ಅಖಂಡ ಕರ್ನಾಟಕ ಇಬ್ಭಾಗದ ಕೂಗು ತರವಲ್ಲ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ
ಮಂಡ್ಯ

ಅಖಂಡ ಕರ್ನಾಟಕ ಇಬ್ಭಾಗದ ಕೂಗು ತರವಲ್ಲ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ

August 8, 2018

ಮಂಡ್ಯ: ಅಖಂಡ ಕರ್ನಾಟಕವನ್ನು ಇಬ್ಬಾಗ ಮಾಡುವ ಕೂಗೆದ್ದಿರುವುದು ಸರಿಯಲ್ಲ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ತಿಳಿಸಿದರು.

ನಗರದ ಗಾಂಧಿ ಭವನದಲ್ಲಿಂದು ರಾಜ್ಯ ಕನ್ನಡ ಸೇನೆ ವತಿಯಿಂದ ನಡೆದ ಅಖಂಡ ಕರ್ನಾಟಕ ಕುರಿತ ಸಂವಾದ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು.

ಅಖಂಡ ಕರ್ನಾಟಕ ನಿರ್ಮಾಣದ ಹಿಂದೆ ಹತ್ತಾರು ಗಣ್ಯರ ಹೋರಾಟದ ಶ್ರಮವಿದೆ. ಉತ್ತರ ಕರ್ನಾಟಕಕ್ಕೆ ಅನುದಾನ ನೀಡು ವಲ್ಲಿ ತಾರತಮ್ಯ ಆಗಿದೆ ಎಂದು ಚಿಕ್ಕ ನೆಪವೊಡ್ಡಿ ಪ್ರತ್ಯೇಕ ರಾಜ್ಯ ಕೊಡಿ ಎಂದು ಕೇಳುವುದು ತಪ್ಪು. ಆ ಭಾಗದ ಜನಪ್ರತಿ ನಿಧಿಗಳು ಹೆಚ್ಚು ಅನುದಾನ ತೆಗೆದು ಕೊಂಡು ಹೋಗಿ ಅಭಿವೃದ್ಧಿ ಮಾಡಬೇಕು. ಜಗದ್ಗುರುಗಳಾದ ಸ್ವಾಮೀಜಿಗಳು ಒಂದು ಜಾತಿಗೆ ಸೀಮಿತವಾಗದೇ, ರಾಜ್ಯದ ಏಕತೆ ಹಾಗೂ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದರು.

ಸಮಾನ ಅಭಿವೃದ್ಧಿಗೆ ಗ್ರಾಮೀಣ ಪ್ರದೇಶದಲ್ಲಿ ಕೈಗಾರಿಕೆ ಸ್ಥಾಪಿಸಬೇಕು. ಸಂಘ ಸಂಸ್ಥೆಗಳು ಬೆಂಗಳೂರಿನಲ್ಲಿ ಕೈಗಾರಿಕೆ ಸ್ಥಾಪನೆಗೆ ಪ್ರತಿಭಟಿಸುವುದನ್ನು ನಿಲ್ಲಿಸಿ ಗ್ರಾಮೀಣ ಪ್ರದೇಶದಲ್ಲಿ ಕೈಗಾರಿಕೆ ಸ್ಥಾಪಿ ಸಲು ಒತ್ತಾಯಿಸಬೇಕು. ಹೀಗಾದಾಗ ಮಾತ್ರ ಸಮಾನ ಅಭಿವೃದ್ಧಿ ಸಾಧ್ಯ ಎಂದರು.

ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆಯುತ್ತಾ ಬಂದಿದ್ದರೂ ಮೂಲ ಸೌಕರ್ಯಗಳನ್ನು ಒದಗಿಸಲಾಗದ ಸರ್ಕಾರಕ್ಕೆ ನಾಚಿಕೆಯಾಗಬೇಕು. ಆಹಾರ, ನೀರು, ವಸತಿ, ಶಿಕ್ಷಣ, ಉದ್ಯೋಗ ಸೇರಿ ವಿವಿಧ ಮೂಲ ಸೌಕರ್ಯಗಳನ್ನು ಸರ್ಕಾರ ಕೂಡಲೇ ಒದಗಿಸಲು ಮುಂದಾಗಬೇಕು. ಈ ಕುರಿತು ರಾಜ್ಯ ಹಾಗೂ ರಾಷ್ಟ್ರದಲ್ಲಿ ಲಕ್ಷಕ್ಕೂ ಅಧಿಕ ಸಂಘ ಸಂಸ್ಥೆಗಳು ಜನರಿಗೆ ಮೂಲ ಸೌಕರ್ಯ ಒದಗಿಸುವಂತೆ ಒತ್ತಾಯಿಸಿ ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ. ಈಗಲೂ ರಾಷ್ಟ್ರದಲ್ಲಿ 35 ಸಾವಿರಕ್ಕೂ ಹೆಚ್ಚು ಜನರು ಹಸಿವಿನಿಂದ ಸಾವನ್ನಪ್ಪು ತ್ತಿದ್ದಾರೆ. ಸರ್ಕಾರ ಬಡಜನರಿಗೆ ಕ್ಯಾಂಟಿನ್ ಹಾಗೂ ಪಡಿತರ ಮೂಲಕ ಅನ್ನ ನೀಡುವ ಬದಲು ಅನ್ನ ಬೆಳೆಯಲು ಅವಕಾಶ ನೀಡಬೇಕು ಎಂದರು.

ರಾಜ್ಯಗಳ ರಾಜಧಾನಿಗಳು ರಾಕ್ಷಸ ರೂಪದಲ್ಲಿ ಬೆಳೆಯುತ್ತಿದ್ದು, ಅಭಿವೃದ್ಧಿ ಹಾಗೂ ಅಧಿಕಾರ ಕೇಂದ್ರೀಕರಣಗೊಳ್ಳುತ್ತಿದೆ. ಹೀಗಾಗಿ ಅಭಿವೃದ್ಧಿಯನ್ನು ವಿಕೇಂದ್ರೀ ಕರಣಗೊಳಿಸಿದಾಗ ಮಾತ್ರ ಸಮಾನ ಅಭಿವೃದ್ಧಿ ಸಾಧ್ಯವಾಗುತ್ತದೆ. ಬೆಂಗಳೂರಿ ನಲ್ಲಿ ಕೈಗಾರಿಕೆ ಸ್ಥಾಪನೆ ಮಾಡುವುದನ್ನು ಸಂಘಟನೆಗಳು ಹೋರಾಟ ಮಾಡಿ ತಡೆಯ ಬೇಕು. ಕೈಗಾರಿಕೆಗಳು ಇಲ್ಲದ ಪ್ರದೇಶದಲ್ಲಿ ಕೈಗಾರಿಕೆ ಸ್ಥಾಪನೆ ಮಾಡಲು ಒತ್ತಾಯಿಸ ಬೇಕು. ಸ್ವಾಮಿನಾಥನ್ ವರದಿ ಜಾರಿಗೊಳಿಸಿ ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು. ಈ ಮೂಲಕ ರೈತರನ್ನು ಸಾಲ ಮಾಡದಂತೆ ನೋಡಿಕೊಳ್ಳಬೇಕು. ಹೋರಾಟ ಮಾಡುವ ಸದಸ್ಯರು ಕೇವಲ ಒಂದು ಸಂಘಟನೆ ಸದಸ್ಯತ್ವ ಪಡೆದು ಕೊಂಡು ಹೋರಾಟದಲ್ಲಿ ಪಾಲ್ಗೊಳ್ಳಬೇಕು. ರಾಷ್ಟ್ರದ ಜನರ ಮೂಲ ಸೌಕರ್ಯಗಳು ಹಾಗೂ ಅಭಿವೃದ್ಧಿಗಾಗಿ ಎಲ್ಲಾ ಸಂಘಟನೆಗಳು ಒಗ್ಗಟ್ಟಾಗಿ ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಕಾವೇರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ.ಮಾದೇಗೌಡ, ಸಾಹಿತಿ ಪೆÇ್ರ.ಕರೀ ಮುದ್ದೀನ್, ಕನ್ನಡಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಸಿ.ಮಂಜುನಾಥ್, ರೈತ ಸಂಘದ ಶಂಭೂನಹಳ್ಳಿ ಸುರೇಶ್, ಜಯ ಕರ್ನಾಟಕ ಸಂಘಟನೆಯ ನಾರಾಯಣ, ದಲಿತ ಸಂಘರ್ಷ ಸಮಿತಿಯ ಎಂ.ಬಿ. ಶ್ರೀನಿವಾಸ್, ಮಹಾಂತಪ್ಪ ಇದ್ದರು.

Translate »