ನಾಳೆ ಎಸ್‍ಜೆಸಿಇಯಲ್ಲಿ 10ನೇ ಪದವಿ ಪ್ರದಾನ ಸಮಾರಂಭ
ಮೈಸೂರು

ನಾಳೆ ಎಸ್‍ಜೆಸಿಇಯಲ್ಲಿ 10ನೇ ಪದವಿ ಪ್ರದಾನ ಸಮಾರಂಭ

January 3, 2020

ಮೈಸೂರು,ಜ.2(ಆರ್‍ಕೆ)-ಜನವರಿ 4ರಂದು ಬೆಳಿಗ್ಗೆ 11 ಗಂಟೆಗೆ ಮೈಸೂರಿನ ಶ್ರೀ ಜಯಚಾಮ ರಾಜೇಂದ್ರ ಇಂಜಿನಿಯರಿಂಗ್ ಕಾಲೇಜು (ಎಸ್‍ಜೆ ಸಿಇ) ಸಮುಚ್ಛಯದಲ್ಲಿ 10ನೇ ವಾರ್ಷಿಕ ಪದವಿ ಪ್ರದಾನ ಸಮಾ ರಂಭ ಏರ್ಪಡಿಸಲಾಗಿದೆ.

ಎಸ್‍ಜೆಸಿಇಯಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಜೆಎಸ್‍ಎಸ್ ವಿಜ್ಞಾನ ಮತ್ತು ತಾಂತ್ರಿಕ ವಿದ್ಯಾಲಯದ ಕುಲಸಚಿವ ಪ್ರೊ. ಕೆ.ಎಸ್.ಲೋಕೇಶ, ಸುತ್ತೂರು ಮಠಾಧೀಶ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸುವ ಸಮಾರಂಭದಲ್ಲಿ ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿ ಅಶೋಕ್ ಜಿ.ನಿಜಗಣ್ಣವರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ತಿಳಿಸಿದರು.

ಜೆಎಸ್‍ಎಸ್ ಮಹಾ ವಿದ್ಯಾಪೀಠದ ಕಾರ್ಯ ನಿರ್ವಾ ಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರ ಮಠ್ ಅಧ್ಯಕ್ಷತೆ ವಹಿಸುವ ಸಮಾರಂಭದಲ್ಲಿ, ಜೆಎಸ್‍ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿವಿ ಕುಲಪತಿ ಪ್ರೊ. ಎಲ್.ಜವಾಹರ ನೇಸನ್, ತಾಂತ್ರಿಕ ಶಿಕ್ಷಣ ವಿಭಾಗದ ಸಲಹೆಗಾರ ಪ್ರೊ.ಎಂ.ಹೆಚ್.ಧನಂಜಯ, ಪರೀಕ್ಷಾಂಗ ನಿಯಂತ್ರಣಾಧಿಕಾರಿ ಪ್ರೊ. ಕೆ.ಎನ್.ಉದಯಕುಮಾರ್ ಹಾಗೂ ಎಸ್‍ಜೆಸಿಇ ಪ್ರಾಂಶುಪಾಲ ಪ್ರೊ.ಟಿ.ಎನ್. ನಾಗಭೂಷಣ್ ಪಾಲ್ಗೊಳ್ಳುವರು. ವಿದ್ಯಾ ಸಂಸ್ಥೆಯು ಸ್ವಾಯತ್ತತೆ ಹೊಂದಿದ ನಂತರ ನಡೆಯುತ್ತಿರುವ 10ನೇ ಪದವಿ ಪ್ರದಾನ ಸಮಾರಂಭದಲ್ಲಿ 2018-19ನೇ ಸಾಲಿನಲ್ಲಿ 874 ಮಂದಿಗೆ ಬಿಇ ಪದವಿ, 12 ಮಂದಿಗೆ ಚಿನ್ನದ ಪದಕ ಹಾಗೂ 9 ದತ್ತಿ ಪದವಿಗಳನ್ನು ಪ್ರದಾನ ಮಾಡಲಾಗುವುದು.

ಪ್ರಸ್ತುತ ವರ್ಷ 144 ಕಂಪನಿಗಳು ಎಸ್‍ಜೆಸಿಇ ಯಲ್ಲಿ ಕ್ಯಾಂಪಸ್ ಸಂದರ್ಶನ ನಡೆಸಿ 670 ಅಭ್ಯರ್ಥಿ ಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. 2020ರ ಜನವರಿಯಿಂದ ಮೇ ಮಾಹೆವರೆಗೆ ಇನ್ನೂ 50 ಕಂಪನಿಗಳು ಕ್ಯಾಂಪಸ್ ಇಂಟರ್‍ವ್ಯೂ ನಡೆಸಲಿವೆ ಎಂದು ಕೆ.ಎನ್.ಲೋಕೇಶ್ ತಿಳಿಸಿದರು.

ಬೋಧನಾ ಮೂಲ ಸೌಲಭ್ಯ, ಸಂಶೋಧನಾ ವ್ಯವಸ್ಥೆ ಹಾಗೂ ಲರ್ನಿಂಗ್ ಸೌಕರ್ಯ ವೃದ್ಧಿಸಲು ಮತ್ತು ಫ್ಯಾಕಲ್ಟಿ ಡೆವಲಪ್‍ಮೆಂಟ್ ಕಾರ್ಯ ಕ್ರಮಗಳಿಗಾಗಿ ಮೂರು ಹಂತದಲ್ಲಿ ವಿಶ್ವ ಬ್ಯಾಂಕ್ (Woಡಿಟಜ ಃಚಿಟಿಞ) Pಇಕಿಇ ಯೋಜನೆಯಡಿ ಅನುದಾನ ನೀಡುತ್ತಿದೆ ಎಂದು ನುಡಿದರು.

ಎಸ್‍ಜೆಸಿಇ ಪ್ರಾಂಶುಪಾಲ ಡಾ. ಟಿ.ಎಸ್.ನಾಗ ಭೂಷಣ್ ಹಾಗೂ ಪರೀಕ್ಷಾಂಗ ನಿಯಂತ್ರಣಾಧಿಕಾರಿ ಪ್ರೊ. ಕೆ.ಎನ್.ಉದಯಕುಮಾರ್ ಸುದ್ದಿಗೋಷ್ಠಿ ಯಲ್ಲಿ ಉಪಸ್ಥಿತರಿದ್ದರು.

Translate »