ನಾಳೆಯಿಂದ ರಂಜಾನ್ ಆಚರಣೆ ಆರಂಭ
ಮೈಸೂರು

ನಾಳೆಯಿಂದ ರಂಜಾನ್ ಆಚರಣೆ ಆರಂಭ

May 6, 2019

ಮೈಸೂರು: ಇಂದು ಚಂದ್ರ ಗೋಚರಿಸದ ಹಿನ್ನೆಲೆಯಲ್ಲಿ ಮಂಗಳ ವಾರದಿಂದ ರಂಜಾನ್ ಆಚರಣೆ ಆರಂಭಿಸಲಾಗುವುದು ಎಂದು ಮೈಸೂರು ಜಿಲ್ಲಾ ಮೂನ್ ಕಮಿಟಿ ತಿಳಿಸಿದೆ.

ಭಾನುವಾರ ಸಂಜೆ ಪ್ರಾರ್ಥನೆ ಬಳಿಕ ಕಮಿಟಿ ಆವರಣ ದಲ್ಲಿ ಮೈಸೂರು ಸರ್ ಖಾಝಿ ಹಜರತ್ ಮೌಲಾನಾ ಮೊಹಮದ್ ಉಸ್ಮಾನ್ ಷರೀಫ್ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ವಕ್ಫ್ ಸಲಹಾ ಸಮಿತಿ ಸಭೆಯಲ್ಲಿ ಜಿಲ್ಲಾ ಮೂನ್ ಕಮಿಟಿ ಸಂಚಾಲಕ ಆರಿಫ್ ಎ.ಮೆಹ್ಕ್ರಿ ಇನ್ನಿತರ ಸದಸ್ಯರು ಮೈಸೂರು, ಮಂಡ್ಯ, ಚಾಮರಾಜನಗರ ಸೇರಿದಂತೆ ರಾಜ್ಯದ ಹಲವು ಭಾಗಗಳಿಂದ ಮಾಹಿತಿ ಸಂಗ್ರಹಿಸಿದರು. ಎಲ್ಲಿಯೂ ಚಂದ್ರ ಗೋಚರವಾಗಿಲ್ಲ ಎಂಬುದನ್ನು ದೃಢಪಡಿಸಿಕೊಂಡ ನಂತರ ನಾಳೆ(ಮೇ 6) ಬದಲಾಗಿ ಮಂಗಳ ವಾರದಿಂದ ರಂಜಾನ್ ಉಪವಾಸ ಆರಂಭಿಸುವ ತೀರ್ಮಾನ ಕೈಗೊಳ್ಳಲಾಯಿತು.

ಈ ಸಂದರ್ಭದಲ್ಲಿ ಮೈಸೂರು ಸರ್ ಖಾಝಿ ಹಜರತ್ ಮೌಲಾನಾ ಮೊಹಮದ್ ಉಸ್ಮಾನ್ ಷರೀಫ್ ಅವರನ್ನು ಜಿಲ್ಲಾ ಮೂನ್ ಕಮಿಟಿ ಸಂಚಾಲಕರೂ ಆದ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಆರಿಫ್ ಎ.ಮೆಹ್ಕ್ರಿ ಅಭಿನಂದಿಸಿದರು. ಹಜರತ್ ಮೌಲಾನಾ ಮೊಹಮದ್ ನಸಿಮ್ ಅಹ್ಮದ್ ಸಾಹೇಬ್ ರಿಶಾದಿ, ಅಬ್ದುಲ್ ಸಲಾಮ್ ಸಾಹೇಬ್ ರಿಜ್ವಿ, ಮೊಹಮದ್ ಮುಮ್ತಾಜ್ ಅಹ್ಮದ್, ಸಯ್ಯದ್ ಉಮರ್, ಎಬಿಎಸ್ ಸಯ್ಯದ್ ಅಬ್ಬಾಸ್, ಮೊಹಮದ್ ಅಬ್ದುಲ ಸಲೀಮ್, ಅಬ್ದುಲ್ ಅಜಿûೀಜ್ ಖಾನ್ ಪತಾನ್, ಎಸ್.ಎ.ರೆಹಮಾನ್(ಖಲೀಲ್), ಮುದ್ದಾಸ್ಸಿರ್ ಅಲಿ ಖಾನ್, ಅಫ್ಸರ್ ಅಲಿ, ಯು.ಆಸಿಫ್ ಖಾನ್, ಸಯ್ಯದ್ ರೋಷನ್ ಮುನಾವರ್, ಮೊಹಮ್ಮದ್ ಯೂನಸ್, ಕಲೀಂ ಪಾಷಾ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

Translate »