ಛಾಯಾಚಿತ್ರ ಪ್ರಧಾನ `ನಮ್ಮ ಕುಕ್ಕರಹಳ್ಳಿ ಕೆರೆ’ ಪುಸ್ತಕ ಬಿಡುಗಡೆ
ಮೈಸೂರು

ಛಾಯಾಚಿತ್ರ ಪ್ರಧಾನ `ನಮ್ಮ ಕುಕ್ಕರಹಳ್ಳಿ ಕೆರೆ’ ಪುಸ್ತಕ ಬಿಡುಗಡೆ

January 2, 2020

ಮೈಸೂರು, ಜ.1(ಪಿಎಂ)- ಮೈಸೂ ರಿನ ಕುಕ್ಕರಹಳ್ಳಿ ಕೆರೆಯ ಪ್ರಾಕೃತಿಕ ಸೌಂದರ್ಯ ಹಾಗೂ ಜೀವ ವೈವಿಧ್ಯತೆ ಕುರಿತ ಛಾಯಾಚಿತ್ರ ಪ್ರಧಾನವಾದ `ನಮ್ಮ ಕುಕ್ಕರಹಳ್ಳಿ ಕೆರೆ’ ಕಾಫಿ ಟೇಬಲ್ ಪುಸ್ತಕ ಬುಧವಾರ ಬಿಡುಗಡೆಗೊಂಡಿತು.

ಮೈಸೂರು ಗ್ರಾಹಕರ ಪರಿಷತ್ತು (ಎಂಜಿಪಿ) ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಹೊರ ತಂದಿರುವ ಈ ಪುಸ್ತಕವನ್ನು ಮೈಸೂರಿನ ಕುಕ್ಕರಹಳ್ಳಿ ಕೆರೆಯ ಮುಖ್ಯ ದ್ವಾರದ ಉದ್ಯಾನ ಮಾರ್ಗದಲ್ಲಿ ಬಿಡುಗಡೆ ಮಾಡಲಾಯಿತು.

ಪರಿಸರ ಸಂರಕ್ಷಣೆಗಾಗಿ ಎಂಜಿಪಿ ಹಾಕಿ ಕೊಂಡಿರುವ ಯೋಜನೆಯಾದ `ಪರಿಸರ ಶಾಲಾ ವಾರ್ಡನ್’ ಸಂಘಟನೆಯಲ್ಲಿ ತೊಡ ಗಿಸಿಕೊಂಡಿರುವ ಕೌಟಿಲ್ಯ ಶಾಲೆಯ ಮಕ್ಕಳು ಪುಸ್ತಕವನ್ನು ಬಿಡುಗಡೆ ಮಾಡಿದರು. ಕೌಟಿಲ್ಯ ವಿದ್ಯಾಲಯದ ಪರಿಸರ ಶಾಲಾ ವಾರ್ಡನ್ ತಂಡದ ಚಿದಾತ್ಮ, ದೇಬಂಶಿ ಚಕ್ರಬೊರ್ತಿ, ಅನುರೋದ್ ಕೃಷ್ಣ, ಅಮೋಘ್ ಭಾರದ್ವಾಜ್, ಮೌಲ್ವಿಕಾ ಪುಸ್ತಕ ಬಿಡುಗಡೆಗೊಳಿಸಿದರು.

ಅತಿಥಿಯಾಗಿ ಪಾಲ್ಗೊಂಡಿದ್ದ ಜಿಲ್ಲಾಧಿ ಕಾರಿ ಅಭಿರಾಮ್ ಜಿ.ಶಂಕರ್ ಮಾತನಾಡಿ, ಸ್ವಯಂ ಪ್ರೇರಣೆಯಿಂದ ಪರಿಸರವನ್ನು ಸಂರಕ್ಷಿಸಬೇಕು. ನಮ್ಮ ಸುತ್ತಮುತ್ತಲಿನ ಪರಿ ಸರವನ್ನು ಮಾಲಿನ್ಯ ಮಾಡದಂತೆ ಕಾಪಾಡಿ ಕೊಳ್ಳಬೇಕು. ಮೈಸೂರಿನ ಹೃದಯಭಾಗ ದಲ್ಲಿರುವ ಕುಕ್ಕರಹಳ್ಳಿ ಕೆರೆ ಅಪರೂಪದ ಪ್ರಾಕೃತಿಕ ತಾಣ. ಇಲ್ಲಿನ ಪಕ್ಷಿ, ಗಿಡ-ಮರಗಳ ಛಾಯಾಚಿತ್ರಗಳು ಪುಸ್ತಕದಲ್ಲಿ ಮೂಡಿ ಬಂದಿವೆ. ಈ ಪುಸ್ತಕದಿಂದ ಪರಿಸರ ಪ್ರೇಮಿಗಳು ಕೆರೆಯ ಬಗ್ಗೆ ತಿಳಿದುಕೊಳ್ಳಲು ನೆರವಾಗುತ್ತದೆ ಎಂದು ಹೇಳಿದರು.

ಪುಸ್ತಕ ಬಿಡುಗಡೆ ಮಾಡಿದ ಮಕ್ಕಳಲ್ಲಿ ಪೈಕಿ ದೇಬಂಶಿ ಚಕ್ರಬೊರ್ತಿ ಮಾತನಾಡಿ, ನಮ್ಮ ಜೀವನದ ಪ್ರತಿ ಕ್ಷಣ ಪರಿಸರ ಸಂರ ಕ್ಷಣೆಗೆ ಆದ್ಯತೆ ನೀಡಬೇಕು. ಇದರಿಂದ ನಮಗೆಯೇ ಲಾಭವಾಗಲಿದೆ. ಪರಿಸರ ಸಂರಕ್ಷಣೆ ಮಾಡಿದರೆ ಮಾತ್ರವೇ ನಾವು ಉಳಿಯಲು ಸಾಧ್ಯ. ಆದರೆ ಇಂದು ಪದವಿ, ಸ್ನಾತಕೋತ್ತರ ಪದವಿ ಸೇರಿದಂತೆ ಉನ್ನತ ವಿದ್ಯಾಭ್ಯಾಸ ಮಾಡಿದವರೂ ಬಹುತೇಕ ಮಂದಿ ಪರಿಸರದ ಮಹತ್ವ ಅರಿಯುವಲ್ಲಿ ವಿಫಲರಾಗುತ್ತಿದ್ದಾರೆ ಎಂದು ವಿಷಾದಿಸಿ ದರು. ನಗರಪಾಲಿಕೆ ಆಯುಕ್ತ ಗುರುದತ್ ಹೆಗ್ಡೆ, ಮೈಸೂರು ವಿಶ್ವವಿದ್ಯಾನಿಲಯ ಕುಲ ಪತಿ ಪ್ರೊ.ಜಿ.ಹೇಮಂತ್‍ಕುಮಾರ್, ಮೈಸೂರು ಗ್ರಾಹಕ ಪರಿಷತ್ ಅಧ್ಯಕ್ಷ ಭಾಮೀ ಶೆಣೈ, ಕೌಟಿಲ್ಯ ವಿದ್ಯಾಲಯದ ಶಿಕ್ಷಕಿ ಸಿ.ಆರ್. ರೂಪ ಸೇರಿದಂತೆ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

Translate »