ಪಿಒಕೆ ಗುರಿಯಾಗಿಸಿ ದಾಳಿಗೆ ಸಿದ್ಧ
ಮೈಸೂರು

ಪಿಒಕೆ ಗುರಿಯಾಗಿಸಿ ದಾಳಿಗೆ ಸಿದ್ಧ

January 3, 2020

ನವದೆಹಲಿ: ಆದೇಶ ನೀಡಿದರೆ ಪಾಕ್ ಆಕ್ರಮಿತ ಕಾಶ್ಮೀರವನ್ನು ಗುರಿಯಾಗಿಸಿ ಕೊಂಡು ದಾಳಿ ಮಾಡಲು ಸೇನೆ ಸಿದ್ಧವಾಗಿದೆ ಎಂದು ನೂತನ ಸೇನಾ ಮುಖ್ಯಸ್ಥ ಎಂಎಂ ನರಾವಣೆ ಹೇಳಿದ್ದಾರೆ. ಸುದ್ದಿಗಾರರೊಂ ದಿಗೆ ಮಾತನಾಡಿದ ನರಾವಣೆ ಅವರು, ಆದೇಶ ನೀಡಿದರೆ ಯಾವುದೇ ಕ್ಷಣದಲ್ಲೂ ಪಾಕ್ ಆಕ್ರಮಿತ ಕಾಶ್ಮೀರದ ಮೇಲೆ ದಾಳಿ ಮಾಡಲು ಸೇನೆ ಸಿದ್ಧವಾಗಿದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಕ್ರಮ ಕೈಗೊಳ್ಳಲು ನಮ್ಮಲ್ಲಿ ವಿವಿಧ ಉಪಾಯಗಳಿವೆ. ಅಲ್ಲದೆ ನಾವು ಎಲ್ಲದಕ್ಕೂ ತಯಾರಿದ್ದೇವೆ ಎಂದರು. `ನಮ್ಮ ಸೇನಾ ಪಡೆಗಳನ್ನು ಜಮ್ಮು ಮತ್ತು ಕಾಶ್ಮೀರ ಸೇರಿ ಗಡಿಯಲ್ಲಿ ಈಗಾ ಗಲೇ ನಿಯೋಜಿಸಲಾಗಿದೆ. ಅಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ನಮ್ಮಲ್ಲಿ ವಿವಿಧ ಯೋಜನೆಗಳಿವೆ. ಅಗತ್ಯವಿದ್ದರೆ, ಆ ಯೋಜನೆಗಳನ್ನು ಕಾರ್ಯರೂಪಕ್ಕೆ ತರಬಹುದು. ನಾವು ಮಾಡಬೇಕಾದ ಯಾವುದೇ ಕೆಲಸವನ್ನು ನಾವು ಯಶಸ್ವಿಯಾಗಿ ನಿರ್ವಹಿಸುತ್ತೇವೆ. ಪರಿಸ್ಥಿತಿ ಬಂದರೆ ಭಯೋತ್ಪಾದನೆ ವಿರುದ್ಧ ಎಂತಹ ನೀತಿ ಅನುಸರಿಸಲೂ ನಾವು ಸಿದ್ಧ. ಆದರೆ ಸದ್ಯಕ್ಕೆ, ಆಕ್ರಮಣಗಳು ಅಥವಾ ಒಳನುಸುಳುವಿಕೆಗಳು ನಡೆಯದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ ಎಂದ ನರಾವಣೆ, ನಾವು ವಿವಿಧ ಪ್ರದೇಶಗಳಲ್ಲಿ ಮತ್ತು ಸಂಕಷ್ಟದ ಪರಿಸ್ಥಿತಿಗಳಲ್ಲಿ ಹೆಚ್ಚಿನ ಜಾಗರೂಕರಾಗಿರಬೇಕು. ಇದು ನಮಗೆ ನಿಜವಾದ ಚಾಲೆಂಜ್ ಎಂದರು.

Translate »