ಪವರ್‍ಗ್ರಿಡ್ ಮಾರ್ಗ ಬದಲಿಸದಿದ್ದರೆ ಇಂದು ಉಸ್ತುವಾರಿ ಸಚಿವರ ಕೆಡಿಪಿ ಸಭೆಗೆ ಮುತ್ತಿಗೆ
ಮೈಸೂರು

ಪವರ್‍ಗ್ರಿಡ್ ಮಾರ್ಗ ಬದಲಿಸದಿದ್ದರೆ ಇಂದು ಉಸ್ತುವಾರಿ ಸಚಿವರ ಕೆಡಿಪಿ ಸಭೆಗೆ ಮುತ್ತಿಗೆ

January 3, 2020

ಮೈಸೂರು, ಜ.2(ಆರ್‍ಕೆ)- ಹಿರಿಯೂ ರಿನಿಂದ ಮೈಸೂರು ಮಾರ್ಗದಲ್ಲಿ ಅಳ ವಡಿಸಲುದ್ದೇಶಿಸಿರುವ 440 ಕಿ.ವ್ಯಾ. ಸಾಮ ಥ್ರ್ಯದ ಪವರ್‍ಗ್ರಿಡ್ ಮಾರ್ಗ ಬದಲಿಸಲು ಕ್ರಮ ವಹಿಸದಿದ್ದರೆ ನಾಳೆ (ಜ.3) ಮೈಸೂ ರಿನ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ನಡೆಯಲಿರುವ ಜಿಲ್ಲಾ ಉಸ್ತುವಾರಿ ಸಚಿ ವರ ಕೆಡಿಪಿ ಸಭೆಗೆ ಮುತ್ತಿಗೆ ಹಾಕುವು ದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ.

ಪವರ್‍ಗ್ರಿಡ್ ಮಾರ್ಗ ಬದಲಿಸುವಂತೆ ಆಗ್ರಹಿಸಿ 4 ದಿನಗಳಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನಾ ಧರಣಿ ನಡೆ ಸುತ್ತಿರುವ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಬಡ ಗಲಪುರ ನಾಗೇಂದ್ರ ಅವರು ಇಂದು ಧರಣಿ ಸ್ಥಳದಲ್ಲಿ ಈ ವಿಷಯ ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಧರಣಿ ಸ್ಥಳಕ್ಕೆ ಬಂದು ಈ ಬಗ್ಗೆ ಕ್ರಮ ವಹಿ ಸುವ ಭರವಸೆ ನೀಡದಿದ್ದಲ್ಲಿ ಶುಕ್ರವಾರ ಜಿಪಂ ಕಚೇರಿ ಸಭಾಂಗಣದಲ್ಲಿ ನಡೆಯುವ ಕೆಡಿಪಿ ಸಭೆಗೆ ಮುತ್ತಿಗೆ ಹಾಕಲು ನಿರ್ಧ ರಿಸಿರುವುದಾಗಿ ತಿಳಿಸಿದರು.

ಶುಕ್ರವಾರ ಸುಮಾರು ಒಂದೂವರೆ ಸಾವಿರ ರೈತರು ಪ್ರತಿಭಟನಾ ಧರಣಿಯಲ್ಲಿ ಭಾಗವಹಿ ಸಲಿದ್ದು, ಸಚಿವರು ಬಂದು ನಮ್ಮ ಸಮಸ್ಯೆ ಆಲಿಸಿ ಗಿಡ, ಮರ, ಬೆಳೆಗಳನ್ನು ಹಾಳು ಮಾಡುವ ಪವರ್‍ಗ್ರಿಡ್ ಯೋಜನಾ ಮಾರ್ಗ ವನ್ನು ಬದಲಿಸುವ ನಿರ್ಧಾರ ಕೈಗೊಳ್ಳ ಬೇಕು ಎಂದು ನಾಗೇಂದ್ರ ಒತ್ತಾಯಿಸಿದರು.

ಭತ್ತ ಕಟಾವು ಮಾಡಲು ಹೆಚ್ಚು ಯಂತ್ರ ಗಳನ್ನು ಪೂರೈಸಬೇಕು, ಭತ್ತ ಖರೀದಿಸಲು ವಿಧಿಸಿರುವ ಷರತ್ತುಗಳನ್ನು ಸಡಿಲಿಸಬೇಕು. ಕಾಡಾನೆ ಹಾವಳಿಯಿಂದುಂಟಾದ ಬೆಳೆ ಹಾನಿ ಮಾನವ ಪ್ರಾಣ ಹಾನಿಗೆ ಹೆಚ್ಚಿನ ಪರಿಹಾರ ಮತ್ತು ಕೆಂಚಲಗೂಡು ಪ್ರದೇಶ ದಲ್ಲಿ ಗೃಹಮಂಡಳಿ ಸ್ವಾಧೀನಪಡಿಸಿಕೊಂಡಿ ರುವ ಭೂಮಾಲೀಕರಿಗೆ ನಿವೇಶನಗಳನ್ನು ನೀಡಬೇಕೆಂದು ಒತ್ತಾಯಿಸಿದರು.

ಜ.8ರಂದು ಗ್ರಾಮೀಣ ಕರ್ನಾಟಕ ಬಂದ್: ಗ್ರಾಮೀಣ ಜನರ ಸಮಸ್ಯೆಗಳನ್ನು ನಿರ್ಲಕ್ಷಿಸಿರುವ ಸರ್ಕಾರದ ವಿರುದ್ಧ ಪ್ರತಿ ಭಟಿಸಲು ಜನವರಿ 8ರಂದು ಗ್ರಾಮೀಣ ಕರ್ನಾಟಕ ಬಂದ್ ಮಾಡಲು ರೈತ ಸಂಘಟನೆಗಳು ನಿರ್ಧರಿಸಿವೆ ಎಂದು ಬಡಗಲಪುರ ನಾಗೇಂದ್ರ ತಿಳಿಸಿದ್ದಾರೆ.

ಅಖಿಲ ಭಾರತ ಕೃಷಿ ಸಂಘರ್ಷ ಸಮಿ ತಿಯು ಗ್ರಾಮೀಣ ಭಾರತ ಬಂದ್‍ಗೆ ಕರೆ ನೀಡಿರುವುದರಿಂದ ಅಂದು (ಜ.8) ಕರ್ನಾ ಟಕದಲ್ಲೂ ರೈತ ಸಂಘ, ರಾಜ್ಯ ಪ್ರಾಂತ ರೈತ ಸಂಘ, ಕೂಲಿಕಾರರ ಸಂಘ, ರೈತ ಕೃಷಿ ಕಾರ್ಮಿಕ ಸಂಘಟನೆಗಳು ಜಂಟಿ ಯಾಗಿ ಗ್ರಾಮೀಣ ಕರ್ನಾಟಕ ಬಂದ್ ನಡೆಸಲಾಗುವುದು ಎಂದು ತಿಳಿಸಿದರು.

ರೈತ ಮುಖಂಡರಾದ ಎಂ.ಎಸ್. ಅಶ್ವಥ್ ನಾರಾಯಣ ರಾಜೇಅರಸ್, ಹೆಚ್.ಸಿ. ಲೋಕೇಶ್ ರಾಜೇ ಅರಸ್, ನಟರಾಜು, ಹೊಸೂರು ಕುಮಾರ್, ಹೊಸಕೋಟೆ ಬಸವರಾಜು ಮತ್ತಿತರರು 4ನೇ ದಿನವಾದ ಇಂದೂ ಧರಣಿಯಲ್ಲಿ ಪಾಲ್ಗೊಂಡಿದ್ದರು.

Translate »