ಮೈಸೂರು, ಜ.4(ಎಂಟಿವೈ)- ಮಿತಿ ಮೀರಿದ ಪ್ಲಾಸ್ಟಿಕ್ ಬಳಕೆಯಿಂದಾಗಿ ಹವಾಮಾನ ವೈಪರೀತ್ಯ ಹೆಚ್ಚಾಗಿದ್ದು, ಜನಜೀವನದ ಮೇಲೆ ದುಷ್ಪರಿಣಾಮ ಬೀರುವುದನ್ನು ತಡೆಗಟ್ಟಲು ಎಲ್ಲರೂ ಪರಿಸರ ಸಂರಕ್ಷಣೆಗೆ ಕೈಜೋಡಿಸುವ ಅಗತ್ಯವಿದೆ ಎಂದು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅಭಿಪ್ರಾಯಪಟ್ಟಿದ್ದಾರೆ. ಮೈಸೂರಿನ ಆರ್.ಟಿ.ನಗರದ ಯುಎಸ್‍ಎ ಫಾರಂ ನಲ್ಲಿ ಶನಿವಾರÀ ರೋಟರಿ ಜಿಲ್ಲೆ 3181 ಸಂಸ್ಥೆ ಆಯೋಜಿ ಸಿದ್ದ ಸಂಕಲ್ಪ-2020ರ `4ನೇ ಜಿಲ್ಲಾ ಸಮಾವೇಶ’ ದಲ್ಲಿ ಮಾತನಾಡಿದ ಅವರು, ಹಲವು ಕಾರಣದಿಂದ ಈಗಾಗಲೇ ಹವಾಮಾನದಲ್ಲಿ ತೀವ್ರ ಪ್ರಮಾಣದಲ್ಲಿ ವ್ಯತ್ಯಾಸಗಳಾಗುತ್ತಿವೆ. ಇದರಿಂದ ಋತುಗಳಲ್ಲಿ ವ್ಯತ್ಯಾಸ…
ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ: ಹಿರಿಯ ಪುರುಷರ ವಿಭಾಗದ ಡಿಸ್ಕಸ್, ಗುಂಡು ಎಸೆತದಲ್ಲಿ ತಿ.ನರಸೀಪುರದ ಕೆ.ಬಿ.ಅಯ್ಯಪ್ಪ ಪರಾಕ್ರಮ
January 5, 2020ಮೈಸೂರು,ಜ.4(ವೈಡಿಎಸ್)-ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ 50-60 ವರ್ಷ ಮೇಲ್ಪಟ್ಟ ಪುರು ಷರ ವಿಭಾಗದ ಡಿಸ್ಕಸ್ ಥ್ರೋ ಮತ್ತು ಗುಂಡು ಎಸೆತದಲ್ಲಿ ತಿ.ನರಸೀಪುರ ಶಿಕ್ಷಣ ಇಲಾಖೆಯ ಕೆ.ಬಿ.ಅಯ್ಯಪ್ಪ ಪ್ರಥಮ ಸ್ಥಾನ ಪಡೆದಿದ್ದಾರೆ. ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಜ್ಯ ಸರ್ಕಾರಿ ನೌಕರರ ಸಂಘದ ಸಂಯುಕ್ತಾಶ್ರಯಲ್ಲಿ ಆಯೋಜಿಸಿರುವ ಜಿಲ್ಲಾ ಮಟ್ಟದ ಕ್ರೀಡಾಕೂಟದ 50-60 ವರ್ಷ ಮೇಲ್ಪಟ್ಟ ಪುರುಷರ ವಿಭಾಗದ ಡಿಸ್ಕಸ್ ಥ್ರೋ(1.5ಕೆಜಿ)ನಲ್ಲಿ ತಿ.ನರಸೀಪುರ ಶಿಕ್ಷಣ ಇಲಾಖೆಯ ಕೆ.ಬಿ.ಅಯ್ಯಪ್ಪ(ಪ್ರ), ಎನ್.ಕೆ. ಮಂಜುನಾಥ್(ದ್ವಿ),…
ಸಿದ್ಧಾರ್ಥನಗರ ಸಂಕೀರ್ಣಕ್ಕೆ ಕಚೇರಿಗಳ ಶೀಘ್ರ ಸ್ಥಳಾಂತರಕ್ಕೆ ಸಚಿವರ ಸೂಚನೆ
January 5, 2020ಮೈಸೂರು, ಜ.4(ಎಸ್‍ಬಿಡಿ)- ಮೈಸೂರಿನ ಸಿದ್ಧಾರ್ಥನಗರದಲ್ಲಿರುವ ನೂತನ ಜಿಲ್ಲಾ ಕಚೇರಿಗಳ ಸಂಕೀರ್ಣಕ್ಕೆ ಎಲ್ಲಾ ಕಚೇರಿ ಗಳನ್ನು ಶೀಘ್ರ ಸ್ಥಳಾಂತರ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಸೂಚನೆ ನೀಡಿದ್ದಾರೆ. ಈ ಸಂಬಂಧ ಮೈಸೂರು ಜಿಲ್ಲಾಧಿಕಾರಿ ಕಚೇರಿ ಯಲ್ಲಿ ಶನಿವಾರ ಸಭೆ ನಡೆಸಿದ ಅವರು, ತ್ವರಿತ ವಾಗಿ ಸ್ಥಳಾಂತರ ಮಾಡಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ನೂತನ ಕಟ್ಟಡದಲ್ಲಿ ಇನ್ನೂ ಕೆಲ ಕೆಲಸಗಳು ಆಗಬೇಕಿದೆ. ಕಂದಾಯ ಇಲಾಖೆ ಸೇರಿದಂತೆ…
ಕೌಟಿಲ್ಯ ವಿದ್ಯಾಲಯದಲ್ಲಿ `ವಾಣಿಜ್ಯ ವಿಹಾರ’ ಮಕ್ಕಳ ಬಹುಮುಖ ಪ್ರತಿಭೆ ಅನಾವರಣ
January 5, 2020ಮೈಸೂರು,ಜ.4(ಪಿಎಂ)-ವೇದಿಕೆ ಒಂದು, ಆದರೆ ಚಿಂತನೆ ಹಾಗೂ ವಿಸ್ತಾರ ಜಾಗತಿಕ ವಾದದ್ದು. ಅಲ್ಲಿ ದೇಶದ ಸಂಸ್ಕøತಿಯ ಪರಿ ಚಯವೂ ಇತ್ತು. ಆಹಾರ-ಆಟೋಟದ ಆಲಾಪವೂ ಇತ್ತು. ಒಂದು ರೀತಿಯಲ್ಲಿ ಜಗತ್ತಿನ ವೈಶಿಷ್ಟ್ಯಗಳ ತಾಣವಾಗಿತ್ತು. ಮೈಸೂರಿನ ಕೌಟಿಲ್ಯ ವಿದ್ಯಾಲಯದ ವಾರ್ಷಿಕ ಉತ್ಸವ `ವಾಣಿಜ್ಯ ವಿಹಾರ’ದ ಚಿತ್ರಣವಿದು. ಈ ಬಾರಿ `ಜಾಗತಿಕ ಹಬ್ಬ’ ಶೀರ್ಷಿಕೆಯಲ್ಲಿ ಶಾಲಾ ಆವರಣದಲ್ಲಿ ನಡೆದ ವಾಣಿಜ್ಯ ವಿಹಾರದಲ್ಲಿ ಮಕ್ಕಳಿಗೆ ನಮ್ಮ ರಾಜ್ಯ ಮಾತ್ರವಲ್ಲದೆ, ದೇಶ-ವಿದೇಶ ಗಳ ಹಬ್ಬಗಳ ಪರಿಚಯವೂ ಆಯಿತು. ಜೊತೆಗೆ ವ್ಯವಹಾರ ಜ್ಞಾನವೂ ಬೆಳೆಯಿತು. ಸಾರ್ವ ಜನಿಕರು…
ಗುರುವಿನ ಮಾರ್ಗದರ್ಶನದಲ್ಲಿ ಗುರಿ ಸಾಧಿಸಿ
January 5, 2020ಮೈಸೂರು, ಜ.4(ಪಿಎಂ)- ವಿದ್ಯಾರ್ಥಿ ಗಳು ಗುರುವಿನ ಮಾರ್ಗದರ್ಶನದಲ್ಲಿ ಗುರಿ ಸಾಧಿಸುವ ಛಲ ಬೆಳೆಸಿಕೊಳ್ಳಬೇಕು ಎಂದು ರೋಟರಿ ಐವರಿ ಸಿಟಿ ಅಧ್ಯಕ್ಷ ಎಸ್.ಬಾಲಚಂದರ್ ತಿಳಿಸಿದರು. ಮೈಸೂರಿನ ಲಕ್ಷ್ಮೀಪುರಂ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ `ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ : ಒಂದು ನೆನಪು’ ಮತ್ತು ಕಾಲೇಜಿನ ಸಾಂಸ್ಕøತಿಕ ಮತ್ತು ಕ್ರೀಡಾ ಸಂಘದ ಸಮಾರೋಪ ಸಮಾರಂಭದ ಅತಿಥಿಯಾಗಿ ಅವರು ಮಾತನಾಡಿದರು. ಛಲವಿದ್ದಾಗ ಉತ್ಸಾಹದಿಂದ ಓದಿ ಬದು ಕನ್ನು ಕಟ್ಟಿಕೊಳ್ಳಬಹುದು. ಉತ್ಸಾಹವಿಲ್ಲ ದಿದ್ದರೆ ಜೀವನ ವ್ಯರ್ಥ. ಬದುಕಿನಲ್ಲಿ ಏನಾದರೊಂದು…
ಫೆಬ್ರವರಿ ಅಂತ್ಯಕ್ಕೆ ಬಯೋಮೆಟ್ರಿಕ್ ನೀಡದಿದ್ದರೆ ಮಾರ್ಚ್‍ನಿಂದ ಪಡಿತರ ಬಂದ್
January 5, 2020ಮೈಸೂರು, ಜ.4(ಎಸ್‍ಬಿಡಿ)- ಪಡಿ ತರ ಚೀಟಿಯಲ್ಲಿರುವ ಎಲ್ಲಾ ಸದಸ್ಯರೂ ಫೆಬ್ರವರಿ ಅಂತ್ಯದೊಳಗೆ ಬಯೋಮೆಟ್ರಿಕ್ (ಹೆಬ್ಬೆಟ್ಟು ಗುರುತು) ನೀಡದಿದ್ದರೆ, ಮಾರ್ಚ್ ನಿಂದ ಪಡಿತರ ಕಡಿತಗೊಳ್ಳಲಿದೆ. ಪಡಿತರ ಚೀಟಿಯಲ್ಲಿರುವ ಮಾಹಿತಿ ಖಚಿತಪಡಿಸಿಕೊಳ್ಳಲು ಕಾರ್ಡ್‍ನಲ್ಲಿ ನಮೂ ದಾಗಿರುವ ಎಲ್ಲಾ ಸದಸ್ಯರು ಡಿಸೆಂಬರ್ ತಿಂಗಳೊಳಗೆ ಬಯೋಮೆಟ್ರಿಕ್ ನೀಡಬೇ ಕೆಂದು ಸರ್ಕಾರ ಸುತ್ತೋಲೆ ಹೊರಡಿಸಿತ್ತು. ಆದರೆ ಇಲಾಖೆ ವೆಬ್‍ಸೈಟ್‍ನಲ್ಲಿ ಲೋಪಗಳ ಸರಿಪಡಿಸುವ ಉದ್ದೇಶದಿಂದ ಅಂತಿಮ ದಿನಾಂಕವನ್ನು ಫೆಬ್ರವರಿ ಅಂತ್ಯಕ್ಕೆ ಮುಂದೂಡಲಾಗಿದ್ದು, ನಂತರದಲ್ಲಿ ಇ-ಕೆವೈಸಿ ಮಾಡಿಸಿಕೊಳ್ಳದ ಪಡಿತರದಾರರಿಗೆ ಸೌಲಭ್ಯ ಕಡಿತಗೊಳ್ಳಲಿದೆ ಎಂದು ಆಹಾರ ಮತ್ತು ನಾಗರಿಕ…
ಮೂಲಸೌಕರ್ಯಕ್ಕಾಗಿ 200 ಕೋಟಿಗೆ ಪ್ರಸ್ತಾವನೆ ಸಲ್ಲಿಸಿ
January 4, 2020ಮೈಸೂರು, ಜ.3(ಎಸ್‍ಬಿಡಿ)-ಮೂಲ ಸೌಕರ್ಯಕ್ಕೆ ಸಂಬಂಧಿಸಿದಂತೆ 200 ಕೋಟಿ ರೂ. ಯೋಜನೆ ರೂಪಿಸಿ, ವಾರದೊಳಗೆ ಸರ್ಕಾ ರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ನಗರಪಾಲಿಕೆ ಆಯುಕ್ತ ರಿಗೆ ನಿರ್ದೇಶನ ನೀಡಿದ್ದಾರೆ. ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ ಯಡಿ ಮಂಜೂರಾಗಿರುವ ಅನುದಾನ ಬಳಕೆ ಸಂಬಂಧ ಶುಕ್ರವಾರ ಜಿಲ್ಲಾ ಪಂಚಾಯ್ತಿಯ ಡಿ. ದೇವರಾಜ ಅರಸು ಸಭಾಂಗಣದಲ್ಲಿ ನಡೆದ ಸಭೆ ಯಲ್ಲಿ ಹೀಗೆ ನಿರ್ದೇಶಿಸಿದ ಸೋಮಣ್ಣ, ಕುಡಿ ಯುವ ನೀರು, ಒಳಚರಂಡಿ, ರಸ್ತೆ, ಉದ್ಯಾನ ಹಾಗೂ ಬೀದಿ ದೀಪ…
ಲಾಂಗ್ ತೋರಿಸಿ ಆಭರಣ ದೋಚಲು ಯತ್ನ
January 4, 2020ಮೈಸೂರು,ಜ.3(ಆರ್‍ಕೆ)-ಆಭರಣದ ಅಂಗಡಿಗೆ ನುಗ್ಗಿದ ಯುವಕನೋರ್ವ ಲಾಂಗ್ ತೋರಿಸಿ ಚಿನ್ನಾ ಭರಣ ದೋಚಲು ಯತ್ನಿಸಿರುವ ಘಟನೆ ಶುಕ್ರವಾರ ಹಾಡಹಗಲೇ ಮೈಸೂರಿನ ನಾರಾಯಣಶಾಸ್ತ್ರಿ ರಸ್ತೆ ಯಲ್ಲಿ ಸಂಭವಿಸಿದೆ. ಡಿಯೋ ಸ್ಕೂಟರ್‍ನಲ್ಲಿ ಬಂದ ಯುವಕ, ಹೆಲ್ಮೆಟ್ ಧರಿಸಿಯೇ ಮೇಗಾ ಜುವೆಲ್ಸ್ ಅಂಗಡಿ ಪ್ರವೇಶಿಸಿ, ಆಭರಣ ತೋರಿಸುವಂತೆ ಕೇಳಿ ದ್ದಾನೆ. ಆದರೆ ಮಾಲೀಕ ರಾಜೇಶ್, ಲಾಕರ್‍ಗಳಿಗೆ ಬೀಗ ಹಾಕಿಕೊಂಡು, ಊಟಕ್ಕೆ ಮನೆಗೆ ಹೋಗಿದ್ದಾ ರೆಂದು ಅಲ್ಲಿದ್ದ ನೌಕರ ಮಹೇಶ್ ತಿಳಿಸಿ, 10 ನಿಮಿಷ ಕಾಯುವಂತೆ ಮನವಿ ಮಾಡಿದ್ದಾರೆ. ತಕ್ಷಣ ಲಾಂಗ್ ತೋರಿಸಿ ಬೆದರಿಸಿದ…
ಮೈಸೂರು ವಿವಿ ಅಂತರ ಕಾಲೇಜು ಕಬಡ್ಡಿ ಪಂದ್ಯಾವಳಿ: ಮಹಾಜನ ಕಾಲೇಜಿಗೆ ಟ್ರೋಫಿ
January 4, 2020ಮೈಸೂರು,ಜ.3(ವೈಡಿಎಸ್)-ಜಯಲಕ್ಷ್ಮೀಪುರಂನ ಮಹಾಜನ ವಿದ್ಯಾಸಂಸ್ಥೆಯ ಜಗದೀಶ್ ಪ್ರಸಾದ್ ಕ್ರೀಡಾಂಗಣದಲ್ಲಿ ನಡೆದ ಮೈಸೂರು ವಿವಿ ಅಂತರ ಕಾಲೇಜು ಪುರುಷರ ಕಬಡ್ಡಿ ಪಂದ್ಯಾವಳಿಯ ಎಲ್ಲಾ ವಿಭಾಗಗಳಲ್ಲೂ ಉತ್ತಮ ಪ್ರದರ್ಶನ ನೀಡಿದ ಎಸ್‍ಬಿಆರ್‍ಆರ್ ಮಹಾ ಜನ ಪ್ರಥಮ ದರ್ಜೆ ಕಾಲೇಜು ತಂಡ ಟ್ರೋಫಿಯನ್ನು ತಮ್ಮದಾಗಿಸಿ ಕೊಂಡಿತು. ಎಸ್‍ಬಿಆರ್‍ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜು, ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ಸಹಯೋಗದೊಂದಿಗೆ ನಡೆದ ಪಂದ್ಯಾವಳಿಯಲ್ಲಿ ಎಸ್‍ಬಿಆರ್‍ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜು ತಂಡ ವಿದ್ಯಾವಿಕಾಸ ಪ್ರಥಮ ದರ್ಜೆ ಕಾಲೇಜು ತಂಡವನ್ನು (ಕ್ರಮವಾಗಿ 40-31…
ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ಮಹಿಳಾ ಕಾಂಗ್ರೆಸ್ ಪ್ರತಿಭಟನೆ
January 4, 2020ಮೈಸೂರು, ಜ. 3(ಆರ್‍ಕೆ)- ಅಡುಗೆ ಅನಿಲ, ಪೆಟ್ರೋಲ್, ಈರುಳ್ಳಿ-ಬೆಳ್ಳುಳ್ಳಿ ಸೇರಿ ದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಮೈಸೂರಿನ ಗಾಂಧಿ ಸ್ಕ್ವೇರ್‍ನಲ್ಲಿ ಇಂದು ಪ್ರತಿಭಟನೆ ನಡೆಸಿದರು. ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ. ಪುಷ್ಪಾ ಅಮರನಾಥ್ ನೇತೃತ್ವದಲ್ಲಿ ಖಾಲಿ ಸಿಲಿಂಡರ್ ಇರಿಸಿಕೊಂಡು ಸೌದೆ ಒಲೆ ಯಲ್ಲಿ ಅಡುಗೆ ಮಾಡುವ ಅಣಕು ಪ್ರದ ರ್ಶನ ನಡೆಸಿದ ಮಹಿಳೆಯರು, ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕೇಂದ್ರ ಸರ್ಕಾರ ಕಾರಣ ಎಂದು ಆರೋಪಿಸಿದರು. ಅಡುಗೆ ಅನಿಲ,…










