ಕೌಟಿಲ್ಯ ವಿದ್ಯಾಲಯದಲ್ಲಿ `ವಾಣಿಜ್ಯ ವಿಹಾರ’ ಮಕ್ಕಳ ಬಹುಮುಖ ಪ್ರತಿಭೆ ಅನಾವರಣ
ಮೈಸೂರು

ಕೌಟಿಲ್ಯ ವಿದ್ಯಾಲಯದಲ್ಲಿ `ವಾಣಿಜ್ಯ ವಿಹಾರ’ ಮಕ್ಕಳ ಬಹುಮುಖ ಪ್ರತಿಭೆ ಅನಾವರಣ

January 5, 2020

ಮೈಸೂರು,ಜ.4(ಪಿಎಂ)-ವೇದಿಕೆ ಒಂದು, ಆದರೆ ಚಿಂತನೆ ಹಾಗೂ ವಿಸ್ತಾರ ಜಾಗತಿಕ ವಾದದ್ದು. ಅಲ್ಲಿ ದೇಶದ ಸಂಸ್ಕøತಿಯ ಪರಿ ಚಯವೂ ಇತ್ತು. ಆಹಾರ-ಆಟೋಟದ ಆಲಾಪವೂ ಇತ್ತು. ಒಂದು ರೀತಿಯಲ್ಲಿ ಜಗತ್ತಿನ ವೈಶಿಷ್ಟ್ಯಗಳ ತಾಣವಾಗಿತ್ತು.

ಮೈಸೂರಿನ ಕೌಟಿಲ್ಯ ವಿದ್ಯಾಲಯದ ವಾರ್ಷಿಕ ಉತ್ಸವ `ವಾಣಿಜ್ಯ ವಿಹಾರ’ದ ಚಿತ್ರಣವಿದು. ಈ ಬಾರಿ `ಜಾಗತಿಕ ಹಬ್ಬ’ ಶೀರ್ಷಿಕೆಯಲ್ಲಿ ಶಾಲಾ ಆವರಣದಲ್ಲಿ ನಡೆದ ವಾಣಿಜ್ಯ ವಿಹಾರದಲ್ಲಿ ಮಕ್ಕಳಿಗೆ ನಮ್ಮ ರಾಜ್ಯ ಮಾತ್ರವಲ್ಲದೆ, ದೇಶ-ವಿದೇಶ ಗಳ ಹಬ್ಬಗಳ ಪರಿಚಯವೂ ಆಯಿತು. ಜೊತೆಗೆ ವ್ಯವಹಾರ ಜ್ಞಾನವೂ ಬೆಳೆಯಿತು. ಸಾರ್ವ ಜನಿಕರು ಹಾಗೂ ಪೋಷಕರು ಉತ್ಸವದಲ್ಲಿ ಪಾಲ್ಗೊಳ್ಳುವ ಅವಕಾಶವಿದ್ದ ಹಿನ್ನೆಲೆಯಲ್ಲಿ ಅವರಿಗೂ ಪ್ರಪಂಚದ ವಿವಿಧ ಭಾಗಗಳ ಹಬ್ಬಗಳ ಪರಿಚಯವಾಯಿತಲ್ಲದೆ, ಗ್ರಾಹಕ ರಾಗಿ ಮಕ್ಕಳಿಗೆ ಉತ್ತೇಜನವನ್ನು ನೀಡಿದರು.

ಶಾಲೆಯ ಮಕ್ಕಳು ಮಳಿಗೆ ತೆರೆದು, ದೇಶ-ವಿದೇಶದಲ್ಲಿರುವ ವೈವಿಧ್ಯಮಯ ಹಬ್ಬ ಗಳನ್ನು ಪರಿಚಯಿಸಿದ್ದರು. 10 ಮಂದಿಯ ಒಂದೊಂದು ತರಗತಿಯ ತಂಡ ತಲಾ ಒಂದು ಹಬ್ಬವನ್ನು ಆಯ್ಕೆ ಮಾಡಿಕೊಂಡು ತಮ್ಮ ಮಳಿಗೆಯಲ್ಲಿ ಆ ಹಬ್ಬದ ವೈಶಿಷ್ಟ್ಯ ಅನಾವರಣಗೊಳಿಸಿದ್ದರು.

ಹಬ್ಬದ ವೇಷಭೂಷಣ, ಆಭರಣ ತೊಟ್ಟು ಆ ಹಬ್ಬದಲ್ಲಿ ಮಾಡುವ ಭಕ್ಷ್ಯ ಭೋಜನ ಗಳನ್ನು ಮಾರಾಟ ಮಾಡಿದರು. ಅಲ್ಲದೆ, ಹಬ್ಬದ ಆಟೋಟಗಳನ್ನು ಆಡಲೂ ವ್ಯವಸ್ಥೆ ಕಲ್ಪಿಸಲಾಗಿತ್ತು. ಹೀಗೆ ಮಳಿಗೆಯಲ್ಲಿ ವ್ಯಾಪಾರ ವಹಿವಾಟು ಕೌಶಲ ವೃದ್ಧಿಸಿಕೊಳ್ಳುವುದು ಒಂದು ಕಡೆಯಾದರೆ, ವಿವಿಧ ಭಾಗಗಳ ಆಚಾರ-ವಿಚಾರ, ಸಂಪ್ರದಾಯ-ಸಂಸ್ಕøತಿ ಪರಿಚಯವೂ ಇಲ್ಲಿ ಸಾಧ್ಯವಾಗಿತ್ತು.

ಮಳಿಗೆಯೊಂದರಲ್ಲಿದ್ದ 10 ಮಂದಿಯ ತಂಡದಲ್ಲಿ ಪ್ರತಿಯೊಬ್ಬರಿಗೂ ಒಂದೊಂದು ಜವಾಬ್ದಾರಿ ನಿಗದಿ ಮಾಡಲಾಗಿತ್ತು. ಮಾರು ಕಟ್ಟೆ, ಪ್ರಚಾರ, ವ್ಯವಸ್ಥಾಪನೆ ಹೀಗೆ ಒಂದೊಂದು ಹೊಣೆಗಾರಿಕೆಯನ್ನು ನಿಭಾ ಯಿಸುತ್ತಿದ್ದದ್ದು ಕಂಡು ಬಂದಿತು. ಹಬ್ಬಕ್ಕೆ ತಕ್ಕಂತಹ ಗೃಹೋಪಯೋಗಿ ಹಾಗೂ ಅಲಂಕಾರಿಕ ವಸ್ತುಗಳನ್ನು ಮಾರಾಟ ಮಾಡು ವಲ್ಲಿಯೂ ಮಕ್ಕಳು ಉತ್ಸಾಹದಿಂದ ಭಾಗ ವಹಿಸಿದ್ದರು. ಬೆಳಿಗ್ಗೆ 10ರಿಂದ ಮಧ್ಯಾಹ್ನ 3.30ರವರೆಗೂ ಉತ್ಸವ ನಡೆಯಿತು.

ಈ ಸಂಬಂಧ `ಮೈಸೂರು ಮಿತ್ರ’ನೊಂ ದಿಗೆ ಮಾತನಾಡಿದ ಶಾಲೆಯ ಗಣಿತ ಶಿಕ್ಷಕಿ ಉಷಾ, 6ರಿಂದ 10ನೇ ತರಗತಿ ಮಕ್ಕಳು ಈ ಉತ್ಸವದಲ್ಲಿ ಪಾಲ್ಗೊಂಡಿದ್ದಾರೆ. ಇಲ್ಲಿ ಮಕ್ಕಳು ವ್ಯವಹಾರ ಜ್ಞಾನವನ್ನಷ್ಟೇ ಕಲಿ ಯುವುದಿಲ್ಲ. ಜೊತೆಗೆ ದುಡಿಮೆಯಿಂದ ಹಣ ಗಳಿಸಿ, ಉಳಿಸಿ ಬದುಕುವ ಕಲೆ ಕರಗತ ಮಾಡಿಕೊಳ್ಳಬೇಕು. ಅಲ್ಲದೆ, ಒಂದಿಷ್ಟು ಹಣವನ್ನು ಸೇವೆಗೆ ವಿನಿಯೋಗಿಸಬೇಕು ಎಂಬ ಪಾಠವನ್ನು ಕಲಿಯಲಿದ್ದಾರೆ. ಒಂದೊಂದು ಮಳಿಗೆಯಲ್ಲಿ ಒಂದೊಂದು ಹಬ್ಬದ ಪರಿ ಚಯ ದೊರೆಯುವುದರೊಂದಿಗೆ, ಆ ಹಬ್ಬದ ವಿಶೇಷ ಆಹಾರ-ತಿಂಡಿ ತಿನಿಸುಗಳನ್ನು ಮಕ್ಕಳು ಮಾರಾಟ ಮಾಡಲಿದ್ದಾರೆ ಎಂದರು.

ಈ ಉತ್ಸವದಲ್ಲಿ ಮಕ್ಕಳ ಕೈಯಲ್ಲಿ ಹಣದ ಚಲಾವಣೆ ಇರುವುದಿಲ್ಲ. ವಿವಿಧ ಬೆಲೆಯ ಕೂಪನ್ ನೀಡಲಾಗಿದೆ. ಕೌಂಟರ್‍ನಲ್ಲಿ ಹಣ ಪಾವತಿಸಿ ಕೂಪನ್ ಪಡೆದು ಮಳಿಗೆಯಲ್ಲಿ ವ್ಯವಹಾರ ನಡೆಸಬಹುದು. ಉತ್ಸವದ ಶೇ.50 ರಷ್ಟು ಹಣ ವಿದ್ಯಾರ್ಥಿ ತಂಡಗಳಿಗೆ ಹಂಚಿಕೆ ಯಾದರೆ ಉಳಿದ ಶೇ.50ರಷ್ಟು ಹಣವನ್ನು ಸೇವಾ ಚಟುವಟಿಕೆಗಳಿಗೆ ಬಳಸಲಾಗು ವುದು. ಅಲ್ಲದೆ, ಈ ಉತ್ಸವ ಕುರಿತಂತೆ ಪ್ರತಿ ಮಕ್ಕಳು 200 ಪದಗಳ ಮಿತಿಯಲ್ಲಿ ಒಂದೊಂದು ಲೇಖನ ಬರೆಯಲು ಸೂಚಿಸಲಾಗಿದೆ ಎಂದರು.

ಉತ್ಸವಕ್ಕೆ ಚಾಲನೆ ನೀಡಿದ ಸಾರ್ವ ಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಾ.ಪಾಂಡುರಂಗ ಮಾತನಾಡಿ, ಶಾಲೆ ಗಳಲ್ಲಿ ಮಕ್ಕಳನ್ನು ಪಠ್ಯಕ್ಕೆ ಸೀಮಿತಗೊಳಿ ಸದೇ ಇಂತಹ ವ್ಯವಹಾರ ಜ್ಞಾನ ಬೆಳೆಸುವ ಚಟುವಟಿಕೆಯೂ ಅಗತ್ಯ. ಕೌಟಿಲ್ಯ ವಿದ್ಯಾ ಲಯ ಆಯೋಜಿಸಿರುವ `ವಾಣಿಜ್ಯ ವಿಹಾರ’ ಶ್ಲಾಘನೀಯ. ಭವಿಷ್ಯದಲ್ಲಿ ಮಕ್ಕಳು ಸ್ವಾವ ಲಂಬಿ ಬದುಕು ಕಟ್ಟಿಕೊಳ್ಳಲು ಇಂತಹ ಚಟುವಟಿಕೆ ಅವಶ್ಯ. ಸರ್ಕಾರಿ ಶಾಲೆ ಗಳಲ್ಲೂ ಇಂತಹ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ ಎಂದು ತಿಳಿಸಿದರು.

ಸಂಸ್ಥೆಯ ಮುಖ್ಯಸ್ಥ ಆರ್.ರಘು ಕೌಟಿಲ್ಯ ಮಾತನಾಡಿ, ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಮ್ಮ ಹೂಡಿಕೆ ಹಾಗೂ ವಹಿವಾಟಿನಿಂದ ಗಳಿಸಿದ ಹಣದ ಒಂದು ಭಾಗವನ್ನು ಸರ್ಕಾರಿ ಶಾಲೆಗಳ ಅಭಿವೃದ್ಧಿ ಗಾಗಿ ಬಳಸಲಾಗುವುದು. ದೇಶಕ್ಕಾಗಿ ಪ್ರಾಮಾ ಣಿಕ ತೆರಿಗೆದಾರನಾಗಿ ಜವಾಬ್ದಾರಿ ನಿರ್ವ ಹಿಸುವ ಬಗ್ಗೆಯೂ ಈ ಉತ್ಸವದಲ್ಲಿ ಅರಿವು ಮೂಡಿಸಲಾಗುವುದು ಎಂದರು. ಶಾಲೆಯ ಉಪ ಪ್ರಾಂಶುಪಾಲರಾದ ಬಿ.ಬಿ.ರಾಧಿಕಾ ಸೇರಿದಂತೆ ಶಾಲೆಯ ಎಲ್ಲಾ ಶಿಕ್ಷಕ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.

Translate »