Tag: Mysore

ರೈತರ ಧರಣಿ ಅಂತ್ಯ
ಮೈಸೂರು

ರೈತರ ಧರಣಿ ಅಂತ್ಯ

January 4, 2020

ಮೈಸೂರು, ಜ. 3(ಆರ್‍ಕೆ)- ಜನವರಿ 11ರಂದು ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಸಭೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರು ಭರವಸೆ ನೀಡಿದ ಹಿನ್ನೆಲೆಯಲ್ಲಿ ಮೈಸೂರಿನ ಡಿಸಿ ಕಚೇರಿ ಬಳಿ 5 ದಿನಗಳಿಂದ ಪವರ್ ಗ್ರಿಡ್ ಮಾರ್ಗ ಬದಲಿಸಲು ಒತ್ತಾಯಿಸಿ ರೈತರು ನಡೆಸುತ್ತಿದ್ದ ಪ್ರತಿಭಟನಾ ಧರಣಿ ಅಂತ್ಯಗೊಂಡಿದೆ. ರೈತರ ಒತ್ತಾಯದ ಮೇರೆಗೆ ಇಂದು ಮಧ್ಯಾಹ್ನ 3.30 ಗಂಟೆ ವೇಳೆಗೆ ಧರಣಿ ನಿರತ ರೈತರ ಬಳಿಗೆ ಸಂಸದ ಪ್ರತಾಪ್ ಸಿಂಹ, ಶಾಸಕ ಜಿ.ಟಿ.ದೇವೇಗೌಡ,…

ಇನ್ನೆರಡು ದಿನದಲ್ಲಿ ಪ್ರಧಾನಿಯಿಂದ ನೆರೆ `ಪರಿಹಾರ’ ಸಿಹಿ ಸುದ್ದಿ: ಸೋಮಣ್ಣ
ಮೈಸೂರು

ಇನ್ನೆರಡು ದಿನದಲ್ಲಿ ಪ್ರಧಾನಿಯಿಂದ ನೆರೆ `ಪರಿಹಾರ’ ಸಿಹಿ ಸುದ್ದಿ: ಸೋಮಣ್ಣ

January 4, 2020

ಮೈಸೂರು,ಜ.3(ಎಂಟಿವೈ)- ನೆರೆಪೀಡಿತ ಪ್ರದೇಶದ ಸಂತ್ರಸ್ತರಿಗೆ ಪರಿಹಾರ ನೀಡುವ ಸಂಬಂಧ ಇನ್ನೆರಡು ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಒಳ್ಳೆ ಸುದ್ದಿ ನೀಡಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ. ಮೈಸೂರಿನಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತ ನಾಡಿದ ಅವರು, ನೆರೆ ಪರಿಹಾರ ಕುರಿತು ಕಾಂಗ್ರೆಸ್ ನಾಯಕÀರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ. ಸಿದ್ದಗಂಗಾ ಕ್ಷೇತ್ರದಲ್ಲಿ ಪ್ರಧಾನಿ ಮೋದಿ ಮಾಡಿದ ಭಾಷಣವನ್ನು ಟೀಕಿಸುತ್ತಿz್ದÁರೆ. ಕಾಂಗ್ರೆಸಿ ಗರು ಹಾಗೂ ಕುಮಾರಸ್ವಾಮಿ ಅವರಿಗೆ ಸುಮ್ಮನೆ ಮೈ ಪರಚಿಕೊಳ್ಳುವ ಅಭ್ಯಾಸವಿದೆ. ಮಾಧ್ಯಮಗಳಲ್ಲಿ…

ಸಿಎಎ ಬಗ್ಗೆ ಮಾತನಾಡಿದ್ರೆ ಹುಷಾರ್: ಸಚಿವ ಈಶ್ವರಪ್ಪಗೆ ಜೀವ ಬೆದರಿಕೆ ಕರೆ
ಮೈಸೂರು

ಸಿಎಎ ಬಗ್ಗೆ ಮಾತನಾಡಿದ್ರೆ ಹುಷಾರ್: ಸಚಿವ ಈಶ್ವರಪ್ಪಗೆ ಜೀವ ಬೆದರಿಕೆ ಕರೆ

January 4, 2020

ಶಿವಮೊಗ್ಗ: ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ವ್ಯಕ್ತಿಯೊಬ್ಬ ಫೋನ್ ಮಾಡಿ ತಮಿಳು ಭಾಷೆಯಲ್ಲಿ ಮಾತನಾಡಿ ಜೀವ ಬೆದರಿಕೆ ಹಾಕಿದ್ದಾನೆ. ಸಂವಿಧಾನದ ವಿಧಿ 370, ಪೌರತ್ವ ತಿದ್ದುಪಡೆ ಕಾಯ್ದೆ ಬಗ್ಗೆ ಮತ್ತು ಮುಸ್ಲಿಮರ ವಿರುದ್ಧ ಮಾತನಾಡಿದರೆ ಸರಿ ಇರುವುದಿಲ್ಲ ಎಂದು ಅಪರಿಚಿತ ವ್ಯಕ್ತಿಯೊಬ್ಬ ಬೆದರಿಕೆ ಹಾಕಿದ್ದು, ಕರೆ ಬಂದಿರುವ ಬಗ್ಗೆ ಕೆ.ಎಸ್.ಈಶ್ವರಪ್ಪ ಶಿವಮೊಗ್ಗ ಎಸ್‍ಪಿಗೆ ಮಾಹಿತಿ ನೀಡಿ ದ್ದಾರೆ ಎಂದು ಮಾಹಿತಿ ಮೂಲಗಳಿಂದ ಲಭ್ಯವಾಗಿದೆ. ಸಚಿವರಿಗೆ ಶುಕ್ರವಾರ ಮಧ್ಯಾಹ್ನ ವ್ಯಕ್ತಿಯೊಬ್ಬ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ. ಈ ಬಗ್ಗೆ…

ವಿದ್ಯಾರ್ಥಿಗಳಿಗೆ ಗಣಿತದ ಒಡನಾಟವಿರಲಿ
ಮೈಸೂರು

ವಿದ್ಯಾರ್ಥಿಗಳಿಗೆ ಗಣಿತದ ಒಡನಾಟವಿರಲಿ

January 4, 2020

ಮೈಸೂರು, ಜ.3(ಎಂಕೆ)- ಪ್ರತಿಯೊಂದಕ್ಕೂ ಗಣಿತದ ಲೆಕ್ಕಾಚಾರ ಅಗತ್ಯವಿರುವುದ ರಿಂದ ವಿದ್ಯಾರ್ಥಿಗಳು ಗಣಿತದ ಜತೆ ಹೆಚ್ಚು ಒಡನಾಟ ಬೆಳೆಸಿಕೊಳ್ಳಬೇಕೆಂದು ಸಾಹಿತಿ ಬನ್ನೂರು ಕೆ.ರಾಜು ಕಿವಿಮಾತು ಹೇಳಿದರು. ಮೈಸೂರಿನ ಅಕ್ಕನಬಳಗ ಶಾಲೆಯಲ್ಲಿ ಹಿರಣ್ಮಯಿ ಪ್ರತಿಷ್ಠಾನ ಮತ್ತು ಕಾವೇರಿ ಬಳಗದ ಸಂಯುಕ್ತಾಶ್ರಯದಲ್ಲಿ ಗಣಿತಜ್ಞ ಶ್ರೀನಿವಾಸ ರಾಮಾನುಜನ್ ಜಯಂತಿ ಅಂಗವಾಗಿ ಆಯೋಜಿಸಿದ್ದ ‘ರಾಷ್ಟ್ರೀಯ ಗಣಿತ ದಿನಾಚರಣೆ’ ಕಾರ್ಯಕ್ರಮದಲ್ಲಿ ಮಾತನಾಡುತ್ತ, ಗಣಿತಶಾಸ್ತ್ರಜ್ಞ ಶ್ರೀನಿವಾಸ ರಾಮಾನುಜನ್ ಕೇವಲ 32 ವರ್ಷ ಬದುಕಿದ್ದರೂ ಜಗತ್ತಿನ ಗಣಿತಲೋಕದಲ್ಲಿ ಯಾರೂ ಮುರಿಯದಂತಹ ದಾಖಲೆ ಬರೆದು ಭಾರತದ ಕೀರ್ತಿ ಪತಾಕೆ ಹಾರಿಸಿದ್ದಾರೆ….

ಆರು ಕೋಟಿ ಅನ್ನದಾತರಿಗೆ 12 ಸಾವಿರ ಕೋಟಿ ಕೊಡುಗೆ
ಮೈಸೂರು

ಆರು ಕೋಟಿ ಅನ್ನದಾತರಿಗೆ 12 ಸಾವಿರ ಕೋಟಿ ಕೊಡುಗೆ

January 3, 2020

ತುಮಕೂರು, ಜ.2- ಸುಗ್ಗಿಯ ಸಂಭ್ರಮದಲ್ಲಿರುವ ರೈತ ಸಮುದಾಯಕ್ಕೆ ಪ್ರಧಾನಿ ನರೇಂದ್ರಮೋದಿ ಭರಪೂರ ಉಡುಗೊರೆ ನೀಡಿದ್ದು, ದೇಶದ 6 ಕೋಟಿ ಅನ್ನದಾತರ ಬ್ಯಾಂಕ್ ಖಾತೆಗಳಿಗೆ 12 ಸಾವಿರ ಕೋಟಿ ರೂ. ಜಮಾ ಮಾಡುವ ಯೋಜನೆಗೆ ಕಲ್ಪತರು ನಾಡು ತುಮಕೂರಿ ನಲ್ಲಿ ಚಾಲನೆ ನೀಡಿದರು. ಸರ್ಕಾರಿ ಜೂನಿಯರ್ ಕಾಲೇಜು ಮೈದಾ ನದ ಬೃಹತ್ ವೇದಿಕೆಯಲ್ಲಿ ಬಟನ್ ಒತ್ತುವ ಮೂಲಕ ಏಕಕಾಲಕ್ಕೆ 6 ಕೋಟಿ ರೈತರ ಖಾತೆಗಳಿಗೆ ನೇರ ನಗದು ವರ್ಗಾ ವಣೆಗೆ ಚಾಲನೆ ನೀಡುತ್ತಿದ್ದಂತೆ ರೈತರ ಮುಖದಲ್ಲಿ ಮಂದಹಾಸ ಮೂಡಿ…

ನಮಗೆ ಹಣ ಕೊಡಿ! ನಮ್ಮ ಬಳಿ ಹಣವಿಲ್ಲ!!
ಮೈಸೂರು

ನಮಗೆ ಹಣ ಕೊಡಿ! ನಮ್ಮ ಬಳಿ ಹಣವಿಲ್ಲ!!

January 3, 2020

ಮೈಸೂರು, ಜ.2(ಎಸ್‍ಬಿಡಿ)- ಸ್ವಚ್ಛ ಸರ್ವೇಕ್ಷಣೆ ಆರಂಭವಾಗುವ ಹೊಸ್ತಿಲಲ್ಲಿ ಮೈಸೂರು ನಗರ ಪಾಲಿಕೆ ಮೇಯರ್, ಸದಸ್ಯರು ಹಾಗೂ ಆಯುಕ್ತರ ನಡುವಿನ ಭಿನ್ನಾಭಿಪ್ರಾಯ ಬಹಿರಂಗವಾಗಿದೆ. ಈ ಹಿಂದೆ 2 ವರ್ಷ ಸತತವಾಗಿ ದೇಶದ ಮೊದಲ ಸ್ವಚ್ಛ ನಗರಿ ಪ್ರಶಸ್ತಿ ಪಡೆದಿದ್ದ ಮೈಸೂರನ್ನು ಮತ್ತೆ ಅಗ್ರ ಸ್ಥಾನಕ್ಕೆ ಕೊಂಡೊಯ್ಯಬೇಕೆಂಬ ಸಾರ್ವಜನಿಕರ ಆಶ ಯಕ್ಕೆ ಗುರುವಾರ ಭಾರೀ ಹೊಡೆತ ಬಿದ್ದಿದೆ. ಜ.4ರಿಂದ 2020ನೇ ಸಾಲಿನ ಸ್ವಚ್ಛ ಸರ್ವೇಕ್ಷಣೆ ಆರಂಭವಾಗುವ ಹಿನ್ನೆಲೆಯಲ್ಲಿ ಮೇಯರ್ ಪುಷ್ಪಲತಾ ಜಗನ್ನಾಥ್ ಅವರು ಸದಸ್ಯರ ಅಭಿಪ್ರಾಯ, ಸಲಹೆ ಸ್ವೀಕರಿಸಲೆಂದು ಕರೆದಿದ್ದ…

ಪಿಒಕೆ ಗುರಿಯಾಗಿಸಿ ದಾಳಿಗೆ ಸಿದ್ಧ
ಮೈಸೂರು

ಪಿಒಕೆ ಗುರಿಯಾಗಿಸಿ ದಾಳಿಗೆ ಸಿದ್ಧ

January 3, 2020

ನವದೆಹಲಿ: ಆದೇಶ ನೀಡಿದರೆ ಪಾಕ್ ಆಕ್ರಮಿತ ಕಾಶ್ಮೀರವನ್ನು ಗುರಿಯಾಗಿಸಿ ಕೊಂಡು ದಾಳಿ ಮಾಡಲು ಸೇನೆ ಸಿದ್ಧವಾಗಿದೆ ಎಂದು ನೂತನ ಸೇನಾ ಮುಖ್ಯಸ್ಥ ಎಂಎಂ ನರಾವಣೆ ಹೇಳಿದ್ದಾರೆ. ಸುದ್ದಿಗಾರರೊಂ ದಿಗೆ ಮಾತನಾಡಿದ ನರಾವಣೆ ಅವರು, ಆದೇಶ ನೀಡಿದರೆ ಯಾವುದೇ ಕ್ಷಣದಲ್ಲೂ ಪಾಕ್ ಆಕ್ರಮಿತ ಕಾಶ್ಮೀರದ ಮೇಲೆ ದಾಳಿ ಮಾಡಲು ಸೇನೆ ಸಿದ್ಧವಾಗಿದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಕ್ರಮ ಕೈಗೊಳ್ಳಲು ನಮ್ಮಲ್ಲಿ ವಿವಿಧ ಉಪಾಯಗಳಿವೆ. ಅಲ್ಲದೆ ನಾವು ಎಲ್ಲದಕ್ಕೂ ತಯಾರಿದ್ದೇವೆ ಎಂದರು. `ನಮ್ಮ ಸೇನಾ ಪಡೆಗಳನ್ನು ಜಮ್ಮು ಮತ್ತು ಕಾಶ್ಮೀರ…

ತ್ರೈಮಾಸಿಕ ಸ್ವಚ್ಛತಾ ರ್ಯಾಂಕಿಂಗ್‍ನಲ್ಲಿ ಮೈಸೂರಿಗೆ 9ನೇ ಸ್ಥಾನ
ಮೈಸೂರು

ತ್ರೈಮಾಸಿಕ ಸ್ವಚ್ಛತಾ ರ್ಯಾಂಕಿಂಗ್‍ನಲ್ಲಿ ಮೈಸೂರಿಗೆ 9ನೇ ಸ್ಥಾನ

January 3, 2020

ಮೈಸೂರು,ಜ.2(ಆರ್‍ಕೆ)-2019ರ ಏಪ್ರಿಲ್‍ನಿಂದ ಜೂನ್ ಮಾಹೆವರೆಗೆ ನಡೆದ ತ್ರೈಮಾಸಿಕ ಸ್ವಚ್ಛ ಸರ್ವೇಕ್ಷಣೆಯಲ್ಲಿ ಮೈಸೂರು 9ನೇ ಸ್ಥಾನ ಪಡೆದಿದೆ. 1 ರಿಂದ 10 ಲಕ್ಷ ಜನಸಂಖ್ಯೆಯುಳ್ಳ ನಗರ ಪೈಕಿ ಮೈಸೂರು 9ನೇ ಸ್ಥಾನದ ಲ್ಲಿದ್ದು, ಕೇಂದ್ರದ ವಸತಿ ಮತ್ತು ಅರ್ಬನ್ ಅಫೇರ್ಸ್ ಸಚಿವಾಲಯವು ಸ್ವಚ್ಛ ಸರ್ವೇ ಕ್ಷಣೆಯ ಪ್ರಥಮ ಮತ್ತು ದ್ವಿತೀಯ ತ್ರೈಮಾಸಿಕ ಫಲಿತಾಂಶವನ್ನು ಬಿಡುಗಡೆ ಮಾಡಿದೆ. ಇದೇ ಪ್ರಥಮ ಬಾರಿಗೆ ಸಚಿವಾಲ ಯವು ತ್ರೈಮಾಸಿಕ ಸ್ವಚ್ಛ ಸರ್ವೇಕ್ಷಣೆ ಯನ್ನು ನಡೆಸಿದ್ದು, ಈವರೆಗೆ ವರ್ಷ ಕ್ಕೊಮ್ಮೆ ಸ್ವಚ್ಛತಾ ಸಮೀಕ್ಷೆ ನಡೆಸುತ್ತಿ…

ಮಂಡ್ಯ ವಿವಿ ವಿಶೇಷಾಧಿಕಾರಿ ಡಾ.ಮಹದೇವ ನಾಯಕ ವಜಾ
ಮೈಸೂರು

ಮಂಡ್ಯ ವಿವಿ ವಿಶೇಷಾಧಿಕಾರಿ ಡಾ.ಮಹದೇವ ನಾಯಕ ವಜಾ

January 3, 2020

ಮೈಸೂರು, ಜ.2- ಅಧಿಕಾರ ದುರ್ಬಳಕೆ ಮಾಡಿಕೊಂಡು ಹಲವಾರು ಅವ್ಯವ ಹಾರಗಳನ್ನು ನಡೆಸಿರುವ ಆರೋಪದ ಮೇರೆಗೆ ಮಂಡ್ಯ ವಿಶ್ವವಿದ್ಯಾಲಯದ ವಿಶೇಷ ಅಧಿಕಾರಿ ಡಾ. ಎಂ.ಎಸ್.ಮಹದೇವ ನಾಯಕ ಅವರನ್ನು ವಿಚಾರಣೆ ಕಾಯ್ದಿರಿಸಿ, ವಜಾ ಮಾಡಿ ಶಿಕ್ಷಣ ಇಲಾಖೆಯ (ವಿಶ್ವವಿದ್ಯಾಲಯ-2) ಸರ್ಕಾರದ ಅಧೀನ ಕಾರ್ಯದರ್ಶಿ ಆರ್.ಮಹೇಶ್ ಆದೇಶ ಹೊರಡಿಸಿದ್ದಾರೆ. ಮಂಡ್ಯ ವಿವಿಯ ವಿಶೇಷಾಧಿಕಾರಿ ಡಾ.ಎಂ.ಎಸ್.ಮಹದೇವ ನಾಯಕ ಅವರು ನಡೆಸಿರುವ ಅವ್ಯವಹಾರಗಳ ಕುರಿತು ಮಂಡ್ಯ ಶಾಸಕ ಎಂ.ಶ್ರೀನಿವಾಸ್ ಮತ್ತು ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಅವರು ನೀಡಿದ ದೂರುಗಳನ್ವಯ ಮಂಗಳೂರು ವಿವಿ ವಿಶ್ರಾಂತ…

ಖಜಾನೆ ಖಾಲಿಯಾದರೂ ಆವಿಷ್ಕಾರಗಳು ನಿಲ್ಲಬಾರದು: ಮೋದಿ
ಮೈಸೂರು

ಖಜಾನೆ ಖಾಲಿಯಾದರೂ ಆವಿಷ್ಕಾರಗಳು ನಿಲ್ಲಬಾರದು: ಮೋದಿ

January 3, 2020

ಬೆಂಗಳೂರು,ಜ.2-ದೇಶದ ಸಂಪೂರ್ಣ ಬಜೆಟ್ ಖಾಲಿಯಾದರೂ ಸರಿ, ವೈಜ್ಞಾ ನಿಕ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳಿಗೆ ಪ್ರೋತ್ಸಾಹ ನೀಡುವು ದಾಗಿ ಪ್ರಧಾನಿ ಮೋದಿ ಭರವಸೆ ನೀಡಿದರು. ಬೆಂಗಳೂರಿನ ರಕ್ಷಣಾ ಸಂಶೋದನೆ ಮತ್ತು ಅಭಿವೃದ್ಧಿ ಕೇಂದ್ರಗಳಲ್ಲಿ (ಡಿಆರ್ ಡಿಒ)ದಲ್ಲಿ ಐದು ಯುವ ಪ್ರಯೋಗಾ ಲಯಗಳನ್ನು ಉದ್ಘಾಟಿಸಿ ಗುರುವಾರ ಅವರು ಮಾತನಾಡಿದರು. ಓರ್ವ ವಿಜ್ಞಾನಿ ತನ್ನ ಸಂಪೂರ್ಣ ಜೀವನವನ್ನು ಮುಡಿ ಪಾಗಿಟ್ಟು ದೇಶಕ್ಕೆ ಕೊಡುಗೆ ನೀಡುತ್ತಾನೆ. ಅಂತಹದರಲ್ಲಿ ದೇಶದ ಖಜಾನೆ ಯಾವ ಲೆಕ್ಕ. ಯುವ ವಿಜ್ಞಾನಿಗಳು ಪ್ರಯೋಗಾಲ ಯಗಳಲ್ಲಿ ನಿರಂತರವಾಗಿ…

1 83 84 85 86 87 330
Translate »