ಸಿಎಎ, ಎನ್‍ಆರ್‍ಸಿ ವಿರುದ್ಧ ಮಹಿಳಾ ಕಾಂಗ್ರೆಸ್ ರಂಗೋಲಿ ಮೂಲಕ ಪ್ರತಿರೋಧ
ಮೈಸೂರು

ಸಿಎಎ, ಎನ್‍ಆರ್‍ಸಿ ವಿರುದ್ಧ ಮಹಿಳಾ ಕಾಂಗ್ರೆಸ್ ರಂಗೋಲಿ ಮೂಲಕ ಪ್ರತಿರೋಧ

January 3, 2020

ಮೈಸೂರು,ಜ.2(ಪಿಎಂ)-ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‍ಆರ್‍ಸಿ) ವಿರೋಧಿಸಿ ಮೈಸೂರು ಮಹಿಳಾ ಕಾಂಗ್ರೆಸ್ ರಂಗೋಲಿ ಸ್ಪರ್ಧೆ ಮೂಲಕ ವಿನೂತನವಾಗಿ ಗುರುವಾರ ಪ್ರತಿಭಟನೆ ನಡೆಸಿತು. ಮೈಸೂರು ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಎದುರು ಆಯೋಜಿಸಿದ್ದ ರಂಗೋಲಿ ಸ್ಪರ್ಧೆಯಲ್ಲಿ 30ಕ್ಕೂ ಹೆಚ್ಚು ಮಹಿಳೆಯರು ಪಾಲ್ಗೊಂಡು ವಿವಿಧ ಶೈಲಿಯಲ್ಲಿ ರಂಗೋಲಿ ರಚಿಸಿದರು. ಅಲ್ಲದೆ, ರಂಗೋಲಿಯಲ್ಲಿ ಸಿಎಎ ಹಾಗೂ ಎನ್‍ಆರ್‍ಸಿ ವಿರುದ್ಧದ ಘೋಷ ವಾಕ್ಯಗಳನ್ನು ಉಲ್ಲೇಖಿಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.

ಬುಧವಾರವಷ್ಟೇ ಸಂಸದರ ಕಚೇರಿಗೆ ಬಿಳಿ ಗುಲಾಬಿ ಹೂನೊಂದಿಗೆ ಮನವಿ ಅರ್ಪಿಸಿದ್ದ ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರು ಇಂದು ರಂಗೋಲಿ ರಚನೆಯ ಮೂಲಕ ಕೇಂದ್ರ ಸರ್ಕಾರದ ಧೋರಣೆಯನ್ನು ಖಂಡಿಸಿದರು. `ನೋ ಸಿಎಎ’, `ನೋ ಎನ್‍ಆರ್‍ಸಿ’ ಎಂಬಿತ್ಯಾದಿ ಘೋಷ ವಾಕ್ಯಗಳು ರಂಗೋಲಿಯಲ್ಲೇ ಕಂಡು ಬಂದವು.

ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷೆ ಡಾ.ಪುಷ್ಪಾ ಅಮರ ನಾಥ್, ಸಿಎಎ ಹಾಗೂ ಎನ್‍ಆರ್‍ಸಿ ಮೂಲಕ ಮುಸ ಲ್ಮಾನರಿಗೆ ಮಾತ್ರವೇ ಸಮಸ್ಯೆಯಲ್ಲ. ದಲಿತರು ಹಾಗೂ ಆದಿವಾಸಿಗಳೂ ಇದರಿಂದ ಸಮಸ್ಯೆಗೆ ಸಿಲುಕಬೇಕಾ ಗುತ್ತದೆ. ನೆರೆ ಬಂದು ಮನೆಯೇ ನೀರಿನಲ್ಲಿ ಕೊಚ್ಚಿ ಹೋದ ಪ್ರಕರಣಗಳಲ್ಲಿ ದಾಖಲೆಗಳನ್ನು ಕೇಳಿದರೆ ಎಲ್ಲಿಂದ ತಂದು ಕೊಡಲು ಸಾಧ್ಯ ಎಂದು ಪ್ರಶ್ನಿಸಿದರು.

ಉತ್ತಮವಾಗಿ ರಂಗೋಲಿ ರಚಿಸಿದವರಿಗೆ ಕ್ರಮವಾಗಿ 3 ಬಹುಮಾನಗಳನ್ನು ನೀಡಲಾಯಿತು. ಮಹಿಳಾ ಕಾಂಗ್ರೆಸ್‍ನ ರಾಜ್ಯ ಉಪಾಧ್ಯಕ್ಷೆ ಪುಷ್ಪಾವಲ್ಲಿ, ರಾಜ್ಯ ಪ್ರಧಾನ ಕಾರ್ಯ ದರ್ಶಿ ಲತಾ ಮೋಹನ್, ಮೈಸೂರು ನಗರಾಧ್ಯಕ್ಷೆ ಪುಷ್ಪಲತಾ ಟಿ.ಬಿ.ಚಿಕ್ಕಣ್ಣ, ಜಿಲ್ಲಾಧ್ಯಕ್ಷೆ ಲತಾಸಿದ್ದಶೆಟ್ಟಿ, ಮಾಜಿ ಮೇಯರ್ ಮೋದಾಮಣಿ ಮತ್ತಿತರರು ಹಾಜರಿದ್ದರು.

Translate »