ಮೈಸೂರು, ಮಾ. 11(ಆರ್‍ಕೆ)- ಜೀವನದಲ್ಲಿ ಜಿಗುಪ್ಸೆಗೊಂಡ ಯುವಕನೋರ್ವ ವರುಣಾ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ರಾತ್ರಿ ಸಂಭವಿಸಿದೆ. ಮೈಸೂರು ತಾಲೂಕು, ಭುಗತ ಗಳ್ಳಿ ನಿವಾಸಿ ಬಸವಣ್ಣ(28) ಆತ್ಮಹತ್ಯೆ ಮಾಡಿಕೊಂಡ ಯುವಕ. ಮಂಗಳವಾರ ಮಧ್ಯಾಹ್ನ ಮನೆಯಿಂದ ಹೊರಟಿದ್ದ ಆತ ಕೆಲ ಸ್ನೇಹಿತರಿಗೆ ಫೋನ್ ಮಾಡಿ ಬೇಸರ ವ್ಯಕ್ತಪಡಿಸಿದ್ದ. ಅಂದು ರಾತ್ರಿ ಮನೆಗೆ ಬಾರದಿದ್ದ ಬಸವಣ್ಣನ ಮೃತದೇಹ ವರುಣಾ ಕೆರೆಯಲ್ಲಿ ಪತ್ತೆಯಾಯಿತು. ಸಾರ್ವಜನಿಕರು ನೀಡಿದ ದೂರಿನನ್ವಯ ಸ್ಥಳಕ್ಕೆ ಧಾವಿಸಿದ ವರುಣಾ ಠಾಣೆ ಪೊಲೀಸರು, ಮಹಜರು ನಡೆಸಿ ಮೃತದೇಹ…
ಮೈಸೂರು ರಂಗಾಯಣ ಕ್ರಿಯಾಶೀಲವಾಗಿದೆ: ಅಡ್ಡಂಡ ಕಾರ್ಯಪ್ಪ
March 11, 2020ಏ.11ರಿಂದ ಚಿಣ್ಣರ ಮೇಳ ರಂಗ ತರಬೇತಿ ಶಿಬಿರ ವಾರಾಂತ್ಯದಲ್ಲಿ `ಗಾಂಧಿ ವರ್ಸಸ್ ಗಾಂಧಿ’ ಮೈಸೂರು, ಮಾ.10(ಎಂಟಿವೈ)- ಮೈಸೂರು ರಂಗಾಯಣ ಕ್ರಿಯಾಶೀಲವಾ ಗಿದ್ದು, ನಿರಂತರ ರಂಗಪ್ರಯೋಗಗಳ ಮಾಡುವ ಮೂಲಕ ಗ್ರಾಮೀಣ ಪ್ರದೇಶ ಸೇರಿದಂತೆ ರಾಜ್ಯದ ಮೂಲೆ ಮೂಲೆಗೂ ತಲುಪಿದೆ ಎಂದು ರಂಗಾಯಣದ ನಿರ್ದೇ ಶಕ ಅಡ್ಡಂಡ ಸಿ.ಕಾರ್ಯಪ್ಪ ತಿಳಿಸಿದ್ದಾರೆ. ರಂಗಾಯಣದ ಶ್ರೀರಂಗ ಸಭಾಂಗಣ ದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಆಧುನಿಕ ಕನ್ನಡ ರಂಗಭೂಮಿ ಕಟ್ಟುವ ನಿಟ್ಟಿನಲ್ಲಿ ಮೈಸೂರು ರಂಗಾಯಣ ವಿವಿಧ ಕಾರ್ಯ ಕ್ರಮ ರೂಪಿಸಿದೆ….
ಮುಂದಿನ ಹಾದಿ ಕಂಡುಕೊಳ್ಳುವುದೇ ಮಹಿಳಾ ದಿನಾಚರಣೆಯ ಉದ್ದೇಶ
March 11, 2020ಮೈಸೂರು, ಮಾ.10(ಆರ್‍ಕೆಬಿ)- ಮಹಿಳಾ ದಿನಾಚರಣೆ ಎಂದರೆ ನಮ್ಮ ಮೌನ ಮುರಿ ಯುವ ದಿನ. ನಮ್ಮ ಹಕ್ಕುಗಳನ್ನು ಸ್ಥಾಪಿ ಸುವ ದಿನ. ನಮ್ಮ ಕಷ್ಟ ಸುಖಗಳನ್ನು ಹಂಚಿಕೊಳ್ಳುವ ದಿನ. ಮುಂದಿನ ಹಾದಿ ಕಂಡುಕೊಳ್ಳುವ ದಿನ ಎಂದು ಮೈಸೂರು ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕಿ ವನಜ ವೆಮ್ ಅಭಿಪ್ರಾಯಪಟ್ಟರು. ರಾಜ್ಯ ನಗರಾಭಿವೃದ್ಧಿ ಇಲಾಖೆ ಮತ್ತು ಅಭಿಯಾನ ನಿರ್ದೇಶನಾಲಯ, (ಡೇ ನಲ್ಮ್) ರಾಷ್ಟ್ರೀಯ ನಗರ ಜೀವನೋಪಾಯ ಇಲಾಖೆ ಜಂಟಿ ಆಶ್ರಯದಲ್ಲಿ ಮೈಸೂರು ಪುರಭವನ ಸಭಾಂಗಣದಲ್ಲಿ ಮಂಗಳ ವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ…
ಮಹಿಳಾ ದಿನಾಚರಣೆಯಲ್ಲಿ ಕೊರೊನಾ, ಕ್ಯಾನ್ಸರ್ ಬಗ್ಗೆ ಜಾಗೃತಿ
March 11, 2020ಮಹಿಳೆಯರು ಜಾಗೃತರಾದರೆ ಯಾವ ರೋಗವು ಸುಳಿಯದು ಮೈಸೂರು, ಮಾ.10(ಆರ್‍ಕೆಬಿ)- ಅಂತಾ ರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗ ವಾಗಿ ಮೈಸೂರಿನ ಓಡಿಪಿ ಸಂಸ್ಥೆ ಮಂಗಳ ವಾರ ಸಂತ ಫಿಲೋಮಿನಾ ಕಾಲೇಜಿನ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋ ಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾ ಚರಣೆ ಕೊರೋನಾ ವೈರಸ್ ಮತ್ತು ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮವಾಗಿ ಹೊರ ಹೊಮ್ಮಿತು. ಮೈಸೂರು, ಚಾಮರಾಜನಗರ, ಮಂಡ್ಯ, ಕೊಡಗು ಜಿಲ್ಲೆಗಳ ಸಾವಿರಕ್ಕೂ ಹೆಚ್ಚು ಮಹಿಳೆ ಯರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಭಾರತ್ ಕ್ಯಾನ್ಸರ್ ಆಸ್ಪತ್ರೆಯ ಚೀಫ್…
ವಿಧಾನಸಭೆಯಲ್ಲಿ ಸಚಿವ ಸುಧಾಕರ್, ರಮೇಶ್ ಕುಮಾರ್ ವಾಕ್ಸಮರ ಏಕವಚನದಲ್ಲಿ ಉಭಯ ನಾಯಕರ ನಿಂದನೆ
March 11, 2020ಬೆಂಗಳೂರು, ಮಾ.10- ಸಂವಿಧಾನದ ಮೇಲೆ ಚರ್ಚೆ ವೇಳೆ ವಿಧಾನಸಭೆಯಲ್ಲಿ ವೈದ್ಯ ಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಮತ್ತು ಮಾಜಿ ಸ್ಪೀಕರ್ ರಮೇಶ್ ಕುಮಾರ್ ನಡುವೆ ಕೆಟ್ಟ ಪದಗಳಲ್ಲಿ ವಾಗ್ಯುದ್ಧ ನಡೆದಿದೆ. 17 ಶಾಸಕರ ರಾಜೀನಾಮೆ ವಿಚಾರದಲ್ಲಿ ಈ ಹಿಂದಿನ ಸ್ಪೀಕರ್ ಪಕ್ಷಪಾತವಾಗಿ ನಡೆದು ಕೊಂಡರು ಎಂದು ಸದನದಲ್ಲಿ ಸಚಿವ ಡಾ. ಸುಧಾಕರ್ ಆರೋಪಿಸಿದರು. ಇದರಿಂದ ತಾಳ್ಮೆ ಕಳೆದುಕೊಂಡ ಮಾಜಿ ಸ್ಪೀಕರ್ ರಮೇಶ್ ಕುಮಾರ್, ತಾವು ಎಲ್ಲಿದ್ದೇವೆ ಎಂಬುದನ್ನು ಮರೆತು ಸುಧಾಕರ್ ವಿರುದ್ಧ ಅಶ್ಲೀಲ ಮತ್ತು ಕೆಟ್ಟ…
ಖಾದ್ಯ ತಯಾರಿಸಿ ಹಂಚಿ ಸಂಭ್ರಮಿಸಿದ ಕಾಶ್ಮೀರಿ ಯುವಜನ: 40 ಸೆಕೆಂಡ್‍ನಲ್ಲಿ ಅರ್ಧ ಕೆಜಿ ಕಲ್ಲಂಗಡಿ ತಿಂದ ಬಾರಾಮುಲ್ಲಾದ ತಮ್‍ಜೀದ್ ಪ್ರಥಮ ಸ್ಥಾನ
March 11, 2020ಮೈಸೂರು, ಮಾ.10(ಎಂಕೆ)- ಕಲ್ಲಂಗಡಿ, ಬಾಳೆ ಹಣ್ಣನ್ನು ಪೈಪೋಟಿ ಮೇರೆಗೆ ವೇಗವಾಗಿ ತಿಂದು, ಹಾಡಿ, ಕುಣಿದು ಕುಪ್ಪಳಿಸಿದ ಕಾಶ್ಮೀರಿ ಯುವ ಚೇತನರು, ಅದೇ ವೇಳೆ, ಬಗೆ ಬಗೆಯ ಕಾಶ್ಮೀರಿ ವಿಶೇಷ ಖ್ಯಾದ್ಯಗಳನ್ನು ತಯಾರಿಸಿ ಸಂಭ್ರಮಿಸಿದರು. ‘ಕಾಶ್ಮೀರಿ ಯುವಜನ ವಿನಿಮಯ’ ವಿಶೇಷ ಕಾರ್ಯಕ್ರಮದ ಹಿನ್ನೆಲೆ ಮಂಗಳವಾರ ನೆಹರು ಯುವಕೇಂದ್ರ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳು ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಭಾಗವಹಿ ಸಿದ ಕಾಶ್ಮೀರಿ ಯುವಕ-ಯುವತಿಯರು ಮತ್ತು ವಿಜಯನಗರ 3ನೇ ಹಂತದ ಚಾಮುಂಡೇಶ್ವರಿ ಮತ್ತು ಅನ್ನಪೂರ್ಣೇಶ್ವರಿ ಸ್ವ-ಸಹಾಯ ಸಂಘದ ಸದಸ್ಯರು ಸಂತಸದ ಅಲೆಯಲ್ಲಿ…
ಕಣ್ಮರೆಯಾಗುವ ಹಂತ ತಲುಪಿವೆ ಈ ಪಾರಂಪರಿಕ ಕಲ್ಯಾಣಿಗಳು!
March 10, 2020ಮೈಸೂರು, ಮಾ.9(ಎಂಕೆ)- ಸುತ್ತಲೂ ಸುರಿದ ಕಟ್ಟಡದ ತ್ಯಾಜ್ಯ, ಚಪ್ಪಡಿ ಕಲ್ಲುಗಳು, ಕಸದ ರಾಶಿ ಮತ್ತು ಬೃಹತ್ತಾಗಿ ಬೆಳೆದ ಪೊದೆಗಳ ನಡುವೆ ಮರೆಯಾಗಿ ಪಾರಂಪರಿಕ ‘ಕಲ್ಯಾಣಿ’ಗಳೆರಡು ಮುಚ್ಚಿ ಹೋಗುತ್ತಿವೆ. ಮೈಸೂರಿನ ಕುಕ್ಕರಹಳ್ಳಿ ಕೆರೆ ರಸ್ತೆ ಬದಿಯಲ್ಲಿ ಮೈಸೂರು ವಿವಿ ಈಜುಕೊಳಕ್ಕೆ ಹೊಂದಿಕೊಂಡಂತೆ ಅಕ್ಕ- ಪಕ್ಕದಲ್ಲಿರುವ ಎರಡು ಪ್ರತ್ಯೇಕ ಕಲ್ಯಾಣಿಗಳು ನಿರ್ವಹಣೆ ಮತ್ತು ಅಭಿವೃದ್ಧಿ ಕಾಣದೆ ಕಸ ಮತ್ತು ಕೆಸರಿನ ಗುಂಡಿಗಳಾಗಿ ಮಾರ್ಪಟ್ಟಿವೆ. ಆಯುಶ್ ಇಲಾಖೆಯ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾ ಲಯದ ‘ಚಂದ್ರವನ’ ಔಷಧಿಯ ಗಿಡ ಮೂಲಿಕೆಗಳ ಸಸ್ಯ…
ಶ್ರೀಮಂತರು, ಸುಶಿಕ್ಷಿತರ ಕುಟುಂಬದಲ್ಲೇ ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚು
March 10, 2020ಮಹಿಳಾ ಅಧಿಕಾರಿ ಕೆ.ಸುಶೀಲಾ ವಿಷಾದ ಮುಕ್ತ ವಿವಿಯಲ್ಲಿ ಮಹಿಳಾ ದಿನಾಚರಣೆ ಮೈಸೂರು,ಮಾ.9(ಎಂಟಿವೈ)- ಬಡ ಕುಟುಂಬಗಳಿಗಿಂತ ಶ್ರೀಮಂತ ಹಾಗೂ ಸುಶಿಕ್ಷಿತ ಕುಟುಂಬದಲ್ಲೇ ಮಹಿಳೆಯರ ಮೇಲೆ ಹೆಚ್ಚಾಗಿ ದೌರ್ಜನ್ಯ ನಡೆಯುತ್ತಿರುವ ಪ್ರಕರಣಗಳು ದಾಖಲಾಗುತ್ತಿವೆ ಎಂದು ಮೈಸೂರು ಜಿ.ಪಂನ ಯೋಜನಾ ನಿರ್ದೇಶಕಿ ಕೆ.ಸುಶೀಲಾ ವಿಷಾದಿಸಿದ್ದಾರೆ. ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ ಕಾವೇರಿ ಸಭಾಂಗಣದಲ್ಲಿ ಮುಕ್ತ ವಿವಿಯ ಅಕ್ಕಮಹಾದೇವಿ ಪೀಠದ ವತಿಯಿಂದ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಮುಕ್ತ ವಿವಿಯಲ್ಲಿ ಸ್ವಚ್ಛತಾ ಕೆಲಸ ನಿರ್ವಹಿ ಸುವ ಹಿರಿಯ ಸಿಬ್ಬಂದಿ ಲಲಿತಮ್ಮ ಅವರೊಂದಿಗೆ ಉದ್ಘಾಟಿಸಿ ಮಾತನಾಡಿದ…
ಸಿವಿಲ್, ಜಿಲ್ಲಾ ಸಶಸ್ತ್ರ ಪಡೆ ಸಿಬ್ಬಂದಿಗಳ ನೇಮಕಾತಿಗೆ ಚಾಲನೆ
March 10, 2020ಮಡಿಕೇರಿ,ಮಾ.9-ಕೊಡಗು ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 79 ಸಿವಿಲ್ ಮತ್ತು 54 ಜಿಲ್ಲಾ ಸಶಸ್ತ್ರ ಪೊಲೀಸ್ ಸಿಬ್ಬಂದಿಗಳ ನೇಮಕಾತಿಗಾಗಿ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯ್ಕೆ ಪ್ರಕ್ರಿಯೆಗೆ ಚಾಲನೆ ದೊರೆತಿದೆ. ಒಟ್ಟು ಮೂರು ದಿನಗಳ ಕಾಲ ಈ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, 2019ರ ನವೆಂಬರ್‍ನಲ್ಲಿ ನಡೆಸಲಾದ ಪರೀಕ್ಷೆಯಲ್ಲಿ ಪಾಸಾಗಿರುವ ಅಭ್ಯರ್ಥಿಗಳು ನೇಮ ಕಾತಿಯಲ್ಲಿ ಪಾಲ್ಗೊಂಡಿದ್ದಾರೆ. 79 ಸಿವಿಲ್ ಪೊಲೀಸ್ ಹುದ್ದೆಗೆ ನಡೆಸ ಲಾದ ಪರೀಕ್ಷೆಯಲ್ಲಿ ಒಟ್ಟು 395 ಅಭ್ಯರ್ಥಿ ಗಳು ಮತ್ತು 54 ಸಶಸ್ತ್ರ…
ಮೈಸೂರು-ಕಲಬುರ್ಗಿ ವಿಮಾನ ಬೆಂಗಳೂರಲ್ಲಿ ಸುರಕ್ಷಿತ ಭೂ ಸ್ಪರ್ಶ
March 9, 2020ಮೈಸೂರು,ಮಾ.8(ಆರ್‍ಕೆ)-ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ಏರ್ ಅಲಯನ್ಸ್ ವಿಮಾನ ಹಾರಾಟದಲ್ಲಿ ವ್ಯತ್ಯಯ ಉಂಟಾದ ಪರಿಣಾಮ ಪ್ರಯಾಣಿಕರು ಪರದಾಡುವಂತಾಯಿತು. ಬೆಂಗಳೂರಿನಿಂದ ಮೈಸೂರಿಗೆ ಬರಬೇಕಾ ಗಿದ್ದ ಮೈಸೂರು-ಕಲಬುರ್ಗಿ ಮಾರ್ಗದ ಅಲ ಯನ್ಸ್ ಏರ್ ವಿಮಾನದಲ್ಲಿ ಮಾರ್ಗ ಮಧ್ಯೆ ತಾಂತ್ರಿಕ ದೋಷ ಕಂಡು ಬಂದ ಕಾರಣ ಮರಳಿ ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದತ್ತ ತೆರಳಿ, ಅಲ್ಲಿ ಸುರಕ್ಷಿತವಾಗಿ ಭೂ ಸ್ಪರ್ಶ ಮಾಡಿತು. ಅಲ್ಲಿನ ತಾಂತ್ರಿಕ ವರ್ಗ ಸುಮಾರು ಎರಡು ಗಂಟೆ ಪರಿಶೀಲಿಸಿ, ದೋಷ ಸರಿಪಡಿಸಿದರು ಎಂದು ತಿಳಿದು ಬಂದಿದೆ. ಕಲಬುರ್ಗಿಯಿಂದ ಬೆಳಿಗ್ಗೆ 11.50ಕ್ಕೆ…