ಯಾದವಗಿರಿ ವೃತ್ತದಲ್ಲಿ ‘ಸ್ವಾಮಿ ಮತ್ತು ಸ್ನೇಹಿತರ’ ಕಂಚಿನ ಪ್ರತಿಮೆಗಳ ಪ್ರತಿಷ್ಠಾಪನೆಗೆ ಸಿದ್ಧತೆ
ಮೈಸೂರು, ಮಾ. 6- ‘ಮಾಲ್ಗುಡಿ ಡೇಸ್’ ಖ್ಯಾತಿಯ ಇಂಗ್ಲಿಷ್ ಕಾದಂ ಬರಿಕಾರ ಆರ್.ಕೆ. ನಾರಾಯಣ್ ಯಾದವಗಿರಿ ನಿವಾಸದ ಬಳಿಯಿರುವ ವೃತ್ತದಲ್ಲಿ ಅವರ ಕಾದಂಬರಿಗಳಲ್ಲಿ ಬರುವ ಪ್ರಮುಖ ಪಾತ್ರಗಳಾದ ಸ್ವಾಮಿ ಮತ್ತು ಸ್ನೇಹಿತರ ಪ್ರತಿಮೆಗಳನ್ನು ಸ್ಥಾಪಿಸಿ ಪ್ರವಾಸಿಗರನ್ನು ಆಕರ್ಷಿಸಲು ಖಾಸಗಿ ಸಂಸ್ಥೆಯೊಂದರ ಸಹಕಾರದೊಂದಿಗೆ ಮೈಸೂರು ನಗರಪಾಲಿಕೆ ಸಜ್ಜಾಗಿದೆ.
ಕಲಾಭಿರುಚಿ ಹೊಂದಿರುವ ಉದ್ಯಮಿ ಪಿ.ವಿ. ಗಿರಿ ಅವರ ಕುಟುಂಬದ ಸಿದ್ಧಾರ್ಥ ಗ್ರೂಪ್ಸ್‍ನಿಂದ ಪ್ರತಿಮೆಗಳು ಈಗಾಗಲೇ ನಿರ್ಮಾಣವಾಗಿದ್ದು, ಸ್ಮಾರಕ ವಾಗಿ ರೂಪುಗೊಂಡಿರುವ ಆರ್.ಕೆ. ನಾರಾಯಣ್ ನಿವಾಸದ ಬಳಿ ಇರುವ ಕನ್ನಡ ನಾಡು ವೃತ್ತ ಸ್ವಾಮಿ ಮತ್ತು ಸ್ನೇಹಿತ ಪ್ರತಿಮೆಗಳ ಸ್ಥಾಪನೆಗಾಗಿ ಸಿದ್ಧಗೊಳ್ಳುತ್ತಿದೆ. ಇನ್ನೆರಡು ತಿಂಗಳಲ್ಲಿ ವೃತ್ತದ ಕಾಮಗಾರಿ ಪೂರ್ಣಗೊಂಡು ಸ್ವಾಮಿ ಮತ್ತು ಸ್ನೇಹಿತರ ಪ್ರತಿಮೆಗಳು ಸ್ಥಾಪನೆಯಾಗಿ ಪ್ರವಾಸಿಗರಿಗೆ ಈ ವೃತ್ತ ವಿಶೇಷ ಆಕರ್ಷಣೆ ಆಗಲಿದೆ.
ಬಿ.ಎಸ್. ಯಡಿಯೂರಪ್ಪ ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ವೇಳೆ ರಾಜ್ಯ ಸರ್ಕಾರವು ಯಾದವಗಿರಿಯಲ್ಲಿರುವ ಆರ್.ಕೆ. ನಾರಾಯಣ್ ನಿವಾಸವನ್ನು ಖರೀದಿಸಿ, ವಸ್ತು ಸಂಗ್ರಹಾಲಯವನ್ನಾಗಿ ಮಾಡಿತ್ತು. ಕಳೆದ ಮೂರು ವರ್ಷಗಳ ಹಿಂದೆಯೇ ಸಿದ್ಧಾರ್ಥ ಗ್ರೂಪ್ಸ್‍ನವರು ಈ ಸಂಗ್ರಹಾಲಯದ ಬಳಿ ಇರುವ ಕನ್ನಡ ನಾಡು ವೃತ್ತದಲ್ಲಿ ಆರ್.ಕೆ. ನಾರಾಯಣ್ ಅವರ ಪ್ರತಿಮೆ ಸ್ಥಾಪಿಸಲು ನಗರಪಾಲಿಕೆ ಮುಂದೆ ಪ್ರಸ್ತಾವನೆಯನ್ನು ಇಟ್ಟಿದ್ದರು. ಆದರೆ, ಕೆಲವು ಕಾನೂನು ತೊಡಕು ಗಳಿಂದ ಅದು ಸಾಧ್ಯವಾಗಲಿಲ್ಲ.ಆದರೆ, ಕನ್ನಡ ನಾಡು ವೃತ್ತದಲ್ಲಿ ಆರ್.ಕೆ. ನಾರಾಯಣ್ ಕಾದಂಬರಿಗಳ ಪಾತ್ರಧಾರಿ ಗಳಾದ ಸ್ವಾಮಿ ಮತ್ತು ಸ್ನೇಹಿತರ ಪ್ರತಿಮೆ ಗಳನ್ನು ಸ್ಥಾಪಿಸುವ ಪ್ರಸ್ತಾವನೆಗೆ ಫೆಬ್ರವರಿ ತಿಂಗಳ ಕೊನೆಯ ಕೌನ್ಸಿಲ್ ಸಭೆಯಲ್ಲಿ ಅನುಮೋದನೆ ದೊರೆತಿದೆ. ಯಾದವ ಗಿರಿಯ ಜಾಯ್ ಐಸ್‍ಕ್ರೀಂ ಕಾರ್ಖಾನೆ ರಸ್ತೆ, ವಿವೇಕಾನಂದ ರಸ್ತೆ, ರಾಮಕೃಷ್ಣ ಆಶ್ರಮ ರಸ್ತೆ ಹಾಗೂ ಯಾದವಗಿರಿ 2ನೇ ಮುಖ್ಯರಸ್ತೆ ಸೇರುವ ಕನ್ನಡ ನಾಡು ವೃತ್ತದಲ್ಲಿ ಸ್ಥಾಪಿಸಲು ಕಪ್ಪು ಬಣ್ಣದ ಲೋಹದಿಂದ ಕೂಡಿದ ಮೂರು ಪ್ರತಿಮೆ ಗಳನ್ನು ಈಗಾಗಲೇ ತಯಾರಿಸಲಾಗಿದೆ. ಸ್ವಾಮಿನಾಥನ್, ಮಣಿ ಮತ್ತು ರಾಜಮ್ ಪಾತ್ರಧಾರಿಗಳ ಪ್ರತಿಮೆಗಳು ಇವುಗಳಾ ಗಿದ್ದು, ಒಬ್ಬ ಬ್ಯಾಗ್ ಹಿಡಿದು ನಿಂತಿರುವಂತೆ, ಮತ್ತೋರ್ವ ಕಟ್ಟೆಯ ಮೇಲೆ ಕುಳಿತಿರು ವಂತೆ ಹಾಗೂ ಇನ್ನೋರ್ವ ನಿಂತಿರುವ ಪ್ರತಿಮೆಗಳನ್ನು ತಯಾರಿಸಲಾಗಿದೆ.
ನಗರಪಾಲಿಕೆಯಿಂದ ವೃತ್ತ ನಿರ್ಮಾಣ ಕಾರ್ಯ ಬಹುತೇಕ ಮುಗಿದಿದ್ದು, ವೃತ್ತ ದಲ್ಲಿ ಪ್ರತಿಮೆಗಳ ಸ್ಥಾಪನೆಯೊಂದೇ ಬಾಕಿ ಉಳಿದಿದೆ. ಈ ಕಾರ್ಯವು ಇನ್ನೆರಡು ತಿಂಗಳೊಳಗಾಗಿ ಪೂರ್ಣಗೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ. ಸಿದ್ಧಾರ್ಥ ಗ್ರೂಪ್ಸ್‍ನವರು ವೃತ್ತವನ್ನು ಸೌಂದರ್ಯೀ ಕರಣ ಮಾಡುತ್ತೇವೆ ಎಂದು ಮುಂದೆ ಬಂದಿದ್ದು, ಅದಕ್ಕೆ ಕೌನ್ಸಿಲ್‍ನಲ್ಲಿ ಒಪ್ಪಿಗೆ ದೊರೆತಿದೆ. ಕೆಲವೇ ದಿನಗಳಲ್ಲಿ ಕಾಮ ಗಾರಿ ಮುಗಿಯಲಿದ್ದು, ಈ ಸ್ಥಳವು ಪ್ರವಾಸಿ ಗರ ಆಕರ್ಷಣೆ ಆಗಲಿದೆ ಎಂದು ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ತಿಳಿಸಿದ್ದಾರೆ.
ಈ ಸಂಬಂಧ ಮಾತನಾಡಿರುವ ಪಾಲಿಕೆಯ ವಲಯ ಕಚೇರಿ-4ರ ವಲಯಾ ಧಿಕಾರಿ ಸುನಿಲ್, ಮೂರು ವರ್ಷಗಳಿಂದ ಮುಂದೂಡಲಾಗುತ್ತಿದ್ದ ಯೋಜನೆಗೆ ಈಗ ಕೌನ್ಸಿಲ್ ಒಪ್ಪಿಗೆ ಸಿಕ್ಕಿದೆ. ಈಗಾಗಲೇ ಪಾಲಿಕೆ ವತಿಯಿಂದ ವೃತ್ತ ನಿರ್ಮಾಣ ಕಾಮಗಾರಿ ಮುಗಿದಿದೆ. ಇನ್ನೆರಡು ತಿಂಗಳಲ್ಲಿ ಪ್ರತಿಮೆಗಳ ಸ್ಥಾಪನೆಯಾಗ ಲಿದೆ ಎಂದು ಹೇಳಿದ್ದಾರೆ.
ಉದ್ಯಮಿ ಪಿ.ವಿ. ಗಿರಿ ಕುಟುಂಬದವರು ಕಲಾಸಕ್ತರಾಗಿದ್ದು, 2002ರಲ್ಲಿ ವಿಂಡ್ ಫ್ಲವರ್ ರೆಸಾರ್ಟ್‍ನಲ್ಲಿ ಏಊಔಎ-2002 ಯಶಸ್ವಿ ಕಲಾ ಪ್ರದರ್ಶನ, ಕಾರ್ಯಾ ಗಾರವನ್ನು ಆಯೋಜಿಸಿದ್ದರು. ಈಗ ಆರ್.ಕೆ. ನಾರಾಯಣ್ ವಸ್ತು ಸಂಗ್ರಹಾ ಲಯದಲ್ಲಿ ಅವರ ಕಾದಂಬರಿಗಳ ಪಾತ್ರ ಧಾರಿಗಳ ಕಂಚಿನ ಪ್ರತಿಮೆಗಳನ್ನು ಸ್ಥಾಪಿಸುವ ಮೂಲಕ ಸಾರ್ವಜನಿಕ ಕಲಾ ಪ್ರತಿ ಷ್ಠಾಪನೆ ಮಾಡಿದ ಮೈಸೂರಿನ ಪ್ರಪ್ರಥಮ ಕುಟುಂಬ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.