Tag: Mysore

ಬೆಂಕಿಗಾಹುತಿಯಾಗಿದ್ದ ಬಂಡೀಪುರ ಅರಣ್ಯದಲ್ಲಿ ಬಿತ್ತನೆ ಕಾರ್ಯ ಆರಂಭ
ಮೈಸೂರು

ಬೆಂಕಿಗಾಹುತಿಯಾಗಿದ್ದ ಬಂಡೀಪುರ ಅರಣ್ಯದಲ್ಲಿ ಬಿತ್ತನೆ ಕಾರ್ಯ ಆರಂಭ

May 6, 2019

ಮೈಸೂರು: ಕಿಡಿಗೇಡಿಗಳಿಟ್ಟ ಕಿಚ್ಚಿಗೆ ಬಂಡೀಪುರ ಅಭಯಾರಣ್ಯದ ಸುಟ್ಟು ಹೋಗಿ ರುವ ಕೆಲ ಪ್ರದೇಶಕ್ಕೆ ಪುನಶ್ಚೇತನ ನೀಡಲು ಕ್ರಮ ಕೈಗೊಂಡಿರುವ ಅರಣ್ಯ ಇಲಾಖೆ ಬಿದಿರು ಸೇರಿ ದಂತೆ ಸ್ಥಳೀಯವಾಗಿ ಬೆಳೆಯುವ ಮರಗಳ ಬೀಜ ಬಿತ್ತನೆ ಆರಂಭಿಸಿದ್ದು, ಹೆಚ್ಚಿನ ಪ್ರಮಾಣ ದಲ್ಲಿ ಹಾನಿಯಾಗಿದ್ದ ಕಾಡಿಗೆ ಕಳೆದ ಐದಾರು ದಿನದಿಂದ ಬೀಜ ಬಿತ್ತನೆ ಕಾರ್ಯ ನಡೆಸ ಲಾಗುತ್ತಿದೆ. ಕಳೆದ 15 ದಿನಗಳಿಂದ ಬಂಡೀಪುರ ಅಭಯಾರಣ್ಯದ ಎಲ್ಲಾ ವಲಯಗಳಲ್ಲಿಯೂ ಉತ್ತಮ ಮಳೆಯಾಗಿದ್ದು, ಈಗಾಗಲೇ ಬಹು ತೇಕ ಎಲ್ಲಾ ವಲಯಗಳು ಹಸಿರಿನಿಂದ ಕಂಗೊ ಳಿಸುತ್ತಿದೆ….

ಉದ್ಬೂರಿನಲ್ಲಿ ಜೆಡಿಎಸ್‍ನವರು ಬಿಜೆಪಿಗೆ ಮತ ಹಾಕಿರುವುದು ನಿಜ
ಮೈಸೂರು

ಉದ್ಬೂರಿನಲ್ಲಿ ಜೆಡಿಎಸ್‍ನವರು ಬಿಜೆಪಿಗೆ ಮತ ಹಾಕಿರುವುದು ನಿಜ

May 6, 2019

ಮೈಸೂರು: ಮೈಸೂರು ತಾಲೂಕಿನ ಉದ್ಬೂರಿನಲ್ಲಿ ಜೆಡಿಎಸ್ ನವರು ಬಿಜೆಪಿ ಅಭ್ಯರ್ಥಿಗೆ ಮತ ಹಾಕಿದ್ದಾರೆಂಬ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡರ ಹೇಳಿಕೆಯನ್ನು ಮಾಜಿ ಮುಖ್ಯಮಂತ್ರಿ, ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ. ಮೈಸೂರಿಗೆ ಭಾನುವಾರ ದಿಡೀರ್ ಭೇಟಿ ನೀಡಿರುವ ಅವರು, ರಾಮಕೃಷ್ಣ ನಗರದಲ್ಲಿರುವ ನಿವಾಸದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಜಿ.ಟಿ.ದೇವೇಗೌಡ ಸತ್ಯ ಹೇಳಿದ್ದಾರೆ. ಉದ್ಬೂರಿನಲ್ಲಿ ಜೆಡಿಎಸ್ ನವರು ಬಿಜೆಪಿಗೆ ಮತ ಹಾಕಿರುವುದು ನಿಜ. ಆ ಗ್ರಾಮದಲ್ಲಿ ಜೆಡಿಎಸ್ ಮಾತ್ರವಲ್ಲ ಕಾಂಗ್ರೆಸ್ ಮತದಾರರು ಇದ್ದಾರೆ. ಅವ ರೆಲ್ಲಾ…

ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿಗಾಗಿ ವೀರಶೈವ-ಲಿಂಗಾಯತ ಸಮುದಾಯ ಹೋರಾಟ ರೂಪಿಸಬೇಕು
ಮೈಸೂರು

ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿಗಾಗಿ ವೀರಶೈವ-ಲಿಂಗಾಯತ ಸಮುದಾಯ ಹೋರಾಟ ರೂಪಿಸಬೇಕು

May 6, 2019

ಮೈಸೂರು: ರಾಜಕೀಯವಾಗಿ ಮಹಿಳೆಯರಿಗೆ ಶೇ.50 ರಷ್ಟು ಮೀಸಲಾತಿ ಪಡೆಯಲು ವೀರಶೈವ-ಲಿಂಗಾಯತ ಸಮದಾಯ ಒಗ್ಗಟ್ಟಾಗಿ ಹೋರಾಟ ರೂಪಿಸಬೇಕು ಎಂದು ಹಿರಿಯ ಅಂಕಣಕಾರ ಮಹದೇವ ಪ್ರಕಾಶ್ ಅಭಿಪ್ರಾಯಪಟ್ಟರು. ಮೈಸೂರಿನ ನ್ಯೂ ಕಾಂತರಾಜ ಅರಸ್ ರಸ್ತೆ ಆನಂದನಗರದಲ್ಲಿರುವ ವೀರವನಿತೆ ರಾಣಿ ಚೆನ್ನಮ್ಮ ಸ್ವಯಂಸೇವಾ ಸಂಘದ ಕಚೇರಿ ಆವರಣದಲ್ಲಿ ಕರ್ನಾಟಕ ರತ್ನ ಡಾ.ಶಿವಕುಮಾರ ಸ್ವಾಮೀಜಿಯವರ 112ನೇ ಜಯಂತಿ ಅಂಗವಾಗಿ ಏರ್ಪಡಿ ಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಹಲವು ವರ್ಷಗಳಿಂದ ವೀರಶೈವ-ಲಿಂಗಾಯತ ಸಮುದಾಯ ನಡುವೆ ಸಂಘರ್ಷ ನಡೆಯುತ್ತಿದ್ದು, ಇದು ಕೊನೆ ಗಾಣಬೇಕು….

ಫೊನಿ ಚಂಡಮಾರುತಕ್ಕೆ ಸಿಲುಕಿರುವ ಹಾಸನದ ಪ್ರವಾಸಿಗರುಕೋಲ್ಕತ್ತಾದಲ್ಲಿಯೇ ಎರಡು ದಿನ: ರಕ್ಷಣೆಗಾಗಿ ಮೊರೆ
ಮೈಸೂರು

ಫೊನಿ ಚಂಡಮಾರುತಕ್ಕೆ ಸಿಲುಕಿರುವ ಹಾಸನದ ಪ್ರವಾಸಿಗರುಕೋಲ್ಕತ್ತಾದಲ್ಲಿಯೇ ಎರಡು ದಿನ: ರಕ್ಷಣೆಗಾಗಿ ಮೊರೆ

May 6, 2019

ಹಾಸನ: ಊರಿಗೆ ಬರಲು ವಿಮಾನ ವ್ಯವಸ್ಥೆ ಇಲ್ಲದೇ ಇರುವುದರಿಂದ ಅಂಡಮಾನ್ ಪ್ರವಾಸಕ್ಕೆ ತೆರಳಿದ ಹಾಸನ ಜಿಲ್ಲೆಯ 8 ಮಂದಿ ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿಯೇ ಎರಡು ದಿನಗಳಿಂದ ಉಳಿದುಕೊಂಡಿದ್ದಾರೆ. ಫೆÇನಿ ಚಂಡಮಾರುತ ಭೀತಿಗೆ ರಕ್ಷಣೆಗೆ ಕೋರುತ್ತಿದ್ದಾರೆ. ಚಂಡ ಮಾರುತ ಅಪಾಯ ಮುನ್ಸೂಚನೆ ಹಿನ್ನೆಲೆಯಲ್ಲಿ ಕೋಲ್ಕತ್ತದಲ್ಲಿ ಏರ್ ಇಂಡಿಯಾ, ಜೆಟ್ ಏರ್ ವೇಸ್ ವಿಮಾನಯಾನ ಸಂಸ್ಥೆಗಳು ವಿಮಾನ ಹಾರಾಟ ಸ್ಥಗಿತಗೊಳಿಸಿದ್ದರಿಂದ ಕೋಲ್ಕತ್ತದಲ್ಲಿಯೇ ಎರಡು ದಿನಗಳಿಂದ ಇರುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯ 8 ಜನರು ಸೇರಿ ರಾಜ್ಯದ ಸುಮಾರು 70 ಮಂದಿ…

ಶಾಲಾ ಮಕ್ಕಳ ಸುರಕ್ಷತೆಗಾಗಿ ನಗರ ಪೊಲೀಸ್ ಆಯುಕ್ತರಿಂದ ಹಲವು ಮಾರ್ಗೋಪಾಯ
ಮೈಸೂರು

ಶಾಲಾ ಮಕ್ಕಳ ಸುರಕ್ಷತೆಗಾಗಿ ನಗರ ಪೊಲೀಸ್ ಆಯುಕ್ತರಿಂದ ಹಲವು ಮಾರ್ಗೋಪಾಯ

May 6, 2019

ಮೈಸೂರು: ಮೈಸೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಬರುವ ಪೂರ್ವ ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆವರೆಗಿನ ಮಕ್ಕಳ ಸುರಕ್ಷತೆಗಾಗಿ 9ಕ್ಕೂ ಹೆಚ್ಚು ಅಂಶಗಳ ಮಾರ್ಗೋಪಾಯಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಶುಕ್ರವಾರ ಆದೇಶಿಸಿದ್ದಾರೆ. ನಗರ ವ್ಯಾಪ್ತಿಯಲ್ಲಿ ಪೂರ್ವ ಪ್ರಾಥಮಿಕದಿಂದ ಪ್ರೌಢಶಿಕ್ಷಣ ದವರೆಗೆ ವ್ಯಾಸಂಗ ಮಾಡುತ್ತಿರುವ ಮಕ್ಕಳ ಸುರಕ್ಷತೆಗಾಗಿ ಆಯಾಯ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ಕೆಲ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಆದೇಶಿಸಿದ್ದು, ವಿವರ ಇಂತಿದೆ. ಶಾಲಾ ವಾಹನಗಳು ಖಾಸಗಿಯವರ ನಿರ್ವಹಣೆಯಲ್ಲಿ ದ್ದಲ್ಲಿ, ಅಂತಹ ಪ್ರತಿವಾಹನದಲ್ಲಿ ಮಕ್ಕಳ ಪಿಕಪ್…

ಇದು ಮಾವಿನ ಹಣ್ಣಿನ ಸುವಾಸನೆ ಸಮಯ
ಮೈಸೂರು

ಇದು ಮಾವಿನ ಹಣ್ಣಿನ ಸುವಾಸನೆ ಸಮಯ

May 6, 2019

ಮೈಸೂರು: ಇದು ಮಾವಿನ ಹಣ್ಣಿನ ಸುವಾಸನೆ ಸೂಸುವ ಸಮಯ. ಆದರೆ ತಾಪಮಾನ ತಂದ ಆಪತ್ತಿನಿಂದ ಇದರ ಸುವಾಸನೆ ಕಳೆದ ವರ್ಷಕ್ಕಿಂತ ಕಡಿಮೆ ಆಗಲಿದೆ ಎಂದು ಅಂದಾಜಿಸಿದ್ದು, ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದ ಮಾವು ಬೆಳೆಗಾರರಿಗೆ ನಿರಾಸೆ ಮೂಡಿಸಿದೆ. ಮೈಸೂರು ಜಿಲ್ಲೆಯಲ್ಲಿ ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ 61,025 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ಬೆಳೆಯಲಾಗುತ್ತದೆ. 2017-18ರ ಸಾಲಿ ನಲ್ಲಿ ಜಿಲ್ಲೆಯಲ್ಲಿ 4,144 ಹೆಕ್ಟೇರ್ ಪ್ರದೇಶ ಗಳಲ್ಲಿ ಮಾವು ಬೆಳೆಯಲಾಗಿದ್ದು, ಒಟ್ಟು 34,701 ಟನ್‍ಗಳಷ್ಟು ಇಳುವರಿ ಲಭಿಸಿತ್ತು ಎಂಬುದನ್ನು ತೋಟಗಾರಿಕೆ ಇಲಾಖೆ…

ಜಾನಪದ ಕಲಾ ಶಿಬಿರದಲ್ಲಿ ದೇಶಿ ಸಂಸ್ಕøತಿ ಅನಾವರಣ
ಮೈಸೂರು

ಜಾನಪದ ಕಲಾ ಶಿಬಿರದಲ್ಲಿ ದೇಶಿ ಸಂಸ್ಕøತಿ ಅನಾವರಣ

May 6, 2019

ಮೈಸೂರು: ಎಲ್ಲೆಲ್ಲೂ ತಳಿರು-ತೋರಣ. ನೆಲ ಸಾರಿಸಿ, ರಂಗೋಲಿ ಬಿಡಿಸಿ, ಮುಂಭಾಗಿಲ ಹೊಸ್ತಿ ಲಲ್ಲಿ ಬಾಳೆಕಂಬವನ್ನಿಟ್ಟು ಹಬ್ಬದ ವಾತಾ ವರಣ ನಿರ್ಮಿಸಿದ್ದ ಶಿಬಿರಾರ್ಥಿಗಳು (ಚಿಣ್ಣರು), ಕಂಸಾಳೆ ನೃತ್ಯ, ಜಾನಪದ ಗೀತೆಗಳನ್ನು ಹಾಡಿ ಸಂಭ್ರಮಿಸಿದರು. ಇಂತಹ ಹಬ್ಬದ ವಾತಾವರಣ ಕಂಡು ಬಂದಿದ್ದು ಹೂಟಗಳ್ಳಿಯ ಒಡನಾಡಿಯ ಮಡಿಲು ಆವರಣದಲ್ಲಿ. ವಿ-ಕೇರ್ ಸಂಸ್ಥೆಯು ಒಡನಾಡಿ ಮಡಿಲು ಆವರಣದಲ್ಲಿ 10 ದಿನಗಳ ಕಾಲ ಆಯೋಜಿಸಿದ್ದ `ಜಾನಪದ ಕಲಾ ಶಿಬಿರ-2019ರ ಕೊನೆಯ ದಿನವಾದ ಭಾನು ವಾರ ಶಿಬಿರಾರ್ಥಿಗಳು, ತಾವೇ ತಳಿರು-ತೋರಣಗಳನ್ನು ಕಟ್ಟಿ. ನೆಲ ಸಾರಿಸಿ, ರಂಗೋಲಿ…

ಭಾವಸಾರ್ ವಿಜನ್ ಇಂಡಿಯಾದಿಂದ ಕಾರ್ಮಿಕರಿಗೆ ಸನ್ಮಾನ
ಮೈಸೂರು

ಭಾವಸಾರ್ ವಿಜನ್ ಇಂಡಿಯಾದಿಂದ ಕಾರ್ಮಿಕರಿಗೆ ಸನ್ಮಾನ

May 6, 2019

ಮೈಸೂರು: ಟೈಲರ್ ವೃತ್ತಿ ಮೂಲಕ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿರುವ ಟೈಲರ್‍ಗಳೂ ಕಾರ್ಮಿಕರೇ ಆಗಿದ್ದು, ಅಂಥವರನ್ನು ಸನ್ಮಾನಿಸುವ ಮೂಲಕ ಭಾವಸಾರ್ ವಿಜನ್ ಇಂಡಿಯಾ ಕಾರ್ಮಿ ಕರ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಿದೆ ಎಂದು ಚಾಮರಾಜ ಕ್ಷೇತ್ರ ಶಾಸಕ ಎಲ್.ನಾಗೇಂದ್ರ ತಿಳಿಸಿದರು. ಮೈಸೂರಿನ ಕಬೀರ್ ರಸ್ತೆ ಶ್ರೀ ಪಾಂಡು ರಂಗಸ್ವಾಮಿ ದೇವಸ್ಥಾನದಲ್ಲಿ ಭಾವಸಾರ್ ವಿಜûನ್ ಇಂಡಿಯಾ ಮೈಸೂರು ವಲಯ 108ರ ಘಟಕವು ಭಾನುವಾರ ಆಯೋ ಜಿಸಿದ್ದ ಕಾರ್ಮಿಕ ದಿನಾಚರಣೆ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು….

ಕನ್ನಡ ಸಾಹಿತ್ಯ ಪರಿಷತ್ತು ವಿಶ್ವ ವಿದ್ಯಾನಿಲಯವಿದ್ದಂತೆ
ಮೈಸೂರು

ಕನ್ನಡ ಸಾಹಿತ್ಯ ಪರಿಷತ್ತು ವಿಶ್ವ ವಿದ್ಯಾನಿಲಯವಿದ್ದಂತೆ

May 6, 2019

ಮೈಸೂರು: ರಾಜ್ಯ ಮತ್ತು ಹೊರರಾಜ್ಯಗಳಲ್ಲೂ ತನ್ನ ಹೆಜ್ಜೆ ಗಳನ್ನು ಮೂಡಿಸುವ ಪ್ರಯತ್ನ ನಡೆಸಿ ರುವ ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯದ ಒಂದು ವಿಶ್ವವಿದ್ಯಾನಿಲಯವಿದ್ದಂತೆ. ಇದರ ಅಧ್ಯಕ್ಷರೇ ಕುಲಪತಿ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಅರ ವಿಂದ ಮಾಲಗತ್ತಿ ಅಭಿಪ್ರಾಯಪಟ್ಟರು. ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿ ಷತ್ತು ವಿಜಯನಗರ ಒಂದನೇ ಹಂತದಲ್ಲಿ ರುವ ಜಿಲ್ಲಾ ಸಾಹಿತ್ಯ ಭವನದಲ್ಲಿ ಭಾನು ವಾರ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿ ಷತ್ತಿನ 105ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಕವಿಗೋಷ್ಠಿ- ಗೀತ…

ಮೈಸೂರಲ್ಲಿ ನೀಟ್ ಪರೀಕ್ಷೆಗೆ 3 ಸಾವಿರ ವಿದ್ಯಾರ್ಥಿಗಳು ಹಾಜರು
ಮೈಸೂರು

ಮೈಸೂರಲ್ಲಿ ನೀಟ್ ಪರೀಕ್ಷೆಗೆ 3 ಸಾವಿರ ವಿದ್ಯಾರ್ಥಿಗಳು ಹಾಜರು

May 6, 2019

ಮೈಸೂರು: ವೈದ್ಯಕೀಯ ಮತ್ತು ದಂತ ವೈದ್ಯ ಕೋರ್ಸ್‍ಗಳಿಗೆ ಪ್ರವೇಶ ಕಲ್ಪಿಸುವ `ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್)’ ಭಾನುವಾರ ಮೈಸೂರಿನ 29 ಕೇಂದ್ರಗಳಲ್ಲಿ ನಡೆಯಿತು. ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (ಎಂಹೆಚ್ ಆರ್‍ಡಿ) ಸ್ಥಾಪಿಸಿರುವ ಸ್ವಾಯತ್ತ ಸಂಸ್ಥೆಯಾದ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್‍ಟಿಎ) ನೀಟ್ ಪರೀಕ್ಷೆ ನಡೆಸುವ ಹೊಣೆ ಹೊಂದಿದ್ದು, ಮೈಸೂರಿನ 29 ಕೇಂದ್ರಗಳಿಂದ 3 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ನೀಟ್ ಪರೀಕ್ಷೆ ಬರೆದಿದ್ದಾರೆ. ದೇಶದ 100ಕ್ಕೂ ಹೆಚ್ಚು ನಗರಗಳು ಸೇರಿದಂತೆ ರಾಜ್ಯದ ಬೆಳಗಾವಿ, ಬೆಂಗಳೂರು, ದಾವಣಗೆರೆ,…

1 324 325 326 327 328 330
Translate »