ಬಲಿ ನೀಡಿ ತಮ್ಮ ಹರಕೆ ತೀರಿಸಿಕೊಂಡಿದ್ದಾರೆ.

ಅಷ್ಟೇ ಅಲ್ಲದೇ ಇಂದು ಸ್ವಗ್ರಾಮ ಬೂಕನಕೆರೆಯಲ್ಲಿ ಪಕ್ಷದ ಕಾರ್ಯ ಕರ್ತರಿಗೆ ಭರ್ಜರಿ ಬಾಡೂಟ ಕೂಡ ಹಮ್ಮಿಕೊಂಡಿದ್ದರು. ಈ ಹಿಂದೆ ಕುಮಾರಸ್ವಾಮಿ ಮುಖ್ಯಮಂತ್ರಿಯಾದ್ರೆ ಧರ್ಮಸ್ಥಳಕ್ಕೆ ಕಾಲ್ನಡಿಗೆಯಲ್ಲಿ ಬರುವು ದಾಗಿ ಹರಕೆ ಕಟ್ಟಿಕೊಂಡು ಹತ್ತು ಮಂದಿ ಹೋಗಿದ್ದನ್ನು ಸ್ಮರಿಸಬಹುದು.

Translate »