ಉದ್ಬೂರಿನಲ್ಲಿ ಜೆಡಿಎಸ್‍ನವರು ಬಿಜೆಪಿಗೆ ಮತ ಹಾಕಿರುವುದು ನಿಜ
ಮೈಸೂರು

ಉದ್ಬೂರಿನಲ್ಲಿ ಜೆಡಿಎಸ್‍ನವರು ಬಿಜೆಪಿಗೆ ಮತ ಹಾಕಿರುವುದು ನಿಜ

May 6, 2019

ಮೈಸೂರು: ಮೈಸೂರು ತಾಲೂಕಿನ ಉದ್ಬೂರಿನಲ್ಲಿ ಜೆಡಿಎಸ್ ನವರು ಬಿಜೆಪಿ ಅಭ್ಯರ್ಥಿಗೆ ಮತ ಹಾಕಿದ್ದಾರೆಂಬ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡರ ಹೇಳಿಕೆಯನ್ನು ಮಾಜಿ ಮುಖ್ಯಮಂತ್ರಿ, ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ.

ಮೈಸೂರಿಗೆ ಭಾನುವಾರ ದಿಡೀರ್ ಭೇಟಿ ನೀಡಿರುವ ಅವರು, ರಾಮಕೃಷ್ಣ ನಗರದಲ್ಲಿರುವ ನಿವಾಸದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಜಿ.ಟಿ.ದೇವೇಗೌಡ ಸತ್ಯ ಹೇಳಿದ್ದಾರೆ. ಉದ್ಬೂರಿನಲ್ಲಿ ಜೆಡಿಎಸ್ ನವರು ಬಿಜೆಪಿಗೆ ಮತ ಹಾಕಿರುವುದು ನಿಜ. ಆ ಗ್ರಾಮದಲ್ಲಿ ಜೆಡಿಎಸ್ ಮಾತ್ರವಲ್ಲ ಕಾಂಗ್ರೆಸ್ ಮತದಾರರು ಇದ್ದಾರೆ. ಅವ ರೆಲ್ಲಾ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿ ದ್ದಾರೆ. ಆದರೆ ಉದ್ಬೂರು ಗ್ರಾಮವೊಂದರ ಮತದಾನ ಇಡೀ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೆ ಅನ್ವಯಿಸುವುದಿಲ್ಲ. ಕ್ಷೇತ್ರದಲ್ಲಿ 18 ಲಕ್ಷ ಮತದಾರರಿದ್ದಾರೆ. ಎಲ್ಲರೂ ಬುದ್ಧಿವಂತರಾಗಿದ್ದು, ರಾಜ ಕೀಯ ಪರಿಸ್ಥಿತಿಯನ್ನು ಪರಾಮರ್ಶಿಸಿ, ಮತ ಚಲಾಯಿಸಿದ್ದಾರೆ. ಮೈಸೂರು-ಕೊಡಗು ಕ್ಷೇತ್ರದಲ್ಲಿ ನಾವು ನೂರಕ್ಕೆ ನೂರು ಗೆದ್ದೇ ಗೆಲ್ಲುತ್ತೇವೆ ಎಂದು ಅಚಲ ವಿಶ್ವಾಸ ವ್ಯಕ್ತಪಡಿಸಿದರು.

ಮೈಸೂರು-ಕೊಡಗು ಕ್ಷೇತ್ರದಲ್ಲಿ ನಾವು ಗೆಲ್ಲುವುದು ನಿಶ್ಚಿತ. ಆದರೆ ಎಷ್ಟು ಸಾವಿರ ಮತಗಳಿಂದ ಗೆಲ್ಲುತ್ತೇವೆ ಅಂತ ಶಾಸ್ತ್ರ ಹೇಳೋಕಾಗುತ್ತಾ? ಎಂದು ಪ್ರಶ್ನೆ ಯೊಂದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಮಂಡ್ಯ ಕ್ಷೇತ್ರದ ಫಲಿತಾಂಶ ಬಗ್ಗೆ ಕ್ಷಣಕಾಲ ಯೋಚಿಸಿ, ಮೈಸೂರು-ಕೊಡಗಿನಲ್ಲೂ ಗೆಲ್ಲುತ್ತೇವೆ, ಮಂಡ್ಯದಲ್ಲೂ ಗೆಲ್ಲುತ್ತೇವೆ ಎಂದರು. ಮಂಡ್ಯದ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರೊಂದಿಗೆ ಕಾಂಗ್ರೆಸ್ ನಾಯಕರು ಔತಣಕೂಟದಲ್ಲಿ ಪಾಲ್ಗೊಂ ಡಿದ್ದರ ಬಗ್ಗೆ ಪ್ರತಿಕ್ರಿಯಿಸಿ, ಸುಮಲತಾ ಅವರ ಜೊತೆ ಊಟಕ್ಕೆ ಹೋದವರನ್ನ ಪ್ರಶ್ನಿಸಲಾಗದು. ಊಟಕ್ಕೆ ಹೋಗಿರುವ ವಿಚಾರವನ್ನೂ ನಾನು ಮಾತನಾಡುವುದಕ್ಕೆ ಆಗುವುದಿಲ್ಲ. ಈಗ ನೀವೇ ಎಲ್ಲೋ ಊಟಕ್ಕೆ ಹೋಗಿರುತ್ತೀರಿ, ಅದನ್ನು ನಿಮ್ಮ ಮಾಲೀ ಕರು ಪ್ರಶ್ನೆ ಮಾಡಿದರೆ ಅದು ಸರಿ ಎನಿಸುತ್ತಾ? ಎಂದು ಮಾಧ್ಯಮದವರನ್ನೇ ಪ್ರಶ್ನಿಸಿದರು.

ಈಶ್ವರಪ್ಪಗೆ ಎದಿರೇಟು: ಸಿದ್ದರಾಮಯ್ಯ ಸಿಎಂ ಆಗಿದ್ದ ಸಂದರ್ಭದಲ್ಲಿ ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದಿತ್ತು. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಕೇಳಿ ಕೊಂಡಾಗ `ಏನ್ ಮಾಡ್ಬೇಕು ಈವಾಗ’ ಎಂದು ಉಡಾಫೆಯಿಂದ ಉತ್ತರಿಸಿದ್ದ ರೆಂಬ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರ ಮಾತಿಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, `ಅವನು ಹೇಳಿದಂತೆ ನಾನು ಹೇಳಿರಲು ಸಾಧ್ಯವೇ ಇಲ್ಲ. ನಾನು ಏನಾದರೂ ಆ ರೀತಿ ಮಾತನಾಡಿದ್ದರೆ ಅವನೇಕೆ ಆಗ ಪ್ರಶ್ನೆ ಮಾಡಲಿಲ್ಲ. ಅವನೇಕೆ ಪ್ರತಿಪಕ್ಷದಲ್ಲಿ ಸುಮ್ಮನೆ ಕುಳಿತಿದ್ದ’ ಎಂದು ಏಕವಚನದಲ್ಲೇ ತಿರುಗೇಟು ನೀಡಿದರ ಲ್ಲದೆ, ನೀವು ಆತನನ್ನೂ ಪ್ರಶ್ನೆ ಮಾಡಬೇಕಿತ್ತು. ನೀವೇಕೆ ಮಾಡಲಿಲ್ಲ ಎಂದು ಮಾಧ್ಯಮದವರ ಮೇಲೂ ಕಿಡಿಕಾರಿದರು.

ನನ್ನ ಗೆಲುವು ನಿಶ್ಚಿತ: ಇದೇ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮೈಸೂರು-ಕೊಡಗು ಕ್ಷೇತ್ರದ ಮೈತ್ರಿ ಅಭ್ಯರ್ಥಿ ಸಿ.ಹೆಚ್. ವಿಜಯಶಂಕರ್, ಜಿಟಿಡಿಯವರ ಹೇಳಿಕೆ ಇಡೀ ಕ್ಷೇತ್ರ ಅಥವಾ ಇಡೀ ಜೆಡಿಎಸ್ ಕಾರ್ಯಕರ್ತರಿಗೆ ಸಂಬಂಧಿಸಿದ್ದಲ್ಲ.

ಮೂಲತಃ ಮೈಸೂರು ಕಾಂಗ್ರೆಸ್ ಭದ್ರ ಕೋಟೆ. ಈವರೆಗಿನ 16 ಲೋಕಸಭಾ ಚುನಾವಣೆಯಲ್ಲಿ 13 ಬಾರಿ ಕಾಂಗ್ರೆಸ್ ಗೆದ್ದಿದೆ. ಅಲ್ಲದೆ ಈ ಬಾರಿ ಜೆಡಿಎಸ್ ನಮ್ಮೊಂದಿಗಿದೆ. ಎರಡು ಪಕ್ಷದ ಕಾರ್ಯ ಕರ್ತರು ನಮಗೆ ಸಹಕಾರ ಮಾಡಿದ್ದಾರೆ. ಹಾಗಾಗಿ ನಾನು ಗೆಲ್ಲುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿದರು.

ಮೈಸೂರು-ಕೊಡಗು ಕ್ಷೇತ್ರದ ಚುನಾವಣೆ ಸಂಬಂಧ ಇತ್ತೀಚೆಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರು, ನಾವು ಅಂದುಕೊಂಡಂತೆ ಬಿಜೆಪಿಯನ್ನು ಒಂದಂಕಿಗೆ ಇಳಿಸುವಲ್ಲಿ ವಿಫಲವಾಗಿ ದ್ದೇವೆ ಎಂದೆನಿಸುತ್ತಿದೆ. ಮೈತ್ರಿ ಪಕ್ಷದ ನಾಯಕರು ಒಗ್ಗೂಡಿ ಪ್ರಚಾರ ನಡೆಸು ವುದು ವಿಳಂಬವಾಗಿದ್ದರಿಂದ ತಳಮಟ್ಟದ ಕಾರ್ಯಕರ್ತರ ಸಮರ್ಪಕವಾಗಿ ಕೆಲಸ ಮಾಡಲು ಆಗಲಿಲ್ಲ. ಉದ್ಬೂರಿನಲ್ಲಿ ಸ್ಥಳೀಯ ಚುನಾವಣೆಯಲ್ಲಿದ್ದ ಜಿದ್ದಾಜಿದ್ದಿ ಹಾಗೆಯೇ ಉಳಿದಿದೆ. ಹಾಗಾಗಿ ಅಲ್ಲಿ ಕಾಂಗ್ರೆಸ್ ನವರು ಕಾಂಗ್ರೆಸ್‍ಗೆ, ಜೆಡಿಎಸ್‍ನವರು ಬಿಜೆಪಿಗೆ ಮತ ಹಾಕಿದ್ದಾರೆ ಎಂದಿದ್ದರು. ಈ ಹೇಳಿಕೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಸಿದ್ದರಾಮಯ್ಯ ಹಾಗೂ ಜಿಟಿಡಿ ನಡುವೆ ಚಾಮುಂಡೇಶ್ವರಿ ಚುನಾವಣೆಯ ವೈರತ್ವ ಮುಂದುವರೆದಿದೆ. ಸುಮಲತಾ ಅವರೊಂದಿಗೆ ಕಾಂಗ್ರೆಸ್ ನಾಯಕರು ಔತಣ ಕೂಟದಲ್ಲಿ ಭಾಗಿ ಯಾಗಿದ್ದರಿಂದ ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರೇ ಜಿಟಿಡಿ ಅವರಿಂದ ಹೀಗೆ ಹೇಳಿಕೆ ಕೊಡಿಸಿದ್ದಾರೆ. ಹೀಗೆ ವಿಭಿನ್ನ ವಿಶ್ಲೇಷಣೆ ನಡೆದಿತ್ತು. ಇದೀಗ ಸಿದ್ದರಾಮಯ್ಯನವರೇ ಜಿಟಿಡಿ ಹೇಳಿಕೆಯನ್ನು ಸಮ ರ್ಥಿಸಿಕೊಳ್ಳುವ ಮೂಲಕ ಊಹಾಪೋಹ ಚರ್ಚೆಗೆ ಇತಿಶ್ರೀ ಹಾಡಿದ್ದಾರೆ.

Translate »