ನಿರುಪಯುಕ್ತ ವಸ್ತುಗಳಿಂದ ಮಾದರಿ ಗ್ರಾಮ ಸೃಷ್ಟಿಸಿದ ಸಿದ್ದಾಪುರದ ಯುವಕ
ಕೊಡಗು

ನಿರುಪಯುಕ್ತ ವಸ್ತುಗಳಿಂದ ಮಾದರಿ ಗ್ರಾಮ ಸೃಷ್ಟಿಸಿದ ಸಿದ್ದಾಪುರದ ಯುವಕ

January 2, 2020

ಸಿದ್ದಾಪುರ, ಜ.1- ನಿರುಪಯುಕ್ತ ವಸ್ತು ಗಳಿಂದ ಕಲ್ಪನೆಯ ಚೆಂದದ ಗ್ರಾಮದ ಮಾದರಿ ಸೃಷ್ಟಿಸಿ, ಗೋದಲಿ ನಿರ್ಮಿಸುವ ಮೂಲಕ ಸಿದ್ದಾಪುರದ ರೀಗಲ್ ಜೋಸೆಫ್ ಗಮನ ಸೆಳೆದಿದ್ದಾರೆ.

ಬೇಡವೆಂದು ಬಿಸಾಡುವ ವಸ್ತುಗಳಿಂದ ನಿರ್ಮಿಸಿದ ಗ್ರಾಮವನ್ನು ವೀಕ್ಷಿಸಿದವರು ರೀಗಲ್ ಜೋಸೆಫ್ ಅವರ ಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಲ್ಪನೆಗೆ ಜೀವ ತುಂಬಿದ ಮಾದರಿ ಗ್ರಾಮದ

ಕಲ್ಲುಬಂಡೆಗಳ ನಡುವಿನಿಂದ ಜುಳು ಜುಳು ಹರಿಯುತ್ತಿರುವ ನೀರಿನ ನೀನಾದ, ನದಿದಡದಲ್ಲಿ ಕಂಗೊಳಿಸುತ್ತಿರುವ ಹಚ್ಚಹಸಿರು, ಸುಂದರ ಕಲಾಕೃತಿಯೊಂ ದಿಗೆ ವಿನೂತನವಾದ ಮೂರು ಮನೆಗಳ ನಿರ್ಮಾಣ, ನದಿಯಲ್ಲಿ ಮೀನು ಹಿಡಿ ಯುವ, ರಾಗಿ ಕುಟ್ಟುವ, ಸೌದೆ ಕಡಿಯುವ ಗ್ರಾಮೀಣ ಸಂಸ್ಕøತಿಯ ಅನಾವರಣ, ನಿರುಪಯುಕ್ತ ವಸ್ತುಗಳಿಂದ ಹೀಗೊಂದು ಚೆಂದದ ಮಾದರಿ ಗ್ರಾಮದ ಕಲ್ಪನೆಗೆ ರೂಪ ನೀಡಿದ್ದು, ನಿರುಪಯುಕ್ತ ವಸ್ತುಗಳಿಂದ ಗೋದಲಿ ನಿರ್ಮಿಸಿ ಮಾದರಿ ಗ್ರಾಮ ವನ್ನಾಗಿಸಿದ ಸಿದ್ದಾಪುರದ ರೀಗಲ್ ಜೋಸೆಫ್.

ಎತ್ತ ನೋಡಿದರೂ ಸುಂದರವಾಗಿ ಕಾಣುವ ಈ ಮಾದರಿ ಗ್ರಾಮದಲ್ಲಿ ಕಲ್ಲು ಬಂಡೆಗಳಿಂದ ಝರಿಯಾಗಿ ಧುಮುಕು ತ್ತಿರುವ ನೀರಿನಿಂದ ನದಿಯನ್ನು ಸೃಷ್ಟಿ ಮಾಡಿ, ನದಿ ದಡದಲ್ಲಿ ಹಚ್ಚ ಹಸಿರಿನಿಂದ ಕಂಗೊಳಿಸಲು ಹುಲ್ಲುಗಳನ್ನು ಬೆಳೆಸ ಲಾಗಿದ್ದು, ಇದರಲ್ಲಿ ಆಡು, ಕುರಿಗಳು ಸೇರಿದಂತೆ ಇತರ ಪ್ರಾಣಿ ಪಕ್ಷಿಗಳು ಅಲ್ಲಲ್ಲಿ ಇರುವುದು ಕಂಡುಬರುತ್ತಿದೆ. ನದಿಯ ನೀರಿಗೆ ಅಡ್ಡಲಾಗಿ ಐಸ್‍ಕ್ರೀಮ್ ತಿನ್ನಲು ಬಳಸುವ ಕಡ್ಡಿಗಳಿಂದ ಸೇತುವೆ ನಿರ್ಮಿಸ ಲಾಗಿದೆ. ನದಿಯ ನೀರಿನಿಂದ ಕೃಷಿ ಚಟು ವಟಿಕೆ ಮಾಡಲು ಅವಕಾಶ ಕಲ್ಪಿಸಲಾ ಗಿದ್ದು, ಇದರಲ್ಲಿ ಒಂದು ಯಂತ್ರದ ಮೂಲಕ ನೀರಿನಲ್ಲಿ ಮೀನು ಹಿಡಿಯು ವುದು, ಸೌದೆ ಕಡಿಯುವುದು, ರಾಗಿ ಕುಟ್ಟುವುದು, ಮರದ ಮೇಲೆ ಉಯ್ಯಾಲೆ ಆಡುವುದು, ಬಾವಿಯಿಂದ ನೀರು ಸೇದು ವುದು ಸೇರಿದಂತೆ ನೀರು ಮತ್ತು ಗಾಳಿ ಯಿಂದ ವಿದ್ಯುತ್ ಉತ್ಪತ್ತಿ ಮಾಡಿ ಮರು ಬಳಕೆ ಮಾಡುವ ವಿಧಾನವನ್ನು ಮಾಡ ಲಾಗಿದೆ. ಸುಂದರ ಕಲಾಕೃತಿಯೊಂದಿಗೆ ವಿನೂತನವಾದ ಮೂರು ಮನೆಗಳನ್ನು ನಿರ್ಮಾಸಲಾಗಿದ್ದು, ಕಲ್ಪನೆಯ ಸುಂದರ ಗ್ರಾಮವನ್ನು ನಿರ್ಮಿಸಲು ಮರದ ಕಡ್ಡಿ, ಬಿದುರು, ಐಸ್ ಕ್ರೀಂಗೆ ಬಳಸುವ ಕಡ್ಡಿ, ನೀರು, ಮರಳು, ಮಣ್ಣು ಬಳಕೆ ಮಾಡ ಲಾಗಿದೆ. ಸಿದ್ದಾಪುರದ ರೀಗಲ್ ಜೋಸೆಫ್ ಎಂಬ ಯುವಕ ತಮ್ಮ ಮನೆಯ ಮುಂದೆ ನಿರುಪಯುಕ್ತ ವಸ್ತುಗಳನ್ನು ಬಳಸಿ ಎಲ್ಲಾ ಸೌಲಭ್ಯಗಳೊಂದಿಗೆ ಮಾದರಿ ಗ್ರಾಮ ವನ್ನಾಗಿಸಿದ್ದಾರೆ.

ಈ ಕುರಿತು ಮಾತನಾಡಿದ ರೀಗಲ್ ಜೋಸೆಫ್, ಗೋದಲಿ ನಿರ್ಮಾಣ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವೂ ಲಭಿಸಿದೆ ಎಂದು ಹರ್ಷ ವ್ಯಕ್ತಪಡಿಸಿದರು. ನಿರುಪಯುಕ್ತ ವಸ್ತುಗಳಿಂದ ನಿರ್ಮಾಣ ಗೊಂಡ ಮಾದರಿ ಗ್ರಾಮವನ್ನು ವೀಕ್ಷಿಸಲು ಆಗಮಿಸುವ ಸ್ಥಳೀಯರು ರೀಗಲ್ ಜೋಸೆಫ್ ಅವರ ಶ್ರಮವನ್ನು ಶ್ಲಾಘಿಸಿದ್ದಾರೆ.

ಎಸ್.ಎಂ ಮುಬಾರಕ್

Translate »