Tag: Mysore

ಆರ್.ಕೆ. ನಾರಾಯಣ್ ‘ಮಾಲ್ಗುಡಿ ಡೇಸ್’ ಪಾತ್ರಧಾರಿ ಸ್ವಾಮಿ, ಇತರರಿಗೆ ‘ಜೀವಂತಿಕೆ’
ಮೈಸೂರು

ಆರ್.ಕೆ. ನಾರಾಯಣ್ ‘ಮಾಲ್ಗುಡಿ ಡೇಸ್’ ಪಾತ್ರಧಾರಿ ಸ್ವಾಮಿ, ಇತರರಿಗೆ ‘ಜೀವಂತಿಕೆ’

March 7, 2020

ಯಾದವಗಿರಿ ವೃತ್ತದಲ್ಲಿ ‘ಸ್ವಾಮಿ ಮತ್ತು ಸ್ನೇಹಿತರ’ ಕಂಚಿನ ಪ್ರತಿಮೆಗಳ ಪ್ರತಿಷ್ಠಾಪನೆಗೆ ಸಿದ್ಧತೆ ಮೈಸೂರು, ಮಾ. 6- ‘ಮಾಲ್ಗುಡಿ ಡೇಸ್’ ಖ್ಯಾತಿಯ ಇಂಗ್ಲಿಷ್ ಕಾದಂ ಬರಿಕಾರ ಆರ್.ಕೆ. ನಾರಾಯಣ್ ಯಾದವಗಿರಿ ನಿವಾಸದ ಬಳಿಯಿರುವ ವೃತ್ತದಲ್ಲಿ ಅವರ ಕಾದಂಬರಿಗಳಲ್ಲಿ ಬರುವ ಪ್ರಮುಖ ಪಾತ್ರಗಳಾದ ಸ್ವಾಮಿ ಮತ್ತು ಸ್ನೇಹಿತರ ಪ್ರತಿಮೆಗಳನ್ನು ಸ್ಥಾಪಿಸಿ ಪ್ರವಾಸಿಗರನ್ನು ಆಕರ್ಷಿಸಲು ಖಾಸಗಿ ಸಂಸ್ಥೆಯೊಂದರ ಸಹಕಾರದೊಂದಿಗೆ ಮೈಸೂರು ನಗರಪಾಲಿಕೆ ಸಜ್ಜಾಗಿದೆ. ಕಲಾಭಿರುಚಿ ಹೊಂದಿರುವ ಉದ್ಯಮಿ ಪಿ.ವಿ. ಗಿರಿ ಅವರ ಕುಟುಂಬದ ಸಿದ್ಧಾರ್ಥ ಗ್ರೂಪ್ಸ್‍ನಿಂದ ಪ್ರತಿಮೆಗಳು ಈಗಾಗಲೇ ನಿರ್ಮಾಣವಾಗಿದ್ದು, ಸ್ಮಾರಕ…

ತುಮಕೂರಲ್ಲಿ ಭೀಕರ ಅಪಘಾತ: 13 ಜನ ದುರ್ಮರಣ
ಮೈಸೂರು

ತುಮಕೂರಲ್ಲಿ ಭೀಕರ ಅಪಘಾತ: 13 ಜನ ದುರ್ಮರಣ

March 7, 2020

ತುಮಕೂರು, ಮಾ.6- ದೇವರ ದರ್ಶನ ಮುಗಿಸಿ ಬರುತ್ತಿದ್ದವರು ಅಪಘಾತಕ್ಕೊಳಗಾಗಿ ಮೃತಪಟ್ಟಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ಈ ಭೀಕರ ಅಪಘಾತದಲ್ಲಿ ಬಿಟ್ಟು 13 ಜನ ಮೃತಪಟ್ಟಿದ್ದಾರೆ. ತುಮಕೂರಲ್ಲಿ ಭೀಕರ ಅಪಘಾತ ಸಂಭವಿಸಿದ್ದು 13 ಮಂದಿ ಮೃತಪಟ್ಟಿದ್ದಾರೆ. ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಬ್ಯಾಲದಕೆರೆ ಬಳಿ ಘಟನೆ ನಡೆದಿದ್ದು, ನಾಲ್ಕು ಯುವಕರಿದ್ದ ಕಾರು ರಸ್ತೆ ಡಿವೈಡರ್‍ಗೆ ಡಿಕ್ಕಿಯಾಗಿದೆ. ಯುವಕರಿದ್ದ ಕಾರು ಮತ್ತೊಂದು ಟವೇರಾ ಕಾರಿಗೆ ಡಿಕ್ಕಿ ಹೊಡೆದು ಎರಡು ಕಾರಲ್ಲಿ 13 ಮಂದಿ ಸಾವನ್ನ ಪ್ಪಿದ್ದಾರೆ. ಹಲವರಿಗೆ ಗಾಯಗಳಾಗಿವೆ. ಎಲ್ಲರೂ…

ಕರುನಾಡ ಸಂಸ್ಕೃತಿಗೆ ಮಾರುಹೋದ ಕಾಶ್ಮೀರಿ ಯುವಜನ
ಮೈಸೂರು

ಕರುನಾಡ ಸಂಸ್ಕೃತಿಗೆ ಮಾರುಹೋದ ಕಾಶ್ಮೀರಿ ಯುವಜನ

March 7, 2020

ಮೈಸೂರು, ಮಾ.6(ಎಸ್‍ಬಿಡಿ)- ಕರುನಾಡ ಸಂಸ್ಕೃತಿಗೆ ಮಾರುಹೋದ ಕಾಶ್ಮೀರಿ ಯುವಜನ, ಡೊಳ್ಳು, ಕಂಸಾಳೆ ಸದ್ದಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಸಂಘಟನೆ ಹಾಗೂ ನೆಹರು ಯುವ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿರುವ ಕಾಶ್ಮೀರಿ ಯುವಜನ ವಿನಿಮಯ ಕಾರ್ಯ ಕ್ರಮಕ್ಕೆ ಜಮ್ಮು-ಕಾಶ್ಮೀರದಿಂದ ಆಗಮಿಸಿ ರುವ 82 ವಿದ್ಯಾರ್ಥಿಗಳು ಮೈಸೂರಿನ ಗಂಗೋತ್ರಿ ಬಡಾವಣೆಯ ಯೂತ್ ಹಾಸ್ಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಶುಕ್ರವಾರ ಸಂಜೆ ಕಾಶ್ಮೀರಿ ಯುವಕ- ಯುವತಿಯರಿಗೆ ಮೈಸೂರು ಪೇಟ ತೊಡಿಸಿ, ಶಾಲು…

ಕೊರೊನಾ: ಮೈಸೂರಲ್ಲಿ ಕಟ್ಟೆಚ್ಚರ, ಜನತೆಗೆ ಭಯಬೇಡ
ಮೈಸೂರು

ಕೊರೊನಾ: ಮೈಸೂರಲ್ಲಿ ಕಟ್ಟೆಚ್ಚರ, ಜನತೆಗೆ ಭಯಬೇಡ

March 7, 2020

ಮೈಸೂರು,ಮಾ.6(ಎಂಟಿವೈ)- ಮೈಸೂರು ಜಿಲ್ಲೆಯಲ್ಲಿ ಕೊರೊನಾ ವೈರಸ್ ಹರಡದಂತೆ ಕಟ್ಟೆಚ್ಚರ ವಹಿಸ ಲಾಗಿದ್ದು, ಜನತೆ ಭಯಪಡುವ ಅಗತ್ಯ ವಿಲ್ಲ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಅವರು, ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಎಲ್ಲಾ ಜಿಲ್ಲಾಧಿಕಾರಿಗಳ ಜತೆ ವಿಡಿಯೊ ಕಾನ್ಫ ರೆನ್ಸ್ ನಡೆಸಿ ಕೊರೊನಾ ವಿಚಾರದಲ್ಲಿ ಅಗತ್ಯ ಮುಂಜಾಗ್ರತಾ ಕ್ರಮವಹಿಸುವಂತೆ ಸೂಚಿಸಿದ್ದಾರೆ. ಜಿಲ್ಲೆಯ ಜನರ ಹಿತ ಕಾಪಾಡಲು ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಈವರೆಗೆ ಒಂದೂ ಕೊರೊನಾ ಪ್ರಕರಣ ಪತ್ತೆಯಾಗಿಲ್ಲ ಎಂದರು. ವಿದೇಶದಿಂದ…

ಭ್ರಷ್ಟಾಚಾರಕ್ಕೆ ಚುನಾವಣಾ ಆಯೋಗವೇ ಮದ್ದು ಜೆಡಿಎಸ್ ಶಾಸಕ ಶಿವಲಿಂಗೇಗೌಡ ಅಭಿಮತ
ಮೈಸೂರು

ಭ್ರಷ್ಟಾಚಾರಕ್ಕೆ ಚುನಾವಣಾ ಆಯೋಗವೇ ಮದ್ದು ಜೆಡಿಎಸ್ ಶಾಸಕ ಶಿವಲಿಂಗೇಗೌಡ ಅಭಿಮತ

March 7, 2020

ಬೆಂಗಳೂರು, ಮಾ.6(ಕೆಎಂಶಿ)- ವ್ಯಾಪಕ ಭ್ರಷ್ಟಾಚಾರ ತಡೆಗೆ ಚುನಾವಣಾ ಆಯೋಗದಿಂದ ಮದ್ದು ಎಂದು ಜೆಡಿಎಸ್ ಶಾಸಕ ಶಿವಲಿಂಗೇ ಗೌಡ ವಿಧಾನಸಭೆಯಲ್ಲಿ ಶುಕ್ರವಾರ ಅಭಿಪ್ರಾಯಿಸಿದ್ದಾರೆ. ಸಂವಿಧಾನ ವಿಷಯದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಾರ್ವತ್ರಿಕ ಚುನಾವಣೆಯಾಗಲೀ, ವಿಧಾನಸಭಾ ಉಪ ಚುನಾವಣೆ ಯಲ್ಲಾಗಲೀ, 30ರಿಂದ 40 ಕೋಟಿ ರೂ. ವೆಚ್ಚವಾಗುತ್ತಿದೆ. ಅಮೆರಿಕದ ಮಾದರಿ ಚುನಾವಣೆ ನಡೆಸಿದರೆ ಯಾವುದೇ ಅಭ್ಯರ್ಥಿ ಹೊರೆಯಿಲ್ಲದೆ, ಜನಮನ್ನಣೆ ಇರುವವರು ವಿಧಾನಸಭೆ ಇಲ್ಲವೆ ಲೋಕಸಭೆ ಪ್ರವೇಶಿಸಬಹುದು. ನಾವು ಕೆಲಸ ಮಾಡದಿದ್ದರೆ, ಜನರೇ ಬಂದು ಕಿವಿ ಹಿಂಡುತ್ತಾರೆ. ಈಗ ಅವರು,…

ಜಾತಿ ವ್ಯವಸ್ಥೆ ಇರುವವರೆಗೂ ಮೀಸಲಾತಿ ಅನಿವಾರ್ಯ  ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಪಾದನೆ
ಮೈಸೂರು

ಜಾತಿ ವ್ಯವಸ್ಥೆ ಇರುವವರೆಗೂ ಮೀಸಲಾತಿ ಅನಿವಾರ್ಯ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಪಾದನೆ

March 7, 2020

ಬೆಂಗಳೂರು, ಮಾ.6(ಕೆಎಂಶಿ)-ಜಾತಿ ವ್ಯವಸ್ಥೆ ಇರುವವರೆಗೆ ಮೀಸಲಾತಿ ಇರಲೇ ಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ವಿಧಾನಸಭೆಯಲ್ಲಿ ಶುಕ್ರವಾರ ಪ್ರತಿಪಾದಿಸಿದರು. ಸಂವಿಧಾನದ ಮೇಲಿನ ಚರ್ಚೆಯ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಿ ಮಾತನಾಡಿದ ಅವರು, ಸಂವಿಧಾನ ರಚನೆಯಾದ 10 ವರ್ಷಗಳಲ್ಲಿ ತಳಸಮುದಾಯಗಳಿಗೆ ರಾಜಕೀಯ, ಸಾಮಾಜಿಕ, ಆರ್ಥಿಕ ನ್ಯಾಯ ದೊರೆಯುತ್ತದೆ ಎಂದು ಡಾ. ಅಂಬೇಡ್ಕರ್ ಅವರು ಭಾವಿಸಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಹತ್ತು ವರ್ಷ ಗಳಲ್ಲಿ ರಾಜಕೀಯ, ಸಾಮಾಜಿಕ, ಆರ್ಥಿಕ ನ್ಯಾಯ ದಲಿತ ಸಮುದಾಯಕ್ಕೆ ದೊರೆಯಲಿಲ್ಲ. ಹೀಗಾಗಿ ಅಂಬೇಡ್ಕರ್ ಅವರ ನಿರೀಕ್ಷೆ ಈಡೇರಲಿಲ್ಲ…

ಯೆಸ್ ಬ್ಯಾಂಕ್; ಮೈಸೂರಲ್ಲಿ ಬ್ಯಾಂಕ್ ಎದುರು ಗ್ರಾಹಕರ ಸಾಲು
ಮೈಸೂರು

ಯೆಸ್ ಬ್ಯಾಂಕ್; ಮೈಸೂರಲ್ಲಿ ಬ್ಯಾಂಕ್ ಎದುರು ಗ್ರಾಹಕರ ಸಾಲು

March 7, 2020

ಮೈಸೂರು,ಮಾ.6(ಎಸ್‍ಬಿಡಿ)- ಯೆಸ್ ಬ್ಯಾಂಕ್ ಮೈಸೂರು ಶಾಖೆಯಲ್ಲೂ ಶುಕ್ರವಾರ ನೂರಾರು ಗ್ರಾಹಕರು ಜಮಾ ವಣೆಗೊಂಡಿದ್ದರು. ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಖಾಸಗಿ ವಲಯದ `ಯೆಸ್ ಬ್ಯಾಂಕ್’ನ ಆಡಳಿತ ಮಂಡಳಿ ಯನ್ನು ಅಮಾನತುಗೊಳಿಸಿ, ವಿತ್ ಡ್ರಾ ಮಿತಿಯನ್ನು 50 ಸಾವಿರ ರೂ.ಗೆ ಮಿತಿಗೊಳಿ ಸಿದ ಸುದ್ದಿ ತಿಳಿಯುತ್ತಿದ್ದಂತೆಯೇ ಗ್ರಾಹ ಕರು ಆತಂಕದಿಂದ ಮೈಸೂರಿನ ಕಾಳಿ ದಾಸ ರಸ್ತೆಯಲ್ಲಿರುವ ಬ್ಯಾಂಕ್ ಶಾಖೆ ಯತ್ತ ದೌಡಾಯಿಸಿದರು. ಬ್ಯಾಂಕ್ ಹೊರಗಡೆ ಅಂಟಿಸಿದ್ದ ನೋಟಿಸ್ ಗಮನಿಸಿ, ಒಳಹೋಗಿ ಸಿಬ್ಬಂದಿಯಿಂದ ಹೆಚ್ಚಿನ ವಿವರ ಪಡೆದರು. ಹಲವರು ಮನೆಗೆ…

ಕ್ರೀಡಾಸ್ಫೂರ್ತಿಗೆ ಅಡ್ಡಿಯಾಗದ ಅಂಗವೈಕಲ್ಯ
ಮೈಸೂರು

ಕ್ರೀಡಾಸ್ಫೂರ್ತಿಗೆ ಅಡ್ಡಿಯಾಗದ ಅಂಗವೈಕಲ್ಯ

March 7, 2020

ಮೈಸೂರು,ಮಾ.6(ಪಿಎಂ)-ಅಂಗವೈಕಲ್ಯದ ನಡುವೆಯೂ ವಿಶೇಷಚೇತನ ಮಕ್ಕಳು ಮತ್ತು 18 ವರ್ಷ ಮೇಲ್ಪಟ್ಟವರು ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಉತ್ಸಾಹದಿಂದ ಕ್ರೀಡಾಸ್ಫೂರ್ತಿ ಮೆರೆದಿದ್ದಾರೆ. ಶುಕ್ರವಾರ 600ಕ್ಕೂ ಅಧಿಕ ಕ್ರೀಡಾಪಟುಗಳು ಭಾಗಿಯಾಗಿದ್ದರು. ಕರ್ನಾಟಕ ರಾಜ್ಯ ಅಂಗವಿಕಲರ ಕ್ರೀಡಾ ಸಂಸ್ಥೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವಾಲಯ, ಮೈಸೂರು ಜಿಲ್ಲಾ ಪಂಚಾಯಿತಿ ಹಾಗೂ ಮೈಸೂರು ಮಹಾನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿರುವ ನಗರ, ಜಿಲ್ಲಾ ಮತ್ತು ರಾಜ್ಯ ಮಟ್ಟದ ವಿಶೇಷಚೇತನರ ಕ್ರೀಡಾ ಕೂಟದಲ್ಲಿ (ಪ್ಯಾರಾಗೇಮ್ಸ್) ಇಂದಿನಿಂದ (ಶುಕ್ರವಾರ) ಮಾ. 8ರವರೆಗೆ ವಿಶೇಷಚೇತನರು ತಮ್ಮ ವಿಶೇಷ…

ಬಜೆಟ್ ಮಾರನೇ ದಿನ ಕೃಷ್ಣಾ ಮೇಲ್ದಂಡೆ ಯೋಜನೆಗೆ 10 ಸಾವಿರ ಕೋಟಿ ಕೊಡಿಸುವ ಭರವಸೆ
ಮೈಸೂರು

ಬಜೆಟ್ ಮಾರನೇ ದಿನ ಕೃಷ್ಣಾ ಮೇಲ್ದಂಡೆ ಯೋಜನೆಗೆ 10 ಸಾವಿರ ಕೋಟಿ ಕೊಡಿಸುವ ಭರವಸೆ

March 7, 2020

ಬೆಂಗಳೂರು, ಮಾ. 6(ಕೆಎಂಶಿ)- ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಮ್ಮ ಮಂಗಡ ಪತ್ರದಲ್ಲಿ ಹಳೆಯ ಮೈಸೂರು ಪ್ರಾಂತ್ಯ ಹಾಗೂ ಕಲ್ಯಾಣ ಕರ್ನಾಟಕವನ್ನು ಕಡೆಗಾಣಿಸಿದ್ದಾರೆ ಎಂಬ ದೂರಿನ ಬೆನ್ನಲ್ಲೇ ಮುಂಬೈ ಕರ್ನಾಟಕಕ್ಕೆ ಇಂದು ಮತ್ತೊಂದು ಬಂಪರ್ ಕೊಡುಗೆ ನೀಡಿದ್ದಾರೆ. ಸಂವಿಧಾನ ವಿಷಯಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಯುವ ಸಂದರ್ಭದಲ್ಲೇ ಮಧ್ಯೆ ಪ್ರವೇಶಿಸಿ, ಹೇಳಿಕೆ ನೀಡಿದ ಮುಖ್ಯಮಂತ್ರಿಯವರು, ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಕಾಮಗಾರಿಗಾಗಿ, ಪ್ರಸಕ್ತ ಮುಂಗಡ ಪತ್ರದಲ್ಲಿ ಹತ್ತು ಸಾವಿರ ಕೋಟಿ ರೂ. ಒದಗಿಸುವುದಾಗಿ ಘೋಷಿಸಿದರು. ಅಷ್ಟೇ ಅಲ್ಲ ಮೂರನೇ…

`ಫಿಲಂ ಸಿಟಿ’ ಮೈಸೂರಲ್ಲೇ ಉಳಿಸಿಕೊಳ್ಳಲು `ಉಗ್ರ’ ಹೋರಾಟಕ್ಕೆ ಹೋಟೆಲ್ ಮಾಲೀಕರ ಸಂಘ ನಿರ್ಧಾರ
ಮೈಸೂರು

`ಫಿಲಂ ಸಿಟಿ’ ಮೈಸೂರಲ್ಲೇ ಉಳಿಸಿಕೊಳ್ಳಲು `ಉಗ್ರ’ ಹೋರಾಟಕ್ಕೆ ಹೋಟೆಲ್ ಮಾಲೀಕರ ಸಂಘ ನಿರ್ಧಾರ

March 7, 2020

ಮೈಸೂರು,ಮಾ.6(ಎಂಟಿವೈ)- ಮೈಸೂ ರಿನಲ್ಲಿ ಸ್ಥಾಪಿಸಲು ಉದ್ದೇಶಿಸಿದ್ದ `ಫಿಲಂ ಸಿಟಿ’ಯನ್ನು ಬೆಂಗಳೂರಿಗೆ ಸ್ಥಳಾಂತರಿಸಿ ರುವ ರಾಜ್ಯ ಸರ್ಕಾರದ ಕ್ರಮವನ್ನು ಜಿಲ್ಲಾ ಹೋಟೆಲ್ ಮಾಲೀಕರ ಸಂಘ ತೀವ್ರ ವಾಗಿ ಖಂಡಿಸಿದ್ದು, ಮುಂದಿನ ಎರಡು ದಿನದಲ್ಲಿ ಉಗ್ರ ಹೋರಾಟ ನಡೆಸಲು ರೂಪುರೇಷೆ ಸಿದ್ಧಪಡಿಸಲಿದೆ. ಮೈಸೂರಿನ ಕೃಷ್ಣಮೂರ್ತಿಪುರಂ ನಲ್ಲಿರುವ ಹೋಟೆಲ್ ಮಾಲೀಕರ ಸಂಘದ ಕಚೇರಿ ಆವರಣದಲ್ಲಿ ಅಧ್ಯಕ್ಷ ಸಿ.ನಾರಾಯಣ ಗೌಡ ಅಧ್ಯಕ್ಷತೆಯಲ್ಲಿ ಪದಾಧಿಕಾರಿಗಳು ಶುಕ್ರವಾರ ತುರ್ತುಸಭೆ ನಡೆಸಿ, ಫಿಲಂ ಸಿಟಿಯನ್ನು ಮೈಸೂರಿನಿಂದ ಬೆಂಗಳೂರಿಗೆ ಸ್ಥಳಾಂತರ ಮಾಡುವ ಸರ್ಕಾರದ ಕ್ರಮ ವನ್ನು ಖಂಡಿಸಿದರು. ಅಲ್ಲದೇ,…

1 21 22 23 24 25 330
Translate »