ತುಮಕೂರಲ್ಲಿ ಭೀಕರ ಅಪಘಾತ: 13 ಜನ ದುರ್ಮರಣ
ಮೈಸೂರು

ತುಮಕೂರಲ್ಲಿ ಭೀಕರ ಅಪಘಾತ: 13 ಜನ ದುರ್ಮರಣ

March 7, 2020

ತುಮಕೂರು, ಮಾ.6- ದೇವರ ದರ್ಶನ ಮುಗಿಸಿ ಬರುತ್ತಿದ್ದವರು ಅಪಘಾತಕ್ಕೊಳಗಾಗಿ ಮೃತಪಟ್ಟಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ಈ ಭೀಕರ ಅಪಘಾತದಲ್ಲಿ ಬಿಟ್ಟು 13 ಜನ ಮೃತಪಟ್ಟಿದ್ದಾರೆ.

ತುಮಕೂರಲ್ಲಿ ಭೀಕರ ಅಪಘಾತ ಸಂಭವಿಸಿದ್ದು 13 ಮಂದಿ ಮೃತಪಟ್ಟಿದ್ದಾರೆ. ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಬ್ಯಾಲದಕೆರೆ ಬಳಿ ಘಟನೆ ನಡೆದಿದ್ದು, ನಾಲ್ಕು ಯುವಕರಿದ್ದ ಕಾರು ರಸ್ತೆ ಡಿವೈಡರ್‍ಗೆ ಡಿಕ್ಕಿಯಾಗಿದೆ.

ಯುವಕರಿದ್ದ ಕಾರು ಮತ್ತೊಂದು ಟವೇರಾ ಕಾರಿಗೆ ಡಿಕ್ಕಿ ಹೊಡೆದು ಎರಡು ಕಾರಲ್ಲಿ 13 ಮಂದಿ ಸಾವನ್ನ ಪ್ಪಿದ್ದಾರೆ. ಹಲವರಿಗೆ ಗಾಯಗಳಾಗಿವೆ. ಎಲ್ಲರೂ ಧರ್ಮ ಸ್ಥಳದ ಪ್ರವಾಸ ಮುಗಿಸಿ ವಾಪಸ್ ಬರುತ್ತಿದ್ದರು.

ಟವೇರಾದಲ್ಲಿ ಮೃತಪಟ್ಟವರು: ಮಂಜುನಾಥ್ (35), ತನುಜ (25), ಒಂದು ವರ್ಷದ ಹೆಣ್ಣು ಮಗು, ಗೌರಮ್ಮ (60), ರತ್ನಮ್ಮ (52), ಸೌಂದರರಾಜ್ (48), ರಾಜೇಂದ್ರ 27), ಸರಳ (32), ಪ್ರಶನ್ಯಾ (14) ಮೃತಪಟ್ಟಿದ್ದಾರೆ. ಕಾರಿನಲ್ಲಿ ಮೃತಪಟ್ಟವರು: ಲಕ್ಷ್ಮಿ ಕಾಂತ್ (24), ಸಂದೀಪ (36), ಮಧು (28) ಗಾಯಗೊಡ ಟವೇರಾ ಪ್ರಯಾಣಿಕರು: ಶ್ವೇತಾ (32), ಅರ್ಪಿತಾ (12), ಮಾಲಾಶ್ರೀ (4), ಗಂಗೋತ್ರಿ (14).

ಅಪಘಾತ ವಲಯ ಎಂದು ಗುರುತಿಸಿದ ಪೆÇಲೀಸರು: ಅಪಘಾತ ನಡೆದ ಸ್ಥಳವನ್ನು ಅಪಘಾತ ವಲಯ ಎಂದು ಪೆÇಲೀಸರು ಗುರುತಿಸಿದ್ದಾರೆ. ಬ್ಯಾಲದ ಕೆರೆ ಬಳಿ ಒಂದೇ ತಿಂಗಳ ಅವಧಿಯಲ್ಲಿ 5ಕ್ಕೂ ಹೆಚ್ಚು ಅಪಘಾತ ನಡೆದು 17 ಜನ ಸಾವನ್ನಪ್ಪಿದ್ದಾರೆ. ರಸ್ತೆಯಲ್ಲಿ ಅತಿವೇಗವಾಗಿ ವಾಹನ ಚಲಾಯಿಸುತ್ತಾರೆ. ಬ್ಯಾಲದಕೆರೆ ಗೇಟ್‍ನ 1 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಪದೇ ಪದೆ ಅಪಘಾತ ನಡೆಯುತ್ತಿರುತ್ತವೆ. ರಸ್ತೆ ದಾಟುವುದಕ್ಕೆ ಭಯವಾಗುತ್ತದೆ. ಬೆಳಗ್ಗೆಯಿಂದ ರಾತ್ರಿವರೆಗೂ ಸದಾ ರಸ್ತೆಯಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿರುತ್ತದೆ ಎನ್ನಲಾಗಿದೆ.

ಮಕ್ಕಳ ಮೃತದೇಹಗಳನ್ನು ಕಂಡು ಬಿಕ್ಕಿ ಬಿಕ್ಕಿ ಅತ್ತ ಮಹಿಳಾ ಪೆÇಲೀಸ್: ಸಾವು ಎಂಥವರನ್ನೂ ಕಣ್ಣೀರು ತರಿಸುತ್ತದೆ. ಸಾವನ್ನಪ್ಪಿದವನು ಎಷ್ಟೇ ವಿರೋಧಿಯಾಗಿರಲಿ ಅಥವಾ ಪರಿಚಯ ಇಲ್ಲದವನೇ ಆಗಿರಲಿ. ಆದ್ರೆ ಆತನ ಮೃತದೇಹವನ್ನು ನೋಡಿದರೆ ಎಂಥವರಿಗೂ ಒಂದು ಬಾರಿ ಕಣ್ಣೀರು ಬರದೇ ಇರದು. ಹಾಗೆಯೇ ಕುಣಿಗಲ್ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟವ ರನ್ನು ಕಂಡು ಮಹಿಳಾ ಪೆÇಲೀಸರು ಕಣ್ಣೀರು ಹಾಕಿದ್ದಾರೆ.

ಕಣ್ಣೀರು ಹಾಕಿದ ಮಹಿಳಾ ಪೆÇಲೀಸ್‍ಗೆ ಅವರು ಯಾರು, ಎಲ್ಲಿಯವರೂ ಎಂಬುದು ಗೊತ್ತಿರಲಿಲ್ಲವೇ ನೋ. ಆದರೂ ಅಲ್ಲಿಯ ದಯನೀಯ ಸ್ಥಿತಿ ಕಂಡು ಮರುಗಿದ್ದಾರೆ. ಅಪಘಾತದ ರಭಸಕ್ಕೆ ಚೆಲ್ಲಾಪಿಲ್ಲಿಯಾಗಿ ಬಿದ್ದ ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಿ ಮರಣೋ ತ್ತರ ಪರೀಕ್ಷೆ ನಡೆಸಿದ್ದಾರೆ. ಈ ವೇಳೆ ಆಸ್ಪತ್ರೆಯಲ್ಲಿ ಪುಟ್ಟ ಪುಟ್ಟ ಮಕ್ಕಳ ಮೃತದೇಹಗಳನ್ನು ಕಂಡು ಮಹಿಳಾ ಪೆÇಲೀಸ್ ಅವರ ದುಃಖದ ಕಟ್ಟೆಯೊಡೆದಿದೆ.

ತುಮಕೂರಿನ ಕುಣಿಗಲ್ ತಾಲೂಕಿನ ಬ್ಯಾಲದ ಕೆರೆ ಬಳಿ ನಡೆದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ 8 ಮಂದಿ ಮೃತಪಟ್ಟಿದ್ದಾರೆ. ಮೃತದೇಹಗಳ ಮರಣೋ ತ್ತರ ಪರೀಕ್ಷೆ ನಡೆಸಿ, ಕುಟುಂಬಕ್ಕೆ ಹಸ್ತಾಂತರಿಸುವ ಮೊದಲು ತಾಲೂಕು ಆಸ್ಪತ್ರೆಯಲ್ಲಿದ್ದ ಮಕ್ಕಳ ಮೃತದೇಹ ಗಳನ್ನ ನೋಡಿ ಮಹಿಳಾ ಪೆÇೀಲಿಸ್ ಪೇದೆಯೊಬ್ಬರು ಕಣ್ಣೀರು ಸುರಿಸಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣ ಗಳಲ್ಲಿ ವೈರಲ್ ಆಗಿದ್ದು, ಕಣ್ಣೀರು ತರಿಸುವಂತಿದೆ.

Translate »