Tag: Mysore

ಕಾರ್ಮಿಕರು ಗೂಡ್ಸ್ ವಾಹನಗಳಲ್ಲಿ ಪ್ರಯಾಣಿಸುವುದು ಕಾನೂನು ದೃಷ್ಟಿಯಿಂದ ಸುರಕ್ಷಿತವಲ್ಲ
ಮೈಸೂರು

ಕಾರ್ಮಿಕರು ಗೂಡ್ಸ್ ವಾಹನಗಳಲ್ಲಿ ಪ್ರಯಾಣಿಸುವುದು ಕಾನೂನು ದೃಷ್ಟಿಯಿಂದ ಸುರಕ್ಷಿತವಲ್ಲ

May 7, 2019

ಮೈಸೂರು: ಗಾರ್ಮೆಂಟ್ಸ್ ಸೇರಿದಂತೆ ಇತರೆ ಕಾರ್ಖಾನೆಗಳ ಕಾರ್ಮಿಕರು ಕೆಲಸಕ್ಕೆ ಹೋಗುವಾಗ ಮತ್ತು ವಾಪಸಾಗುವಾಗ ಗೂಡ್ಸ್ ವಾಹನಗಳಲ್ಲಿ ಪ್ರಯಾಣಿಸುವುದು ಕಾನೂ ನಿನ ಪ್ರಕಾರ ಸರಿಯಲ್ಲ. ಹಾಗೂ ಸುರಕ್ಷತೆ ದೃಷ್ಟಿಯಿಂ ದಲೂ ಒಳ್ಳೆಯದಲ್ಲ ಎಂದು ಸೋಮವಾರ ಮೈಸೂ ರಿನ ಹೊರ ವಲಯದ ಕೂರ್ಗಳ್ಳಿ ಕೈಗಾರಿಕಾ ಪ್ರದೇಶ ದಲ್ಲಿರುವ ಶಾಹಿ ಎಕ್ಸ್‍ಪೋರ್ಟ್ ಪ್ರೈವೇಟ್ ಲಿಮಿ ಟೆಡ್‍ನ ಕಾರ್ಮಿಕರಿಗೆ ಅರಿವು ಮೂಡಿಸಲಾಯಿತು. ಮೈಸೂರಿನ ಕೂರ್ಗಳ್ಳಿ ಕೈಗಾರಿಕಾ ಪ್ರದೇಶದಲ್ಲಿ ರುವ ಶಾಹಿ ಎಕ್ಸ್‍ಪೋರ್ಟ್ ಪ್ರೈವೇಟ್ ಲಿಮಿಟೆಡ್ ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಸಾವಿರಕ್ಕೂ ಹೆಚ್ಚು ಮಹಿಳಾ ಮತ್ತು…

ಗಾರ್ಮೆಂಟ್ ಕಾರ್ಮಿಕರಿದ್ದ ಆಟೋ ಅಪಘಾತ: 18 ಮಂದಿಗೆ ಗಾಯಚಾಲಕನ ಅಜಾಗರೂಕ ಚಾಲನೆ ಆರೋಪ
ಮೈಸೂರು

ಗಾರ್ಮೆಂಟ್ ಕಾರ್ಮಿಕರಿದ್ದ ಆಟೋ ಅಪಘಾತ: 18 ಮಂದಿಗೆ ಗಾಯಚಾಲಕನ ಅಜಾಗರೂಕ ಚಾಲನೆ ಆರೋಪ

May 7, 2019

ಮೈಸೂರು: ಗಾರ್ಮೆಂಟ್ ಕಾರ್ಮಿಕರಿದ್ದ ಆಟೋ, ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯಲ್ಲಿದ್ದ ಗೋಬಿ, ಪಾನಿಪುರಿ ಗಾಡಿ ಹಾಗೂ 2 ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಮೈಸೂರಿನ ಹೂಟಗಳ್ಳಿ ಬಳಿ ನಡೆದಿದೆ. ಸೋಮವಾರ ಸಂಜೆ ಹೂಟಗಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಗಾರ್ಮೆಂಟ್ ವೊಂದರ ಕಾರ್ಮಿಕರಿದ್ದ ಪ್ಯಾಸೆಂಜರ್ ಆಟೋ, ಕೆಆರ್‍ಎಸ್ ರಸ್ತೆಯಲ್ಲಿ ಹೋಗುತ್ತಿ ದ್ದಾಗ ಚಾಲಕನ ನಿಯಂತ್ರಣ ತಪ್ಪಿ, ಈ ಘಟನೆ ನಡೆದಿದೆ. ಘಟನೆಯಲ್ಲಿ ಆಟೋದಲ್ಲಿದ್ದ ಕಾರ್ಮಿಕರು, ಗೋಬಿ ಹಾಗೂ ಪಾನಿಪುರಿ ಗಾಡಿ…

ಅಂತರರಾಷ್ಟ್ರೀಯ ಪ್ಯಾರಾ ಗೇಮ್ಸ್‍ನಲ್ಲಿ ಚಿನ್ನ ಗೆದ್ದ ಮೈಸೂರಿನ ವಿಕಲಚೇತನ
ಮೈಸೂರು

ಅಂತರರಾಷ್ಟ್ರೀಯ ಪ್ಯಾರಾ ಗೇಮ್ಸ್‍ನಲ್ಲಿ ಚಿನ್ನ ಗೆದ್ದ ಮೈಸೂರಿನ ವಿಕಲಚೇತನ

May 7, 2019

ಮೈಸೂರು: ವಿಕಲಚೇತನ ಎಂಬುದು ದೇಹಕ್ಕೆ ಹೊರತು ಮನಸ್ಸಿಗಲ್ಲ. ಆತ್ಮವಿಶ್ವಾಸವಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಇಂಬು ನೀಡುವಂತೆ ಮೈಸೂರಿನ ವ್ಯಕ್ತಿಯೊಬ್ಬರು ಜಾವಲಿನ್ ಥ್ರೋನಲ್ಲಿ ಚಿನ್ನದ ಪದಕ ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ವಿಕಲಚೇತನತೆ ಮೆಟ್ಟಿ ನಿಂತು ಆತ್ಮವಿಶ್ವಾಸದಿಂದ ಸಾಧನೆಗೈದ ಪ್ಯಾರಾ ಅಂತರರಾಷ್ಟ್ರೀಯ ಕ್ರೀಡಾಪಟು ಆರ್.ಮಂಜುನಾಥ್. ಇವರು 2019ರ ಏ.15-16ರಂದು ಶ್ರೀಲಂಕಾದ ಕೊಲಂಬಿಯಾ ವಿಶ್ವವಿದ್ಯಾ ನಿಲಯದಲ್ಲಿ ನಡೆದ 3ನೇ ಎಟಿಟಿಎಫ್ ಅಂತರ ರಾಷ್ಟ್ರೀಯ ಪ್ಯಾರಾ ಗೇಮ್ಸ್‍ನಲ್ಲಿ ಮಂಜುನಾಥ್, ಜಾವ ಲಿನ್ ಥ್ರೋ ಸ್ಪರ್ಧೆಯಲ್ಲಿ ಚಿನ್ನ ಹಾಗೂ ಡಿಸ್ಕಸ್ ಥ್ರೋನಲ್ಲಿ…

ಬಸವ ಪಥದತ್ತ ನಮ್ಮ ಹೆಜ್ಜೆ
ಮೈಸೂರು

ಬಸವ ಪಥದತ್ತ ನಮ್ಮ ಹೆಜ್ಜೆ

May 7, 2019

ಮೈಸೂರು: ಬಸವ ಜಯಂತಿ ಪ್ರಯುಕ್ತ ಅಖಿಲ ಭಾರತ ವೀರಶೈವ ಮಹಾ ಸಭಾ ವತಿಯಿಂದ ಹಮ್ಮಿಕೊಂಡಿದ್ದ ಬಸವ ಪಥದತ್ತ ನಮ್ಮ ಹೆಜ್ಜೆ ಜಾಗೃತಿ ಕಾರ್ಯ ಕ್ರಮವು ಯಶಸ್ವಿಯಾಗಿ ಜರುಗಿತು. ಗುಂಡ್ಲುಪೇಟೆ ಶಾಸಕರಾದ ಸಿ.ಎಸ್. ನಿರಂಜನ್ ಕುಮಾರ್ ಈ ಕಾರ್ಯಾಗಾರದ ನೇತೃತ್ವ ವಹಿಸಿ, ಜಾಥಾ ಪೂರ್ಣಗೊಳಿಸಿದರು. ಅಗ್ರಹಾರದ ಬಸವ ಪುತ್ಥಳಿಯಿಂದ ಹೊರಟ `ನಮ್ಮ ನಡೆ ಬಸವ ಪಥದೆಡೆ, ಜಾಥಾವು ರಾಮಸ್ವಾಮಿ ವೃತ್ತದಿಂದ ನ್ಯಾಯಾಲಯದ ಮುಂಭಾಗ ತಲುಪಿ ಅಲ್ಲಿಂದ ಅಗ್ರಹಾರದ ವೃತ್ತ, ನೂರ ಒಂದು ಗಣಪತಿ ದೇವಸ್ಥಾನ ಅಲ್ಲಿಂದ ಜೆ.ಎಸ್.ಎಸ್. ಆಸ್ಪತ್ರೆಯ…

ತ.ನಾಡು ದೇವಾಲಯದಲ್ಲಿ ಇಂದು ಸಿಎಂ ಕುಮಾರಸ್ವಾಮಿ ವಿಶೇಷ ಪೂಜೆ
ಮೈಸೂರು

ತ.ನಾಡು ದೇವಾಲಯದಲ್ಲಿ ಇಂದು ಸಿಎಂ ಕುಮಾರಸ್ವಾಮಿ ವಿಶೇಷ ಪೂಜೆ

May 7, 2019

ಮೈಸೂರು: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತಮಿಳುನಾಡಿನ ತೂತುಕುಡಿ ಜಿಲ್ಲೆಯಲ್ಲಿರುವ ತಿರುಚೆಂ ದೂರು ಮುರುಗನ್ ದೇವಾಲಯದಲ್ಲಿ ನಾಳೆ(ಮೇ7) ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಮುಖ್ಯಮಂತ್ರಿಗಳು ಕುಟುಂಬ ಸಮೇತ ರಾಗಿ ನಾಳೆ ಬೆಳಿಗ್ಗೆ 8ಗಂಟೆಗೆ ಬೆಂಗಳೂರಿನಿಂದ ತಮಿಳುನಾಡಿ ನತ್ತ ಪ್ರಯಾಣ ಬೆಳೆಸಲಿದ್ದಾರೆ. ತಮಿಳುನಾಡಿನಲ್ಲಿರುವ ಪ್ರಸಿದ್ಧ ಆರು ಮುರುಗನ್ ದೇವಾಲಯಗಳಲ್ಲಿ ತಿರುಚೆಂದೂರು ಕೂಡ ಒಂದಾಗಿದ್ದು, ಈ ದೇವಾಲಯವು ಸಮುದ್ರದ ತೀರದಲ್ಲಿರುವುದು ವಿಶೇಷ.

CFTRIನಿಂದ ಒಡಿಶಾ ಸಂತ್ರಸ್ತರಿಗೆ ಆಹಾರ
ಮೈಸೂರು

CFTRIನಿಂದ ಒಡಿಶಾ ಸಂತ್ರಸ್ತರಿಗೆ ಆಹಾರ

May 6, 2019

ಮೈಸೂರು: ಫೊನಿ ಚಂಡಮಾರುತದಿಂದ ತತ್ತರಿಸಿರುವ ಸಂತ್ರಸ್ತರಿಗೆ 25 ಟನ್ ಆಹಾರ ಪೂರೈಕೆ ಮಾಡಲು ಕೇಂದ್ರೀಯ ಆಹಾರ ಸಂಶೋಧನಾ ಸಂಸ್ಥೆ (ಸಿಎಫ್‍ಟಿಆರ್‍ಐ) ಮುಂದಾಗಿದ್ದು, ಮೊದಲ ಹಂತದಲ್ಲಿ ನಾಳೆ(ಮೇ 6) 5 ಟನ್ ಆಹಾರವನ್ನು ಒಡಿಶಾಗೆ ಸರಬರಾಜು ಮಾಡಲು ಕ್ರಮ ಕೈಗೊಂಡಿದೆ. ಕಳೆದ ಮೂರ್ನಾಲ್ಕು ದಿನ ಗಳಿಂದ ಫೊನಿ ಚಂಡಮಾರುತ ಒಡಿಶಾ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶದಲ್ಲಿ ಭಾರಿ ಅವಾಂತರ ಸೃಷ್ಟಿಸಿದ್ದು, ಲಕ್ಷಾಂತರ ಮಂದಿ ಸಂತ್ರಸ್ತರಾಗಿದ್ದಾರೆ. ಮಾನವೀ ಯತೆ ನೆಲೆಗಟ್ಟಿನಲ್ಲಿ ಮೈಸೂರಿನ ಸಿಎಫ್ ಟಿಆರ್‍ಐ ಶನಿವಾರ ಸಂಜೆಯಿಂದಲೇ ಸಂತ್ರಸ್ಥರಿಗೆ ಆಹಾರ ತಯಾರಿಕೆಗೆ…

ಬರದಿಂದ ತತ್ತರಿಸುತ್ತಿದೆ ಸಕ್ಕರೆ ನಾಡು ಮಂಡ್ಯ
ಮಂಡ್ಯ

ಬರದಿಂದ ತತ್ತರಿಸುತ್ತಿದೆ ಸಕ್ಕರೆ ನಾಡು ಮಂಡ್ಯ

May 6, 2019

ಮಂಡ್ಯ: ವಿಶ್ವಪ್ರಸಿದ್ಧ ಕೃಷ್ಣ ರಾಜಸಾಗರ (ಕೆಆರ್‍ಎಸ್) ಜಲಾಶಯವನ್ನೇ ಒಡಲಲ್ಲಿಟ್ಟುಕೊಂಡಿದ್ದರೂ, ನಾಡಿನ ಜೀವನದಿ ಕಾವೇರಿ ಹರಿಯುತ್ತಿದ್ದರೂ, ಸಾವಿರಾರು ಕೆರೆ-ಕಟ್ಟೆಗಳು ಇದ್ದರೂ ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ಹಲವೆಡೆ ಜನ-ಜಾನುವಾರುಗಳು ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದೆ. ಇನ್ನೊಂದೆಡೆ ಬೇಸಿಗೆಯ ಉರಿ ಬಿಸಿಲಿನ ತಾಪ ಮಂಡ್ಯ ಜಿಲ್ಲೆಯ ಜನ ತತ್ತರಿ ಸುವಂತೆ ಮಾಡುತ್ತಿದೆ. ಕೆರೆ-ಕಟ್ಟೆಗಳಲ್ಲಿ ನೀರು ಬತ್ತಿಹೋಗಿದೆ. ನೀರು, ದುಡಿಮೆ ಅರಸಿಕೊಂಡು ಜಿಲ್ಲೆಯ ಗ್ರಾಮೀಣ ಭಾಗದ ಜನರು ಗಂಟು ಮೂಟೆ ಕಟ್ಟಿಕೊಂಡು ನಗರ ಪ್ರದೇಶಗಳತ್ತ ಗುಳೇ ಹೋಗಲು ಸಜ್ಜಾಗುತ್ತಿ ದ್ದಾರೆ. ಮಂಡ್ಯ, ನಾಗಮಂಗಲ,…

ನಾಳೆಯಿಂದ ರಂಜಾನ್ ಆಚರಣೆ ಆರಂಭ
ಮೈಸೂರು

ನಾಳೆಯಿಂದ ರಂಜಾನ್ ಆಚರಣೆ ಆರಂಭ

May 6, 2019

ಮೈಸೂರು: ಇಂದು ಚಂದ್ರ ಗೋಚರಿಸದ ಹಿನ್ನೆಲೆಯಲ್ಲಿ ಮಂಗಳ ವಾರದಿಂದ ರಂಜಾನ್ ಆಚರಣೆ ಆರಂಭಿಸಲಾಗುವುದು ಎಂದು ಮೈಸೂರು ಜಿಲ್ಲಾ ಮೂನ್ ಕಮಿಟಿ ತಿಳಿಸಿದೆ. ಭಾನುವಾರ ಸಂಜೆ ಪ್ರಾರ್ಥನೆ ಬಳಿಕ ಕಮಿಟಿ ಆವರಣ ದಲ್ಲಿ ಮೈಸೂರು ಸರ್ ಖಾಝಿ ಹಜರತ್ ಮೌಲಾನಾ ಮೊಹಮದ್ ಉಸ್ಮಾನ್ ಷರೀಫ್ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ವಕ್ಫ್ ಸಲಹಾ ಸಮಿತಿ ಸಭೆಯಲ್ಲಿ ಜಿಲ್ಲಾ ಮೂನ್ ಕಮಿಟಿ ಸಂಚಾಲಕ ಆರಿಫ್ ಎ.ಮೆಹ್ಕ್ರಿ ಇನ್ನಿತರ ಸದಸ್ಯರು ಮೈಸೂರು, ಮಂಡ್ಯ, ಚಾಮರಾಜನಗರ ಸೇರಿದಂತೆ ರಾಜ್ಯದ ಹಲವು ಭಾಗಗಳಿಂದ ಮಾಹಿತಿ…

ಫೊನಿ ಚಂಡಮಾರುತ; ಭಾರತದ ಕ್ರಮಕ್ಕೆ ವಿಶ್ವಸಂಸ್ಥೆ ಶ್ಲಾಘನೆ
ಮೈಸೂರು

ಫೊನಿ ಚಂಡಮಾರುತ; ಭಾರತದ ಕ್ರಮಕ್ಕೆ ವಿಶ್ವಸಂಸ್ಥೆ ಶ್ಲಾಘನೆ

May 6, 2019

ವಾಷಿಂಗ್ಟನ್: ಫೊನಿ  ಚಂಡ ಮಾರುತ ಅಬ್ಬರಿಸುತ್ತಿರುವಂತೆಯೇ ಚಂಡಮಾರುತ ಸಂಬಂಧ ಭಾರತ ಕೈಗೊಂಡ ಸೂಕ್ತ ಮುಂಜಾಗ್ರತಾ ಕ್ರಮಗಳು ವಿಶ್ವಸಂಸ್ಥೆಯ ಗಮನ ಸೆಳೆದಿದ್ದು, ಭಾರತ ಕಾರ್ಯಕ್ಕೆ ವಿಶ್ವಸಂಸ್ಥೆ ಪ್ರಶಂಸೆ ವ್ಯಕ್ತಪಡಿಸಿದೆ. ಪ್ರಸ್ತುತ ಬಾಂಗ್ಲಾದೇಶದಲ್ಲಿ ಅಬ್ಬರಿಸುತ್ತಿರುವ ಫೆÇನಿ ಚಂಡಮಾರುತ ಕಳೆದ 3 ದಿನಗಳಿಂದ ಭಾರತದ ಒಡಿಶಾ, ಪಶ್ಚಿಮ ಬಂಗಾಳ ಮತ್ತು ಆಂಧ್ರ ಪ್ರದೇಶ ದಲ್ಲಿ ಅಬ್ಬರಿಸಿತ್ತು. ಆದರೆ ಕೇಂದ್ರ ಸರ್ಕಾರ ಮತ್ತು ಚಂಡಮಾರುತ ಪೀಡಿತ ರಾಜ್ಯಗಳು ಕೈಗೊಂಡ ಸೂಕ್ತ ಮುಂಜಾಗ್ರತಾ ಕ್ರಮಗಳಿಂದಾಗಿ ಭಾರತದಲ್ಲಿ ಪ್ರಾಣಹಾನಿ ಕಡಿಮೆಯಾಗಿತ್ತು. ಇದೇ ಕಾರಣಕ್ಕಾಗಿ ಇದೀಗ ವಿಶ್ವಸಂಸ್ಥೆ…

ಚಂಡಮಾರುತ ಹಾನಿ ಕುರಿತು ಚರ್ಚಿಸಲು ಪ್ರಧಾನಿ ಮಾಡಿದ ಕರೆ ಸ್ವೀಕರಿಸದ ಮಮತಾ!
ಮೈಸೂರು

ಚಂಡಮಾರುತ ಹಾನಿ ಕುರಿತು ಚರ್ಚಿಸಲು ಪ್ರಧಾನಿ ಮಾಡಿದ ಕರೆ ಸ್ವೀಕರಿಸದ ಮಮತಾ!

May 6, 2019

ನವದೆಹಲಿ: ಫೊನಿ ಚಂಡಮಾರುತ ಒಡಿಶಾದ ಬಳಿಕ ಪಶ್ಚಿಮ ಬಂಗಾಳ ದಲ್ಲೂ ಭಾರೀ ಅನಾಹುತ ಸೃಷ್ಟಿಸಿದ್ದು ಈ ಹಿನ್ನೆಲೆಯಲ್ಲಿ ಚಂಡಮಾರುತದ ಹಾನಿ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಸಿಎಂ ಮಮತಾ ಬ್ಯಾನರ್ಜಿಗೆ ಕರೆ ಮಾಡಿದ್ದರೂ ಮಮತಾ ಕರೆಯನ್ನು ಸ್ವೀಕರಿಸಿಲ್ಲ. ಅಲ್ಲದೆ ಮರು ಕರೆಯನ್ನೂ ಮಾಡಿಲ್ಲವಂತೆ. ನಂತರ ಮೋದಿ ಅವರು ರಾಜ್ಯಪಾಲ ಕೇಸರಿನಾಥ್ ತ್ರಿಪಾಠಿ ಅವರಿಗೆ ಕರೆ ಮಾಡಿ ಮಾಹಿತಿ ಪಡೆದುಕೊಂಡರು ಎಂದು ಉನ್ನತ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಿಎಂ ಮಮತಾ ಬ್ಯಾನರ್ಜಿಯನ್ನು ಸಂಪರ್ಕಿಸಲು ಪ್ರಧಾನಿ ಮೋದಿ…

1 323 324 325 326 327 330
Translate »