Tag: Mysore

ಕಾರಿನ ಸೀಟ್ ಬೆಲ್ಟ್ ಹಾಕಿಕೊಳ್ಳದಿದ್ದರೆ 1 ಸಾವಿರ ರೂ., ವಿಮೆ ಇಲ್ಲವಾದರೆ 10 ಸಾವಿರ ರೂ. ದಂಡ
ಮೈಸೂರು

ಕಾರಿನ ಸೀಟ್ ಬೆಲ್ಟ್ ಹಾಕಿಕೊಳ್ಳದಿದ್ದರೆ 1 ಸಾವಿರ ರೂ., ವಿಮೆ ಇಲ್ಲವಾದರೆ 10 ಸಾವಿರ ರೂ. ದಂಡ

June 15, 2019

ಪರಿಷ್ಕøತ ದಂಡ ಇಂದಿನಿಂದ ಜಾರಿ ನವದೆಹಲಿ: ಚಾಲಕ ಅಥವಾ ಚಾಲಕನ ಪಕ್ಕ ಕುಳಿತಿರುವವರು ಕಾರಿನ ಸೀಟ್ ಬೆಲ್ಟ್ ಹಾಕಿಕೊಳ್ಳದೆ ಇದ್ದರೆ 1 ಸಾವಿರ ರೂ., ಕಾರಿಗೆ ಇನ್ಶೂರೆನ್ಸ್ ಮಾಡಿಸಿಲ್ಲವಾದರೆ 10 ಸಾವಿರ ರೂ. ಜುಲ್ಮಾನೆ. ಕೇಂದ್ರ ಮೋಟಾರು ವಾಹನ ಕಾಯ್ದೆಯನ್ವಯ ಪರಿಷ್ಕೃತಗೊಂಡಿ ರುವ ಜುಲ್ಮಾನೆಗಳು ಶನಿವಾರದಿಂದ ಜಾರಿಗೆ ಬರಲಿವೆ. ಬಹುತೇಕ ಎಲ್ಲ ಜುಲ್ಮಾನೆಗಳ ಮೊತ್ತ ವನ್ನು ಕೇಂದ್ರ ಸರ್ಕಾರ ಪರಿಷ್ಕರಿಸಿದ್ದು, ರಾಜ್ಯಸಭೆ ಈ ಪರಿಷ್ಕರಣೆಗೆ ಅನುಮೋದನೆ ನೀಡಿದೆ. ಈ ವರ್ಷದ ಮಾರ್ಚ್‍ನಲ್ಲೇ ಸರ್ಕಾರ ಈ ಅನುಮೋದನೆ ಪಡೆದು…

ಮೈಸೂರು ದೇವರಾಜ ಮಾರುಕಟ್ಟೆ ಕಟ್ಟಡ ನೆಲಸಮಗೊಳಿಸಲು ಹೈಕೋರ್ಟ್ ಆದೇಶ
ಮೈಸೂರು

ಮೈಸೂರು ದೇವರಾಜ ಮಾರುಕಟ್ಟೆ ಕಟ್ಟಡ ನೆಲಸಮಗೊಳಿಸಲು ಹೈಕೋರ್ಟ್ ಆದೇಶ

June 15, 2019

ಮೈಸೂರು: ಮೈಸೂರಿನ ದೇವರಾಜ ಮಾರು ಕಟ್ಟೆಯನ್ನು ನೆಲಸಮಗೊಳಿಸಿ, ಹೊಸದಾಗಿ ನಿರ್ಮಿಸುವಂತೆ ನ್ಯಾಯಾಲಯ ಆದೇಶ ನೀಡಿದೆ ಎಂದು ಮೇಯರ್ ಪುಷ್ಪಲತಾ ಜಗನ್ನಾಥ್ ತಿಳಿಸಿದ್ದಾರೆ. ನಗರ ಪಾಲಿಕೆಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಕೆಲ ಮಳಿಗೆಯವರು ಮಾರುಕಟ್ಟೆಯನ್ನು ಒಡೆಯದೆ ಪುನರುಜ್ಜೀವಗೊಳಿಸಬೇಕೆಂದು ನ್ಯಾಯಾಲಯದ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ, ಕಟ್ಟಡ ಶಿಥಿಲಾವಸ್ಥೆಯಲ್ಲಿರುವುದರಿಂದ ಒಡೆದು ಹಾಕಿ, ಹೊಸದಾಗಿ ಕಟ್ಟುವಂತೆ ಆದೇಶಿಸಿದೆ ಎಂದು ನಮ್ಮ ಅಧಿಕಾರಿಗಳು ತಿಳಿಸಿದ್ದಾರೆ. ಮಾರುಕಟ್ಟೆ ನವೀಕರಣ ಸಂದರ್ಭದಲ್ಲೇ ಒಂದು ಭಾಗ ಕುಸಿದಿತ್ತು. ನಂತರದಲ್ಲಿ ಸಂಪೂರ್ಣ ಕೆಡವಿ,…

ಪಕ್ಷೇತರರಾದ ಶಂಕರ್, ನಾಗೇಶ್ ಸಂಪುಟ ಸೇರ್ಪಡೆ
ಮೈಸೂರು

ಪಕ್ಷೇತರರಾದ ಶಂಕರ್, ನಾಗೇಶ್ ಸಂಪುಟ ಸೇರ್ಪಡೆ

June 15, 2019

ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಮ್ಮ ಮಂತ್ರಿಮಂಡಲ ವಿಸ್ತರಿಸಿ ಇಬ್ಬ ರನ್ನು ಸೇರ್ಪಡೆ ಮಾಡಿಕೊಂಡಿದ್ದಾರೆ. ರಾಜಭವನದ ಗಾಜಿನ ಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ವಜು ಭಾಯಿ ವಾಲಾ, ಪಕ್ಷೇತರ ಸದಸ್ಯರಾದ ಆರ್. ಶಂಕರ್ ಹಾಗೂ ನಾಗೇಶ್ ಅವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು. ಇದರೊಂದಿಗೆ ಕುಮಾರಸ್ವಾಮಿ ಮೈತ್ರಿ ಸರ್ಕಾರದ ಸಂಪುಟದ ಗಾತ್ರ 33ಕ್ಕೆ ತಲುಪಿದೆ. ಇನ್ನೊಂದು ಸ್ಥಾನ ಮಾತ್ರ ಖಾಲಿ ಉಳಿಸಿ ಕೊಂಡಿದ್ದಾರೆ. ಜೆಡಿಎಸ್ ಕೋಟಾದಡಿ ದಲಿತ ಸಮುದಾಯಕ್ಕೆ ಸೇರಿದ ನಾಗೇಶ್, ಕಾಂಗ್ರೆಸ್‍ನ ಸಿ.ಎಸ್.ಶಿವಳ್ಳಿ…

ಮೈಸೂರು ನಗರಪಾಲಿಕೆ ಅನುದಾನ ಸರ್ಕಾರದ ಮಾರ್ಗಸೂಚಿಯಂತೇ ಬಳಕೆ
ಮೈಸೂರು

ಮೈಸೂರು ನಗರಪಾಲಿಕೆ ಅನುದಾನ ಸರ್ಕಾರದ ಮಾರ್ಗಸೂಚಿಯಂತೇ ಬಳಕೆ

June 15, 2019

ಮೈಸೂರು: ಮೈಸೂರು ನಗರ ಪಾಲಿಕೆಗೆ ಬರುವ ಅನುದಾನ ಸಮರ್ಪಕವಾಗಿ ಬಳಕೆ ಯಾಗುತ್ತಿಲ್ಲ ಎಂಬ ಸಂಸದ ಪ್ರತಾಪ್ ಸಿಂಹ ಅವರ ಆರೋಪಕ್ಕೆ ಮೇಯರ್ ಪುಷ್ಪಲತಾ ಜಗನ್ನಾಥ್ ಪ್ರತಿ ಕ್ರಿಯಿಸಿದ್ದು, ಸರ್ಕಾರದ ಮಾರ್ಗಸೂಚಿಯಂತೆಯೇ ಅನುದಾನ ಬಳಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಕಳೆದ ಬುಧವಾರ ಮೈಸೂರಿನ ವಿಜಯನಗರದಲ್ಲಿ ನವೀಕೃತ ಅತ್ಯಾಧುನಿಕ ಬೃಹತ್ ಜಲ ಸಂಗ್ರಹಾರ ವೀಕ್ಷಿಸಿದ ಸಂಸದ ಪ್ರತಾಪ್ ಸಿಂಹ, ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಪಾಲಿಕೆಗೆ ಬರುವ ಅನುದಾನದಲ್ಲಿ ಬಹು ಪಾಲು ಹಿರಿಯ ಕಾರ್ಪೊರೇಟರ್‍ಗಳ ಪಾಲಾಗುತ್ತಿದೆ. ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗು ತ್ತಿದೆ. ಅಲ್ಲದೆ…

ಕೊಲ್ಕತ್ತಾದಲ್ಲಿ ವೈದ್ಯರ ಮೇಲೆ ಹಲ್ಲೆ ಖಂಡಿಸಿ ಮೈಸೂರಲ್ಲಿ ವೈದ್ಯರಿಂದ ಕಪ್ಪು ಪಟ್ಟಿ ಧರಿಸಿ, ಡಿಸಿಗೆ ಮನವಿ ಸಲ್ಲಿಕೆ
ಮೈಸೂರು

ಕೊಲ್ಕತ್ತಾದಲ್ಲಿ ವೈದ್ಯರ ಮೇಲೆ ಹಲ್ಲೆ ಖಂಡಿಸಿ ಮೈಸೂರಲ್ಲಿ ವೈದ್ಯರಿಂದ ಕಪ್ಪು ಪಟ್ಟಿ ಧರಿಸಿ, ಡಿಸಿಗೆ ಮನವಿ ಸಲ್ಲಿಕೆ

June 15, 2019

ಮೈಸೂರು: ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ಎನ್‍ಆರ್‍ಎಸ್ ವೈದ್ಯಕೀಯ ಮಹಾ ವಿದ್ಯಾ ಲಯದಲ್ಲಿ ಕರ್ತವ್ಯನಿರತ ವೈದ್ಯರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ, ಕಪ್ಪು ಪಟ್ಟಿ ಧರಸಿದ್ದ ಭಾರತೀಯ ವೈದ್ಯಕೀಯ ಸಂಘದ ಮೈಸೂರು ಶಾಖೆಯ ಪದಾಧಿಕಾರಿಗಳು ಸಂಘದ ಅಧ್ಯಕ್ಷ ಡಾ.ಎಸ್.ಬಿ.ಪ್ರಕಾಶ್ ನೇತೃತ್ವದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ದೇಶದ ವೈದ್ಯ ಸಮೂಹ ಪಶ್ಚಿಮ ಬಂಗಾ ಲದ ಮುಷ್ಕರ ನಿರತ ವೈದ್ಯರ ಪರ ಇದ್ದು, ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಂತಹ ಘಟನೆಗಳು ಮರು ಕಳಿಸದಂತೆ…

ಅಕ್ಕಿ ಆಯಿತು ಈಗ ತರಕಾರಿ,ಸೊಪ್ಪಿನ ಬೆಲೆ ಏರಿಕೆ ಸರದಿ
ಮೈಸೂರು

ಅಕ್ಕಿ ಆಯಿತು ಈಗ ತರಕಾರಿ,ಸೊಪ್ಪಿನ ಬೆಲೆ ಏರಿಕೆ ಸರದಿ

June 15, 2019

ಮೈಸೂರು: ಅಕ್ಕಿ ಬೆಲೆ ಗಗನಕ್ಕೇರಿರುವಾಗಲೇ ತರಕಾರಿ ಮತ್ತು ಸೊಪ್ಪಿನ ದರದಲ್ಲೂ ಹೆಚ್ಚಳವಾಗಿದ್ದು, ತರಾವರಿ ತರಕಾರಿ, ಸೊಪ್ಪು ಹಾಕಿ ರುಚಿರುಚಿಯಾದ ಅಡುಗೆ ಮಾಡಬೇಕೆನ್ನುವವರೀಗ ದುಬಾರಿ ಬೆಲೆ ತೆರಬೇಕಾಗಿದೆ. ವೆಜಿಟೆಬಲ್ ಬಿರಿಯಾನಿ ಅಥವಾ ಪಲಾವ್ ಮಾಡಬೇಕಾದರೆ ಈ ಮೂರು ಪದಾರ್ಥಗಳು ಇರಲೇಬೇಕು. ಆದರೆ ಇವುಗಳ ಬೆಲೆಯೀಗ ಗಗನಮುಖಿ ಯಾಗಿದ್ದು, ಈ ತಿಂಡಿ ಮಾಡಬೇಕಿ ದ್ದಲ್ಲಿ ಜೇಬು ಖಾಲಿ ಮಾಡಿಕೊಳ್ಳದೇ ವಿಧಿಯಿಲ್ಲ ಎನ್ನುವಂತಾಗಿದೆ. ಕಳೆದ 15 ದಿನಗಳಿಂದೀಚೆಗೆ ತರ ಕಾರಿ ಹಾಗೂ ಸೊಪ್ಪಿನ ಬೆಲೆಯಲ್ಲಿ ಹೆಚ್ಚಳ ಉಂಟಾಗಿದ್ದು, ಮಳೆ ಕೊರತೆಯಿಂದ ಇಳುವರಿ…

ಮೈಸೂರು ಜಿಲ್ಲೆಯಲ್ಲಿ ನಿಫಾ ಪ್ರಕರಣ ಇಲ್ಲ
ಮೈಸೂರು

ಮೈಸೂರು ಜಿಲ್ಲೆಯಲ್ಲಿ ನಿಫಾ ಪ್ರಕರಣ ಇಲ್ಲ

June 15, 2019

ಮೈಸೂರು: ಕಟ್ಟುನಿಟ್ಟಿನ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ಈ ಬಾರಿಯೂ ಮೈಸೂರು ಜಿಲ್ಲೆಯಲ್ಲಿ ಒಂದೇ ಒಂದು ನಿಫಾ ವೈರಸ್ ಇರುವ ಪ್ರಕರಣ ಪತ್ತೆಯಾಗಿಲ್ಲ. ವೈರಸ್ ಹರಡುವ ಅವಧಿ ಮುಗಿದಿರುವುದರಿಂದ ಜನರು ನಿರಾಳರಾಗುವಂತೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಕುಸುಮಾ ತಿಳಿಸಿದ್ದಾರೆ. ಸಾಮಾನ್ಯವಾಗಿ ನಿಫಾ ವೈರಸ್ ಕಾಣಿಸಿಕೊಂಡ ದಿನದಂತೆ ಎರಡು ವಾರಗಳವರೆಗೂ ವೈರಸ್ ಹರಡುವ ಸಾಧ್ಯತೆ ಇರುತ್ತದೆ. ಆ ಅವಧಿ ಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡು, ಸೂಕ್ತ ಚಿಕಿತ್ಸೆ ಯೊಂದಿಗೆ ಕಟ್ಟೆಚ್ಚರ ವಹಿಸಬೇಕಾಗಿತ್ತು. ಈ ಬಾರಿ ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ನಿಪಾ…

ಅಂತರ್ಜಾತಿ ವಿವಾಹದಲ್ಲಿ ಮೈಸೂರು ಕ್ರಾಂತಿ ಮಾಡಿದೆ
ಮೈಸೂರು

ಅಂತರ್ಜಾತಿ ವಿವಾಹದಲ್ಲಿ ಮೈಸೂರು ಕ್ರಾಂತಿ ಮಾಡಿದೆ

June 15, 2019

ಮೈಸೂರು: ಸಮಾಜದಲ್ಲಿ ಜಾತಿ ವ್ಯವಸ್ಥೆ ಹೋಗ ಲಾಡಿಸಿ, ಬದಲಾವಣೆ ತರುವ ನಿಟ್ಟಿನಲ್ಲಿ ಹಲವು ಹೋರಾಟಗಳು ನಡೆಯುತ್ತಿರುವ ಸಂದಭದಲ್ಲಿಯೇ ಅಂತರ್ಜಾತಿ ವಿವಾಹಕ್ಕೆ ಮೈಸೂರು ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿ ಕಾಂತ್ರಿ ಮಾಡಿರುವುದು ಶ್ಲಾಘ ನೀಯ ಎಂದು ಕರ್ನಾಟಕ ವಿಧಾನ ಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿ ಅಧ್ಯಕ್ಷರೂ ಆದ ಶಾಸಕ ಹೆಚ್.ಕೆ. ಕುಮಾರಸ್ವಾಮಿ ಪ್ರಶಂಸೆ ವ್ಯಕ್ತಪಡಿಸಿದರು. ಮೈಸೂರು ಜಿ.ಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ವಿವಿಧ ಇಲಾಖೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾ ನುಭವಿಗಳಿಗೆ…

ರಾಜೀವ್ ನಗರದಲ್ಲಿ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಕಟ್ಟಡ ಉದ್ಘಾಟನೆ
ಮೈಸೂರು

ರಾಜೀವ್ ನಗರದಲ್ಲಿ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಕಟ್ಟಡ ಉದ್ಘಾಟನೆ

June 15, 2019

ಮೈಸೂರು: ಮೈಸೂರಿನ ರಾಜೀವ್‍ನಗರ 2ನೇ ಹಂತದಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅನುದಾನದಲ್ಲಿ ನಿರ್ಮಿಸಿರುವ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ನೂತನ ಕಟ್ಟಡವನ್ನು ಶಾಸಕ ತನ್ವೀರ್ ಸೇಠ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಇಂದು ಶಿಕ್ಷಣ ಪಡೆಯುವ ಹಂಬಲ ಎಲ್ಲರಿಗೂ ಬಂದಿದೆ. ಎನ್.ಆರ್. ಕ್ಷೇತ್ರದಲ್ಲಿ ಸರ್ಕಾರಿ ಶಾಲೆಗಳನ್ನು ಸ್ಥಾಪಿಸಿ ಗುಣಮಟ್ಟದ ಶಿP್ಷÀಣ ದೊರಕಿಸಿಕೊಡಲು ಪ್ರಯತ್ನಿಸುತ್ತಾ ಬಂದಿz್ದÉೀನೆ. ಎನ್.ಆರ್. ಕ್ಷೇತ್ರ ಶೈP್ಷÀಣಿಕ ವಾಗಿ ಹಿಂದುಳಿದ ಪ್ರದೇಶವಾಗಿದೆ. ಬಡವರು, ಕೂಲಿ ಕಾರ್ಮಿಕರು ಮತ್ತು ದಿನಗೂಲಿ ನೌಕರರು ಹೆಚ್ಚಿನ ಸಂಖ್ಯೆಯ ಲ್ಲಿದ್ದು,…

ಬಸ್ ಪಾಸ್ ದರ ಏರಿಕೆ ಪ್ರಸ್ತಾಪ ಖಂಡಿಸಿ ವಿದ್ಯಾರ್ಥಿಗಳ ಪ್ರತಿಭಟನೆ
ಮೈಸೂರು

ಬಸ್ ಪಾಸ್ ದರ ಏರಿಕೆ ಪ್ರಸ್ತಾಪ ಖಂಡಿಸಿ ವಿದ್ಯಾರ್ಥಿಗಳ ಪ್ರತಿಭಟನೆ

June 15, 2019

ಮೈಸೂರು: ಬೆಂಗ ಳೂರು ಮಹಾನಗರ ಸಾರಿಗೆ ಸಂಸ್ಥೆಯು (ಬಿಎಂಟಿಸಿ) ವಿದ್ಯಾರ್ಥಿ ಬಸ್ ಪಾಸ್ ದರ ಏರಿಕೆ ಮಾಡಿದ್ದು, ಇದರ ಬೆನ್ನಲ್ಲೇ ಕೆಎಸ್ ಆರ್‍ಟಿಸಿ ಕೂಡ ವಿದ್ಯಾರ್ಥಿ ಬಸ್ ಪಾಸ್ ದರ ಹೆಚ್ಚಿಸಲು ನಿರ್ಧರಿಸಿದೆ ಎನ್ನಲಾಗಿದೆ. ಇದರ ವಿರುದ್ಧ ಮೈಸೂರಿನಲ್ಲಿ ನೂರಾರು ವಿದ್ಯಾರ್ಥಿಗಳು ಶುಕ್ರವಾರ ಮಧ್ಯಾಹ್ನ ದಿಢೀರ್ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೈಸೂರು ಡಿಸಿ ಕಚೇರಿ ಎದುರು ಎಐಡಿಎಸ್‍ಓ (ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟುಡೆಂಟ್ಸ್ ಆರ್ಗನೈಸೇಷನ್) ಸಂಘಟನೆ ನೇತೃತ್ವದಲ್ಲಿ ಮಹಾರಾಜ ಕಾಲೇಜು, ಶಾರದಾವಿಲಾಸ ಕಾಲೇಜು, ಹಾಡ್ರ್ವಿಕ್ ಕಾಲೇಜು…

1 271 272 273 274 275 330
Translate »