ಕೊರೊನಾ: ಮೈಸೂರಲ್ಲಿ ಕಟ್ಟೆಚ್ಚರ, ಜನತೆಗೆ ಭಯಬೇಡ
ಮೈಸೂರು

ಕೊರೊನಾ: ಮೈಸೂರಲ್ಲಿ ಕಟ್ಟೆಚ್ಚರ, ಜನತೆಗೆ ಭಯಬೇಡ

March 7, 2020

ಮೈಸೂರು,ಮಾ.6(ಎಂಟಿವೈ)- ಮೈಸೂರು ಜಿಲ್ಲೆಯಲ್ಲಿ ಕೊರೊನಾ ವೈರಸ್ ಹರಡದಂತೆ ಕಟ್ಟೆಚ್ಚರ ವಹಿಸ ಲಾಗಿದ್ದು, ಜನತೆ ಭಯಪಡುವ ಅಗತ್ಯ ವಿಲ್ಲ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಅವರು, ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಎಲ್ಲಾ ಜಿಲ್ಲಾಧಿಕಾರಿಗಳ ಜತೆ ವಿಡಿಯೊ ಕಾನ್ಫ ರೆನ್ಸ್ ನಡೆಸಿ ಕೊರೊನಾ ವಿಚಾರದಲ್ಲಿ ಅಗತ್ಯ ಮುಂಜಾಗ್ರತಾ ಕ್ರಮವಹಿಸುವಂತೆ ಸೂಚಿಸಿದ್ದಾರೆ. ಜಿಲ್ಲೆಯ ಜನರ ಹಿತ ಕಾಪಾಡಲು ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಈವರೆಗೆ ಒಂದೂ ಕೊರೊನಾ ಪ್ರಕರಣ ಪತ್ತೆಯಾಗಿಲ್ಲ ಎಂದರು.

ವಿದೇಶದಿಂದ ಬರುವವರಲ್ಲಿ ಕೊರೊನಾ ಸೋಂಕಿರುವ ಸಾಧ್ಯತೆಯಿರುತ್ತದೆ. ಈ ವ್ಯಕ್ತಿ ಗಳು ಮತ್ತು ಅವರ ಕುಟುಂಬದವರನ್ನು ಅವರದೇ ಮನೆಯಲ್ಲಿಟ್ಟು 2 ವಾರ ಗಮನಿಸ ಲಾಗುತ್ತದೆ. ಸೋಂಕಿತರಿದ್ದರೆ ಚಿಕಿತ್ಸೆ ನೀಡಲು `ಇಡಿ’ (ಸಾಂಕ್ರಾಮಿಕ ರೋಗಗಳ) ಆಸ್ಪತ್ರೆ ಯಲ್ಲಿ 10 ಬೆಡ್‍ಗಳ ಐಸೋಲೇಷನ್ ವಾರ್ಡ್ ಸಿದ್ಧಪಡಿಸಲಾಗಿದೆ. ತೀವ್ರ ಸೋಂಕು ಬಾಧಿತ ವ್ಯಕ್ತಿ ಚಿಕಿತ್ಸೆಗೆ ಕೆಆರ್‍ಎಸ್ ಆಸ್ಪತ್ರೆಯಲ್ಲಿ 5 ಬೆಡ್ ಹಾಗೂ ಒಂದು ವೆಂಟಿಲೇಟರ್ ಕಾಯ್ದಿರಿಸಲಾಗಿದೆ ಎಂದು ವಿವರಿಸಿದರು.

ಮೈಸೂರಿನ ಪ್ರವಾಸಿತಾಣಗಳ ವೀಕ್ಷಣೆ ಗೆಂದು ಜಿಲ್ಲೆಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆ ಯಲ್ಲಿ ಬರುತ್ತಾರೆ. ಬೆಂಗಳೂರು, ಮಂಗ ಳೂರು ವಿಮಾನ ನಿಲ್ದಾಣಗಳಲ್ಲಿ ಸ್ವಯಂ ಪ್ರೇರಿತವಾಗಿ ತಪಾಸಣೆ ಮಾಡಿಸಿಕೊಳ್ಳುತ್ತಿ ದ್ದಾರೆ. ಅಲ್ಲಿಂದಲೂ ನಿತ್ಯ ಮಾಹಿತಿ ಪಡೆ ಯುತ್ತಿದ್ದೇವೆ ಎಂದರು.

ಕೊರೊನಾ ವೈರಸ್ ಪತ್ತೆ ಎಂದು ವೈದ್ಯರು ತಿಳಿಸಿದ್ದಾರೆಂದು ವಾಟ್ಸಪ್, ಟ್ವಿಟರ್, ಫೇಸ್ ಬುಕ್‍ನಲ್ಲಿ ಸುಳ್ಳು ಮಾಹಿತಿ ಹರಿದಾಡು ತ್ತಿದೆ. ಮೈಸೂರಿನಲ್ಲಿ ಒಂದೂ ಪ್ರಕರಣ ಪತ್ತೆಯಾಗಿಲ್ಲ. ಜನರು ಆತಂಕಪಡಬೇಕಿಲ್ಲ ಎಂದು ಸ್ಪಷ್ಟಪಡಿಸಿದರು.

ವಿಶ್ವ ಆರೋಗ್ಯ ಸಂಸ್ಥೆಯ ಸೂಚನೆ ಯಂತೆ ಕಂದಾಯ, ಆರೋಗ್ಯ ಇಲಾಖೆ ಗಳಿಗೆ ಇಂಗ್ಲೀಷ್ ಮತ್ತು ಕನ್ನಡ ಪೆÇೀಸ್ಟರ್ ಗಳನ್ನು ನೀಡಲಾಗಿದೆ. ಶಾಲೆ, ಅಂಗನ ವಾಡಿ, ಆಸ್ಪತ್ರೆಗಳು, ಇಲಾಖೆ ಕಚೇರಿ ಸೂಚನಾ ಫಲಕಗಳಲ್ಲಿ ಅಳವಡಿಸುವ ಮೂಲಕ ಜನರಲ್ಲಿ ಅರಿವು ಮೂಡಿಸಿ ಎಂದು ಸೂಚನೆ ನೀಡಿದರು.

ಆರೋಗ್ಯಕ್ಕೆ ಸಂಬಂಧಿಸಿ ಜನರಲ್ಲಿ ಅರಿವು ಮೂಡಿಸಲು ವಾರ್ತಾ ಇಲಾಖೆಗೆ ಸಹ ಕರಪತ್ರ ನೀಡಲಾಗಿದೆ. ಮಾಧ್ಯಮದವರೂ ಸಹಕರಿಸಬೇಕು. ಜನರು ಓಡಾಡುವ ಸ್ಥಳ ದಲ್ಲಿ ಯಾರೂ ಉಗುಳಬಾರದು. ಕರವಸ್ತ್ರ ವನ್ನು ಇಟ್ಟುಕೊಂಡು ಕೆಮ್ಮು, ಸೀನು ಬಂದಾಗ ಬಳಸಬೇಕು. ಕೈಗಳನ್ನು ಸೋಪಿ ನಿಂದ ಪದೇ ಪದೇ ತೊಳೆಯುತ್ತಿರಬೇಕು ಎಂದು ಮುಂಜಾಗರೂಕತಾ ಕ್ರಮಗಳನ್ನು ಜಿಲ್ಲಾಧಿಕಾರಿಗಳು ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೆಂಕಟೇಶ್, ಜಿಲ್ಲಾ ರೋಗವಾಹಕ ನಿಯಂತ್ರಣಾಧಿಕಾರಿ ಡಾ.ಚಿದಂಬರ, ಆರ್‍ಸಿಹೆಚ್ ಅಧಿಕಾರಿ ಡಾ.ಎಲ್.ರವಿ, ತಾಲೂಕು ಆರೋಗ್ಯಾ ಧಿಕಾರಿ ಡಾ.ಪಿ.ರವಿ, ಡಿಡಿಪಿಐ ಪಾಂಡು ರಂಗ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತಿಯಲ್ಲಿದ್ದರು.

ಮೈಸೂರು ಜಿಲ್ಲೆಯಲ್ಲಿ ಲಸಿಕಾ  ಅಭಿಯಾನ ಯಶಸ್ಸಿಗೆ ಶ್ರಮಿಸಿ
ಜಂಟಿ ಸಭೆಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಡಿಸಿ ಸೂಚನೆ
ಮೈಸೂರು,ಮಾ.6(ಎಂಟಿವೈ)- ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಮಕ್ಕಳು ಹಾಗೂ ಗರ್ಭಿಣಿಯರ ಆರೋಗ್ಯ ಕಾಪಾಡಲು ತಪ್ಪದೇ ಸಕಾಲಕ್ಕೆ ಲಸಿಕೆಗಳನ್ನು ಹಾಕುವುದಕ್ಕೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಸೂಚನೆ ನೀಡಿದ್ದಾರೆ.

ಡಿಸಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಆರೋಗ್ಯ-ಕುಟುಂಬ ಕಲ್ಯಾಣ ಸೊಸೈಟಿ, ಜಿಲ್ಲಾ ಹೆಲ್ತ್ ಮಿಷನ್ ಮತ್ತು ಜಿಲ್ಲಾ ಲಸಿಕಾ ಕಾರ್ಯಪಡೆ ಜಂಟಿ ಸಭೆ ನಡೆಸಿದ ಅವರು, ಆರೋಗ್ಯ ಇಲಾಖೆ ನಿಗದಿಪಡಿಸಿದಂತೆ ಮಕ್ಕಳಿಗೆ ಸಕಾಲಕ್ಕೆ ಲಸಿಕೆ ಹಾಕಬೇಕು. ಗ್ರಾಮೀಣ, ಗುಡ್ಡಗಾಡು, ಹಾಡಿ, ನಗರ, ಕೊಳಚೆ ಪ್ರದೇಶ ಮೊದಲಾದೆಡೆ ಲಸಿಕಾ ತಂಡ ಭೇಟಿ ನೀಡಿದಾಗ ಪೋಷಕರು ಸಹಕರಿಸಬೇಕು. ಗೊಂದಲ, ವದಂತಿಗೆ ಕಿವಿಗೊಡದೆ, ಮಕ್ಕಳು ಮತ್ತು ಗರ್ಭಿಣಿಯರಿಗೆ ಲಸಿಕೆ ಹಾಕಿಸಿ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಸಹಕರಿಸಬೇಕು ಎಂದರು.

ಆರ್‍ಸಿಹೆಚ್ ಅಧಿಕಾರಿ ಡಾ.ಎಲ್.ರವಿ ಮಾತನಾಡಿ, ಮಿಷನ್ `ಇಂದ್ರಧನುಶ್ 2.0’ ಅಭಿಯಾನ 4 ಹಂತಗಳಲ್ಲಿ ನಡೆದಿದೆ. ಡಿಸೆಂಬರ್, ಜನವರಿ, ಫೆಬ್ರವರಿ, ಮಾರ್ಚ್ ತಿಂಗಳಲ್ಲಿ ಅಭಿಯಾನ ನಿಗದಿಯಾಗಿದೆ. ಜಿಲ್ಲೆಯಲ್ಲಿ ಮೊದಲ ಸುತ್ತಿನಲ್ಲಿ ಶೇ.101ರಷ್ಟು ಮಕ್ಕಳಿಗೆ ಹಾಗೂ ಶೇ.100ರಷ್ಟು ಗರ್ಭಿಣಿಯರಿಗೆ, 2ನೇ ಸುತ್ತಿನಲ್ಲಿ ಶೇ.101.01ರಷ್ಟು ಮಕ್ಕಳಿಗೆ, ಶೇ.103.20ರಷ್ಟು ಗರ್ಭಿಣಿಯರಿಗೆ ಹಾಗೂ 3ನೇ ಹಂತದಲ್ಲಿ ಶೇ.100.87ರಷ್ಟು ಮಕ್ಕಳಿಗೆ, ಶೇ.101ರಷ್ಟು ಗರ್ಭಿಣಿಯರಿಗೆ ಲಸಿಕೆ ನೀಡಲಾಗಿದೆ. ಇದೀಗ 4ನೇ ಸುತ್ತಿನ ಅಭಿಯಾನ ಆರಂಭವಾಗಿದ್ದು, 3ನೇ ದಿನಕ್ಕೆ ಶೇ.68.63ರಷ್ಟು ಮಕ್ಕಳಿಗೆ ಹಾಗೂ ಶೇ.74ರಷ್ಟು ಗರ್ಭಿಣಿಯರಿಗೆ ಲಸಿಕೆ ನೀಡಲಾಗಿದೆ ಎಂದರು.

ಶಾಲಾ ಲಸಿಕಾ ಅಭಿಯಾನದಲ್ಲಿ 5ರಿಂದ 15 ವರ್ಷದವರಿಗೆ ಡಿಪಿಟಿ ಲಸಿಕೆ ಪ್ರಮಾಣ ಶೇ.116.6ರಷ್ಟು, ಐದನೇ ತರಗತಿಯ ಮಕ್ಕಳಿಗೆ ಟಿಡಿ ಲಸಿಕೆ ನೀಡಿಕೆ ಶೇ.156.2ರಷ್ಟು ಹಾಗೂ 16 ವರ್ಷದ ಮಕ್ಕಳಿಗೆ ಶೇ.114.1ರಷ್ಟು ಲಸಿಕೆ ನೀಡುವ ಮೂಲಕ ಗುರಿ ಸಾಧಿಸಲಾಗಿದೆ ಎಂದು ಡಿಸಿ ಅಭಿರಾಮ್ ಶಂಕರ್ ವಿವರಿಸಿದರು.

ತಾಲೂಕು ಆರೋಗ್ಯಾಧಿüಕಾರಿ ಡಾ.ಪಿ.ರವಿ ಮಾತನಾಡಿ, ಮೈಸೂರು ನಗರವನ್ನು ಕ್ಷಯಮುಕ್ತವಾಗಿಸಲು ಕ್ರಿಯಾ ಯೋಜನೆ ರೂಪಿಸಲಾಗಿದೆ. ಕ್ಷಯ ಲಕ್ಷಣ ಕಂಡ ಕೂಡಲೇ ತಪಾಸಣೆ ಮಾಡಿಸಿಕೊಳ್ಳುವಂತೆ ಅರಿವು ಮೂಡಿಸಲಾಗುತ್ತಿದೆ ಎಂದರು. ವೈದ್ಯರ ಸಲಹೆ ನಿರ್ಲಕ್ಷಿಸದೆ, ಗಂಭೀರವಾಗಿ ಪರಿಗಣಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು. ಸಭೆಯಲ್ಲಿ ಡಿಹೆಚ್‍ಒ ಡಾ.ವೆಂಕಟೇಶ್, ಡಿಡಿಪಿಐ ಪಾಂಡು ರಂಗ ಮತ್ತಿತರ ಅಧಿಕಾರಿಗಳು ಪಾಲ್ಗೊಂಡಿದ್ದರು.

Translate »