ಪರೀಕ್ಷೆಯನ್ನು ಧೈರ್ಯದಿಂದ ಎದುರಿಸಿ: ಮೈಸೂರು ಎಸ್ಪಿ ರಿಷ್ಯಂತ್ ಕಿವಿಮಾತು
ಮೈಸೂರು

ಪರೀಕ್ಷೆಯನ್ನು ಧೈರ್ಯದಿಂದ ಎದುರಿಸಿ: ಮೈಸೂರು ಎಸ್ಪಿ ರಿಷ್ಯಂತ್ ಕಿವಿಮಾತು

March 7, 2020

ಮೈಸೂರು, ಮಾ.6- ಪರೀಕ್ಷೆ ಬರೆ ಯುವ ವೇಳೆ ಸಮಯ ವ್ಯರ್ಥ ಮಾಡದೇ ಗೊತ್ತಿರುವ ಪ್ರಶ್ನೆಗಳಿಗೆ ಮೊದಲು ಉತ್ತರಿಸಿ ಎಂದು ಜಿಲ್ಲಾ ಪೆÇಲೀಸ್ ವರಿ ಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ವಿದ್ಯಾರ್ಥಿ ಗಳಿಗೆ ಕಿವಿಮಾತು ಹೇಳಿದರು.

ಜ್ಞಾನಬುತ್ತಿ ಸಂಸ್ಥೆ ವತಿಯಿಂದ ಲಕ್ಷ್ಮೀಪುರಂ ಸರ್ಕಾರಿ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜು ಆವರಣದಲ್ಲಿ ಸಂಜೆ ಏರ್ಪಡಿಸಿದ್ದ  ಪೆÇಲೀಸ್ ಸಬ್‍ಇನ್ಸ್ ಪೆಕ್ಟರ್ ಪರೀಕ್ಷಾ ತರಬೇತಿ ಶಿಬಿರದ ಸಮಾ ರೋಪ ಮತ್ತು ಅಧ್ಯಯನ ಪುಸ್ತಕ ಬಿಡು ಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜೀವನದಲ್ಲಿ ಅಸಾಧ್ಯ ಎಂಬುವುದು ಯಾವುದು ಇಲ್ಲ. ನಾವು ಕಷ್ಟ ಪಟ್ಟು ಓದಿ ಸಂಪಾದಿಸಿದ ‘ಜ್ಞಾನ’ ಎಂದಿಗೂ ವ್ಯರ್ಥವಾಗುವುದಿಲ್ಲ. ಪಿಎಸ್‍ಐ ಪರೀಕ್ಷೆಗೆ ಒಂದು ದಿನ ಬಾಕಿ ಇದ್ದು, ನೀವು ಈವರೆಗೆ ಮಾಡಿರುವ ತಯಾರಿ ಹಾಗೂ ಓದಿರು ವುದನ್ನು ಮೆಲುಕು ಹಾಕಿ. ಜೊತೆಗೆ ಸಂಸ್ಥೆ ನೀಡಿರುವ ಅಧ್ಯಯನ ಪುಸ್ತಕವನ್ನು ಕಣ್ಣಾಡಿಸಿ ಎಂದು ಹೇಳಿದರು.

ಪರೀಕ್ಷೆ ವೇಳೆ ಪ್ರಶ್ನೆ ಪತ್ರಿಕೆಯಲ್ಲಿನ ಮೊದಲ ಹತ್ತು ಪ್ರಶ್ನೆಗಳನ್ನು ನೋಡಿ ಹಲವರು ಗಾಬರಿಯಾಗುವುದು ಇದೆ. ಇದ ರಿಂದ ಓದಿದ್ದನ್ನು ಮರೆಯುವ ಸಾಧ್ಯತೆಯೇ ಹೆಚ್ಚು. ಅದಕ್ಕಾಗಿ ತಾಳ್ಮೆಯಿಂದ ಪ್ರಶ್ನೆ ಪತ್ರಿಕೆಗೆ ನಿಗಧಿತ ಸಮಯದಲ್ಲಿ ಉತ್ತರಿ ಸುವ ಕೌಶಲ್ಯವನ್ನು ನೀವು ಬೆಳೆಸಿಕೊಳ್ಳ ಬೇಕು. 1 ಅಥವಾ 2 ಅಂಕಗಳ ಪ್ರಶ್ನೆಗೆ 5 ನಿಮಿಷ ಕಾಲಾಹರಣ ಮಾಡಿದರೆ ಪ್ರಯೋಜನವಿಲ್ಲ. ಗೊತ್ತಿರುವ ಪ್ರಶ್ನೆಗಳಿಗೆ ಮೊದಲು ಉತ್ತರಿಸಿ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಾರುಕಟ್ಟೆ ನಿಗಮದ ನಿರ್ದೇಶಕ ವೈ.ಎನ್. ಶಂಕರೇಗೌಡ, ಸಂಸ್ಥೆಯ ಪೆÇ್ರ. ಜಯಪ್ರಕಾಶ್, ಎಚ್.ಎಲ್. ಶೈಲಜಾ, ಪೆÇ್ರ. ಕೃ.ಪ. ಗಣೇಶ, ಜೈನಹಳ್ಳಿ ಸತ್ಯನಾರಾಯಣಗೌಡ ಇದ್ದರು. ನೀತು ನಾಗರಾಜು ಪ್ರಾರ್ಥನೆ ಮಾಡಿದರು.

Translate »