ಬುದ್ಧ, ಬಸವ, ಅಂಬೇಡ್ಕರರ ಪ್ರಬುದ್ಧ ಭಾರತ ಅಪಾಯದಲ್ಲಿದೆ
ಮೈಸೂರು

ಬುದ್ಧ, ಬಸವ, ಅಂಬೇಡ್ಕರರ ಪ್ರಬುದ್ಧ ಭಾರತ ಅಪಾಯದಲ್ಲಿದೆ

January 2, 2020

ಮೈಸೂರು,ಜ.1(ಪಿಎಂ)-ಪ್ರಸ್ತುತ ದೇಶದ ಆಡಳಿತ ಮನುವಾದಿಗಳ ಕಪಿಮುಷ್ಠಿ ಯಲ್ಲಿದ್ದು, ಬುದ್ಧ, ಬಸವ, ಅಂಬೇಡ್ಕರರ ಪ್ರಬುದ್ಧ ಭಾರತ ಈಗ ಅಪಾಯದಲ್ಲಿದೆ ಎಂದು ಉರಿಲಿಂಗಿ ಪೆದ್ದಿ ಮಠದ ಶ್ರೀ ಜ್ಞಾನ ಪ್ರಕಾಶಸ್ವಾಮೀಜಿ ಆತಂಕ ವ್ಯಕಪಡಿಸಿದರು.

ಮೈಸೂರಿನ ಅಶೋಕ ವೃತ್ತದ ಬಳಿಯಿ ರುವ ವಿಶ್ವಮೈತ್ರಿ ಬುದ್ಧ ವಿಹಾರದಲ್ಲಿ ಕರ್ನಾ ಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಪರಿಶಿಷ್ಟ ಜಾತಿ-ಪಂಗಡ ನೌಕರರ ಸಂಘ, ಪರಿಶಿಷ್ಟ ಜಾತಿ-ಪಂಗಡ ಅಧಿಕಾರಿಗಳು ಮತ್ತು ನೌಕ ರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ ಡಾ.ಬಿ. ಆರ್.ಅಂಬೇಡ್ಕರ್ ಅವರ ಚಿತ್ರ ಮತ್ತು ಸಂದೇಶ ಒಳಗೊಂಡಿರುವ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಡಾ.ಅಂಬೇಡ್ಕರ್ ರಚಿಸಿದ ಸಂವಿಧಾನ ವಿಶ್ವದಲ್ಲೇ ಶ್ರೇಷ್ಠ. 198 ದೇಶಗಳಲ್ಲಿ ಅವ ರನ್ನು ಗೌರವದಿಂದ ಕಾಣಲಾಗುತ್ತದೆ. ಆದರೆ ಭಾರತದಲ್ಲಿ ಇವರನ್ನು ಜಾತಿಗೆ ಸೀಮಿತ ಗೊಳಿಸಲಾಗಿದೆ. ಇಂದು ಭಾರತವನ್ನು ನಿಧಾನವಾಗಿ ಹಿಂದುತ್ವ, ಮನುವಾದದ ಕಡೆ ಸಾಗಿಸಲಾಗುತ್ತಿದೆ. ಇದರಿಂದ ಮುಂದೊಂದು ದಿನ ಭಾರೀ ಅನಾಹುತ ಸಂಭವಿಸಲಿದೆ ಎಂದು ಎಚ್ಚರಿಸಿದರು.

ಈಗಾಗಲೇ ಸಂವಿಧಾನದ ವಿವಿಧ ಕಾಯ್ದೆ ಗಳಿಗೆ ತಿದ್ದುಪಡಿ ತರುವ ಮೂಲಕ ಅದರ ಬೇರನ್ನು ಬುಡಮೇಲು ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಸಂವಿಧಾನ ರದ್ದಾ ದರೆ ಗುಲಾಮಗಿರಿ ತಪ್ಪಿದ್ದಲ್ಲ. ಪೌರತ್ವ ತಿದ್ದು ಪಡಿ ಕಾಯ್ದೆ ಜಾರಿ ಮೂಲಕ ಮುಸ್ಲಿಮ ರನ್ನು ದೂರ ಇಟ್ಟಿರುವ ಬಿಜೆಪಿ ಸರ್ಕಾರ, ನಿಧಾನವಾಗಿ ದಲಿತರು ಹಾಗೂ ಹಿಂದುಳಿ ದವರನ್ನು ನೇಪಥ್ಯಕ್ಕೆ ಸರಿಸುತ್ತಾ ಅವರನ್ನು ಗುಲಾಮಗಿರಿಯಲ್ಲಿ ಬದುಕುವಂತೆ ಮಾಡುವ ಹುನ್ನಾರ ನಡೆಸುತ್ತಿದೆ. ಭಾರತ ದಲ್ಲಿ ದಲಿತರು, ಮುಸ್ಲಿಮರನ್ನು ಹೊರಗಿ ಡುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಮಾತನಾಡಿ, ಬುದ್ಧ, ಬಸವ ಮತ್ತು ಅಂಬೇ ಡ್ಕರ ಅವರ ತತ್ವ-ಆದರ್ಶಗಳನ್ನು ಪಾಲಿಸ ದಿದ್ದರೆ ದಲಿತರು ಹಾಗೂ ಹಿಂದುಳಿದವರು ಶೋಷಣೆಯಿಂದ ಮುಕ್ತರಾಗಲು ಸಾಧ್ಯ ವಿಲ್ಲ. ಹೀಗಾಗಿ ಮೂಢನಂಬಿಕೆಗಳಿಂದ ಹೊರಬಂದು ಬುದ್ಧನ ಆದರ್ಶಗಳನ್ನು ಪಾಲಿ ಸುವ ಮೂಲಕ ಪ್ರಬುದ್ಧರಾಗಬೇಕು. ದಲಿತ ಸಮುದಾಯ ವಿದ್ಯಾವಂತರಾಗಿ ವೈಚಾರಿಕ ಮನೋಭಾವ ಬೆಳೆಸಿಕೊಳ್ಳ ಬೇಕು ಎಂದು ಸಲಹೆ ನೀಡಿದರು.

ಇದೇ ವೇಳೆ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. ವಿಧಾನ ಪರಿಷತ್ ಸದಸ್ಯ ಆರ್.ಧರ್ಮಸೇನ, ಮೈಸೂರು ನಗರ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಪಿ. ನಾಗರಾಜು, ಮೈಸೂರು ಗ್ರಾಮಾಂತರ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ಆರ್.ಅಶೋಕ್‍ಕುಮಾರ್, ವಕೀಲ ಉಮೇಶ್ ಸೇರಿದಂತೆ ಸಂಘದ ಪದಾಧಿಕಾರಿಗಳು, ಸದಸ್ಯರು ಮತ್ತಿತರರು ಹಾಜರಿದ್ದರು.

Translate »