ಫೊನಿ ಚಂಡಮಾರುತಕ್ಕೆ ಸಿಲುಕಿರುವ ಹಾಸನದ ಪ್ರವಾಸಿಗರುಕೋಲ್ಕತ್ತಾದಲ್ಲಿಯೇ ಎರಡು ದಿನ: ರಕ್ಷಣೆಗಾಗಿ ಮೊರೆ
ಮೈಸೂರು

ಫೊನಿ ಚಂಡಮಾರುತಕ್ಕೆ ಸಿಲುಕಿರುವ ಹಾಸನದ ಪ್ರವಾಸಿಗರುಕೋಲ್ಕತ್ತಾದಲ್ಲಿಯೇ ಎರಡು ದಿನ: ರಕ್ಷಣೆಗಾಗಿ ಮೊರೆ

May 6, 2019

ಹಾಸನ: ಊರಿಗೆ ಬರಲು ವಿಮಾನ ವ್ಯವಸ್ಥೆ ಇಲ್ಲದೇ ಇರುವುದರಿಂದ ಅಂಡಮಾನ್ ಪ್ರವಾಸಕ್ಕೆ ತೆರಳಿದ ಹಾಸನ ಜಿಲ್ಲೆಯ 8 ಮಂದಿ ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿಯೇ ಎರಡು ದಿನಗಳಿಂದ ಉಳಿದುಕೊಂಡಿದ್ದಾರೆ.

ಫೆÇನಿ ಚಂಡಮಾರುತ ಭೀತಿಗೆ ರಕ್ಷಣೆಗೆ ಕೋರುತ್ತಿದ್ದಾರೆ. ಚಂಡ ಮಾರುತ ಅಪಾಯ ಮುನ್ಸೂಚನೆ ಹಿನ್ನೆಲೆಯಲ್ಲಿ ಕೋಲ್ಕತ್ತದಲ್ಲಿ ಏರ್ ಇಂಡಿಯಾ, ಜೆಟ್ ಏರ್ ವೇಸ್ ವಿಮಾನಯಾನ ಸಂಸ್ಥೆಗಳು ವಿಮಾನ ಹಾರಾಟ ಸ್ಥಗಿತಗೊಳಿಸಿದ್ದರಿಂದ ಕೋಲ್ಕತ್ತದಲ್ಲಿಯೇ ಎರಡು ದಿನಗಳಿಂದ ಇರುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಜಿಲ್ಲೆಯ 8 ಜನರು ಸೇರಿ ರಾಜ್ಯದ ಸುಮಾರು 70 ಮಂದಿ ಏ. 29ರಂದು ಅಂಡಮಾನ್ ನಿಕೋಬಾರ್ ದ್ವೀಪಕ್ಕೆ ಪ್ರವಾಸಕ್ಕೆ ತೆರಳಿದರು. ನಿಗದಿಯಂತೆ ಅವರು ಮೇ 4(ಶನಿವಾರ) ಬೆಂಗಳೂರಿನತ್ತ ಬರಬೇಕಿತ್ತು. ಅದಕ್ಕಾಗಿ ಅವರು ಸ್ಪೈಸ್ ಜೆಟ್ ವಿಮಾನದಲ್ಲಿ ಟಿಕೆಟ್ ಬುಕ್ ಮಾಡಿಕೊಂಡಿದ್ದರು ಎನ್ನಲಾಗಿದೆ.

ಆದರೆ, ಬಂಗಾಳಕೊಲ್ಲಿಯಲ್ಲಿ ಫೊನಿ ಚಂಡಮಾರುತ ಸಾಕಷ್ಟು ತೀವ್ರಗೊಂಡಿ ರುವುದರಿಂದ ಪೆÇೀರ್ಟ್‍ಬ್ಲೇರ್‍ನ ವಿಮಾನ ನಿಲ್ದಾಣದಿಂದ ವಿಮಾನಗಳ ಸಂಚಾರ ವನ್ನು ರದ್ದುಗೊಳಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿತ್ತು. ಬಳಿಕ ಅಂಡಮಾನ್ ಸರ್ಕಾರವು ಸುರಕ್ಷಿತವಾಗಿ ಕೋಲ್ಕತ್ತಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 70 ಜನರನ್ನು ತಲುಪಿಸಿದೆ.

ಆದರೆ, ರಾಜ್ಯಕ್ಕೆ ಮರಳಲು ಪ್ರವಾಸಿಗರು ಪ್ರಯಾಸ ಪಡುವಂತಾಗಿದೆ. ಪ್ರಯಾ ಣಿಕರ ಸಮಸ್ಯೆಯನ್ನು ಆಲಿಸಿದ ಕೋಲ್ಕತ್ತಾ ವಿಮಾನ ನಿಲ್ದಾಣದ ಸಿಬ್ಬಂದಿ ಹಾರಿಕೆಯ ಉತ್ತರ ನೀಡುತ್ತಿದ್ದು, ಮೇ 8ರವರೆಗೂ ಯಾವುದೇ ವಿಮಾನ ಸಂಚಾರವಿಲ್ಲ ಎನ್ನುತ್ತಿದ್ದಾರೆ ಎಂದು ಪ್ರವಾಸಿಗರೊಬ್ಬರು ತಮ್ಮ ಸ್ಥಿತಿಯನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ನಮ್ಮನ್ನು ರಕ್ಷಣೆ ಮಾಡಬೇಕು ಎಂದು ಸರ್ಕಾರದ ನೆರವಿಗೆ ಮೊರೆಯಿಟ್ಟಿದ್ದಾರೆ.

ಒಟ್ಟಾರೆ ಪ್ರವಾಸಕ್ಕೆಂದು ಅಂಡಮಾನ್‍ಗೆ ಹೋಗಿದ್ದ ಹಾಸನ ಜಿಲ್ಲೆಯ 8 ಮಂದಿ ಕೊಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಕಾಲಕಳೆಯುವಂತ ಪರಿಸ್ಥಿತಿ ನಿರ್ಮಾಣ ವಾಗಿದ್ದು, ಸರ್ಕಾರ ಹಾಗೂ ಜಿಲ್ಲಾಡಳಿತದ ನೆರವಿನ ನಿರೀಕ್ಷೆಯಲ್ಲಿದ್ದಾರೆ.

Translate »