ಸಿಎಎ, ಎನ್‍ಆರ್‍ಸಿ ವಿರುದ್ಧ ಮಹಿಳಾ ಕಾಂಗ್ರೆಸ್ ವಿನೂತನ ಪ್ರತಿಭಟನೆ
ಮೈಸೂರು

ಸಿಎಎ, ಎನ್‍ಆರ್‍ಸಿ ವಿರುದ್ಧ ಮಹಿಳಾ ಕಾಂಗ್ರೆಸ್ ವಿನೂತನ ಪ್ರತಿಭಟನೆ

January 2, 2020

ಮೈಸೂರು,ಜ.1(ಪಿಎಂ)-ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‍ಆರ್‍ಸಿ) ವಿರೋಧಿಸಿ ಬಿಜೆಪಿ ಸಂಸದರ ನಿವಾಸಕ್ಕೆ ಭೇಟಿ ನೀಡಿ ಅವರಿಗೆ ಬಿಳಿ ಗುಲಾಬಿ ಹೂವಿನೊಂದಿಗೆ ಮನವಿ ಸಲ್ಲಿಸುವ ವಿನೂತನ ಮಾದರಿಯ ಪ್ರತಿಭಟನೆಗೆ ರಾಜ್ಯ ಮಹಿಳಾ ಕಾಂಗ್ರೆಸ್ ಮುಂದಾಗಿದೆ.

ಅದೇ ರೀತಿ ಮೈಸೂರಿನಲ್ಲಿ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರಿಗೆ ಮನವಿ ಸಲ್ಲಿಸಲು ಬುಧವಾರ ಸಂಸದರ ಕಚೇರಿಗೆ ತೆರಳಿದ್ದ ಮೈಸೂರು ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಪುಷ್ಪಲತಾ ಟಿ.ಬಿ.ಚಿಕ್ಕಣ್ಣ ನೇತೃತ್ವದ ತಂಡಕ್ಕೆ ನಿರಾಸೆ ಕಾದಿತ್ತು. ಏಕೆಂದರೆ ಸಂಸದ ಪ್ರತಾಪ್ ಸಿಂಹ ಪ್ರವಾಸದಲ್ಲಿದ್ದು, ಕಚೇರಿ ಬಾಗಿಲು ಹಾಕಿತ್ತು. ಹೀಗಾಗಿ ಸಂಸದರನ್ನು ಖುದ್ದು ಭೇಟಿ ಮಾಡಲು ಸಾಧ್ಯವಾಗಲಿಲ್ಲ.

ಕಚೇರಿ ಬಾಗಿಲಿಗೆ ಬಿಳಿ ಗುಲಾಬಿ ಹಾಗೂ ಮನವಿ ಪತ್ರ ಇಟ್ಟು ಮೈಸೂರು ಕಾಂಗ್ರೆಸ್ ಮಹಿಳಾ ಘಟಕದ ತಂಡ ವಾಪಸ್ಸಾಯಿತು. ಸಂಸದರಿಗೆ ಹೊಸ ವರ್ಷದ ಶುಭಾಶಯ ಕೋರುವ ಜೊತೆಗೆ ಸಿಎಎ ವಿಚಾರ ಲೋಕಸಭೆಯಲ್ಲಿ ಚರ್ಚೆ ಮಾಡಿ ಕಾಯ್ದೆ ಹಿಂಪಡೆಯಲು ಒತ್ತಾಯಿ ಸುವಂತೆ ಮನವಿ ಮಾಡಲು ತೆರಳಿದ್ದರು.

ನಿಮಗೆ ಮತ್ತು ನಿಮ್ಮ ಕುಟುಂಬದ ವರಿಗೆ 2020ರ ನೂತನ ವರ್ಷ ಸಂಭ್ರಮ ತರಲಿ ಎಂದು ಹಾರೈಸುತ್ತೇವೆ. ನೂತನ ವರ್ಷದಲ್ಲಿ ನಿಮ್ಮನ್ನು ಆಯ್ಕೆ ಮಾಡಿದ ಮತದಾರರು ಕೂಡ ಸಂಭ್ರಮಿಸು ವಂತಾಗಬೇಕಲ್ಲವೇ? ಲೋಕಸಭೆಯಲ್ಲಿ ಮಂಡನೆಯಾದ ಸಿಎಎ ಮತ್ತು ದೇಶದೆ ಲ್ಲೆಡೆ ಜಾರಿಗೊಳಿಸಲು ಉದ್ದೇಶಿಸಿರುವ ಎನ್‍ಆರ್‍ಸಿ ಆತಂಕ ಉಂಟು ಮಾಡಿದೆ ಎಂದು ಉಲ್ಲೇಖಿಸಿರುವ ಮನವಿ ಪತ್ರವನ್ನು ಬಾಗಿಲಿಗೆ ಇಟ್ಟು ಬಂದಿದ್ದಾರೆ.

ೀವು ಈ ದೇಶದಲ್ಲಿ ಹುಟ್ಟಿದ್ದಕ್ಕೆ ದಾಖಲೆ ಕೇಳುವುದು ನಿಮಗೆ ಮತ ನೀಡಿದವರನ್ನು ಅಪಮಾನಿಸಿದಂತೆ. ನೂತನ ವರ್ಷ ವನ್ನು ದೇಶದ ಜನತೆ ನಿರಾಂತಕವಾಗಿ ಸ್ವಾಗತಿಸಿ ಸಂಭ್ರಮಿಸಲು ನೀವು ಸಂಸತ್ತಿ ನಲ್ಲಿ ಈ ಸಂವಿಧಾನ ವಿರೋಧಿ ಕಾಯ್ದೆ ವಿರುದ್ಧ ದನಿಯೆತ್ತಿದಾಗ ಮಾತ್ರ ಸಾಧ್ಯ. ನೂತನ ವರ್ಷ ದೇಶದಲ್ಲಿ ಶಾಂತಿ, ಸೌಹಾರ್ದತೆ, ಸಮಾನತೆಗಾಗಿ ನೀವು ಸಂವಿಧಾನ ವಿರೋಧಿ ಕಾಯ್ದೆ ಹಿಂಪಡೆ ಯಲು ಸರ್ಕಾರವನ್ನು ಒತ್ತಾಯಿಸಿ ಎಂದು ಮನವಿ ಪತ್ರದಲ್ಲಿ ಕೋರಲಾಗಿದೆ. ಮಾಜಿ ಮೇಯರ್ ಮೋದಾಮಣಿ, ಮಹಿಳಾ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷೆ ಪುಷ್ಪವಲ್ಲಿ, ಮಹಿಳಾ ಕಾಂಗ್ರೆಸ್ ಮುಖಂಡ ರಾದ ಲತಾ ಮೋಹನ್, ಸುಶೀಲ ಮರಿ ಗೌಡ ಮತ್ತಿತರರು ಪಾಲ್ಗೊಂಡಿದ್ದರು.

ಇಂದು ರಂಗೋಲಿ ಸ್ಪರ್ಧೆ ಮೂಲಕ ಪ್ರತಿಭಟನೆ
ಜ.2ರಂದು (ಗುರುವಾರ) ಬೆಳಿಗ್ಗೆ 9ಕ್ಕೆ ಮೈಸೂರಿನ ಅರಮನೆ ಕೋಟೆ ಆಂಜ ನೇಯ ಸ್ವಾಮಿ ದೇವಸ್ಥಾನದ ಎದುರು ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿದೆ. ಸಾರ್ವಜನಿಕರು ಸ್ಥಳದಲ್ಲೇ ಹೆಸರು ನೋಂದಣಿ ಮಾಡಿಕೊಂಡು ಇದರಲ್ಲಿ ಭಾಗವಹಿಸಬಹುದು. ಯಾವ ವಿಧದ ರಂಗೋಲಿ ಬೇಕಿದ್ದರೂ ಬಿಡಬಹುದು. ಆದರೆ ರಂಗೋಲಿ ಜೊತೆಗೆ ಸಿಎಎ ಹಾಗೂ ಎನ್‍ಆರ್‍ಸಿ ವಿರೋಧಿಸುತ್ತೇವೆ ಎಂದು ಶೀರ್ಷಿಕೆ ಬರೆಯಬೇಕು. ವಿಜೇತ ರಿಗೆ ಕ್ರಮವಾಗಿ ಮೂರು ಬಹುಮಾನ ನೀಡಲಾಗುವುದು. – ಮಹಿಳಾ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷೆ ಪುಷ್ಪವಲ್ಲಿ

Translate »