ಅಪಘಾತ ನೆಪದಲ್ಲಿ ಟೆಂಪೋ ಚಾಲಕನಿಂದ ಹಣ ದೋಚಲು ಯತ್ನ
ಮೈಸೂರು

ಅಪಘಾತ ನೆಪದಲ್ಲಿ ಟೆಂಪೋ ಚಾಲಕನಿಂದ ಹಣ ದೋಚಲು ಯತ್ನ

January 2, 2020

ಮೈಸೂರು,ಜ.1(ಆರ್‍ಕೆ)-ಎಲ್ಲರೂ ಹೊಸ ವರ್ಷಾಚರಣೆ ಮುಗಿಸಿ ಗಾಢ ನಿದ್ರೆಯಲ್ಲಿ ರುವಾಗ ದುಷ್ಕರ್ಮಿಗಳಿಬ್ಬರು ಟೆಂಪೋ ತಡೆದು, ಅದರ ಡ್ರೈವರ್ ಬಳಿ ಅಪಘಾತದ ನೆಪದಲ್ಲಿ ಹಣ ಕೀಳಲು ಯತ್ನಿಸಿದ ಘಟನೆ ಗೆಜ್ಜಲಗೆರೆ ಬಳಿ ಬೆಂಗಳೂರು ಹೆದ್ದಾರಿ ಯಲ್ಲಿ ಇಂದು ಮುಂಜಾನೆ ಸಂಭವಿಸಿದೆ.

ಮೈಸೂರಿನ ಗೋಕುಲಂ 3ನೇ ಹಂತದ ಕೆ.ಪಿ.ಕಾನ್ವೆಂಟ್ ರಸ್ತೆ ನಿವಾಸಿ ಶಂಕರ್ (35), ದುಷ್ಕರ್ಮಿಗಳ ದಾಳಿ ಗೊಳಗಾ ದವರು. ಕೊರಿಯರ್ ಕಂಪನಿ ಯೊಂದರಲ್ಲಿ ಟೆಂಪೋ ಚಾಲಕರಾಗಿರುವ ಅವರು, ಟಪಾಲು ಗಳನ್ನು ತುಂಬಿಕೊಂಡು ಟೆಂಪೋದಲ್ಲಿ ಬೆಂಗಳೂರಿನಿಂದ ಮೈಸೂರಿಗೆ ಬರುತ್ತಿದ್ದರು.

ಇಂದು ಮುಂಜಾನೆ ಸುಮಾರು 3.30 ಗಂಟೆ ವೇಳೆಗೆ ಮದ್ದೂರು-ಮಂಡ್ಯ ನಡುವೆ ಗೆಜ್ಜಲಗೆರೆ ಸಮೀಪ ಬೈಕ್‍ನಲ್ಲಿ ಬಂದ ಅಪರಿಚಿತ ಯುವಕರಿಬ್ಬರು, ಬೈಕ್ ಅಡ್ಡ ನಿಲ್ಲಿಸಿ ಟೆಂಪೋ ತಡೆದರು.

ಶಂಕರ್‍ನನ್ನು ವಾಹನದಿಂದ ಕೆಳಗಿಳಿಸಿ ನೀನು ನಮ್ಮ ಬೈಕ್‍ಗೆ ಡಿಕ್ಕಿ ಹೊಡೆದು ನಿಲ್ಲಿಸದೇ ಬಂದಿದ್ದೀಯಾ. ನಮಗೆ ಬಿದ್ದು ಗಾಯಗಳಾಗಿದೆಯಲ್ಲದೆ, ಬೈಕ್ ಜಖಂ ಗೊಂಡಿದೆ. ನಡೀ ಮದ್ದೂರಿಗೆ ಚಿಕಿತ್ಸೆ ಕೊಡಿಸು ಎಂದು ಯುವಕರು ದಬಾಯಿಸಿದರು.

ನಾನು ಯಾವ ವಾಹನಕ್ಕೂ ಡಿಕ್ಕಿ ಹೊಡೆದಿಲ್ಲ, ಬೇಕಾದರೆ ಮಂಡ್ಯ ಹತ್ತಿರ ವಿದೆ ಬನ್ನಿ. ಅಲ್ಲಿ ಟ್ರೀಟ್‍ಮೆಂಟ್ ಕೊಡಿ ಸುತ್ತೇನೆ ಇಲ್ಲವಾದರೆ ಪೊಲೀಸ್ ಸ್ಟೇಷನ್‍ಗೆ ಬನ್ನಿ ಎಂದು ಶಂಕರ್ ಹೇಳಿದರಾದರೂ ಕೇಳದ ಅಪರಿಚಿತರು, ನಾವು ಮಂಡ್ಯಗೆ ಬರುವುದಿಲ್ಲ, ಮದ್ದೂರಿಗೆ ಬಾ ಎಂದು ಒತ್ತಾಯಿಸಿ, ಕಡೆಗೆ ನಾವೇ ಟ್ರೀಟ್‍ಮೆಂಟ್ ತೆಗೆದುಕೊಳ್ಳುತ್ತೇವೆ ಹಣಕೊಡು ಎಂದು ಒತ್ತಾಯಿಸಿದರು. ಸುಮಾರು 10 ನಿಮಿಷ ವಾಗ್ವಾದ ನಡೆಯಿತಾದರೂ, ನಾನು ಹಣ ಕೊಡಲ್ಲ, ಪೊಲೀಸರನ್ನು ಕರೆಯುತ್ತೇನೆ ಅವ ರೊಂದಿಗೆ ಮಾತನಾಡಿ ಎಂದು ಶಂಕರ್ ಧೈರ್ಯದಿಂದ ಹೇಳುತ್ತಿ ದ್ದಂತೆಯೇ ಯುವಕರು, ಟೆಂಪೋ ನಂಬರ್ ನೋಟ್ ಮಾಡಿಕೊಂಡು, ಬೆದರಿಕೆ ಹಾಕಿ ಜಾಗ ಖಾಲಿ ಮಾಡಿ ದರು ಎಂದು ಶಂಕರ್ ತಿಳಿಸಿದ್ದಾರೆ.

Translate »