ಮೈಸೂರು, ಜ.2(ಆರ್‍ಕೆ)- ಆನ್‍ಲೈನ್ ಪರೀಕ್ಷಾ ಪದ್ಧತಿಯನ್ನು ಕೈ ಬಿಡಬೇಕೆಂದು ಆಗ್ರಹಿಸಿ ಐಟಿಐ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳು ಗುರುವಾರ ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು. ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಜೇಷನ್(ಎಐಡಿವೈಓ) ಜಂಟಿ ಕಾರ್ಯದರ್ಶಿ ಎಸ್.ಸುಮಾ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಐಟಿಐ ಆನ್‍ಲೈನ್ ಪರೀಕ್ಷಾ ಪದ್ಧತಿಯನ್ನು ರದ್ದುಗೊಳಿಸಿ ಈ ಹಿಂದೆ ಇದ್ದ ಮಾದರಿಯ ಲಿಖಿತ ಪರೀಕ್ಷೆ ನಡೆಸಬೇಕೆಂದು ವಿದ್ಯಾರ್ಥಿಗಳು ಆಗ್ರಹಿಸಿದರು. ಕಲಿಕಾ ಮಟ್ಟವನ್ನು ವಿದ್ಯಾರ್ಥಿಯ ಕೌಶಲ್ಯವನ್ನು ನೋಡಿ ಮೌಲ್ಯಮಾಪನ ಮಾಡಬೇಕೇ ಹೊರತು ಆನ್‍ಲೈನ್ ಮೂಲಕವಲ್ಲ. ಹಾಗೂ…
ಸಿಎಎ, ಎನ್‍ಆರ್‍ಸಿ ವಿರುದ್ಧ ಮಹಿಳಾ ಕಾಂಗ್ರೆಸ್ ರಂಗೋಲಿ ಮೂಲಕ ಪ್ರತಿರೋಧ
January 3, 2020ಮೈಸೂರು,ಜ.2(ಪಿಎಂ)-ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‍ಆರ್‍ಸಿ) ವಿರೋಧಿಸಿ ಮೈಸೂರು ಮಹಿಳಾ ಕಾಂಗ್ರೆಸ್ ರಂಗೋಲಿ ಸ್ಪರ್ಧೆ ಮೂಲಕ ವಿನೂತನವಾಗಿ ಗುರುವಾರ ಪ್ರತಿಭಟನೆ ನಡೆಸಿತು. ಮೈಸೂರು ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಎದುರು ಆಯೋಜಿಸಿದ್ದ ರಂಗೋಲಿ ಸ್ಪರ್ಧೆಯಲ್ಲಿ 30ಕ್ಕೂ ಹೆಚ್ಚು ಮಹಿಳೆಯರು ಪಾಲ್ಗೊಂಡು ವಿವಿಧ ಶೈಲಿಯಲ್ಲಿ ರಂಗೋಲಿ ರಚಿಸಿದರು. ಅಲ್ಲದೆ, ರಂಗೋಲಿಯಲ್ಲಿ ಸಿಎಎ ಹಾಗೂ ಎನ್‍ಆರ್‍ಸಿ ವಿರುದ್ಧದ ಘೋಷ ವಾಕ್ಯಗಳನ್ನು ಉಲ್ಲೇಖಿಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು. ಬುಧವಾರವಷ್ಟೇ ಸಂಸದರ ಕಚೇರಿಗೆ…
ನಾಳೆ ಎಸ್‍ಜೆಸಿಇಯಲ್ಲಿ 10ನೇ ಪದವಿ ಪ್ರದಾನ ಸಮಾರಂಭ
January 3, 2020ಮೈಸೂರು,ಜ.2(ಆರ್‍ಕೆ)-ಜನವರಿ 4ರಂದು ಬೆಳಿಗ್ಗೆ 11 ಗಂಟೆಗೆ ಮೈಸೂರಿನ ಶ್ರೀ ಜಯಚಾಮ ರಾಜೇಂದ್ರ ಇಂಜಿನಿಯರಿಂಗ್ ಕಾಲೇಜು (ಎಸ್‍ಜೆ ಸಿಇ) ಸಮುಚ್ಛಯದಲ್ಲಿ 10ನೇ ವಾರ್ಷಿಕ ಪದವಿ ಪ್ರದಾನ ಸಮಾ ರಂಭ ಏರ್ಪಡಿಸಲಾಗಿದೆ. ಎಸ್‍ಜೆಸಿಇಯಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಜೆಎಸ್‍ಎಸ್ ವಿಜ್ಞಾನ ಮತ್ತು ತಾಂತ್ರಿಕ ವಿದ್ಯಾಲಯದ ಕುಲಸಚಿವ ಪ್ರೊ. ಕೆ.ಎಸ್.ಲೋಕೇಶ, ಸುತ್ತೂರು ಮಠಾಧೀಶ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸುವ ಸಮಾರಂಭದಲ್ಲಿ ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿ ಅಶೋಕ್ ಜಿ.ನಿಜಗಣ್ಣವರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು…
ಹೊಸ ವರ್ಷಾಚರಣೆ ವೇಳೆ ವಿಪರೀತ ಮದ್ಯ ಸೇವಿಸಿ ಯುವಕ ಸಾವು
January 3, 2020ಮೈಸೂರು, ಜ.2(ಆರ್‍ಕೆ)-ಹೊಸ ವರ್ಷಾಚರಣೆ ವೇಳೆ ಸ್ನೇಹಿತರೊಂದಿಗೆ ವಿಪರೀತ ಮದ್ಯ ಸೇವಿಸಿ ಯುವಕನೋರ್ವ ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ಬುಧವಾರ ಸಂಭವಿಸಿದೆ. ಮೈಸೂರಿನ ಮಂಡಿ ಮೊಹಲ್ಲಾ, 2ನೇ ಈದ್ಗಾ ನಿವಾಸಿ ಅಶ್ವತ್ಥ ಅವರ ಮಗ ಕಾರ್ತಿಕ್(22) ಸಾವನ್ನಪ್ಪಿದ ಯುವಕ. ಹೊಸ ವರ್ಷಾ ಚರಣೆಗೆಂದು ಡಿ.31ರಂದು ಸಂಜೆ ಸಯ್ಯಾಜಿರಾವ್ ರಸ್ತೆಯ ಲಾಡ್ಜ್‍ವೊಂದರಲ್ಲಿ ಕೊಠಡಿ ಪಡೆದಿದ್ದ ಕಾರ್ತಿಕ್, ಪರಮೇಶ ಮತ್ತು ಚಂದನ್ ಸ್ನೇಹಿತರೊಂದಿಗೆ ಅಂದು ರಾತ್ರಿ ಪಾರ್ಟಿ ಮಾಡಿ ಮಲಗಿದ್ದ. ಮರುದಿನ (ಜ.1) ಬೆಳಿಗ್ಗೆ 10.30 ಗಂಟೆಗೆ ಚಂದನ ಮತ್ತು ಪರಮೇಶ ಎದ್ದು…
ಸಣ್ಣಪುಟ್ಟ ಅವಘಡ ಹೊರತುಪಡಿಸಿದರೆ ಮೈಸೂರಲ್ಲಿ ಹೊಸ ವರ್ಷಾಚರಣೆ ಹರ್ಷದಾಯಕ
January 2, 2020ಮೈಸೂರು,ಜ.1(ಆರ್‍ಕೆ)-ಕೆಲವೆಡೆ ಸಣ್ಣಪುಟ್ಟ ಅವಘಡಗಳು ಸಂಭವಿಸಿದರೂ ಯಾವುದೇ ಪ್ರಾಣಾಪಾಯವಿಲ್ಲದೆ ಮೈಸೂರಲ್ಲಿ ಹೊಸ ವರ್ಷಾಚರಣೆ ಹರ್ಷದಾಯಕವಾಗಿತ್ತು. ರಾತ್ರಿ 8.30 ಗಂಟೆ ವೇಳೆಗೆ ಸ್ನೇಹಿತ ನೊಂದಿಗೆ ಬೈಕ್‍ನಲ್ಲಿ ವೈನ್ ಸ್ಟೋರ್‍ನಿಂದ ಮದ್ಯ ಖರೀದಿಸಿ ಬಾಕ್ಸ್‍ನಲ್ಲಿರಿಸಿಕೊಂಡು ಜೆ.ಪಿ.ನಗರ ಕಡೆಗೆ ಹೋಗುತ್ತಿದ್ದಾಗ ಅಶೋಕಪುರಂ ಬಳಿ ಮಾನಂದವಾಡಿ ರಸ್ತೆಯಲ್ಲಿ ಹಿಂಬದಿ ಕುಳಿತಿದ್ದ ಯುವಕ ಕೆಳಬಿದ್ದು, ರಸ್ತೆಯಲ್ಲಿ ಮದ್ಯದ ಬಾಟಲಿ ಗಳು ಒಡೆದು ಚೂರು ಚೂರಾದವು. ಹಿಂಬದಿ ಸವಾರ ಬೀಳುತ್ತಿದ್ದಂತೆಯೇ ಬೈಕ್ ಚಾಲನೆ ಮಾಡುತ್ತಿದ್ದ ಯುವಕನೂ ನಿಯಂತ್ರಣ ತಪ್ಪಿ ಬಿದ್ದು ಗಾಯಗೊಂಡನು. ತಕ್ಷಣ 108 ಆಂಬುಲೆನ್ಸ್ ವಾಹನ…
ಕೊಯಮತ್ತೂರಲ್ಲಿ ಕನ್ನಡ ಬಾವುಟವಿದ್ದ ವಾಹನ ತಡೆದು ಚಾ.ನಗರ ಯುವಕರ ಮೇಲೆ ದಬ್ಬಾಳಿಕೆ
January 2, 2020ಮೈಸೂರು,ಜ.1(ಆರ್‍ಕೆ)-ಕಾರಿನಿಂದ ಕನ್ನಡ ಬಾವುಟ ತೆಗೆಯುವಂತೆ ಚಾಮರಾಜ ನಗರ ಯುವಕರ ಮೇಲೆ ದಬ್ಬಾಳಿಕೆ ಮಾಡಿರುವ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ಇಂದು ಮಧ್ಯಾಹ್ನ ನಡೆದಿದೆ. ಚಾಮರಾಜನಗರ ಜಿಲ್ಲೆ ಕಿಲಗೆರೆಯ ಶಿವಕುಮಾರ್, ವೀರಭದ್ರಪ್ಪ, ಮನು, ರವಿ, ಶಿವಕುಮಾರ್, ಸೋಮಶೇಖರ್, ಮಧುಸೂದನ್, ಮಹದೇವಪ್ರಸಾದ್ ಹಾಗೂ ಅಭಿನಂದನ್ ಎಂಬುವರು ಕೊಯಮತ್ತೂರಿನ ಜಗ್ಗಿ ವಾಸುದೇವ ಅವರ ಆಶ್ರಮದಲ್ಲಿನ ಈಶ್ವರ ದೇವಸ್ಥಾನಕ್ಕೆ ಹೋಗಿದ್ದ ವೇಳೆ ಅಲ್ಲಿನ ಹೊರವಲಯದ ಗಣಬದಿ ಬಳಿಯ ಹೀರೋ ಹೋಂಡಾ ಷೋ ರೂಂ ಎದುರು ಈ ಘಟನೆ ನಡೆದಿದೆ. ಇಂದು ಬೆಳಿಗ್ಗೆ 7 ಗಂಟೆಗೆ…
ಎಂಆರ್‍ಸಿ ಜಾಗದ ಗುತ್ತಿಗೆ ಅವಧಿ ವಿಸ್ತರಣೆ ಜನಾಭಿಪ್ರಾಯದಂತೆ ನಿರ್ಧಾರ
January 2, 2020ಮೈಸೂರು,ಜ.1(ಎಂಟಿವೈ)- ಮೈಸೂರು ಪ್ರವಾಸಿ ತಾಣವೂ ಆಗಿರುವ ಹಿನ್ನೆಲೆಯಲ್ಲಿ ಮೃಗಾಲಯವನ್ನು ಬಯಲು ಮೃಗಾಲಯವಾಗಿ ಮಾರ್ಪಡಿಸುವ ಉದ್ದೇಶದಿಂದ ರೇಸ್ ಕೋರ್ಸ್ ಸ್ಥಳವನ್ನು ಬಳಸಿಕೊಳ್ಳಬೇಕೆಂಬ ಉದ್ದೇಶ ನಮ್ಮದಾಗಿತ್ತು. ಆದರೆ ಸರ್ಕಾರ ಮೈಸೂರು ರೇಸ್ ಕ್ಲಬ್‍ಗೆ 30 ವರ್ಷ ಕಾಲ ಮತ್ತೆ ಗುತ್ತಿಗೆ ಅವಧಿ ವಿಸ್ತರಣೆ ಮಾಡಿದೆ. ಮೈಸೂರಿನ ಜನಾಭಿಪ್ರಾಯ ಪಡೆದು ಈ ಗುತ್ತಿಗೆ ರದ್ದು ಮಾಡುವ ಸಾಧ್ಯತೆ ಇದೆ ಎಂದು ಶಾಸಕ ಎಸ್.ಎ.ರಾಮದಾಸ್ ತಿಳಿಸಿದ್ದಾರೆ. ಮೈಸೂರಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವ ಹಿನ್ನೆಲೆಯಲ್ಲಿ ಈ ಹಿಂದಿನ ಸರ್ಕಾರದಲ್ಲಿ ಸಚಿವರಾ ಗಿದ್ದವರು, ರೇಸ್‍ಕೋರ್ಸ್…
ಮೃಗಾಲಯದ ಅಕ್ವೇರಿಯಂಗೆ ಶೀಘ್ರವೇ ಕಾಯಕಲ್ಪ
January 2, 2020ಮೈಸೂರು, ಜ.1- ಮೈಸೂರಿನ ಮೃಗಾಲಯದ ಆವರಣದಲ್ಲಿ ಕಳೆದ 7 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಬೃಹತ್ ಅಕ್ವೇರಿಯಂಗೆ ಕಾಯಕಲ್ಪ ನೀಡಲು ಶೀಘ್ರದಲ್ಲಿಯೇ ಕ್ರಮ ಕೈಗೊಳ್ಳುವುದಾಗಿ ಅರಣ್ಯ ಸಚಿವ ಸಿ.ಸಿ.ಪಾಟೀಲ್ ಭರವಸೆ ನೀಡಿದ್ದಾರೆ. ಈ ಕುರಿತಂತೆ `ಮೈಸೂರು ಮಿತ್ರ’ನೊಂದಿಗೆ ಬುಧ ವಾರ ಮಾತನಾಡಿದ ಅವರು, ನನ್ನ ಕಚೇರಿಗೆ ಬರುವ ಕಡತಗಳನ್ನು ಒಂದು ದಿನವೂ ಇಟ್ಟುಕೊಳ್ಳದೆ ಅಂದೇ ವಿಲೇವಾರಿ ಮಾಡುತ್ತೇನೆ. ಅಕ್ವೇರಿಯಂಗೆ ಸಂಬಂಧಿಸಿದ ಕಡತ ನಮ್ಮ ಕಚೇರಿಗೆ ಬಂದಿರುವುದು ಗಮನಕ್ಕೆ ಬಂದಿಲ್ಲ. ನಾಳೆ ಬೆಂಗಳೂರಿಗೆ ತೆರಳುತ್ತೇನೆ. ಬಳಿಕ ಆ ಕಡತವನ್ನು ಪರಿಶೀಲಿಸಿ…
ಸಿಎಎ, ಎನ್‍ಆರ್‍ಸಿ ವಿರುದ್ಧ ಮಹಿಳಾ ಕಾಂಗ್ರೆಸ್ ವಿನೂತನ ಪ್ರತಿಭಟನೆ
January 2, 2020ಮೈಸೂರು,ಜ.1(ಪಿಎಂ)-ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‍ಆರ್‍ಸಿ) ವಿರೋಧಿಸಿ ಬಿಜೆಪಿ ಸಂಸದರ ನಿವಾಸಕ್ಕೆ ಭೇಟಿ ನೀಡಿ ಅವರಿಗೆ ಬಿಳಿ ಗುಲಾಬಿ ಹೂವಿನೊಂದಿಗೆ ಮನವಿ ಸಲ್ಲಿಸುವ ವಿನೂತನ ಮಾದರಿಯ ಪ್ರತಿಭಟನೆಗೆ ರಾಜ್ಯ ಮಹಿಳಾ ಕಾಂಗ್ರೆಸ್ ಮುಂದಾಗಿದೆ. ಅದೇ ರೀತಿ ಮೈಸೂರಿನಲ್ಲಿ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರಿಗೆ ಮನವಿ ಸಲ್ಲಿಸಲು ಬುಧವಾರ ಸಂಸದರ ಕಚೇರಿಗೆ ತೆರಳಿದ್ದ ಮೈಸೂರು ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಪುಷ್ಪಲತಾ ಟಿ.ಬಿ.ಚಿಕ್ಕಣ್ಣ ನೇತೃತ್ವದ ತಂಡಕ್ಕೆ ನಿರಾಸೆ ಕಾದಿತ್ತು. ಏಕೆಂದರೆ ಸಂಸದ…
ಯುವಶಕ್ತಿ ಸರಿ ದಾರಿಯಲ್ಲಿ ಸಾಗಿದರೆ ದೇಶದ ಪ್ರಗತಿ ಸಾಧ್ಯ
January 2, 2020ಮೈಸೂರು,ಜ.1(ಪಿಎಂ)-ಯುವಶಕ್ತಿ ಸರಿ ದಾರಿಯಲ್ಲಿ ಸಾಗಿದರೆ ದೇಶದ ಪ್ರಗತಿ ಹಾಗೂ ಸಮಾಜದಲ್ಲಿ ಶಾಂತಿ-ಸಾಮರಸ್ಯ ನೆಲೆಸಲು ಸಾಧ್ಯ ಎಂದು ಮೈಸೂರು ಜಿಪಂ ಸಿಇಓ ಕೆ.ಜ್ಯೋತಿ ಅಭಿಪ್ರಾಯಪಟ್ಟರು. ಮೈಸೂರಿನ ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀ ಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಯುವ ಸಂಘಗಳ ಒಕ್ಕೂಟ, ನೆಹರು ಯುವ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಬುಧ ವಾರ ಹಮ್ಮಿಕೊಂಡಿದ್ದ ಮೈಸೂರು ಜಿಲ್ಲಾ ಮಟ್ಟದ ಯುವಜನೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಯುವ ಜನರು ಪ್ರತಿಭಾವಂತರು, ಸಾಧಕ…










