ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿಗಾಗಿ ವೀರಶೈವ-ಲಿಂಗಾಯತ ಸಮುದಾಯ ಹೋರಾಟ ರೂಪಿಸಬೇಕು
ಮೈಸೂರು

ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿಗಾಗಿ ವೀರಶೈವ-ಲಿಂಗಾಯತ ಸಮುದಾಯ ಹೋರಾಟ ರೂಪಿಸಬೇಕು

May 6, 2019

ಮೈಸೂರು: ರಾಜಕೀಯವಾಗಿ ಮಹಿಳೆಯರಿಗೆ ಶೇ.50 ರಷ್ಟು ಮೀಸಲಾತಿ ಪಡೆಯಲು ವೀರಶೈವ-ಲಿಂಗಾಯತ ಸಮದಾಯ ಒಗ್ಗಟ್ಟಾಗಿ ಹೋರಾಟ ರೂಪಿಸಬೇಕು ಎಂದು ಹಿರಿಯ ಅಂಕಣಕಾರ ಮಹದೇವ ಪ್ರಕಾಶ್ ಅಭಿಪ್ರಾಯಪಟ್ಟರು.

ಮೈಸೂರಿನ ನ್ಯೂ ಕಾಂತರಾಜ ಅರಸ್ ರಸ್ತೆ ಆನಂದನಗರದಲ್ಲಿರುವ ವೀರವನಿತೆ ರಾಣಿ ಚೆನ್ನಮ್ಮ ಸ್ವಯಂಸೇವಾ ಸಂಘದ ಕಚೇರಿ ಆವರಣದಲ್ಲಿ ಕರ್ನಾಟಕ ರತ್ನ ಡಾ.ಶಿವಕುಮಾರ ಸ್ವಾಮೀಜಿಯವರ 112ನೇ ಜಯಂತಿ ಅಂಗವಾಗಿ ಏರ್ಪಡಿ ಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಹಲವು ವರ್ಷಗಳಿಂದ ವೀರಶೈವ-ಲಿಂಗಾಯತ ಸಮುದಾಯ ನಡುವೆ ಸಂಘರ್ಷ ನಡೆಯುತ್ತಿದ್ದು, ಇದು ಕೊನೆ ಗಾಣಬೇಕು. ಇವೆರಡಕ್ಕೂ ಪರ್ಯಾಯ ಪದ ಹುಟ್ಟು ಹಾಕಿ ಸಮುದಾಯದ ಒಗ್ಗಟ್ಟು ಕಾಪಾಡಬೇಕು ಎಂದು ಸಲಹೆ ನೀಡಿದ ಅವರು, 12ನೇ ಶತಮಾನದಲ್ಲಿ ಅಣ್ಣ ಬಸ ವಣ್ಣ ಹಾಕಿಕೊಟ್ಟ `ಇಷ್ಟಲಿಂಗ’ ಪರಿಕಲ್ಪನೆ ಯಲ್ಲಿ ಅಂತರಂಗದ ಇಚ್ಛೆಯಂತೆ ಇಷ್ಟದ ದೇವರುಗಳನ್ನು ಕಾಣಬಹುದು ಎಂದರು.

12ನೇ ಶತಮಾನದಲ್ಲಿ ಪುರೋಹಿತ ಶಾಹಿಗಳ ವಿರುದ್ದ ಅಣ್ಣ ಬಸವಣ್ಣ ಸೇರಿ ದಂತೆ ಅನೇಕ ಶರಣರು, ವಚನ ಚಳವಳಿ ರೂಪಿಸಿದರು. ಅನುಭವ ಮಂಟಪದ ಮೂಲಕ ಸರ್ವರಿಗೂ ಸಮಾನತೆ ಸಾರುವ `ಪ್ರಜಾಪ್ರಭುತ್ವ’ ಪರಿಕಲ್ಪನೆಯನ್ನು ಅಂದೇ ಪರಿಚಯಿಸಿದ್ದರು. ತದನಂತರ ಇದರ ಬುನಾದಿ ಮೇಲೆ ಸ್ವಾತಂತ್ರ್ಯ ಹೋರಾಟಗಳು ಕಾಲಕ್ರಮೇಣ ರೂಪುಗೊಂಡವು ಎಂದರು.

12ನೇ ಶತಮಾನದ ಅಣ್ಣ ಬಸವಣ್ಣ ನಡೆದ ಹಾದಿಯಲ್ಲೇ ಡಾ.ಶಿವಕುಮಾರ ಸ್ವಾಮೀಜಿ ಅವರು ಈ ಶತಮಾನದಲ್ಲಿ ಅಕ್ಷರಶಃ ಪಾಲಿಸಿದರು. ಇವರ ಸಾದನೆ ಜಗತ್ತಿನ ಮೂಲೆಮೂಲೆಗಳಲ್ಲಿ ಜ್ಞಾನದ ಅರಿವು ಮೂಡಿಸಿದರು. ಲಿಂಗಾಯತ ಎನ್ನುವುದನ್ನು ನಾನು ಒಂದು ಜಾತಿಯಾಗಿ ನೋಡಲು ಇಷ್ಟಪಡುವುದಿಲ್ಲ. ಬದಲಾಗಿ, ಅರಿವಿನ ಧರ್ಮವಾಗಿ ನೋಡಲು ಬಯಸುತ್ತೇನೆ. ಆದ್ದರಿಂದ ವೀರಶೈವ-ಲಿಂಗಾಯತ ಸಮುದಾಯದವರು ಒಗ್ಗಟ್ಟಾಗಿ ಇದಕ್ಕೊಂದು ತಾರ್ಕಿಕ ಅಂತ್ಯ ಕಾಣಿಸುವುದು ಉತ್ತಮ ಎಂದರು.

ಡಾ.ಶಿವಕುಮಾರಸ್ವಾಮೀಜಿ ಸಾಧನೆ ಹಿಮಾಲಯದ ಪರ್ವತದಷ್ಟು, ಇದನ್ನು ಒಂದು ಗಂಟೆಯಲ್ಲಿ ಜನರಿಗೆ ವಿವರಿಸು ವುದು ಕಷ್ಟ. ಸಿದ್ದಗಂಗಾ ಶ್ರೀಗಳು ಕಳೆದ 88 ವರ್ಷಗಳ ಕಾಲ ಹಸಿದವರಿಗೆ ಅನ್ನ, ಶಿಕ್ಷಣ, ಕಾಯಕ ಹಾದಿ ತೋರಿಸಿಕೊಟ್ಟ ಮಹಾನ್ ಸಂತ. ಅವರು ಇತರರಿಗೆ ಬೋಧಿಸದೇ ಸ್ವತಃ ಅವರೇ ಹಲವು ವರ್ಷಗಳಿಂದ ಪಾಲಿಸಿಕೊಂಡು ಬಂದಿ ದ್ದರು. ಅವರು ದೀಕ್ಷೆ ಪಡೆದ ದಿನ ದಿಂದಲೂ `ಇಷ್ಟಲಿಂಗ’ ಪೂಜೆಯನ್ನು ಒಂದು ದಿನ ಬಿಡದೇ ಜೀವಿತಾವಧಿಯ ಕೊನೆಯವರೆಗೂ ಪೂಜಿಸಿದ ಮಹಾನ್ ಸಂತ. ಇಂಥ ಸಂತರ ಆದರ್ಶಗಳನ್ನು ಮುಂದಿನ ಪೀಳಿಗೆಗೂ ಪರಿಚಯಿಸು ವುದು ನಮ್ಮ-ನಿಮ್ಮೆಲ್ಲರ ಕರ್ತವ್ಯ ಎಂದರು.

ರಾಜಕಾರಣಿಗಳಿಗೆ ಮಾತಿನ ಮೇಲೆ ಹಿಡಿತವಿಲ್ಲ. ಇದಕ್ಕೆ ಸ್ಪಷ್ಟ ಉದಾಹರಣೆ 17ನೇ ಲೋಕಸಭಾ ಚುನಾವಣೆಯಲ್ಲಿ ಕೇವಲ ಅಧಿಕಾರಕ್ಕಾಗಿ ಕೀಳುಮಟ್ಟದ ಪದ ಪ್ರಯೋಗವಾದ ಈ ಬಾರಿಯ ಸಾರ್ವ ಜನಿಕ ಭಾಷಣಗಳಲ್ಲಿ ಕೇಳಿ ಬಂದವು. ಇಂತಹವರ ಮಧ್ಯೆ ಡಾ.ಶಿವಕುಮಾರ ಸ್ವಾಮೀಜಿ, ಬಸವಣ್ಣನವರ ಆದರ್ಶದಂತೆ ಬದುಕಿ, ಇತರರಿಗೂ ಮಾದರಿಯಾಗಿ ಬದುಕಿದವರು. ಈ ಶತಮಾನದಲ್ಲಿ ಜನ ಸಾಮಾನ್ಯರಿಂದ `ನಡೆದಾಡುವ ದೇವ ರೆಂದು’ ಕರೆಸಿಕೊಂಡು ಆಧ್ಯಾತ್ಮ ಕ್ಷೇತ್ರದ ಮಹಾನ್ ಸಂತ. ಇಂತಹ ಯೋಗಿಯ ಕಾಲದಲ್ಲಿ ನಾವು-ನೀವೆಲ್ಲಾ ಬದುಕಿದ್ದೇವು ಎಂಬುದೇ ನಮ್ಮೆಲ್ಲರ ಸೌಭಾಗ್ಯ ಎಂದರು.
ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕು ಮುಡಿಗುಂಡ ಮಠದ ಶ್ರೀಕಂಠ ಸ್ವಾಮೀಜಿ ಮಾತನಾಡಿ, ಲಿಂಗೈಕ್ಯ ಡಾ.ಶಿವ ಕುಮಾರಸ್ವಾಮೀಜಿ ಅವರು ಯಾವುದೇ ಕಷ್ಟಗಳಿಗೂ ಕಿವಿಗೊಡದೇ ತಮ್ಮ ಕಾಯಕದಲ್ಲಿ ತೊಡಗಿದ್ದರು. ಅವರಿಗೆ 100 ವರ್ಷ ದಾಟಿದ ನಂತರ ಅವರ ವಿರುದ್ಧ ಅಪಚಾರ ಮಾಡಿದವರೂ ಸಹ ಇವರ ಸಾಧನೆಗೆ ಬೆರಗಾಗಿ ಸುಮ್ಮನಾದರು. ಸಾರ್ವಜನಿಕ ಕ್ಷೇತ್ರದಲ್ಲಿ ಆರೋಪ ಎಂತಹ ಗಣ್ಯವ್ಯಕ್ತಿಗಳನ್ನೂ ಬಿಟ್ಟಿಲ್ಲ. ಇದು ಶಿವಕುಮಾರಸ್ವಾಮೀಜಿ ಅವರೂ ಹೊರತಾಗಿಲ್ಲ ಎಂದು ತಿಳಿಸಿದರು.

ವೀರವನಿತೆ ರಾಣಿ ಚೆನ್ನಮ್ಮ ಸ್ವಯಂ ಸೇವಾ ಸಂಘದ ಅಧ್ಯಕ್ಷ ಎಂ.ನಂಜುಂಡ ಸ್ವಾಮಿ ಮಾತನಾಡಿ, ಕಳೆದ ಮೂರು ವರ್ಷಗಳಿಂದ ಡಾ.ಶಿವಕುಮಾರ ಸ್ವಾಮೀಜಿಯವರ ಜಯಂತಿಯನ್ನು ನಮ್ಮ ಸಂಘದ ವತಿಯಿಂದ ಆಯೋಜಿಸ ಲಾಗುತ್ತಿದೆ. ನಮ್ಮ ಸಂಘದಿಂದ ಗ್ರಾಮೀಣ ಪ್ರದೇಶದಲ್ಲಿ ಉಚಿತ ಕಾನೂನು ಶಿಬಿರಗಳನ್ನು ಆಯೋಜಿಸಿ, ರೈತರಿಗೆ ಉಚಿತ ಕಾನೂನು ಸಲಹೆಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು. ಈ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕೆ.ವಸಂತಕುಮಾರ್, ಎಸ್.ಕುಮಾರ ಸ್ವಾಮಿ, ಡಾ.ಡಿ.ಜಿ.ಉಮೇಶ್ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ನಗರ ಪಾಲಿಕೆ ಮಾಜಿ ಸದಸ್ಯರಾದ ಜೆ.ಎಸ್. ಜಗದೀಶ್, ಕೆ.ವಿ.ಮಲ್ಲೇಶ್, ಲಿಂಗಾಯತ ಸಮುದಾಯದ ಮುಖಂಡರಾದ ಎ.ಪಿ. ವಿರೂಪಾಕ್ಷ, ಹಿನಕಲ್ ಬಸವರಾಜು, ಕಾನ್ಯ ಶಿವಮೂರ್ತಿ, ಎಂ.ನಿರಂಜನ್ ಮೂರ್ತಿ, ಜಯಗೌಡ ಇದ್ದರು. ಬಿ.ಆರ್.ಶಿವಕುಮಾರ ನಿರೂಪಿಸಿದರೆ, ವಸಂತಕುಮಾರ ಸ್ವಾಗತಿಸಿದರು.

Translate »