ಆನ್‍ಲೈನ್ ಪರೀಕ್ಷಾ ಪದ್ಧತಿ ಕೈ ಬಿಡಲು ಆಗ್ರಹಿಸಿ ಪ್ರತಿಭಟನೆ
ಮೈಸೂರು

ಆನ್‍ಲೈನ್ ಪರೀಕ್ಷಾ ಪದ್ಧತಿ ಕೈ ಬಿಡಲು ಆಗ್ರಹಿಸಿ ಪ್ರತಿಭಟನೆ

January 3, 2020

ಮೈಸೂರು, ಜ.2(ಆರ್‍ಕೆ)- ಆನ್‍ಲೈನ್ ಪರೀಕ್ಷಾ ಪದ್ಧತಿಯನ್ನು ಕೈ ಬಿಡಬೇಕೆಂದು ಆಗ್ರಹಿಸಿ ಐಟಿಐ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳು ಗುರುವಾರ ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.

ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಜೇಷನ್(ಎಐಡಿವೈಓ) ಜಂಟಿ ಕಾರ್ಯದರ್ಶಿ ಎಸ್.ಸುಮಾ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಐಟಿಐ ಆನ್‍ಲೈನ್ ಪರೀಕ್ಷಾ ಪದ್ಧತಿಯನ್ನು ರದ್ದುಗೊಳಿಸಿ ಈ ಹಿಂದೆ ಇದ್ದ ಮಾದರಿಯ ಲಿಖಿತ ಪರೀಕ್ಷೆ ನಡೆಸಬೇಕೆಂದು ವಿದ್ಯಾರ್ಥಿಗಳು ಆಗ್ರಹಿಸಿದರು. ಕಲಿಕಾ ಮಟ್ಟವನ್ನು ವಿದ್ಯಾರ್ಥಿಯ ಕೌಶಲ್ಯವನ್ನು ನೋಡಿ ಮೌಲ್ಯಮಾಪನ ಮಾಡಬೇಕೇ ಹೊರತು ಆನ್‍ಲೈನ್ ಮೂಲಕವಲ್ಲ. ಹಾಗೂ ಸರ್ಕಾರಿ ಐಟಿಐ ಸಂಸ್ಥೆಗಳೇ ಆನ್‍ಲೈನ್ ವ್ಯವಸ್ಥೆಗೆ ತಯಾರಿ ಮಾಡಿಕೊಳ್ಳದಿರುವಾಗ ಈ ಪದ್ಧತಿ ಜಾರಿಗೆ ತಂದಿರುವುದು ಸರಿಯಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದರು.

ಪರೀಕ್ಷಾ ಶುಲ್ಕದ ಮೇಲೆ ವಿಧಿಸಿರುವ ಹೆಚ್ಚುವರಿ ಶುಲ್ಕ ಹಾಗೂ ಜಿಎಸ್‍ಟಿಯನ್ನು ಹಿಂಪಡೆಯಬೇಕು, ಕಳೆದ ವರ್ಷ ನಡೆದ ಐಟಿಐ ಪರೀಕ್ಷಾ ಫಲಿತಾಂಶ ಪ್ರಕಟಿಸ ಬೇಕೆಂಬುದೂ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ವಿದ್ಯಾರ್ಥಿ ಗಳು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

Translate »