ಭಾರತದ ಆರ್ಥಿಕ ಹಿನ್ನಡೆ ತಾತ್ಕಾಲಿಕ, ಆತಂಕದ ಅವಶ್ಯಕತೆಯಿಲ್ಲ
ಮೈಸೂರು

ಭಾರತದ ಆರ್ಥಿಕ ಹಿನ್ನಡೆ ತಾತ್ಕಾಲಿಕ, ಆತಂಕದ ಅವಶ್ಯಕತೆಯಿಲ್ಲ

January 3, 2020

ಮೈಸೂರು,ಜ.2-ಆರ್ಥಿಕ ಹಿನ್ನಡೆ/ಕುಸಿತ ಸಾಮಾನ್ಯ ಸಂಗತಿಯಾಗಿದ್ದು, ಇದು ಭಾರತದ ಆರ್ಥಿಕತೆಗೆ ಬಹುದೊಡ್ಡ ಸವಾಲಾಗಿದೆ. ಆರ್ಥಿಕ ಹಿನ್ನಡೆಯು ಅರ್ಥ ವ್ಯವಸ್ಥೆಯ ದಿಕ್ಕನ್ನು ಬದಲಿಸುವುದರಿಂದ ಅದಕ್ಕೆ ಸೂಕ್ತ ಪರಿಹಾರ ಕಂಡು ಹಿಡಿಯುವುದು ಅನಿವಾರ್ಯ ವಾಗಿದೆ. ಭಾರತದಲ್ಲಿ ಸದ್ಯದ ಮಟ್ಟಿಗೆ ಆರ್ಥಿಕ ಹಿಂಜ ರಿತ ಗೋಚರಿಸಿಲ್ಲ, ಆದರೆ ಆರ್ಥಿಕ ಹಿನ್ನಡೆ ಅನುಭವಿ ಸುತ್ತಿದೆ. ಇದು ತಾತ್ಕಾಲಿಕ ಮಾತ್ರ. ಆತಂಕಕ್ಕೆ ಒಳಗಾಗ ಬೇಕಾದ ಅವಶ್ಯಕತೆಯಿಲ್ಲ. ಆರ್ಥಿಕ ಹಿನ್ನಡೆಯು ನಿಧಾನ ಗತಿಯ ಬೆಳವಣಿಗೆಯ ಸಂಕೇತವಾಗಿರುವುದರಿಂದ ಅವುಗಳನ್ನು ಪತ್ತೆಹಚ್ಚಿ ನಿಯಂತ್ರಿಸಬೇಕಾಗಿದೆ ಎಂದು ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನ, ವ್ಯವಹಾರ ನಿರ್ವಹಣಾ ಅಧ್ಯಯನ ವಿಭಾಗದ ಸಂದರ್ಶಕ ಪ್ರಾಧ್ಯಾ ಪಕ ಡಾ.ಬಿ.ಗೋಪಾಲ್ ಸಿಂಗ್ ಅಭಿಪ್ರಾಯಪಟ್ಟರು.

ನಗರದ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗದಿಂದ `ಆರ್ಥಿಕ ಹಿನ್ನಡೆ- ಕಾರಣ ಗಳು ಮತ್ತು ಪರಿಹಾರಗಳು’ ವಿಷಯ ಕುರಿತು ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡುತ್ತಿದ್ದರು.

2025ರ ವೇಳೆಗೆ ಭಾರತದಲ್ಲಿ ಉತ್ಪಾದಕ ಜನ ಸಂಖ್ಯೆಯ ಪ್ರಮಾಣ ತೀವ್ರವಾಗಿ ಹೆಚ್ಚುವ ಸಂಭವ ವಿದ್ದು, ಇದು ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ. 2008ರಲ್ಲಿ ಅಮೇರಿಕಾದಲ್ಲಿ ಆರ್ಥಿಕ ಹಿಂಜರಿತ ಸಂಭವಿಸಿತ್ತಾದರೂ ಅದು ಭಾರತದ ಆರ್ಥಿಕತೆಯ ಮೇಲೆ ಅಷ್ಟೇನೂ ಪ್ರಭಾವ ಬೀರಿರ ಲಿಲ್ಲ. ಏಕೆಂದರೆ ಭಾರತವು ಸದೃಢ ಮತ್ತು ಸುಸ್ಥಿರ ಬ್ಯಾಂಕಿಂಗ್ ವ್ಯವಸ್ಥೆ ಹೊಂದಿರುವುದೇ ಇದಕ್ಕೆ ಕಾರಣ. ಆದರೂ ಬ್ಯಾಂಕ್‍ಗಳ ವಸೂಲಾಗದ ಸಾಲ ಸಮಸ್ಯೆ ತೀವ್ರ ಆತಂಕ ಸೃಷ್ಟಿಸಿರುವುದರಿಂದ ಸಾಲ ವಸೂಲಾತಿಗೆ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದರು.

ಕೃಷಿ ಉತ್ಪನ್ನಗಳಿಗೆ ಸರಿಯಾದ ಬೆಲೆ ಮಾರುಕಟ್ಟೆ ಯಲ್ಲಿ ಸಿಗುವಂತಾಗಬೇಕು. ಕೃಷಿಯಲ್ಲಿನ ಹೂಡಿಕೆಯು ಆರ್ಥಿಕತೆಯನ್ನು ಉತ್ತೇಜಿಸುತ್ತದೆ ಎಂದು ಅಭಿಪ್ರಾಯ ಪಟ್ಟರು. ಇತ್ತೀಚೆಗೆ ಸರಕಾರವು ಮೂಲಭೂತ ಸೌಕರ್ಯ ಗಳಲ್ಲಿ ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿದ್ದು, ಇದು ಆರ್ಥಿಕತೆಯ ಸಹಜ ಸ್ಥಿತಿಗೆ ಆಶಾದಾಯಕ ಬೆಳವಣಿಗೆಯಾಗಿದೆ. ಒಟ್ಟಾರೆ ಆರ್ಥಿಕ ಹಿನ್ನಡೆ ಒಂದು ತಾತ್ಕಾಲಿಕ ವಿದ್ಯಮಾನವಾದ್ದರಿಂದ ಸರಕಾರದ ಹಲವು ಉಪಶಮನ ಕಾರ್ಯಕ್ರಮಗಳು ಆರ್ಥಿಕತೆಯನ್ನು ಉತ್ತೇಜಿಸಿ, ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗು ತ್ತವೆ. ಆ ಮೂಲಕ ಸಹಜ ಸ್ಥಿತಿಗೆ ಬರಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ಉಪನ್ಯಾಸ ಕಾರ್ಯ ಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಡಾ.ಎಸ್. ಮರೀಗೌಡ ವಹಿಸಿದ್ದರು. ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ.ಆರ್.ಸಿದ್ಧರಾಜು ಸ್ವಾಗತಿಸಿದರು. ಡಾ.ವೆಂಕಟೇಶ ಟಿ.ಕೆ. ನಿರೂಪಿಸಿ, ವಂದಿಸಿದ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ಮಾಲೆಯ ಸಂಯೋಜಕರಾದ ಡಾ.ಸಿಂಧು.ಸಿ.ಆರ್ ಹಾಗೂ ಬೋಧಕ ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು.

Translate »