ಕಾರಿನ ಸೀಟ್ ಬೆಲ್ಟ್ ಹಾಕಿಕೊಳ್ಳದಿದ್ದರೆ 1 ಸಾವಿರ ರೂ., ವಿಮೆ ಇಲ್ಲವಾದರೆ 10 ಸಾವಿರ ರೂ. ದಂಡ
ಮೈಸೂರು

ಕಾರಿನ ಸೀಟ್ ಬೆಲ್ಟ್ ಹಾಕಿಕೊಳ್ಳದಿದ್ದರೆ 1 ಸಾವಿರ ರೂ., ವಿಮೆ ಇಲ್ಲವಾದರೆ 10 ಸಾವಿರ ರೂ. ದಂಡ

June 15, 2019

ಪರಿಷ್ಕøತ ದಂಡ ಇಂದಿನಿಂದ ಜಾರಿ

ನವದೆಹಲಿ: ಚಾಲಕ ಅಥವಾ ಚಾಲಕನ ಪಕ್ಕ ಕುಳಿತಿರುವವರು ಕಾರಿನ ಸೀಟ್ ಬೆಲ್ಟ್ ಹಾಕಿಕೊಳ್ಳದೆ ಇದ್ದರೆ 1 ಸಾವಿರ ರೂ., ಕಾರಿಗೆ ಇನ್ಶೂರೆನ್ಸ್ ಮಾಡಿಸಿಲ್ಲವಾದರೆ 10 ಸಾವಿರ ರೂ. ಜುಲ್ಮಾನೆ. ಕೇಂದ್ರ ಮೋಟಾರು ವಾಹನ ಕಾಯ್ದೆಯನ್ವಯ ಪರಿಷ್ಕೃತಗೊಂಡಿ ರುವ ಜುಲ್ಮಾನೆಗಳು ಶನಿವಾರದಿಂದ ಜಾರಿಗೆ ಬರಲಿವೆ. ಬಹುತೇಕ ಎಲ್ಲ ಜುಲ್ಮಾನೆಗಳ ಮೊತ್ತ ವನ್ನು ಕೇಂದ್ರ ಸರ್ಕಾರ ಪರಿಷ್ಕರಿಸಿದ್ದು, ರಾಜ್ಯಸಭೆ ಈ ಪರಿಷ್ಕರಣೆಗೆ ಅನುಮೋದನೆ ನೀಡಿದೆ. ಈ ವರ್ಷದ ಮಾರ್ಚ್‍ನಲ್ಲೇ ಸರ್ಕಾರ ಈ ಅನುಮೋದನೆ ಪಡೆದು ಕೊಂಡಿದೆ. ಆದರೆ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪರಿಷ್ಕೃತ ಜುಲ್ಮಾನೆಗಳು ಜಾರಿಗೊಂಡಿರಲಿಲ್ಲ. ಇದೀಗ ಅದನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ಚಾಲನಾ ಅನುಜ್ಞಾ ಪತ್ರ (ಡ್ರೈವಿಂಗ್ ಲೈಸನ್ಸ್) ಇಲ್ಲದೆ ವಾಹನ ಚಾಲನೆ ಮಾಡಿದರೆ 10 ಸಾವಿರ ರೂಪಾಯಿ ಜುಲ್ಮಾನೆಯ ಜತೆಗೆ ವಾಹನವನ್ನು ಜಪ್ತಿ ಮಾಡಲಾಗುತ್ತದೆ. ಅಂತೆಯೇ ವಾಹನದ ದಾಖಲಾತಿ ಹೊಂದಿಲ್ಲದಿದ್ದರೆ 5 ಸಾವಿರ ರೂ. ದಂಡದ ಜತೆಗೆ ವಾಹನವನ್ನು ಜಪ್ತಿ ಮಾಡ ಲಾಗುತ್ತದೆ. ವಾಹನವು ಪರಿಸರ ಮಾಲಿನ್ಯ ಉಂಟು ಮಾಡುತ್ತಿಲ್ಲ ಎಂಬ ಪ್ರಮಾಣಪತ್ರವನ್ನು (ಪರಿಸರ ಮಾಲಿನ್ಯ ನಿಯಂತ್ರಣದಲ್ಲಿದೆ: ಪಿಯುಸಿಎಲ್) ಹೊಂದಿಲ್ಲದೇ ಇದ್ದರೆ 1,500 ರೂ. ದಂಡ ವಿಧಿಸಲಾಗುತ್ತದೆ.

ಪಾನಮತ್ತರಾಗಿ ವಾಹನ ಚಾಲನೆ ಮಾಡುತ್ತ ಪೆÇಲೀಸರಿಗೆ ಸಿಕ್ಕಿಬಿದ್ದರೆ ಪಾವತಿಸಬೇಕಾದ ಜುಲ್ಮಾನೆ ಮೊತ್ತವನ್ನು 25 ಸಾವಿರ ರೂಪಾಯಿಗೆ ಹೆಚ್ಚಿಸ ಲಾಗಿದೆ. ವಾಹನ ಚಾಲನೆ ಮಾಡುತ್ತಾ ಮೊಬೈಲ್ ಫೆÇೀನ್‍ನಲ್ಲಿ ಮಾತನಾಡು ತ್ತಿರುವುದು ಪತ್ತೆಯಾದರೆ 5 ಸಾವಿರ ರೂ. ದಂಡ ವಿಧಿಸಲಾಗುತ್ತದೆ.

 

Translate »