ಮೈಸೂರು,ಜು.17(ಎಂಕೆ)-ಅಪರಿಚಿತ ಕಾರೊಂದು ಎರಡು ಬೈಕ್‍ಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲಿಯೇ ಮೃತಪಟ್ಟು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಪಿರಿಯಾಪಟ್ಟಣದ ಬಸಲಾಪುರ ಗೇಟ್ ಬಳಿ ಬುಧವಾರ ನಡೆದಿದೆ. ಪಿರಿಯಾಪಟ್ಟಣದ ಪರಿವಾರ ಬೀದಿ ನಿವಾಸಿ, ಕುಮಾರ ನಾಯಕ ಅವರ ಪುತ್ರ ಪ್ರಮೋದ್(18), ಹುಣಸೂರಿನ ಮಂಜುನಾಥ ಬಡಾವಣೆ ನಿವಾಸಿ ರಾಜಣ್ಣ ಅವರ ಪುತ್ರ ದರ್ಶನ್(20) ಮೃತಪಟ್ಟವರು. ಗಾಯಗೊಂಡವರು ವಿನಯ್ ಮತ್ತು ವಿಕಾಸ್ ಎಂದು ಪೊಲೀಸರು ಗುರುತಿಸಿದ್ದಾರೆ. ಮೃತ ಯುವಕ ಪ್ರಮೋದ್ ತನ್ನ ಸ್ನೇಹಿತರೊಂದಿಗೆ ಕಂಪಲಾಪುರದಲ್ಲಿ ಹುಟ್ಟು ಹಬ್ಬ ಆಚರಿಸಲು…
ಸುಪ್ರೀಂಕೋರ್ಟ್ ಇಂದು ಮಹತ್ವದ ತೀರ್ಪು
July 17, 2019ನವದೆಹಲಿ, ಜು.16- ಅತೃಪ್ತ ಕಾಂಗ್ರೆಸ್-ಜೆಡಿಎಸ್‍ನ 15 ಶಾಸಕರ ರಾಜೀನಾಮೆ ಅಂಗೀಕಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಾಳೆ ಬೆಳಿಗ್ಗೆ ತೀರ್ಪು ಪ್ರಕಟಿಸಲಿದೆ. ಈ ತೀರ್ಪು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾ ರದ ಅಳಿವು ಉಳಿವಿನ ಪ್ರಶ್ನೆಯಾಗಿದೆ. ರಾಜೀನಾಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ವಾದ-ಪ್ರತಿವಾದ ಮುಗಿಸಿ, ತೀರ್ಪು ಕಾಯ್ದಿರಿಸುತ್ತಿದ್ದಂತೆ ಇತ್ತ ಉಭಯ ಪಕ್ಷಗಳ 15 ಬಂಡಾಯ ಶಾಸಕರಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರತ್ಯೇಕವಾಗಿ ವ್ಹಿಪ್ ಜಾರಿ ಮಾಡಿ, ಚದುರಂಗದ ಆಟದಲ್ಲಿ ದಾಳ ಹಾಕಿದೆ. ಬುಧವಾರ ನೀಡಲಿರುವ ತೀರ್ಪು…
ಸರ್ಕಾರದ ಪತನದ ಭೀತಿಯ ನಡುವೆಯೇ ಪೊಲೀಸರಿಗೆ ಶೇ.12.5ರಷ್ಟು ವೇತನ ಹೆಚ್ಚಳ
July 17, 2019ಬೆಂಗಳೂರು, ಜು.16-ಸರ್ಕಾರದ ಪತನದ ಭೀತಿಯ ನಡುವೆಯೇ ಪೊಲೀಸರಿಗೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಸರ್ಕಾರ ಬಂಪರ್ ಕೊಡುಗೆ ನೀಡಿದೆ. ಧೂಳು ಹಿಡಿದಿದ್ದ ಔರಾದ್ಕರ್ ಸಮಿತಿ ಶಿಫಾರಸ್ಸನ್ನು ಭಾಗಶಃ ಮಾನ್ಯ ಮಾಡಿ, ಪೊಲೀಸರಿಗೆ ಶೇ. 12.5 ರಷ್ಟು ವೇತನ ಹೆಚ್ಚಳ ಮಾಡಿ, ಆದೇಶ ಹೊರಡಿಸಿದೆ. ಇದಲ್ಲದೆ, ವೇತನದ ಜೊತೆಗೆ ಅವರಿಗೆ ಸರ್ಕಾರಿ ನೌಕರರಿಗೆ ಸಿಗುವ ಇತರೆ ಸವಲತ್ತುಗಳಲ್ಲೂ ಹೆಚ್ಚಳ ಮಾಡಿದ್ದು, ಇದರಿಂದ ಪೊಲೀಸರು ಒಂದಷ್ಟು ನಿರಾಳವಾದಂತೆ ಮಾಡಿದ್ದಾರೆ. ಸರ್ಕಾರದ ಈ ನಿರ್ಧಾರ ದಿಂದ 600 ಕೋಟಿ ರೂ. ವಾರ್ಷಿಕ…
ಪ್ರತಿಭಟನೆ ಕೈಬಿಟ್ಟ ಶಾಲಾ ಮಕ್ಕಳ ವಾಹನ ಚಾಲಕರು
July 17, 2019ಮೈಸೂರು, ಜು.16(ಆರ್‍ಕೆಬಿ)-ಓಮ್ನಿ ವಾಹನ ದಲ್ಲಿ 12 ಮಕ್ಕಳು, ಆಟೋಗಳಲ್ಲಿ 8 ಮಕ್ಕಳನ್ನು ಕರೆದೊಯ್ಯಲು ಅನುಮತಿ ನೀಡುವಂತೆ ಆಗ್ರಹಿಸಿ ಶಾಲಾ ಮಕ್ಕಳ ಸಾಗಿಸುವ ಓಮ್ನಿ ಮತ್ತು ಆಟೋ ಚಾಲಕರು ಸೋಮವಾರದಿಂದ ಕೈಗೊಂಡಿದ್ದ ಅನಿರ್ದಿಷ್ಟಾವಧಿ ಧರಣಿಯನ್ನು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಭರವಸೆ ಮೇರೆಗೆ ಇಂದು ಕೈಬಿಟ್ಟು ಮಕ್ಕಳನ್ನು ಕರೆದೊಯ್ಯುವ ಕಾರ್ಯಕ್ಕೆ ಮರಳಿದರು. ಓಮ್ನಿ ವಾಹನದಲ್ಲಿ 8 ಮತ್ತು ಆಟೋಗಳಲ್ಲಿ 5 ಮಕ್ಕಳನ್ನು ಕರೆದೊಯ್ಯಲಾಗುತ್ತಿದ್ದು, ಇದರಿಂದ ನಮ್ಮ ಜೀವನ ನಿರ್ವಹಿಸುವುದು ಕಷ್ಟವಾಗಿದೆ. ಮಕ್ಕಳನ್ನು ಕಾನೂನು ಬದ್ಧವಾಗಿ ಜವಾಬ್ದಾರಿಯಿಂದ ಶಾಲೆಗೆ ಕರೆದೊಯ್ದು ಮತ್ತೆ…
ಮೈಸೂರು ವಿವಿ ಶತಮಾನೋತ್ಸವ ಘಟಿಕೋತ್ಸವಕ್ಕೆಪ್ರಧಾನಿ ಮೋದಿ ಅವರಿಗೆ ಆಹ್ವಾನ
July 17, 2019ಮೈಸೂರು,ಜು.16(ಎಸ್‍ಬಿಡಿ)- ಮೈಸೂರು ವಿಶ್ವವಿದ್ಯಾನಿಲಯದ ಶತಮಾ ನೋತ್ಸವ ಘಟಿಕೋತ್ಸವಕ್ಕೆ ಪ್ರಧಾನಿ ಮೋದಿ ಅವರನ್ನು ಆಹ್ವಾನಿಸಲಾಗಿದೆ. ಮೈಸೂರು ವಿವಿ ಕುಲಪತಿ ಪ್ರೊ.ಜಿ. ಹೇಮಂತ್‍ಕುಮಾರ್ ಅವರು ಸೋಮ ವಾರ ನವದೆಹಲಿಯಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ, 2020ರಲ್ಲಿ ಜರುಗುವ ವಿವಿಯ ಶತಮಾನೋತ್ಸವ ಘಟಿಕೋತ್ಸವಕ್ಕೆ ಸಾಕ್ಷಿಯಾಗಬೇಕೆಂಬ ಮನವಿಯೊಂದಿಗೆ ಅವರನ್ನು ಅಧಿಕೃತ ವಾಗಿ ಆಹ್ವಾನಿಸಿದರು. ಸಂತಸದಿಂದಲೇ ಆಹ್ವಾನ ಸ್ವೀಕರಿಸಿದ ಮೋದಿ ಅವರು, ಕಾರ್ಯಕ್ರಮ ಕಾರ್ಯ ದೊತ್ತಡವನ್ನು ಪರಿಶೀಲಿಸಿ, ಘಟಿಕೋ ತ್ಸವಕ್ಕೆ ಆಗಮಿಸುವ ಸಾಧ್ಯತೆ ಬಗ್ಗೆ ಸದ್ಯ ದಲ್ಲೇ ಸ್ಪಷ್ಟಪಡಿಸುವುದಾಗಿ ತಿಳಿಸಿದರ ಲ್ಲದೆ, ಶತಮಾನೋತ್ಸವ ಪೂರೈಸಿರುವ…
ಪುರಾತತ್ವ ಇಲಾಖೆಯಿಂದ ಅರಸನಕೆರೆ ಜೋಡಿ ನಂದಿ ವಿಗ್ರಹಗಳ ಸಂರಕ್ಷಣೆಗೆ ಚಿಂತನೆ
July 17, 2019ಮೈಸೂರು,ಜು.16(ಎಸ್‍ಬಿಡಿ)-ಮೈಸೂರಿಗೆ ಸಮೀಪದ ಅರಸನಕೆರೆ ಗ್ರಾಮದಲ್ಲಿ ಪತ್ತೆಯಾಗಿರುವ ಜೋಡಿ ನಂದಿ ವಿಗ್ರಹಗಳ ಸಂರಕ್ಷಣೆಗೆ ಪುರಾತತ್ವ ಇಲಾಖೆ ಚಿಂತನೆ ನಡೆಸಿದೆ. ಈ ನಿಟ್ಟಿನಲ್ಲಿ ಪುರಾತತ್ವ ಶಾಸ್ತ್ರಜ್ಞ ಎನ್.ಎಲ್.ಗೌಡ ಹಾಗೂ ಇಂಜಿನಿಯರ್ ಸತೀಶ್ ಸ್ಥಳಕ್ಕೆ ಭೇಟಿ ನೀಡಿ, ನಂದಿ ವಿಗ್ರಹಗಳ ಪರಿಶೀಲನೆ ನಡೆಸಿದ್ದಾರೆ. ಬಳಸಿರುವ ಕಲ್ಲು ಹಾಗೂ ಕೆತ್ತನೆ ಶೈಲಿ ಗಮನಿಸಿದರೆ ವಿಗ್ರಹಗಳು ವಿಜಯ ನಗರ ಕಾಲದ್ದಾಗಿರಬಹುದು ಎಂದು ಅಂದಾಜಿಸಲಾಗಿದೆ. ಬಳಪ ಕಲ್ಲಿನಿಂದ ವಿಗ್ರಹಗಳನ್ನು ಕೆತ್ತಲಾಗಿದ್ದು, ಯಾವುದೋ ಕಾರಣದಿಂದ ಪರಿಪೂರ್ಣಗೊಳಿಸಿಲ್ಲ. ಹಾಗಾಗಿ 2 ವಿಗ್ರಹಗಳು ಬಂಡೆಗೆ ಹೊಂದಿಕೊಂಡಂತಿವೆ. ಉತ್ಕøಷ್ಟ ಬಳಪ ಕಲ್ಲು…
ಯೋಗ ದಿನಾಚರಣೆ ಧಾರ್ಮಿಕ ಮುಖಂಡರ ಒಗ್ಗೂಡಿಸಿದೆ
July 17, 2019ಮೈಸೂರು, ಜು.16(ಎಂಕೆ)- ಅಂತರ ರಾಷ್ಟ್ರೀಯ ಯೋಗ ದಿನಾಚರಣೆಯು ಎಲ್ಲಾ ಧಾರ್ಮಿಕ ಮುಖಂಡರ ಮನಸ್ಸು ಗಳನ್ನು ಒಂದಾಗಿಸಿದೆ ಎಂದು ಜಿಎಸ್‍ಎಸ್ ಯೋಗ ಫೌಂಡೇಷನ್ ಸಂಸ್ಥಾಪಕ ಶ್ರೀಹರಿ ಹೇಳಿದರು. ಮೈಸೂರಿನ ರಾಮಾನುಜ ರಸ್ತೆಯಲ್ಲಿ ರುವ ನಮೋ ಯೋಗ ಭವನದಲ್ಲಿ ಗುರು ಪೂರ್ಣಿಮ ಅಂಗವಾಗಿ ಆಯೋಜಿಸಿದ್ದ ‘ಮೈಸೂರು ಯೋಗ ಪರಂಪರೆ ಛಾಯಾ ಚಿತ್ರ ಪ್ರದರ್ಶನ’ ಕಾರ್ಯಕ್ರಮದಲ್ಲಿ ಮಾತ ನಾಡಿದ ಅವರು, ಯೋಗವು ಎಲ್ಲರೂ ಒಂದೇ ಎಂಬ ಭಾವನೆಯನ್ನು ಮೂಡಿ ಸುತ್ತದೆ ಎಂದರು. ಪ್ರಾಣಯಾಮ ಮಾಡುವಾಗ ಉಸಿ ರಾಟಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡ…
ಚಂದ್ರಗ್ರಹಣ ಶಾಂತಿ ಹೋಮ
July 17, 2019ಮೈಸೂರು,ಜು.16(ವೈಡಿಎಸ್)-ಚಂದ್ರಗ್ರಹಣ ಮಂಗಳವಾರ ಮಧ್ಯರಾತ್ರಿ ಸಂಭವಿಸುವುದರಿಂದ ದಿವಾನ್ಸ್ ರಸ್ತೆಯ ಅಮೃತೇಶ್ವರ ದೇವಸ್ಥಾನದಲ್ಲಿ ಗ್ರಹಣ ಶಾಂತಿ ಏರ್ಪಡಿಸಿದ್ದು, ಮಂಗಳವಾರ ಸಂಜೆ ನೂರಾರು ಮಂದಿ ದೇವಸ್ಥಾನಕ್ಕೆ ಆಗಮಿಸಿ ಗ್ರಹಣಶಾಂತಿ ಮಾಡಿಸಿದರು. ಮಂಗಳವಾರ ಮಧ್ಯರಾತ್ರಿ 1.30ರಿಂದ ಬೆಳಗಿನ ಜಾವ 4.30ರವರೆಗೆ ಚಂದ್ರ ಗ್ರಹಣವಿದ್ದು, ಈ ಭಾರಿ ಏಕಗ್ರಸ್ತ ಚಂದ್ರ ಗ್ರಹಣವು ಧನು ಮತ್ತು ಮಕರ ರಾಶಿ ಯಲ್ಲಿ ಆಗುವುದರಿಂದ ಧರ್ಮಶಾಸ್ತ್ರದ ಪ್ರಕಾರ 4 ರಾಶಿಗಳಿಗೆ ವಿಂಗಡಣೆ ಮಾಡ ಬೇಕು. ಆದರೆ, 2 ರಾಶಿಯಲ್ಲಿ ಸಂಭವಿಸು ವುದರಿಂದ ಎಲ್ಲಾ ರಾಶಿಯವರು ಗ್ರಹಣ ಶಾಂತಿ ಮಾಡಿಸಬೇಕಿದೆ…
ಪೊಲೀಸ್ ಸಹಾಯವಾಣಿಗೆ 20 ವರ್ಷ
July 17, 2019ಮೈಸೂರು,ಜು.16(ಆರ್‍ಕೆ)- ಮೈಸೂರು ನಗರದಲ್ಲಿ ಆರಂಭಿಸಿದ್ದ ‘ಪೊಲೀಸ್ ಸಹಾಯ ವಾಣಿ’ಗೆ 20 ವರ್ಷಗಳು ತುಂಬಿವೆ. ಅಪ್ರಾಪ್ತ ಬಾಲಕಿ ಆತ್ಮಹತ್ಯೆ ಪ್ರಕರಣ ವೊಂದನ್ನು ಸೂಕ್ಷ್ಮವಾಗಿ ಅವಲೋಕಿಸಿದ್ದ ಹಿಂದಿನ ನಗರ ಪೊಲೀಸ್ ಆಯುಕ್ತರಾದ ಸಿ.ಚಂದ್ರಶೇಖರ್ ಅವರು, 2000ನೇ ಇಸವಿ ಜುಲೈ ಮಾಹೆಯಲ್ಲಿ ‘ಪೊಲೀಸ್ ಸಹಾಯವಾಣಿ’ ಯನ್ನು ಮೈಸೂರಲ್ಲಿ ಆರಂಭಿಸಿದ್ದರು. ಸೂಕ್ತ ಸಮಯದಲ್ಲಿ ಸರಿಯಾದ ಸಮಾಲೋಚನೆ, ಸಾಂತ್ವನ ನೀಡಿದ್ದರೆ ಆ ಬಾಲಕಿಯನ್ನು ಬದುಕಿಸಬಹುದಿತ್ತು ಎಂಬುದನ್ನು ಮನಗಂಡು ಮುಂದೆ ಅಂತಹ ಸಂದರ್ಭಗಳು ಬಂದಾಗ ಅಗತ್ಯ ಮಾರ್ಗ ದರ್ಶನ ನೀಡುವ ಸದುದ್ದೇಶದಿಂದ ಪ್ರತ್ಯೇಕ ಸಹಾಯವಾಣಿಯನ್ನು ತೆರೆದಿ…
ಹಾವುಗಳು ಹಾಲು ಕುಡಿಯಲ್ಲ, ಅವುಗಳು ದ್ವೇಷ ಕಾರುವುದಿಲ್ಲ…
July 17, 2019ಮೈಸೂರು,ಜು.16(ಪಿಎಂ)- ಹಾವು ಗಳಿಗೆ ಧ್ವನಿ ಕೇಳುವ, ಶಬ್ದ ಗ್ರಹಿಸುವ ಶಕ್ತಿ ಇಲ್ಲ. ಹಾಲು ಕುಡಿದು ಜೀರ್ಣಿಸಿ ಕೊಳ್ಳುವ ಶಕ್ತಿಯೂ ಇರುವುದಿಲ್ಲ. ಹಾವುಗಳು ದ್ವೇಷಕಾರುತ್ತವೆ ಎಂಬುದೂ ಸುಳ್ಳು! ಹೌದು, ಸರ್ಪಗಳ ಬಗ್ಗೆ ಹತ್ತು ಹಲವು ರೀತಿಯಲ್ಲಿ ತಪ್ಪು ಕಲ್ಪನೆ, ಮೂಢ ನಂಬಿಕೆ ಸಮಾಜದಲ್ಲಿ ನೆಲೆಯೂರಿದ್ದು, ಮಂಗಳ ವಾರ ಮೈಸೂರು ಮೃಗಾಲಯದಲ್ಲಿ `ವಿಶ್ವ ಹಾವುಗಳ ದಿನಾಚರಣೆ’ ಅಂಗವಾಗಿ ಹಮ್ಮಿಕೊಂಡಿದ್ದ ಹಾವುಗಳ ಮಾಹಿತಿ ಪ್ರದರ್ಶನದಲ್ಲಿ ವೈಜ್ಞಾನಿಕ ಅಂಶ ಸೇರಿ ದಂತೆ ಉರಗಗಳ ವೈವಿಧ್ಯಮಯ ನೋಟವೂ ಅನಾವರಣಗೊಂಡವು. ಹಾವುಗಳೆಂದರೆ ಸಾಕು, ಬಹುತೇಕರಲ್ಲಿ ಅನವಶ್ಯಕ…










