ಮಹಿಳಾ ದಿನಾಚರಣೆಯಲ್ಲಿ ಕೊರೊನಾ, ಕ್ಯಾನ್ಸರ್ ಬಗ್ಗೆ ಜಾಗೃತಿ
ಮೈಸೂರು

ಮಹಿಳಾ ದಿನಾಚರಣೆಯಲ್ಲಿ ಕೊರೊನಾ, ಕ್ಯಾನ್ಸರ್ ಬಗ್ಗೆ ಜಾಗೃತಿ

March 11, 2020

ಮಹಿಳೆಯರು ಜಾಗೃತರಾದರೆ ಯಾವ ರೋಗವು ಸುಳಿಯದು

ಮೈಸೂರು, ಮಾ.10(ಆರ್‍ಕೆಬಿ)- ಅಂತಾ ರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗ ವಾಗಿ ಮೈಸೂರಿನ ಓಡಿಪಿ ಸಂಸ್ಥೆ ಮಂಗಳ ವಾರ ಸಂತ ಫಿಲೋಮಿನಾ ಕಾಲೇಜಿನ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋ ಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾ ಚರಣೆ ಕೊರೋನಾ ವೈರಸ್ ಮತ್ತು  ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮವಾಗಿ ಹೊರ ಹೊಮ್ಮಿತು.

ಮೈಸೂರು, ಚಾಮರಾಜನಗರ, ಮಂಡ್ಯ, ಕೊಡಗು ಜಿಲ್ಲೆಗಳ ಸಾವಿರಕ್ಕೂ ಹೆಚ್ಚು ಮಹಿಳೆ ಯರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಭಾರತ್ ಕ್ಯಾನ್ಸರ್ ಆಸ್ಪತ್ರೆಯ ಚೀಫ್ ರೇಡಿಯೆಷನ್ ಅಂಕೊಲಾಜಿಸ್ಟ್ ಡಾ.ವಿಶ್ವೇಶ್ವರ, ಕರ್ನಾಟಕ ರಾಜ್ಯ ಮುಕ್ತ ವಿವಿ ಸಹಾಯಕ ಪ್ರಾಧ್ಯಾಪಕಿ ಡಾ.ಸಿ. ಅನಿತಾ , ಇಂದು ವಿಶ್ವಾದ್ಯಂತ ಜನರನ್ನು ಬಲಿ ಪಡೆಯುತ್ತಿರುವ ಕೊರೊನಾ ವೈರಸ್ ಹೇಗೆ ಹರಡುತ್ತಿದೆ, ಅದು ಬರದಂತೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಜಾಗೃತಿ ಮೂಡಿಸಿದರು. ಅಲ್ಲದೆ ಕ್ಯಾನ್ಸರ್ ರೋಗ ಮತ್ತು ಅದು ಬರದಂತೆ ವಹಿಸಬೇಕಾದ ಎಚ್ಚರಿಕೆಗಳ ಬಗ್ಗೆಯೂ ಮಾಹಿತಿ ನೀಡಿದರು.

ಓಡಿಪಿ ಸಂಸ್ಥೆಯ ಅಧ್ಯಕ್ಷರೂ ಆದ ಧರ್ಮಾ ಧ್ಯಕ್ಷ ಡಾ.ಕೆ.ಎ.ವಿಲಿಯಂ ಅಧ್ಯಕ್ಷತೆ ವಹಿಸಿ ದ್ದರು. ಮಂಗಳೂರಿನ ಮಹಿಳಾ ಚಿಂತಕಿ ಪ್ರೊ.ರೀಟಾ ನೊರೊನ್ಹ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಓಡಿಪಿ ಉಪಾಧ್ಯಕ್ಷ ಫಾ.ರಾಯಪ್ಪ, ಮಾನಸಗಂಗೋತ್ರಿ ಆಹಾರ ಮತ್ತು ಪೋಷಕಾಂಶ ವಿಭಾಗದ ಅಧ್ಯಕ್ಷ ಡಾ.ಆಸ್ನಾ ಉರೂಜ್, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಾಜಿ ಅಧ್ಯಕ್ಷೆ ಕೃಪಾ ಆಳ್ವಾ, ಓಡಿಪಿ ಸಂಸ್ಥೆಯ ನಿರ್ದೇಶಕ ಫ.ಅಲೆಕ್ಸ್ ಪ್ರಶಾಂತ್ ಸಿಕ್ವೇರಾ, ಸಂಸ್ಥೆಯ ಸಲಹಾ ಸದಸ್ಯರಾದ ಲೊರೆಟ್ಟೋ, ಮೈಸೂರು ಧರ್ಮಪ್ರಾಂತ್ಯ ಮಹಿಳಾ ಆಯೋಗದ ಎಮಿಲಿ, ಮಹಿಳೋ ದಯ ಒಕ್ಕೂಟದ ಅಧ್ಯಕ್ಷ ಎಸ್ತರ್ ರೋಸ್, ಮೈಸೂರು ಜಿಲ್ಲಾ ಒಕ್ಕೂಟದ ಅಧ್ಯಕ್ಷೆ ಆಶಾರಾಣಿ  ಸಂಯೋಜಕ ರಾದ ಸುನಿತಾ, ಪುಷ್ಪಾ, ಅರೋಗ್ಯ ಮೇರಿ, ಜಾನ್ ರೋಡ್ರಿಗಸ್ ಇತರರಿದ್ದರು.

 

     ಪುರುಷರಷ್ಟೇ ಸರಿ ಸಮಾನರಾಗಿ  ಅಭಿವೃದ್ಧಿ ಹೊಂದುತ್ತಿರುವ ಮಹಿಳೆ ಯರು ಕ್ಯಾನ್ಸರ್ ಬಗ್ಗೆ ಅರಿವು ಪಡೆದು ಕೊಂಡರೆ ಅದು ಬರದಂತೆ ತಡೆಗಟ್ಟಲು ಹೆಚ್ಚು ಸಹಕಾರಿಯಾಗುತ್ತದೆ.

-ಡಾ.ಕೆ.ಎ.ವಿಲಿಯಂ, ಮೈಸೂರು ಬಿಷಪ್.

Translate »