ಮೈಸೂರು ರಂಗಾಯಣ ಕ್ರಿಯಾಶೀಲವಾಗಿದೆ: ಅಡ್ಡಂಡ ಕಾರ್ಯಪ್ಪ
ಮೈಸೂರು

ಮೈಸೂರು ರಂಗಾಯಣ ಕ್ರಿಯಾಶೀಲವಾಗಿದೆ: ಅಡ್ಡಂಡ ಕಾರ್ಯಪ್ಪ

March 11, 2020
  • ಏ.11ರಿಂದ ಚಿಣ್ಣರ ಮೇಳ ರಂಗ ತರಬೇತಿ ಶಿಬಿರ
  • ವಾರಾಂತ್ಯದಲ್ಲಿ `ಗಾಂಧಿ ವರ್ಸಸ್ ಗಾಂಧಿ’

ಮೈಸೂರು, ಮಾ.10(ಎಂಟಿವೈ)- ಮೈಸೂರು ರಂಗಾಯಣ ಕ್ರಿಯಾಶೀಲವಾ ಗಿದ್ದು, ನಿರಂತರ ರಂಗಪ್ರಯೋಗಗಳ ಮಾಡುವ ಮೂಲಕ ಗ್ರಾಮೀಣ ಪ್ರದೇಶ ಸೇರಿದಂತೆ ರಾಜ್ಯದ ಮೂಲೆ ಮೂಲೆಗೂ ತಲುಪಿದೆ ಎಂದು ರಂಗಾಯಣದ ನಿರ್ದೇ ಶಕ ಅಡ್ಡಂಡ ಸಿ.ಕಾರ್ಯಪ್ಪ ತಿಳಿಸಿದ್ದಾರೆ.

ರಂಗಾಯಣದ ಶ್ರೀರಂಗ ಸಭಾಂಗಣ ದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಆಧುನಿಕ ಕನ್ನಡ ರಂಗಭೂಮಿ ಕಟ್ಟುವ ನಿಟ್ಟಿನಲ್ಲಿ ಮೈಸೂರು ರಂಗಾಯಣ ವಿವಿಧ ಕಾರ್ಯ ಕ್ರಮ ರೂಪಿಸಿದೆ. ರಾಜ್ಯದ ಮೂಲೆ ಮೂಲೆಗೂ ರಂಗಾಯಣ ತಲುಪಬೇಕು ಎಂಬ ನಮ್ಮ ಆಶಯ ಯಶಸ್ವಿಯಾಗಿದೆ. ರಂಗಾಯಣ ದಲ್ಲಿ ನಿರಂತರವಾಗಿ ಚಟುವಟಿಕೆ ನಡೆ ಯುತ್ತಲೇ ಇರುತ್ತದೆ. ಮೂರು ಘಟಕಗಳು ತನ್ನದೇ ವ್ಯಾಪ್ತಿಯೊಳಗೆ ಕಾರ್ಯ ನಿರ್ವ ಹಿಸುತ್ತಿವೆ. ಪ್ರಧಾನ ರಂಗಘಟಕ(ಹಿರಿಯ ರೆಪರ್ಟರಿ), ಕಿರಿಯ ರಂಗ ಘಟಕ (ಸಂಚಾರಿ ರೆಪರ್ಟರಿ) ಹಾಗೂ ಭಾರತೀಯ ರಂಗ ಶಿಕ್ಷಣ ಕೇಂದ್ರ ಘಟಕ ಗಳು ರಂಗಾ ಯಣದಲ್ಲಿವೆ. ಈ ಮೂರು ಘಟಕಗಳು ಹೊಸ ಹೊಸ ರಂಗ ಪ್ರಯೋಗ ಗಳನ್ನು ಮಾಡು ತ್ತಿದೆ ಎಂದರು.

ರಾಜ್ಯ ಸುತ್ತುತ್ತಿದೆ ಕಿರಿಯರ ರಂಗ ಘಟಕ: ರಂಗಾಯಣದ ಕಿರಿಯರ ರಂಗಘಟಕ ರಾಜ್ಯ ಬೇರೆ ಬೇರೆ ಸ್ಥಳಗಳಲ್ಲಿ ಆರ್ಕೇಡಿ ಯಾದಲ್ಲಿ ಪಕ್, ಬೆಂದಕಾಳು ಆನ್ ಟೋಸ್ಟ್ ಮತ್ತು ರೆಕ್ಸ್ ಅವರ್ಸ್-ಡೈನೋ ಏಕಾಂಗಿ ಪಯಣ ಎಂಬ ಮೂರು ನಾಟಕಗಳು ಇದುವರೆಗೆ 100ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದೆ. ಕೇರಳದ ಕೊಚ್ಚಿನ್‍ನಲ್ಲಿ ಮಾ.25ರಿಂದ 27ರವರೆಗೆ ಮತ್ತು ಹೈದ್ರಾಬಾದ್‍ನಲ್ಲಿ ಏ.3ರಿಂದ 5ರವರೆಗೆ ಪ್ರದರ್ಶನ ನೀಡಲಿದೆ.

ಆ ಊರು, ಈ ಊರು: ಭಾರತೀಯ ರಂಗ ಶಿP್ಷÀಣ ಕೇಂದ್ರ ಶಿಬಿರಾರ್ಥಿಗಳು ಅಭಿನಯಿಸಲಿರುವ ನಾಟಕಕ್ಕೂ ವೇದಿಕೆ ಕಲ್ಪಿಸಲಾಗಿದೆ. ಜಿ.ಬಿ.ಜೋಷಿ(ಜಡಭರತ) ಅವರ `ಆ ಊರು ಈ ಊರು’ ನಾಟಕ ರಂಗ ಶಿಕ್ಷಣದ ವಿದ್ಯಾರ್ಥಿಗಳಿಂದ ಏ.8 ಮತ್ತು 9ರಂದು ವಾರಾಂತ್ಯದಲ್ಲಿ ಪ್ರದರ್ಶನಗೊಳ್ಳಲಿದೆ ಎಂದರು.

ಚಿಣ್ಣರ ಮೇಳ ರಂಗ ತರಬೇತಿ ಶಿಬಿರ 2020 ಏ.11ರಂದು ಪ್ರಾರಂಭಗೊಂಡು ಮೇ.10ರಂದು ಸಮಾಪ್ತಿಯಾಗಲಿದೆ. ಚಿಣ್ಣರ ಮೇಳ ಮುಗಿದ ನಂತರ ವಿಶ್ವ ರಂಗ ಭೂಮಿ ದಿನದ ಅಂಗವಾಗಿ ಮೈಸೂರು ರಂಗಾಯಣವು ರಂಗ ಸಪ್ತಾಹ ನಡೆಸಲಿದ್ದು, ವಾರದ 7 ದಿನಗಳೂ ನಾಟಕ ಪ್ರದರ್ಶನ ನಡೆಸಲಿದೆ. ಇದರಲ್ಲಿ ರಂಗ ಶಿP್ಷÀಣ ಕೇಂದ್ರ 3 ನಾಟಕಗಳು, ಕಿರಿಯ ರೆಪರ್ಟರಿಯ 3 ನಾಟಕಗಳು ಮತ್ತು ಪ್ರಧಾನ ರೆಪರ್ಟ ರಿಯ ಒಂದು ನಾಟಕ ಸೇರಿದಂತೆ 7 ದಿನವೂ ನಾಟಕ ಪ್ರದರ್ಶನವಿರಲಿದೆ. `ಪಾಪು ಗಾಂಧಿ, ಗಾಂಧಿ ಬಾಪು’ 150 ಪ್ರದರ್ಶನ ಕಂಡಿದ್ದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯು ಆರ್ಥಿಕ ಸಹಕಾರ ನೀಡಿದಲ್ಲಿ ಅಕ್ಟೋಬರ್ 2, 2020ರವರೆಗೆ ಮುಂದುವರೆಸುವ ಅಪೇಕ್ಷೆಯಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ರಂಗಾ ಯಣ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ಭಾರತೀಯ ರಂಗ ಶಿಕ್ಷಣ ಕೇಂದ್ರ ಪ್ರಾಂಶುಪಾಲ ಪ್ರಕಾಶ್ ಗರುಡ ಇದ್ದರು.

Translate »