ತ್ರೈಮಾಸಿಕ ಸ್ವಚ್ಛತಾ ರ್ಯಾಂಕಿಂಗ್‍ನಲ್ಲಿ ಮೈಸೂರಿಗೆ 9ನೇ ಸ್ಥಾನ
ಮೈಸೂರು

ತ್ರೈಮಾಸಿಕ ಸ್ವಚ್ಛತಾ ರ್ಯಾಂಕಿಂಗ್‍ನಲ್ಲಿ ಮೈಸೂರಿಗೆ 9ನೇ ಸ್ಥಾನ

January 3, 2020

ಮೈಸೂರು,ಜ.2(ಆರ್‍ಕೆ)-2019ರ ಏಪ್ರಿಲ್‍ನಿಂದ ಜೂನ್ ಮಾಹೆವರೆಗೆ ನಡೆದ ತ್ರೈಮಾಸಿಕ ಸ್ವಚ್ಛ ಸರ್ವೇಕ್ಷಣೆಯಲ್ಲಿ ಮೈಸೂರು 9ನೇ ಸ್ಥಾನ ಪಡೆದಿದೆ.

1 ರಿಂದ 10 ಲಕ್ಷ ಜನಸಂಖ್ಯೆಯುಳ್ಳ ನಗರ ಪೈಕಿ ಮೈಸೂರು 9ನೇ ಸ್ಥಾನದ ಲ್ಲಿದ್ದು, ಕೇಂದ್ರದ ವಸತಿ ಮತ್ತು ಅರ್ಬನ್ ಅಫೇರ್ಸ್ ಸಚಿವಾಲಯವು ಸ್ವಚ್ಛ ಸರ್ವೇ ಕ್ಷಣೆಯ ಪ್ರಥಮ ಮತ್ತು ದ್ವಿತೀಯ ತ್ರೈಮಾಸಿಕ ಫಲಿತಾಂಶವನ್ನು ಬಿಡುಗಡೆ ಮಾಡಿದೆ.

ಇದೇ ಪ್ರಥಮ ಬಾರಿಗೆ ಸಚಿವಾಲ ಯವು ತ್ರೈಮಾಸಿಕ ಸ್ವಚ್ಛ ಸರ್ವೇಕ್ಷಣೆ ಯನ್ನು ನಡೆಸಿದ್ದು, ಈವರೆಗೆ ವರ್ಷ ಕ್ಕೊಮ್ಮೆ ಸ್ವಚ್ಛತಾ ಸಮೀಕ್ಷೆ ನಡೆಸುತ್ತಿ ದ್ದುದನ್ನು ಸ್ಮರಿಸಬಹುದಾಗಿದೆ. ಸ್ವಚ್ಛತಾ ಕ್ರಮ, ಕಸ ವಿಲೇವಾರಿ ಹಾಗೂ ಸ್ಯಾನಿಟರಿ ನಿರ್ವಹಣೆ ಬಗ್ಗೆ ನೈಜ ಚಿತ್ರಣವನ್ನು ತ್ರೈ ಮಾಸಿಕ ಸಮೀಕ್ಷೆಯಲ್ಲಿ ಪರಿಗಣಿಸಲಾಗಿದೆ.

ದೇಶದಾದ್ಯಂತ ನಡೆದ ಮೂರು ತ್ರೈಮಾಸಿಕ ಸ್ವಚ್ಛ ಸರ್ವೇಕ್ಷಣಾ ಲೀಗ್-2020ಯಲ್ಲಿ (ಏಪ್ರಿಲ್‍ನಿಂದ ಜೂನ್, ಜುಲೈನಿಂದ ಸೆಪ್ಟೆಂಬರ್, ಅಕ್ಟೋಬರ್ ನಿಂದ ಡಿಸೆಂಬರ್-2019) 4,203 ನಗರಗಳನ್ನು ಆಯ್ಕೆ ಮಾಡಲಾಗಿತ್ತು.

ಈ ತ್ರೈಮಾಸಿಕ ರ್ಯಾಂಕಿಂಗ್ ಫಲಿತಾಂಶವು ಜನವರಿ-2020ರ 4ರಿಂದ ನಡೆಯ ಲಿರುವ ರಾಷ್ಟ್ರ ಮಟ್ಟದ ವಾರ್ಷಿಕ ಸ್ವಚ್ಛ ಸಮೀಕ್ಷಾ ಕಾರ್ಯದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಮೈಸೂರು ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿ ಡಾ.ಸಿ.ಜಿ.ನಾಗರಾಜ್ ತಿಳಿಸಿದ್ದಾರೆ.

ಮೂರು ತಿಂಗಳ ಲೀಗ್ ರ್ಯಾಂಕಿಂಗ್ ಫಲಿತಾಂಶಕ್ಕೂ ವಾರ್ಷಿಕ ಸ್ವಚ್ಛ ಸರ್ವೇ ಕ್ಷಣಾ ಯೋಜನೆಗೂ ಯಾವುದೇ ಸಂಬಂಧ ವಿಲ್ಲ. ಜನವರಿ 4 ರಿಂದ ನಡೆಯಲಿರುವ ಸ್ವಚ್ಛ ಸಮೀಕ್ಷೆಗೆ ಮೈಸೂರಿನಲ್ಲಿ ಸ್ವಚ್ಛತೆ ಗಾಗಿ ಕೈಗೊಂಡಿರುವ ಕ್ರಮ, ಶೌಚಾ ಲಯ, ಕಸ ವಿಲೇವಾರಿ, ಚರಂಡಿ ವ್ಯವಸ್ಥೆ ನಿರ್ವ ಹಣೆ ಕುರಿತು ಸಮೀಕ್ಷೆ ವೇಳೆ ಅಧಿಕಾರಿಗಳ ತಂಡಕ್ಕೆ ಮಾಹಿತಿ ನೀಡಲು ನಾವು ಸಿದ್ಧತೆ ಮಾಡಿ ಕೊಂಡಿದ್ದೇವೆ ಎಂದೂ ಅವರು ತಿಳಿಸಿದರು.

ಮನೆ-ಮನೆಯಿಂದ ಬೇರ್ಪಡಿಸಿದ ಕಸ ಸಂಗ್ರಹಿಸಿ ವೈಜ್ಞಾನಿಕವಾಗಿ ವಿಲೇ ವಾರಿ ಮಾಡುತ್ತಿರುವುದು, ಮರು ಬಳಕೆ, ಗೊಬ್ಬರ, ತಯಾರಿಕೆ ಮಾಡಲುದ್ದೇಶಿಸಿರುವ ಕ್ರಮಗಳ ಬಗ್ಗೆಯೂ ಸಮೀಕ್ಷಾ ತಂಡಕ್ಕೆ ದಾಖಲಾತಿ ಗಳೊಂದಿಗೆ ಮಾಹಿತಿ ನೀಡಲು ಸಿದ್ಧತೆ ಮಾಡಿ ಕೊಂಡಿದ್ದೇವೆ ಎಂದು ಡಾ. ನಾಗರಾಜ್ ತಿಳಿಸಿದರು.

ಜನವರಿ 4ರಿಂದ ಕೇಂದ್ರ ನಗರಾಭಿವೃದ್ಧಿ ಸಚಿವಾಲಯವು ದೇಶದಾದ್ಯಂತ ಸ್ವಚ್ಛತಾ ಸಮೀಕ್ಷೆ ನಡೆಸುತ್ತಿದ್ದು, ಮೈಸೂ ರಿಗೆ ಆಗಮಿ ಸಲಿರುವ ತಂಡದ ಅಧಿಕಾರಿಗಳು, ಎಲ್ಲೆಡೆ ಸಂಚರಿಸಿ ಸ್ವಚ್ಛತೆಯನ್ನು ಖುದ್ದು ವೀಕ್ಷಿಸಿ ವೀಡಿಯೊ ರೆಕಾರ್ಡ್ ಮಾಡುವುದಲ್ಲದೆ, ಫೋಟೋ ತೆಗೆದು ಅಗತ್ಯ ಮಾಹಿತಿಗಳನ್ನು ಸಂಗ್ರಹಿಸುವರು ಎಂದು ತಿಳಿಸಿದರು.

ಸಾರ್ವಜನಿಕರೂ ಸಮೀಕ್ಷಾ ತಂಡ ಭೇಟಿ ನೀಡಿದಾಗ ತಂತಮ್ಮ ಸ್ಥಳಗಳಲ್ಲಿ ಪಾಲಿಕೆಯಿಂದ ಕೈಗೊಂಡಿರುವ ಸ್ವಚ್ಛತೆ ಕುರಿತಂತೆ ಪೂರಕ ಫೀಡ್ ಬ್ಯಾಕ್ ನೀಡುವ ಜತೆಗೆ ಸ್ವಚ್ಛತಾ ಆ್ಯಪ್ ಅನ್ನು ಡೌನ್ ಲೋಡ್ ಮಾಡಿಕೊಂಡು ಫೋಟೋ ಸಮೇತ ಉತ್ತರಿಸುವ ಮೂಲಕ ಸ್ವಚ್ಛತಾ ಸಮೀಕ್ಷೆಯಲ್ಲಿ ಮೈಸೂ ರಿಗೆ ಹೆಚ್ಚು ಅಂಕ ಗಳು ಲಭಿಸುವಂತೆ ಸಹಕರಿಸಬೇಕೆಂದೂ ಡಾ. ನಾಗರಾಜ್ ಮನವಿ ಮಾಡಿದ್ದಾರೆ.

Translate »