Tag: Mysore

ಅಪಘಾತ ನೆಪದಲ್ಲಿ ಟೆಂಪೋ ಚಾಲಕನಿಂದ ಹಣ ದೋಚಲು ಯತ್ನ
ಮೈಸೂರು

ಅಪಘಾತ ನೆಪದಲ್ಲಿ ಟೆಂಪೋ ಚಾಲಕನಿಂದ ಹಣ ದೋಚಲು ಯತ್ನ

January 2, 2020

ಮೈಸೂರು,ಜ.1(ಆರ್‍ಕೆ)-ಎಲ್ಲರೂ ಹೊಸ ವರ್ಷಾಚರಣೆ ಮುಗಿಸಿ ಗಾಢ ನಿದ್ರೆಯಲ್ಲಿ ರುವಾಗ ದುಷ್ಕರ್ಮಿಗಳಿಬ್ಬರು ಟೆಂಪೋ ತಡೆದು, ಅದರ ಡ್ರೈವರ್ ಬಳಿ ಅಪಘಾತದ ನೆಪದಲ್ಲಿ ಹಣ ಕೀಳಲು ಯತ್ನಿಸಿದ ಘಟನೆ ಗೆಜ್ಜಲಗೆರೆ ಬಳಿ ಬೆಂಗಳೂರು ಹೆದ್ದಾರಿ ಯಲ್ಲಿ ಇಂದು ಮುಂಜಾನೆ ಸಂಭವಿಸಿದೆ. ಮೈಸೂರಿನ ಗೋಕುಲಂ 3ನೇ ಹಂತದ ಕೆ.ಪಿ.ಕಾನ್ವೆಂಟ್ ರಸ್ತೆ ನಿವಾಸಿ ಶಂಕರ್ (35), ದುಷ್ಕರ್ಮಿಗಳ ದಾಳಿ ಗೊಳಗಾ ದವರು. ಕೊರಿಯರ್ ಕಂಪನಿ ಯೊಂದರಲ್ಲಿ ಟೆಂಪೋ ಚಾಲಕರಾಗಿರುವ ಅವರು, ಟಪಾಲು ಗಳನ್ನು ತುಂಬಿಕೊಂಡು ಟೆಂಪೋದಲ್ಲಿ ಬೆಂಗಳೂರಿನಿಂದ ಮೈಸೂರಿಗೆ ಬರುತ್ತಿದ್ದರು. ಇಂದು ಮುಂಜಾನೆ…

ಛಾಯಾಚಿತ್ರ ಪ್ರಧಾನ `ನಮ್ಮ ಕುಕ್ಕರಹಳ್ಳಿ ಕೆರೆ’ ಪುಸ್ತಕ ಬಿಡುಗಡೆ
ಮೈಸೂರು

ಛಾಯಾಚಿತ್ರ ಪ್ರಧಾನ `ನಮ್ಮ ಕುಕ್ಕರಹಳ್ಳಿ ಕೆರೆ’ ಪುಸ್ತಕ ಬಿಡುಗಡೆ

January 2, 2020

ಮೈಸೂರು, ಜ.1(ಪಿಎಂ)- ಮೈಸೂ ರಿನ ಕುಕ್ಕರಹಳ್ಳಿ ಕೆರೆಯ ಪ್ರಾಕೃತಿಕ ಸೌಂದರ್ಯ ಹಾಗೂ ಜೀವ ವೈವಿಧ್ಯತೆ ಕುರಿತ ಛಾಯಾಚಿತ್ರ ಪ್ರಧಾನವಾದ `ನಮ್ಮ ಕುಕ್ಕರಹಳ್ಳಿ ಕೆರೆ’ ಕಾಫಿ ಟೇಬಲ್ ಪುಸ್ತಕ ಬುಧವಾರ ಬಿಡುಗಡೆಗೊಂಡಿತು. ಮೈಸೂರು ಗ್ರಾಹಕರ ಪರಿಷತ್ತು (ಎಂಜಿಪಿ) ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಹೊರ ತಂದಿರುವ ಈ ಪುಸ್ತಕವನ್ನು ಮೈಸೂರಿನ ಕುಕ್ಕರಹಳ್ಳಿ ಕೆರೆಯ ಮುಖ್ಯ ದ್ವಾರದ ಉದ್ಯಾನ ಮಾರ್ಗದಲ್ಲಿ ಬಿಡುಗಡೆ ಮಾಡಲಾಯಿತು. ಪರಿಸರ ಸಂರಕ್ಷಣೆಗಾಗಿ ಎಂಜಿಪಿ ಹಾಕಿ ಕೊಂಡಿರುವ ಯೋಜನೆಯಾದ `ಪರಿಸರ ಶಾಲಾ ವಾರ್ಡನ್’ ಸಂಘಟನೆಯಲ್ಲಿ ತೊಡ ಗಿಸಿಕೊಂಡಿರುವ…

ಬುದ್ಧ, ಬಸವ, ಅಂಬೇಡ್ಕರರ ಪ್ರಬುದ್ಧ ಭಾರತ ಅಪಾಯದಲ್ಲಿದೆ
ಮೈಸೂರು

ಬುದ್ಧ, ಬಸವ, ಅಂಬೇಡ್ಕರರ ಪ್ರಬುದ್ಧ ಭಾರತ ಅಪಾಯದಲ್ಲಿದೆ

January 2, 2020

ಮೈಸೂರು,ಜ.1(ಪಿಎಂ)-ಪ್ರಸ್ತುತ ದೇಶದ ಆಡಳಿತ ಮನುವಾದಿಗಳ ಕಪಿಮುಷ್ಠಿ ಯಲ್ಲಿದ್ದು, ಬುದ್ಧ, ಬಸವ, ಅಂಬೇಡ್ಕರರ ಪ್ರಬುದ್ಧ ಭಾರತ ಈಗ ಅಪಾಯದಲ್ಲಿದೆ ಎಂದು ಉರಿಲಿಂಗಿ ಪೆದ್ದಿ ಮಠದ ಶ್ರೀ ಜ್ಞಾನ ಪ್ರಕಾಶಸ್ವಾಮೀಜಿ ಆತಂಕ ವ್ಯಕಪಡಿಸಿದರು. ಮೈಸೂರಿನ ಅಶೋಕ ವೃತ್ತದ ಬಳಿಯಿ ರುವ ವಿಶ್ವಮೈತ್ರಿ ಬುದ್ಧ ವಿಹಾರದಲ್ಲಿ ಕರ್ನಾ ಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಪರಿಶಿಷ್ಟ ಜಾತಿ-ಪಂಗಡ ನೌಕರರ ಸಂಘ, ಪರಿಶಿಷ್ಟ ಜಾತಿ-ಪಂಗಡ ಅಧಿಕಾರಿಗಳು ಮತ್ತು ನೌಕ ರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ ಡಾ.ಬಿ. ಆರ್.ಅಂಬೇಡ್ಕರ್ ಅವರ…

ಮೈಸೂರು 55ನೇ ವಾರ್ಡ್ ವ್ಯಾಪ್ತಿಯ ಫಲಾನುಭವಿಗಳಿಗೆ ಉಚಿತ ಆರೋಗ್ಯ ಕಾರ್ಡ್ ವಿತರಿಸಿ ಹೊಸ ವರ್ಷಾಚರಣೆ
ಮೈಸೂರು

ಮೈಸೂರು 55ನೇ ವಾರ್ಡ್ ವ್ಯಾಪ್ತಿಯ ಫಲಾನುಭವಿಗಳಿಗೆ ಉಚಿತ ಆರೋಗ್ಯ ಕಾರ್ಡ್ ವಿತರಿಸಿ ಹೊಸ ವರ್ಷಾಚರಣೆ

January 2, 2020

ಮೈಸೂರು,ಜ.1(ಆರ್‍ಕೆಬಿ)- ಮೈಸೂ ರಿನ 55ನೇ ವಾರ್ಡ್ ವ್ಯಾಪ್ತಿಯ ವಿವಿಧ ಫಲಾನುಭವಿಗಳಿಗೆ ಬುಧವಾರ ಮೈಸೂ ರಿನ ಚಾಮುಂಡಿಪುರಂನ ತಗಡೂರು ರಾಮ ಚಂದ್ರರಾವ್ ಉದ್ಯಾನವನದಲ್ಲಿ ಉಚಿತ ಆರೋಗ್ಯ ಕಾರ್ಡ್, ಸಂಧ್ಯಾ ಸುರಕ್ಷಾ ಮತ್ತು ವಿಧವಾ ವೇತನ ಆದೇಶ ಪತ್ರ ಮತ್ತು ಶ್ರವಣದೋಷವುಳ್ಳವರಿಗೆ ಶ್ರವಣ ಯಂತ್ರ ಗಳನ್ನು ವಿತರಿಸುವ ಮೂಲಕ ಹೊಸ ವರ್ಷ ವನ್ನು ವಿಭಿನ್ನವಾಗಿ ಆಚರಿಸಲಾಯಿತು. ವಾರ್ಡ್ ಸದಸ್ಯ ಮಾ.ವಿ.ರಾಮ ಪ್ರಸಾದ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 250 ಜನರಿಗೆ ಉಚಿತ ಆರೋಗ್ಯ ಕಾರ್ಡ್, 25 ಮಂದಿಗೆ ಸಂಧ್ಯಾ ಸುರಕ್ಷಾ ಮತ್ತು ವಿಧವಾ…

`ಸಂಕಲ್ಪ-2020’ ರೋಟರಿ  ವಾರ್ಷಿಕ ಜಿಲ್ಲಾ ಸಮಾವೇಶ
ಮೈಸೂರು

`ಸಂಕಲ್ಪ-2020’ ರೋಟರಿ  ವಾರ್ಷಿಕ ಜಿಲ್ಲಾ ಸಮಾವೇಶ

January 2, 2020

ರೋಟರಿ ಶತಮಾನೋತ್ಸವದ ಅಂಗವಾಗಿ ಮೈಸೂರಲ್ಲಿ ನಾಳೆಯಿಂದ ಮೈಸೂರು, ಜ.1(ಆರ್‍ಕೆಬಿ)- ಅಂತಾರಾಷ್ಟ್ರೀಯ ರೋಟರಿ ಸಂಸ್ಥೆ ಭಾರತಕ್ಕೆ ಪಾದಾರ್ಪಣೆ ಮಾಡಿ ನೂರು ವರ್ಷಗಳು ಕಳೆದಿರುವ ಹಿನ್ನೆಲೆಯಲ್ಲಿ ರೋಟರಿ ಶತಮಾನೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ಮೈಸೂರಿನಲ್ಲಿ ಜ.3ರಿಂದ 5ರವರೆಗೆ `ಸಂಕಲ್ಪ-2020’ ರೋಟರಿ ಜಿಲ್ಲಾ ಸಮಾವೇಶ ಆಯೋಜಿಸಿದೆ. ಮೈಸೂರಿನ ಆರ್.ಟಿ.ನಗರದ ಡಾ.ಶಿವೇಗೌಡರ ಯುಎಸ್‍ಎ ಫಾರ್ಮ್‍ನಲ್ಲಿ ನಡೆ ಯುವ ಸಮಾವೇಶದಲ್ಲಿ ರೋಟರಿ ಜಿಲ್ಲೆ 3181 ವ್ಯಾಪ್ತಿಗೆ ಒಳಪಡುವ ದಕ್ಷಿಣ ಕನ್ನಡ, ಮಡಿಕೇರಿ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಸುಮಾರು 2 ಸಾವಿರ ಮಂದಿ ರೋಟರಿ ಸದಸ್ಯರು,…

ಕಾಡ್ಗಿಚ್ಚು ಸಂದರ್ಭ ಸೇನಾ ಹೆಲಿಕಾಪ್ಟರ್ ಬಳಸಿಕೊಳ್ಳಲು ನಿರ್ಧಾರ
ಮೈಸೂರು

ಕಾಡ್ಗಿಚ್ಚು ಸಂದರ್ಭ ಸೇನಾ ಹೆಲಿಕಾಪ್ಟರ್ ಬಳಸಿಕೊಳ್ಳಲು ನಿರ್ಧಾರ

January 2, 2020

ಮೈಸೂರು,ಜ.1(ಎಂಟಿವೈ)- ಬಂಡೀಪುರ, ನಾಗರ ಹೊಳೆ ಸೇರಿದಂತೆ ಮೈಸೂರು ಭಾಗದ ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು ತಡೆಗೆ ಸೇನಾ ಹೆಲಿಕಾಪ್ಟರ್ ಬಳಸಿಕೊಳ್ಳಲು ನಿರ್ಧರಿಸಿದ್ದು, ಈ ಸಂಬಂಧ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವ ರೊಂದಿಗೆ ಚರ್ಚಿಸಲಾಗುತ್ತದೆ ಎಂದು ಅರಣ್ಯ ಸಚಿವ ಸಿ.ಸಿ.ಪಾಟೀಲ್ ತಿಳಿಸಿದ್ದಾರೆ. ಮೈಸೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಳೆದ ವರ್ಷ ಬಂಡೀಪುರ ಅರಣ್ಯದಲ್ಲಿ ಫೈರ್‍ಲೈನ್ ಇಲ್ಲದ ಕಾರಣ ಕಾಡ್ಗಿಚ್ಚು ಸಂಭವಿಸಿತ್ತು. ಸುಮಾರು 20 ಸಾವಿರ ಎಕರೆ ಅರಣ್ಯ ಪ್ರದೇಶ ಬೆಂಕಿಗಾಹುತಿಯಾಗಿತ್ತು. ಆದರೆ ಈ ಬಾರಿ ಕಾಡ್ಗಿಚ್ಚು ಸಂಭವಿಸದಂತೆ ಕಟ್ಟೆಚ್ಚರ…

ಅಂತರಸಂತೆಯಲ್ಲಿ ನಾಳೆ ಜೀವ ವೈವಿಧ್ಯ ಹಬ್ಬ ಮಳೆ ಆಶ್ರಿತ ರೈತರ ಸಂಗಮ ಕಾರ್ಯಕ್ರಮ
ಮೈಸೂರು

ಅಂತರಸಂತೆಯಲ್ಲಿ ನಾಳೆ ಜೀವ ವೈವಿಧ್ಯ ಹಬ್ಬ ಮಳೆ ಆಶ್ರಿತ ರೈತರ ಸಂಗಮ ಕಾರ್ಯಕ್ರಮ

January 2, 2020

ಮೈಸೂರು, ಜ.1(ಆರ್‍ಕೆಬಿ)- ಪೀಪಲ್ ಟ್ರೀ ಸಂಸ್ಥೆ ಮತ್ತು ಸಿರಿಧಾನ್ಯ ಸಂಪರ್ಕ ಜಾಲವು ಜ.3ರಂದು ಬೆಳಿಗ್ಗೆ 10.30 ಗಂಟೆಗೆ ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ತಾಲೂಕಿನ ಅಂತರಸಂತೆ ಗ್ರಾಮದ ಮಹದೇಶ್ವರ ದೇವಸ್ಥಾನದ ಆವರಣದಲ್ಲಿ ಜೀವ ವೈವಿಧ್ಯ ಹಬ್ಬ ಮತ್ತು ಮಳೆ ಆಶ್ರಿತ ರೈತರ ಸಂಗಮ ಕಾರ್ಯಕ್ರಮ ಆಯೋಜಿಸಿದೆ. ಸಿರಿಧಾನ್ಯಗಳಿಗೆ ಮಹತ್ವ ನೀಡುವುದು, ಕೃಷಿ ಸಂಬಂಧಿತ ಅಧಿಕಾರಿಗಳೊಂದಿಗೆ ಕಾರ್ಯ ಕ್ರಮದ ವಿವರ ನೀಡುವುದು, ರೈತರು ಮತ್ತು ಅಧಿಕಾರಿಗಳ ಸಮನ್ವಯತೆಯ ಸಹಯೋಗ ಹೆಚ್ಚಿಸುವುದು ಈ ಕಾರ್ಯಕ್ರಮದ ಉದ್ದೇಶ ಎಂದು ಕೃಷಿ ಸಂಶೋಧನಾ ಸಂಯೋಜಕ…

ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ಹಣ ಪಡೆದು ವಂಚನೆ
ಮೈಸೂರು

ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ಹಣ ಪಡೆದು ವಂಚನೆ

January 2, 2020

ಮೈಸೂರು, ಜ. 1(ಆರ್‍ಕೆ)- ಕುವೈತ್‍ನಲ್ಲಿ ಕೆಲಸ ಕೊಡಿಸುವುದಾಗಿ ಹಲವರಿಂದ ಹಣ ಪಡೆದು ವಂಚಿಸಿರುವ ವ್ಯಕ್ತಿಯೊಬ್ಬರ ವಿರುದ್ಧ ಹೆಬ್ಬಾಳು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೈಸೂರಿನ ಹೆಬ್ಬಾಳು 1ನೇ ಹಂತದ ಎಂಜಿ ಕೊಪ್ಪಲು ಮುಖ್ಯ ರಸ್ತೆಯ ಜೈನ್ ಎಂಟರ್‍ಪ್ರೈಸಸ್ ಮಾಲೀಕ ವಿಜಯ್ ವಂಚನೆ ಆರೋಪ ಎದುರಿಸು ತ್ತಿರುವವರು. ಈ ಸಂಬಂಧ ಹೆಬ್ಬಾಳಿನ ಸುಖೇಶ ಎಂಬುವರು ದೂರು ನೀಡಿದ್ದು, ತನಗೆ ಕುವೈತ್‍ನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ 80,000 ರೂ. ಹಣ, ಪಾಸ್ ಪೋರ್ಟ್ ಅನ್ನು ಪಡೆದಿರುವ ವಿಜಯ್, ನಂತರ ಕೆಲಸ ಕೊಡಿಸದೇ…

ಡಿಎಆರ್ ಪೊಲೀಸ್‍ಗೆ ಸಮಗ್ರ ಪ್ರಶಸ್ತಿ
ಮೈಸೂರು

ಡಿಎಆರ್ ಪೊಲೀಸ್‍ಗೆ ಸಮಗ್ರ ಪ್ರಶಸ್ತಿ

January 2, 2020

ಮೈಸೂರು,ಜ.1(ವೈಡಿಎಸ್)- ಜ್ಯೋತಿ ನಗರದ ಡಿಎಆರ್ ಮೈದಾನದಲ್ಲಿ ಬುಧ ವಾರ ನಡೆದ 2019ನೇ ಸಾಲಿನ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ `ಸಮಗ್ರ ಪ್ರಶಸ್ತಿ’ ತನ್ನದಾಗಿಸಿಕೊಂಡಿತು. ಮೈಸೂರು ಜಿಲ್ಲಾ ಪೊಲೀಸ್ ವತಿ ಯಿಂದ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ಎಲ್ಲಾ ಕ್ರೀಡೆಗಳಲ್ಲೂ ಉತ್ತಮ ಆಟ ಪ್ರದ ರ್ಶಿಸಿ 91 ಅಂಕಗಳನ್ನು ಪಡೆದ ಜಿಲ್ಲಾ ಸಶಸ್ತ್ರ ಮೀಸಲು ಪಡೆ(ಡಿಎಆರ್‍ಪಿ) ಪ್ರಶಸ್ತಿ ಪಡೆದುಕೊಳ್ಳುವ ಜತೆಗೆ `ಉತ್ತಮ ಕ್ರೀಡಾ ತಂಡ’ ಎಂಬ ಹೆಗ್ಗಳಿಕೆಗೂ ಪಾತ್ರವಾಯಿತು. 100-400-800ಮೀ ಓಟ, ಉದ್ದ-ಎತ್ತರ ಜಿಗಿತದಲ್ಲಿ 25…

ನಗುವನಹಳ್ಳಿ ಗ್ರಾಪಂನಲ್ಲಿ ವೆಬ್‍ಸೈಟ್ ಆರಂಭ
ಮೈಸೂರು

ನಗುವನಹಳ್ಳಿ ಗ್ರಾಪಂನಲ್ಲಿ ವೆಬ್‍ಸೈಟ್ ಆರಂಭ

January 2, 2020

* ಎರಡು ಬಾರಿ ಗಾಂಧಿ ಪುರಸ್ಕಾರ ಪಡೆದ ಗ್ರಾಪಂಗೆ ಮತ್ತೊಂದು ಗರಿ * ಗ್ರಾಪಂನ ಸಮಗ್ರ ಮಾಹಿತಿ ವೆಬ್‍ಸೈಟ್‍ನಲ್ಲಿ ಲಭ್ಯ * ಸ್ವಂತ ವೆಬ್‍ಸೈಟ್ ಹೊಂದಿರುವ ಜಿಲ್ಲೆಯ ಮೊದಲ ಪಂಚಾಯಿತಿ ಎಂಬ ಹೆಗ್ಗಳಿಕೆ ಮಂಡ್ಯ, ಜ.1(ನಾಗಯ್ಯ)- ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ನಗುವನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಬುಧವಾರ `ಗ್ರಾಮ ಪಂಚಾಯಿತಿಯ ಸಮಗ್ರ ಮಾಹಿತಿಯನ್ನು ಒಳಗೊಂಡಿರುವ ವೆಬ್‍ಸೈಟ್ (http://naguvanahalligp.in) ಆರಂಭಿಸಲಾಯಿತು. ಉತ್ತಮ ಆಡಳಿತ ನೀಡಿದ ಫಲವಾಗಿ ಈ ಹಿಂದೆ ನಗುವನಹಳ್ಳಿ ಗ್ರಾಮ ಪಂಚಾ ಯಿತಿಯು ಎರಡು ಬಾರಿ ಗಾಂಧಿ ಪುರಸ್ಕಾರ…

1 86 87 88 89 90 330
Translate »