ಮೈಸೂರು,ಮಾ.6(ಎಸ್‍ಬಿಡಿ)- ಯೆಸ್ ಬ್ಯಾಂಕ್ ಮೈಸೂರು ಶಾಖೆಯಲ್ಲೂ ಶುಕ್ರವಾರ ನೂರಾರು ಗ್ರಾಹಕರು ಜಮಾ ವಣೆಗೊಂಡಿದ್ದರು. ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಖಾಸಗಿ ವಲಯದ `ಯೆಸ್ ಬ್ಯಾಂಕ್’ನ ಆಡಳಿತ ಮಂಡಳಿ ಯನ್ನು ಅಮಾನತುಗೊಳಿಸಿ, ವಿತ್ ಡ್ರಾ ಮಿತಿಯನ್ನು 50 ಸಾವಿರ ರೂ.ಗೆ ಮಿತಿಗೊಳಿ ಸಿದ ಸುದ್ದಿ ತಿಳಿಯುತ್ತಿದ್ದಂತೆಯೇ ಗ್ರಾಹ ಕರು ಆತಂಕದಿಂದ ಮೈಸೂರಿನ ಕಾಳಿ ದಾಸ ರಸ್ತೆಯಲ್ಲಿರುವ ಬ್ಯಾಂಕ್ ಶಾಖೆ ಯತ್ತ ದೌಡಾಯಿಸಿದರು.
ಬ್ಯಾಂಕ್ ಹೊರಗಡೆ ಅಂಟಿಸಿದ್ದ ನೋಟಿಸ್ ಗಮನಿಸಿ, ಒಳಹೋಗಿ ಸಿಬ್ಬಂದಿಯಿಂದ ಹೆಚ್ಚಿನ ವಿವರ ಪಡೆದರು. ಹಲವರು ಮನೆಗೆ ವಾಪಸ್ ಹೋಗಿ ಚೆಕ್ ತಂದು, ಹಣ ಪಡೆದುಕೊಂಡರು. ಸಂಜೆ 4.30ರವರೆಗೂ ನೂರಾರು ಗ್ರಾಹಕರು ತಲಾ 50 ಸಾವಿರ ರೂ.ನಂತೆ ಹಣ ಡ್ರಾ ಮಾಡಿಕೊಂಡರು. ಯಾವುದೇ ಗಲಾಟೆ-ಗದ್ದಲವಿರಲಿಲ್ಲ. ವಾರಾಂತ್ಯ ಶನಿವಾರ ಗ್ರಾಹಕರ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ.
ಬ್ಯಾಂಕ್ ಆಡಳಿತ ಮಂಡಳಿಯನ್ನು ಆರ್‍ಬಿಐ ಅಮಾನತುಗೊಳಿಸಿರುವ ಕಾರಣ ಸದ್ಯ ಯಾವುದೇ ಸಾಲ ಅಥವಾ ಮುಂಗಡ ವನ್ನು ನೀಡಲು, ನವೀಕರಿಸಲು, ಯಾವುದೇ ಹೂಡಿಕೆ ಮಾಡಲು, ಹೊಣೆಗಾರಿಕೆ ಹೊಂದಲು ಅಥವಾ ಯಾವುದೇ ಪಾವತಿಯನ್ನು ವಿತರಿ ಸಲು ಸಾಧ್ಯವಾಗುತ್ತಿಲ್ಲ. ಆರ್‍ಬಿಐ ಅಧಿಕಾರಿ ಗಳು ಹಾಗೂ ಕೇಂದ್ರ ಹಣಕಾಸು ಸಚಿವರು ಆದಷ್ಟೂ ಬೇಗ ಎಲ್ಲವನ್ನೂ ಸರಿಪಡಿಸುವು ದಾಗಿ ಭರವಸೆ ನೀಡಿದ್ದಾರೆ. ಎಟಿಎಂ ಹಾಗೂ ಆನ್‍ಲೈನ್ ವ್ಯವ ಹಾರವನ್ನೂ 50 ಸಾವಿರ ರೂ.ಗೆ ಮಿತಿ ಗೊಳಿಸು