ಮೈಸೂರು, ಮಾ.6(ಎಸ್‍ಬಿಡಿ)- ಕರುನಾಡ ಸಂಸ್ಕೃತಿಗೆ ಮಾರುಹೋದ ಕಾಶ್ಮೀರಿ ಯುವಜನ, ಡೊಳ್ಳು, ಕಂಸಾಳೆ ಸದ್ದಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.
ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಸಂಘಟನೆ ಹಾಗೂ ನೆಹರು ಯುವ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿರುವ ಕಾಶ್ಮೀರಿ ಯುವಜನ ವಿನಿಮಯ ಕಾರ್ಯ ಕ್ರಮಕ್ಕೆ ಜಮ್ಮು-ಕಾಶ್ಮೀರದಿಂದ ಆಗಮಿಸಿ ರುವ 82 ವಿದ್ಯಾರ್ಥಿಗಳು ಮೈಸೂರಿನ ಗಂಗೋತ್ರಿ ಬಡಾವಣೆಯ ಯೂತ್ ಹಾಸ್ಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಶುಕ್ರವಾರ ಸಂಜೆ ಕಾಶ್ಮೀರಿ ಯುವಕ- ಯುವತಿಯರಿಗೆ ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ ಆತ್ಮೀಯವಾಗಿ ಅಭಿನಂದಿಸಲಾ ಯಿತು. ಈ ಮೂಲಕ 6 ದಿನಗಳ ಕಾರ್ಯ ಕ್ರಮಕ್ಕೆ ವಿದ್ಯುಕ್ತ ಚಾಲನೆ ದೊರಕಿತು.
ಮೈಸೂರಿನ ಹೃದಯಸ್ಪರ್ಶಿ ಅಪ್ಪುಗೆಗೆ ರೋಮಾಂಚನಗೊಂಡ ಕಾಶ್ಮೀರಿ ಯುವಜನ, ಇಲ್ಲಿನ ಪರಿಸರ, ಪರಂಪರೆ, ಸಂಸ್ಕೃತಿ, ಆಚರಣೆಗಳನ್ನು ಕೊಂಡಾಡಿ ದರು. ಮೈಸೂರು ಪೇಟ, ಶಾಲಿನಿಂದ ತಮ್ಮ ಸೌಂದರ್ಯ ಹೆಚ್ಚುವುದರ ಜೊತೆಗೆ ಗಾಂಭೀರ್ಯದ ಅನುಭವವಾದಂತೆ ಕುಳಿತಲ್ಲೇ ಸೆಲ್ಫೀ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿ ದರು. ಕರುನಾಡ ಕಲೆಗೆ ಮನಸೋತರು.
ಸುಮಂತ್ ನೇತೃತ್ವದ ಯುವ ಕಲರವ ತಂಡ ಹಾಗೂ ಮಹಾರಾಣಿ ಕಲಾ ಕಾಲೇಜಿನ ವಿದ್ಯಾರ್ಥಿನಿಯರು ಪ್ರದರ್ಶಿಸಿದ ಕಂಸಾಳೆ, ಡೊಳ್ಳು ಕುಣಿತ, ವೀರಗಾಸೆಗೆ ಮರುಳಾ ದರು. ವೀರಗಾಸೆ ಕಲಾವಿದರ ಹೆಜ್ಜೆಗೆ ಪುಳಕಿತರಾಗಿ ಅವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡರು. ಡೊಳ್ಳು, ಕಂಸಾಳೆ ಸದ್ದಿಗೆ ತಾವೂ ಕುಣಿದು ಗಮನ ಸೆಳೆದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ನೆಹರು ಯುವ ಕೇಂದ್ರ ಸಂಘಟನೆಯ ರಾಜ್ಯ ನಿರ್ದೇಶಕ ಅತುಲ್ ಜೆ.ನಿಕಂ ಮಾತನಾಡಿ, ದೇಶದ ಐಕ್ಯತೆಗೆ ಈ ರೀತಿಯ ಸಂಸ್ಕೃತಿ ವಿನಿಮಯ ಕಾರ್ಯ ಕ್ರಮಗಳು ಸಹಕಾರಿ. ದೇಶದ ಯಾವುದೇ ಪ್ರದೇಶದ ಯುವ ಸಮೂಹಕ್ಕೆ ಎಲ್ಲೇ ಹೋದರೂ ಕೆಲಸ ಸಿಗಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಆಶಯ ಹಾಗೂ ಉದ್ದೇಶ. ಈ ನಿಟ್ಟಿನಲ್ಲಿ ಕಾಶ್ಮೀರಿ ಯುವಜನ ವಿನಿಮಯ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ವಿವರಿಸಿದರು.
ನೆಹರು ಯುವ ಕೇಂದ್ರದ ಸಮನ್ವಯಾ ಧಿಕಾರಿ ಎಸ್.ಸಿದ್ದರಾಮಯ್ಯ ಮಾತನಾಡಿ, ಈ ಕಾರ್ಯಕ್ರಮದಡಿ ಕಾಶ್ಮೀರದ ಅನಂತ ನಾಗ್, ಶ್ರೀನಗರ, ಪುಲ್ವಾಮ ಸೇರಿದಂತೆ 6 ಜಿಲ್ಲೆಗಳ 132 ಯುವಜನ ಮೈಸೂರಿಗೆ ಆಗಮಿಸಲಿದ್ದು, ಈಗಾಗಲೇ 82 ಮಂದಿ ಬಂದಿದ್ದಾರೆ. ಶನಿವಾರ ಬೆಳಿಗ್ಗೆ 2 ತಂಡ ಗಳಲ್ಲಿ ವಿದ್ಯಾರ್ಥಿಗಳು ಆಗಮಿಸಲಿ ದ್ದಾರೆ. ಮಾ.11ರವರೆಗೆ ಇಲ್ಲೇ ವಾಸ್ತವ್ಯ ವಿದ್ದು, ಇಲ್ಲಿನ ಕಲೆ, ಸಂಸ್ಕೃತಿ, ಪರಂಪರೆಯ ಬಗ್ಗೆ ತಿಳಿದುಕೊಳ್ಳಲಿದ್ದಾರೆ ಎಂದು ತಿಳಿಸಿದರು.
ಕಾಶ್ಮೀರದ ಶ್ರೀನಗರದ ನಜೀಮಾ ಬಷೀರ್, ಕುಪ್ವಾರದ ತಾರೀಖ್ ಅಹಮ್ಮದ್, ಸಿರಾಜ್ ಅಹಮ್ಮದ್, ರಿಯಾಜ್ ಮಲ್ಲಿಕ್, ಹಾಗೂ ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತೆ ಮೈಸೂರಿನ ಅನುಪಮಾ, ಮಹಾರಾಣಿ ಕಾಲೇಜಿನ ಪ್ರಾಧ್ಯಾಪಕಿ ಮನ್ಮೋಮಣಿ, ಮಂಜುಳಾ ರಮೇಶ್, ರುಕ್ಮಿಣಿ ಚಂದ್ರನ್, ವರಕೋಡು ಪ್ರಕಾಶ್, ಲೀಲಾ ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.