ನಿಯಮ ಬಾಹಿರ ಇ-ಸ್ವತ್ತು ಮಾಡಿರುವ ಆರೋಪ:  ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿರುದ್ಧ ಎಸಿಬಿಗೆ ದೂರು
ಮಂಡ್ಯ

ನಿಯಮ ಬಾಹಿರ ಇ-ಸ್ವತ್ತು ಮಾಡಿರುವ ಆರೋಪ: ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿರುದ್ಧ ಎಸಿಬಿಗೆ ದೂರು

August 9, 2018

ಮಂಡ್ಯ:  ‘ಕಳೆದ ಜು. 18 ರಂದು ತಾಲೂಕಿನ ಬೂದನೂರು ಗ್ರಾಮ ಪಂಚಾ ಯಿತಿಯ ಅಧ್ಯಕ್ಷೆ ಶೋಭಾ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಅಭಿವೃದ್ಧಿ ಅಧಿಕಾರಿ ಎ.ಹೆಚ್.ಕಲಾ ಅವರು ನಿಯಮ ಬಾಹಿರವಾಗಿ ಇ-ಸ್ವತ್ತು ಮಾಡಿ ಅಕ್ರಮ ಎಸಗಿದ್ದಾರೆ’ ಎಂದು ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ಗೆ ಗ್ರಾಪಂ ಸದಸ್ಯ ಬಿ.ಕೆ.ಸತೀಶ ದೂರು ನೀಡಿದ್ದಾರೆ.

ಗ್ರಾಮದ ಇಬ್ಬರು ವ್ಯಕ್ತಿಗಳು ಜಿಲ್ಲಾಧಿಕಾರಿ ಗಳಿಂದ ಅನ್ಯಕ್ರಾಂತ ಮಂಜೂರು ಮಾಡಿಸಿ ಕೊಂಡು ಗ್ರಾಪಂನಲ್ಲಿ ಖಾತೆ ನಮೂದು ಹಾಗೂ ಇ-ಸ್ವತ್ತು ಮಾಡಿಕೊಡಲು ಮನವಿ ಸಲ್ಲಿಸಿದ್ದರು. ಕಳೆದ 2017ರ ಜನವರಿ 30ರ ಗ್ರಾಮ ಸಭೆಯಲ್ಲಿ ಚರ್ಚೆ ನಡೆಸಿ ತಕರಾರು ಸಂಬಂಧ ಅರ್ಜಿಯನ್ನು ವಿಲೆ ಇಡ ಲಾಗಿತ್ತು. ಅರ್ಜಿದಾರರು ಜಿಲ್ಲಾಧಿಕಾರಿ ಅನ್ಯಕ್ರಾಂತ ಮಂಜೂರು ಆದೇಶದ ಷರತ್ತುಗಳನ್ನು ಪೂರೈಸಲು ತಿಳಿಸಲಾಗಿತ್ತು.

ಇದರ ನಡುವೆ ರಾಜ್ಯ ವಿಧಾನಸಭೆಗೆ ಚುನಾವಣೆ ಘೋಷಣೆಯಾಗಿ ನೀತಿ ಸಂಹಿತೆ ಜಾರಿಯಲ್ಲಿರುವ ಸಂದರ್ಭದಲ್ಲಿ ಕಳೆದ ಜೂ. 1ರಂದು ಪಿಡಿಓ ತಕರಾರು ಸಂಬಂ ಧಿತ ಜಾಗವನ್ನು ಗ್ರಾಮ ಪಂಚಾಯತಿ ಆಸ್ತಿ ಖಾತೆಗೆ ನಮೂದು ಮಾಡಿದ ಕುರಿತು ಪಂಚಾಯತ್ ರಾಜ್ ಕಾಯ್ದೆ ಉಲ್ಲಂಘನೆ ಹಾಗೂ ಗ್ರಾಮ ಪಂಚಾಯತ್‍ನ ಚುನಾ ಯಿತ ಪ್ರತಿನಿಧಿಗಳ ಹಕ್ಕಿಗೆ ಚ್ಯುತಿ ತಂದಿದ್ದಾರೆ ಎಂದು ಆರೋಪಿಸಿ ಜೂ. 7ರಂದು ಬೂದ ನೂರು ಗ್ರಾಪಂ ಕಚೇರಿ ಮುಂದೆ ಆಡಳಿತ ಮಂಡಳಿ ಅಧ್ಯಕ್ಷೆ ಹಾಗೂ ಸದಸ್ಯರು ಪ್ರತಿ ಭಟನೆ ನಡೆಸಿದ್ದರು. ಈ ಸಂಬಂಧ ತನಿಖೆ ನಡೆಯುತ್ತಿದೆ. ಜೂ.22ರಂದು ಬೂದನೂರು ಗ್ರಾಪಂ ಸಾಮಾನ್ಯ ಸಭೆಯಲ್ಲಿ ತಕರಾರು ಸಂಬಂಧಿತ ಖಾತೆಯನ್ನು ರದ್ದು ಮಾಡಲು ಪಿಡಿಓ ಅವರಿಗೆ ಸೂಚಿಸಿ ಸಭೆ ನಿರ್ಣಯ ಕೈಗೊಂಡಿತ್ತು. ಅದರೂ ಪಿಡಿಓ ಎ.ಹೆಚ್.ಕಲಾ ಗ್ರಾಪಂ ಆಡಳಿತ ಮಂಡಳಿ ಗಮನಕ್ಕೆ ತರದೆ ಇ-ಸ್ವತ್ತು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಇದು ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 54ರ ಅನ್ವಯ ಗ್ರಾಮ ಪಂಚಾಯತಿ ಆಡಳಿತ ಮಂಡಳಿ ಮಾಡಿದ ನಿರ್ಣಯವನ್ನು ರದ್ದು ಪಡಿಸಲು ಅಥವಾ ಮಾರ್ಪಾಡು ಮಾಡಲು ಪ್ರಸ್ತಾವನೆಯನ್ನು ಪೂರ್ಣವಾಗಿ ವಿವರಿಸಿ ಆಡಳಿತ ಮಂಡಳಿಗೆ ನೋಟೀಸ್ ನೀಡಿ ಕರೆದ ಸಭೆಯಲ್ಲಿ ನಿರ್ಣಯ ಅಂಗೀಕರಿ ಸಿದ ನಂತರ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಅನುಷ್ಠಾನಗೊಳಿಸಬೇಕು. ಆದರೆ ತನಗೆ ದತ್ತವಲ್ಲದ ಅಧಿಕಾರ ಬಳಸಿ ಪಿಡಿಓ ಅಕ್ರಮವಾಗಿ ಖಾತೆ ನಮೂದು ಹಾಗೂ ಇ-ಸ್ವತ್ತು ಮಾಡಿರುವುದು ಶಿಕ್ಷಾರ್ಹ ಅಪರಾಧವಾಗಿದೆ ಎಂದು ಹೇಳಿದ್ದಾರೆ.

ಜಿಲ್ಲಾಧಿಕಾರಿಗಳ ಅನ್ಯಕ್ರಾಂತ ಅಧಿಕೃತ ಜ್ಞಾಪನ ಪತ್ರದ ಷರತ್ತುಗಳು ಉಲ್ಲಂಘನೆ ಯಾಗಿದ್ದರೂ ಅದನ್ನು ಅನುಷ್ಠಾನಗೊಳಿ ಸಿರುವ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ನಡೆ ಹಿಂದೆ ಅಧಿಕಾರ ದುರುಪಯೋಗ, ಭ್ರಷ್ಟಾಚಾರ, ಅಕ್ರಮಗಳು ಜರುಗಿದ್ದು ಹಾಗೂ ಕೆಲ ಪಂಚಾಯತ್ ರಾಜ್ ಇಲಾಖೆಯ ಮೇಲಾ ಧಿಕಾರಿಗಳು ಶಾಮೀಲಾಗಿರುವ ಶಂಕೆಯಿದ್ದು, ಈ ಕುರಿತು ತನಿಖೆ ನಡೆಸಿ ನ್ಯಾಯ ದೊರಕಿಸಿ ಕೊಡಬೇಕು ಎಂದು ಮನವಿ ಮಾಡಿದ್ದಾರೆ.

Translate »