ಯುವಶಕ್ತಿ ಸರಿ ದಾರಿಯಲ್ಲಿ ಸಾಗಿದರೆ ದೇಶದ ಪ್ರಗತಿ ಸಾಧ್ಯ
ಮೈಸೂರು

ಯುವಶಕ್ತಿ ಸರಿ ದಾರಿಯಲ್ಲಿ ಸಾಗಿದರೆ ದೇಶದ ಪ್ರಗತಿ ಸಾಧ್ಯ

January 2, 2020

ಮೈಸೂರು,ಜ.1(ಪಿಎಂ)-ಯುವಶಕ್ತಿ ಸರಿ ದಾರಿಯಲ್ಲಿ ಸಾಗಿದರೆ ದೇಶದ ಪ್ರಗತಿ ಹಾಗೂ ಸಮಾಜದಲ್ಲಿ ಶಾಂತಿ-ಸಾಮರಸ್ಯ ನೆಲೆಸಲು ಸಾಧ್ಯ ಎಂದು ಮೈಸೂರು ಜಿಪಂ ಸಿಇಓ ಕೆ.ಜ್ಯೋತಿ ಅಭಿಪ್ರಾಯಪಟ್ಟರು.

ಮೈಸೂರಿನ ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀ ಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಯುವ ಸಂಘಗಳ ಒಕ್ಕೂಟ, ನೆಹರು ಯುವ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಬುಧ ವಾರ ಹಮ್ಮಿಕೊಂಡಿದ್ದ ಮೈಸೂರು ಜಿಲ್ಲಾ ಮಟ್ಟದ ಯುವಜನೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಯುವ ಜನರು ಪ್ರತಿಭಾವಂತರು, ಸಾಧಕ ರಾಗಬೇಕು. ಏನಾಗದಿದ್ದರೂ ಮಾನವೀಯ ಮೌಲ್ಯ ಬೆಳೆಸಿಕೊಂಡು ಸಮಾಜದಲ್ಲಿ ಶಾಂತಿ ಸಾಮರಸ್ಯ ನೆಲಸಲು ಯುವ ಜನತೆ ಕೊಡುಗೆ ನೀಡಬೇಕು ಎಂದರಲ್ಲದೆ, ಹೊಸ ವರ್ಷದ ಮೊದಲ ದಿನವಾದ ಇಂದು ಕಲಾ ಪ್ರದ ರ್ಶನ ನೀಡಲು ಇಲ್ಲಿ ಸೇರಿರುವ ಯುವ ಸಮುದಾಯ ಸೇರಿದಂತೆ ಎಲ್ಲರಿಗೂ 2020ರ ಹೊಸ ವರ್ಷದ ಶುಭಾಶಯ ಕೋರುವುದಾಗಿ ತಿಳಿಸಿದರು.

ಯುವ ಜನ ಎಂದರೆ ಬಿರುಗಾಳಿ, ಸಿಡಿಲು ಇದ್ದಂತೆ. ಅಂತಹ ಶಕ್ತಿ ಇವರಲ್ಲಿ ಹುದುಗಿರುತ್ತದೆ. ಇವರು ಭವಿಷ್ಯದ ಆಶಾ ಕಿರಣ. ಇವರ ಮೇಲೆ ಹಲವು ನಿರೀಕ್ಷೆ ಗಳನ್ನು ನಮ್ಮ ಸಮಾಜ ಇಟ್ಟುಕೊಂಡಿದೆ. ಯುವಶಕ್ತಿ ಮನಸು ಮಾಡಿದರೆ ಸಮಾ ಜದ ಉನ್ನತ ಬದಲಾವಣೆ ಸಾಧ್ಯವಾಗ ಲಿದೆ. ಈ ಸಮುದಾಯದ ಶಕ್ತಿ ದುರ್ಬ ಳಕೆಯಾಗದೇ ಸದ್ಬಳಕೆಯಾಗುವ ನಿಟ್ಟಿನಲ್ಲಿ ಇವರ ಮೇಲೆ ಕೆಲ ನಿಯಂತ್ರಣ ಹೇರುವ ಜವಾಬ್ದಾರಿಯನ್ನು ಹಿರಿಯರು ನಿಭಾಯಿ ಸಬೇಕಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮೇಯರ್ ಪುಷ್ಪ ಲತಾ ಜಗನ್ನಾಥ್ ಮಾತನಾಡಿ, ಇಂದಿನ ಪೀಳಿಗೆಯವರಿಗೆ ಅವರ ಪ್ರತಿಭೆ ಅನಾವ ರಣಗೊಳಿಸಲು ಹಲವು ವೇದಿಕೆಗಳಿವೆ. ಆದರೆ ನಮ್ಮ ವಿದ್ಯಾರ್ಥಿ ಜೀವನದ ವೇಳೆ ಈ ರೀತಿಯ ವಿಫುಲ ಅವಕಾಶಗಳು ಲಭ್ಯ ವಿರಲಿಲ್ಲ. ಹೀಗಾಗಿ ನೀವು ಅದೃಷ್ಟ ವಂತರು. ಇರುವ ಅವಕಾಶಗಳನ್ನು ಸದು ಪಯೋಗಪಡಿಸಿಕೊಳ್ಳುವ ಜವಾಬ್ದಾರಿ ನಿಮ್ಮ ಮೇಲಿದೆ. ಸ್ಪರ್ಧೆ ಮಾಡುವುದು ಕೇವಲ ಬಹುಮಾನಕ್ಕೆ ಎಂದು ಭಾವಿಸಿ ಕೊಳ್ಳದೇ ಸ್ಪರ್ಧೆಯಲ್ಲಿ ಪ್ರತಿಭೆ ಅನಾವರ ಣಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಿ ಎಂದು ಸಲಹೆ ನೀಡಿದರು.

2019-20ನೇ ಸಾಲಿನ ಮೈಸೂರು ಜಿಲ್ಲಾ ಮಟ್ಟದ ವಿವಿಧ ಕಲಾ ಸ್ಪರ್ಧೆ ಇದಾ ಗಿದ್ದು, ಇದರಲ್ಲಿ 15ರಿಂದ 29 ವರ್ಷ ವಯೋಮಿತಿಯೊಳಗಿನ ಯುವ ಜನರು ಸ್ಪರ್ಧೆ ಮಾಡಲು ಅವಕಾಶ ನೀಡಲಾಗಿತ್ತು. ಯುವಕ-ಯುವತಿಯರು, ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿ -ವಿದ್ಯಾರ್ಥಿನಿಯರು ಮತ್ತು ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ನೋಂದಣಿಯಾದ ಯುವ ಸಂಘಟನೆ ಗಳು ಪಾಲ್ಗೊಳ್ಳಲು ಅವಕಾಶ ಇದ್ದಿತು. ವೈಯಕ್ತಿಕ ಹಾಗೂ ಗುಂಪು ಸ್ಪರ್ಧೆಗಳಲ್ಲಿ ಭಾಗವಹಿಸಲು 50ಕ್ಕೂ ಹೆಚ್ಚು ಗುಂಪುಗಳು ನೋಂದಣಿ ಆಗಿದ್ದವು.

ಒಂದು ದಿನ ನಡೆದ ಜಿಲ್ಲಾ ಮಟ್ಟದ ಯುವಜನೋತ್ಸವದಲ್ಲಿ ವೈಯಕ್ತಿಕ ಹಾಗೂ ಗುಂಪು ವಿಭಾಗಗಳಲ್ಲಿ 9 ಸ್ಪರ್ಧೆಗಳು ನಡೆದವು. ಶಾಸ್ತ್ರೀಯ ನೃತ್ಯ, ಶಾಸ್ತ್ರೀಯ ವಾದ್ಯ, ಹಾರ್ಮೋನಿಯಂ, ಗಿಟಾರ್, ಶಾಸ್ತ್ರೀಯ ಗಾಯನ, ಆಶುಭಾಷಣ, ಏಕಾಂಕ ನಾಟಕ, ಜನಪದ ಗೀತೆ ಹಾಗೂ ಜನಪದ ನೃತ್ಯ ಸ್ಪರ್ಧೆಗಳು ನಡೆದವು. ಜಿಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಸದಸ್ಯೆ ಚಂದ್ರಿಕಾ ಸುರೇಶ್, ನೆಹರು ಯುವ ಕೇಂದ್ರದ ಜಿಲ್ಲಾ ಸಮನ್ವ ಯಾಧಿಕಾರಿ ಎಸ್.ಸಿದ್ದರಾಮಪ್ಪ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಕೆ.ಸುರೇಶ್, ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಟಿ. ವಿಜಯ್ ಮತ್ತಿತರರು ಹಾಜರಿದ್ದರು.

Translate »