ಸಿನಿಮಾ, ದೂರದರ್ಶನದಿಂದ ನಶಿಸುತ್ತಿರುವ ರಂಗಭೂಮಿ
ಮಂಡ್ಯ

ಸಿನಿಮಾ, ದೂರದರ್ಶನದಿಂದ ನಶಿಸುತ್ತಿರುವ ರಂಗಭೂಮಿ

August 9, 2018

ಮದ್ದೂರು:  ‘ಸಿನಿಮಾ ಹಾಗೂ ದೂರದರ್ಶನ ದಿಂದ ರಂಗಕಲೆ ನಶಿಸುತ್ತಿರುವುದು ವಿಪರ್ಯಾಸದ ಸಂಗತಿ’ ಎಂದು ತಾಲೂಕು ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ಮಹದೇವು ವಿಷಾದ ವ್ಯಕ್ತಪಡಿಸಿದರು.

ತಾಲೂಕಿನ ಮಲ್ಲನಕುಪ್ಪೆ ಗ್ರಾಮದಲ್ಲಿ ಶ್ರೀದಂಡಿನ ಮಾರಮ್ಮ ದೇವಿಯ ರಂಗ ಸಜ್ಜಿಕೆಯಲ್ಲಿ ಆಶ್ಲೇಷ ಮಳೆ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ಕುರುಕ್ಷೇತ್ರ ಅಥವಾ ಧರ್ಮರಾಜ್ಯ ಸ್ಥಾಪನೆ ಪೌರಾಣಿಕ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಮಹದೇವಮ್ಮ ಕೃಪಾ ಪೋಷಿತ ನಾಟಕ ಮಂಡಳಿ ವತಿಯಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿ ದರು. ಪಟ್ಟಣ ಪ್ರದೇಶ ಸೇರಿದಂತೆ ಗ್ರಾಮಾಂತರ ಪ್ರದೇಶಗಳಲ್ಲೂ ರಂಗಕಲೆ ಮತ್ತು ಜನಪದ ಕಲೆ ನಶಿಸುತ್ತಿದೆ. ಯುವ ಜನಾಂಗ ಮೊಬೈಲ್, ಕಂಪ್ಯೂಟರ್ ನೋಡು ವುದರಲ್ಲೇ ತಲ್ಲೀನರಾಗಿದ್ದಾರೆ. ಇವರನ್ನು ಸರಿಯಾದ ದಾರಿಗೆ ತರಬೇಕಾದರೆ ರಂಗಕಲೆ ಮತ್ತು ಜನಪದ ಕಲೆಯ ಬಗ್ಗೆ ಆಸಕ್ತಿ ಮೂಡಿಸಬೇಕು ಎಂದು ತಿಳಿಸಿದರು.

ಪೌರಾಣಿಕ ನಾಟಕದಲ್ಲಿ ಪಾತ್ರದಾರಿಗಳು ಪಾತ್ರಕ್ಕೆ ಜೀವ ತುಂಬುವ ಮೂಲಕ ನೆರೆದಿದ್ದ ಕಲಾರಸಿಕರನ್ನು ರಂಜಿಸಿದರು. ಈ ವೇಳೆ ಮಹದೇವಮ್ಮ ಕೃಪಾ ಪೋಷಿತ ನಾಟಕ ಮಂಡಳಿಯ ಅಧ್ಯಕ್ಷ ಕೆ.ನಾಜರಾಜು, ಗ್ರಾಪಂ ಸದಸ್ಯ ಎಂ.ಎನ್. ನಾಗರಾಜು, ಪುರಸಭಾ ಮಾಜಿ ಅಧ್ಯಕ್ಷರಾದ ನರಸಿಂಹಪ್ರಸಾದ್, ಎಂ.ಕೆ.ಮರಿ ಗೌಡ, ವಕೀಲ ಚಿಕ್ಕಣ್ಣಗೌಡ, ಟಎಪಿಎಂಎಸ್ ಮಾಜಿ ಅಧ್ಯಕ್ಷ ಶ್ರೀಕಂಠು, ಕುದರಗುಂಡಿ ಕಲಾವಿದರ ಸಂಘದ ಅಧ್ಯಕ್ಷ ಚಾಮರಾಜು, ಮುಖಂಡರಾದ ರಾಮು, ತಮ್ಮಯ್ಯ, ರಘು, ಸದಾಶಿವ ಹಾಜರಿದ್ದರು.

Translate »